ರಂಗಮನೆ ಒಂದು ಸಾಂಸ್ಕೃತಿಕ ಕಲಾಕೇಂದ್ರ ಹಾಗೂ ರಂಗಸಂಘ. ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪರಗೇಟ್(ತುಳು) ಎಂಬಲ್ಲಿದೆ. ಜೀವನ್ ರಾಮ್ ಸುಳ್ಯ ಇವರು ಇದನ್ನು ಸ್ಥಾಪಿಸಿದವರು ಹಾಗೂ ಈಗಿನ ಮುಖ್ಯಸ್ಥರು. ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯಕರ ಸಾಂಸ್ಕೃತಿಕ ವಾತಾವರಣವನ್ನು ಪಸರಿಸಲು ಫಲಾಪೇಕ್ಷೆ ಇಲ್ಲದೆ ಹುಟ್ಟು ಹಾಕಿದ ಸಂಸ್ಥೆ.

ಉದ್ದೇಶಸಂಪಾದಿಸಿ

ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕವಾಗಿ ತನ್ನ ಗಟ್ಟಿತನವನ್ನು ಉಳಿಸಿಕೊಂಡು ಬಂದ ಸಂಸ್ಕೃತಿ-ಪರಂಪರೆಗಳ ಹೊಂದಿರುವ ಕರಾವಳಿಯಕ್ಷಗಾನ, ಭೂತಾರಾಧನೆ, ಕಂಬಳ, ನಾಗಮಂಡಲ, ರಂಗಭೂಮಿ ಇಂತಹ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ.

ರಂಗಮನೆ ಕಟ್ಟಡಸಂಪಾದಿಸಿ

ರಂಗಮನೆಯ ಆವರಣದಲ್ಲಿ ತಾಲೀಮಿಗಾಗಿ ವೃತ್ತಾಕಾರದಲ್ಲಿ ನಿರ್ಮಿತವಾದ ಸುಜನಾ ರಂಗ ಕುಟೀರ[೧], ಗ್ರೀನ್‌ರೂಂ, ಪ್ರಶಸ್ತಿ ಫಲಕಗಳಿಂದ, ರಂಗಸಜ್ಜಿಕೆ, ಪರಿಕರಗಳಿಂದ, ಸಂಗೀತ ವಾದ್ಯ ಉಪಕರಣಗಳಿಂದ, ಯಕ್ಷಸ್ಮರಣಿಕೆಗಳಿಂದಲೇ ತುಂಬಿರುವ ರಂಗಭೂಮಿಯ ಮನೆ.

ರಂಗಮನೆಯ ಪ್ರವೇಶದ್ವಾರದ ಕಬ್ಬಿಣದ ಗೇಟಿನಲ್ಲಿ ಜಾತ್ರೆಯ ದೃಶ್ಯ, ದೃಷ್ಠಿ ಚಾವಡಿ, ಸುತ್ತಲಿನ ಗೋಡೆಗಳಲ್ಲಿ ಅರಳಿನಿಂತ ಬದುಕಿನ ನಾನಾ ಮುಖಗಳನ್ನು ಬಿಂಬಿಸುವ ಕಲಾತ್ಮಕ ಚಿತ್ರರೇಖೆಗಳು, ರಂಗಮನೆಯ ಬಾಗಿಲಲ್ಲಿ ಕಥಕ್ಕಳಿ, ಯಕ್ಷಗಾನದ ತೆಂಕು-ಬಡಗಿನ ವಾದ್ಯಗಳ ಸಂಯೋಜನೆ, ಪ್ರತೀ ಕಿಟಕಿಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ನೂರಾರು ಕಲಾತ್ಮಕ ಚಿತ್ರಗಳು, ರಂಗಮನೆಯ ಈಶಾನ್ಯ ದಿಕ್ಕಿನಲ್ಲಿ ತಲೆಯೆತ್ತಿ ನಿಂತಿರುವ ಯಕ್ಷದ್ರೋಣನೆಂದೇ ಪ್ರಸಿದ್ಧಿ ಪಡೆದ ಬಣ್ಣದ ಮಾಲಿಂಗರ ಮೈರಾವಣ ವೇಷದ ಬೃಹತ್ ಯಕ್ಷಪ್ರತಿಮೆ ಇದೆ.

ಸಾಂಸ್ಕೃತಿಕ ಚಟುವಟಿಕೆಗಳುಸಂಪಾದಿಸಿ

ರಂಗಚಟುವಟಿಕೆ[೨], ಜಾದೂ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ, ಜಾನಪದ, ನೃತ್ಯ, ಪ್ರಸಾಧನ ಕಾರ‍್ಯಾಗಾರ, ನೃತ್ಯ ತರಭೇತಿ, ತಾಳಮದ್ದಳೆ, ರಂಗಗೀತೆ ಗಾಯನ, ಇಂದ್ರಜಾಲ, ಪವಾಡ ರಹಸ್ಯ ಬಯಲು, ಮಕ್ಕಳ ಬೇಸಿಗೆ ಶಿಬಿರ, ಏಕವ್ಯಕ್ತಿ ರಂಗಪ್ರಯೋಗ, ಶಿಕ್ಷಕರಿಗೆ ರಂಗಕಲಿಕೆ, ಅಭಿನಯ ಕಮ್ಮಟ, ಯಕ್ಷರಂಗ ಕಾರ‍್ಯಾಗಾರ, ಮೂಡಲಪಾಯ, ಗೊಂಬೆಯಾಟ, ಚಿತ್ರಕಲಾ ಕಮ್ಮಟ. ವರ್ಷದ ಫೆಬ್ರವರಿ ತಿಂಗಳಲ್ಲಿ ರಂಗಸಂಭ್ರಮ ಸಾಂಸ್ಕೃತಿಕ ಉತ್ಸವ ನಡೆಯುತ್ತದೆ. ಯಕ್ಷಗಾನ, ಸಂಗೀತ, ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಏಪ್ರಿಲ್ ತಿಂಗಳಲ್ಲಿ ಬೇಸಿಗೆ ಶಿಬಿರ ನಡೆಯುತ್ತದೆ. ರಾಜ್ಯದ ೨೦೦ರಷ್ಟು ಮಕ್ಕಳು ಇದರಲ್ಲಿ ಭಾಗವಹಿಸುತ್ತಾರೆ. ಇವುಗಳಲ್ಲದೆ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರವೂ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಆಶ್ರಯದಲ್ಲಿ ಯಕ್ಷಗಾನ ಉತ್ಸವಗಳನ್ನು ಆಯೋಜಿಸಲಾಗುತ್ತದೆ.

ರಾಜ್ಯಾದ್ಯಂತ ನಿರ್ದೇಶಿಸಿದ ನಾಟಕಗಳುಸಂಪಾದಿಸಿ

ಮೃಚ್ಛಕಟಿಕ, ಸೂರ್ಯಶಿಕಾರಿ, ತಲೆದಂಡ, ಮಹಾಮಾಯಿ, ಅಂಧಯುಗ, ಸಾಹೇಬರು ಬರುತ್ತಾರೆ, ಅಸುದ್ಧೋ(ತುಳು), ಪಿಲಿಪತ್ತಿ ಗಡಸ್(ತುಳು), ಝುಂ ಝಾಂ ಆನೆ ಮತ್ತು ಪುಟ್ಟ, ಪುಷ್ಪರಾಣಿ, ಮಕ್ಕಳ ಮಾಯಾಲೋಕ , ಢಾಣಾ ಡಂಗುರ , ಭಾಸ ಭಾರತ, ಅಲಾವುದೀನ ಮತ್ತು ಮಾಂತ್ರಿಕ ದೀಪ, ನಕ್ಕಳಾ ರಾಜಕುಮಾರಿ, ದೂತವಾಕ್ಯ , ಮಧ್ಯಮ ವ್ಯಾಯೋಗ, ಊರುಭಂಗ.

ಉಲ್ಲೇಖಗಳುಸಂಪಾದಿಸಿ

  1. http://www.rangamanesullia.com/
  2. http://www.karavalikarnataka.com/news/fullstory.aspx?story_id=3896&languageid=1&catid=102&menuid=0
"https://kn.wikipedia.org/w/index.php?title=ರಂಗಮನೆ&oldid=705396" ಇಂದ ಪಡೆಯಲ್ಪಟ್ಟಿದೆ