ರಂಗಭೂಮಿಯಲ್ಲಿ ಮಹಿಳೆಯರು
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ರಂಗಭೂಮಿ ಯಲ್ಲಿ ಮಹಿಳೆ ಪುರುಷನಿಗೆ ಸರಿಸಾಟಿ ಎಂದು ಹೇಳಿದರೆ ಹಲವರಿಗೆ ಅಚ್ಹರಿಯಾಗಬಹುದು.ಪುರುಷ ಪ್ರಧಾನ ಸಮಾಜದಲ್ಲಿ ಇದು ಹೇಗೆ ಸಾದ್ಯ?ಎಂದೇ ಶಿಕ್ಷಿತ ಸಮುದಾಯದ ಕೆಲವರಾದರೂ ಕೇಳಬಹುದು.ಆದರೆ ಪುರುಷರಿಗಿಂತ ನಾವೇನು ಕಮ್ಮಿ ಎಂದು ಸವಾಲೆಸೆದು ಪುರುಷರಿಗಿಂತ ಮಿಗಿಲಾದ ಸಾದನೆಗೈದದ್ದು ವಿಚಿತ್ರವಾದರೂ ಸತ್ಯ.
ಸಂಘ ಸಂಸ್ಥೆಗಳು,ಹವ್ಯಾಸಿ ರಂಗ ತಂಡಗಳು ನಾಟಕ ಮಾಡಲೆಂದು ಸಿದ್ದವಾಗುವ ಸಂದರ್ಭದಲ್ಲಿ ಎದುರಾಗುವ ಹಲವು ತೊಡಕುಗಳಲ್ಲಿ ಕಲಾವಿದೆಯರು ಸಿಗುವುದಿಲ್ಲ ಎಂಬ ಸಮಸ್ಯೆ ಇದ್ದ ಕಾಲದಲ್ಲಿ ಮಹಿಳೆಯರ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಿದ ಪುರುಷರ ದೊಡ್ಡ ಪಟ್ಟಿಯೇ ಇದೆ,ಕೆಲವು ನಾಟಕಕಾರರು ಮಹಿಳೆಯರ ಪಾತ್ರವೇ ಇಲ್ಲದ ನಾಟಕಗಳನ್ನು ಬರೆದಿದ್ದಾರೆ. ೧೪೦ ವರ್ಷಗಳ ಇತಿಹಾಸವಿರುವ ವೃತ್ತಿ ರಂಗಭೂಮಿಯಲ್ಲಿ ಮಹಿಳೆಯರು ಆರಂಭದ ಒಂದೆರಡು ದಶಕಗಳಲ್ಲಿ ರಂಗ ಪ್ರವೆಶಿಸಿರಲಿಲ್ಲ. ಸ್ರೀಯರ ನಯ,ನಾಜೂಕಿನ ಹಾವ ಭಾವಗಳಿಗೆ ಸಹಜತೆ ಬರಬೇಕಾದರೆ ಸ್ರೀಯೇ ಅಭಿನಯಿಸಬೇಕು ಎಂಬ ತೀರ್ಮಾನಕ್ಕೆ ಬಂದ ಕೋಣ್ಣೂರು ನಾಟಕ ಕಂಪನಿಯ ಶಿವಮೂರ್ತಿ ಸ್ವಾಮಿಗಳು ೧೯೦೧ ರಲ್ಲಿಯೇ ಗುಳೇದಗುಡ್ಡದಿಂದ "ಯಲ್ಲೂ ಬಾಯಿ "ಎಂಬ ಮಹಿಳೆಯನ್ನು ಕರೆಸಿ ಆಕೆಯಿಂದ ಮಹಿಳೆಯ ಪಾತ್ರ ಮಾಡಿಸುತ್ತಾರೆ. ಗಾಯನ ಮತ್ತು ಅಭಿನಯದಲ್ಲಿ ತನ್ನ ಅದ್ವಿತೀಯ ಪಾತ್ರ ತೋರಿದ "ಯಲ್ಲೂಬಾಯಿ"ಯನ್ನೇ ವ್ರತ್ತಿ ರಂಗ ಭೂಮಿಯ ಮೊದಲ ನಟಿ ಎಂದು ವಿದ್ವಾಂಸರು ಹೇಳುತ್ತಾ ಬಂದಿದ್ದರೂ ೧೮೯೮ರಲ್ಲಿ ಪಾಪಸಾನಿ ಎಂಬಾಕೆ ಸ್ಥಾಪಿಸಿದ ಸ್ರೀ ನಾಟಕ ಮಂಡಳಿ "ಪ್ರಭಾವತಿ ದರ್ಬಾರು "ಹರಿಶ್ಚಂದ್ರ'ಮುಂತಾದ ನಾಟಕ ಪ್ರದರ್ಶಿಸುತ್ತಿತ್ತೆಂದೂ ಹಾಗಾಗಿ ಇದೇ ಮೊದಲ ನಾಟಕ ಮಂಡಳಿ ಎಂದೂ ಹೇಳಲಾಗುತ್ತದೆ,೧೯೦೮ರಲ್ಲಿ ಲಕ್ಹ್ಷ್ಮಿಮೇಶ್ವರದ ಬಚ್ಚಸಾನಿ ಸ್ಥಾಪಿಸಿದ ಮಹಿಳಾ ನಾಟಕ ಮಂಡಳಿಯಲ್ಲಿ ಪುರುಷ ಪಾತ್ರ ಸೇರಿದಂತೆ ಎಲ್ಲಾ ಪಾತ್ರಗಳನ್ನೂ ಮಹಿಳೆಯರೇ ಅಭಿನಯಿಸುತ್ತಿದ್ದರು.ಇದು ಬರೀ ಮಹಿಳೆಯರೇ ಅಭಿನಯಿಸುವ ಇಂತಹ ಸಂಪ್ರದಾಯ ಹಾಕಿಕೊಟ್ಟ ಮೊದಲ ಮಹಿಳಾ ನಾಟಕ ತಂಡ.
ಸ್ರೀ ನಾಟಕ ಮಂಡಳಿಗಳು
ಬದಲಾಯಿಸಿಸ್ರೀ ನಾಟಕ ಮಂಡಳಿಗಳಿಗಳಲ್ಲಿ ಪುರುಷ ಹಾಗೂ ಸ್ರೀ ಪಾತ್ರ ಎರಡನ್ನೂ ಸ್ರೀಯರೇ ಅಭಿನಯಿಸುತ್ತಾರೆ. ಗುಳೇದಗುಡ್ಡದ ಗಂಗೂಬಾಯಿ ೧೯೨೫ರಲ್ಲಿ ಆರಂಬಿಸಿದ ಶ್ರೀಕೃಷ್ಣ ನಾಟಕ ಮಂಡಳಿ ಹಲವು ವರ್ಷಗಳ ಕಾಲ ನಡೆಯಿತು.ಆ ಕಾಲದ ಹೆಸರಾಂತ ಕಲಾವಿದರೆಲ್ಲ ಈ ಕಂಪೆನಿಯಲ್ಲಿದ್ದರು.ಇದೆ ಸುಮಾರಿನಲ್ಲಿ (೧೯೨೦-೧೯೩೦) ನಂಜಾಸಾನಿ,ಲಕ್ಷ್ಮಾಸಾನಿಯವರ ನಾಟಕ ಮಂಡಳಿಗಳಿದ್ದವು.ಮುಂದೆ ಮೈಸೂರಿನ ಅಂಬುಜಮ್ಮ ಎನ್ನುವವರು ಶ್ರೀ ಸ್ರೀ ನಾಟಕ ಮಂಡಳಿ ಸ್ಥಾಪಿಸುತ್ತಾರೆ.ನಂತರದ ಪ್ರಮುಖ ಸ್ರೀಯರ ನಾಟಕ ಕಂಪನಿಗಳೆಂದರೆ ಮೈಸೂರು ಭಾಗದಲ್ಲಿ ಜಿ.ಕೆ.ಅಯ್ಯಂಗಾರರ 'ಗಾಯತ್ರಿ ಸ್ರೀ ನಾಟಕ ಮಂಡಳಿ ' ,ಜಿ.ಬಿ.ಮಲ್ಲಪ್ಪನವರ "ಅಕ್ಕಮಹಾದೇವಿ ಕೃಪಾಪೋಷಿತ ನಾಟಕ ಸಬಾ", ಉತ್ತರ ಕರ್ನಾಟಕದಲ್ಲಿ ಸೋನೂಬಾಯಿ ದೊಡ್ಡಮನಿಯವರ "ನೂತನ ಸಂಗೀತ ನಾಟಕ ಮಂಡಳಿ" ಮುಂತಾದವು. ಕುಕನೂರು ರೆಹಿಮಾನವ್ವನವರು ೧೯೫೦ರಲ್ಲಿ ಸ್ತಾಪಿಸಿದ "ಶ್ರೀ ಲಲಿತ ಕಲಾ ನಾಟ್ಯ ಸಂಘ' ಸುಮಾರು ೨೫ ವರ್ಷಗಳ ಕಾಲ ನಡೆಸುತ್ತಾರೆ.ಮೈಸೂರು ಮಹಾರಾಜರು ಸ್ಥಾಪಿಸಿದ "ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಬಾ"'ವನ್ನು ಮುಂದೆ ಮಳವಳ್ಳಿ ಸುಂದರಮ್ಮ ನವರು ದೀರ್ಘ ಕಾಲ ನಡೆಸುತ್ತಾರೆ. ಜುಬೇದಾ ಬಾಯಿ ಸವಣೂರರ "ಜಯ ಕನ್ನಡ ಕಲಾ ಸಂಘ", ಕುಂದಾಪುರ ಸುಮಿತ್ರಾರ ಮಹಿಳಾ ತಂಡ,ಬೆಂಗಳೂರಿನಲ್ಲಿ ಆರು ಮಂದಿ ಅಕ್ಕ ತಂಗಿಯರು ಸೇರಿ ಸ್ತಾಪಿಸಿದ "ಸರಸ್ವತಿ ನಾಟಕ ಮಂಡಳಿ", ಆರ್.ನಾಗರತ್ನಮ್ಮನವರ "ಸ್ರೀ ನಾಟಕ ಮಂಡಳಿ", ಬಳ್ಳಾರಿ ಲಲಿತಮ್ಮನವರ ಕಂಪೆನಿ,ಇಳಕಲ್,ಮರಿಯಮ್ಮನ ಹಳ್ಳಿ,ಗದಗ,ಹುಬ್ಬಳ್ಳಿ,ದಾವಣಗೆರೆ,ಹಂಸನೂರು ನಟಿಯರು ಸ್ತಾಪಿಸಿದ ತಂಡಗಳೂ ಸೇರಿದಂತೆ ಮಹಿಳೆಯರೇ ನಾಟಕ ತಂಡಗಳನ್ನು ಸುದೀರ್ಘ ಕಾಲ ನಡೆಸಿದ ದೊಡ್ಡ ಚರಿತ್ರೆಯೇ ಇದೆ,ಇಲ್ಲಿ ಹೆಸರಿಸಿರುವುದು ಕೆಲವು ಮಾತ್ರ. ವ್ರತ್ತಿ ರಂಗ ಭೂಮಿ ಪರಿ ಭಾಷೆಯಲ್ಲಿ ಬಹಳ ದೊಡ್ಡ ಕಲಾವಿದರನ್ನು "ದಂತ ಕತೆ"ಎಂದು ಕರೆಯುವುದು ವಾಡಿಕೆ.ಸುಬ್ಬಯ್ಯ ನಾಯ್ಡು,ಹಂದಿಗನೂರು ಸಿದ್ದರಾಮಪ್ಪ,ಗುಬ್ಬಿ ವೀರಣ್ಣ,ಪೀರ್ ಮಹಮ್ಮದ್,ಗರುಡರುಇವರೆಲ್ಲ ದಂತಕತೆಗಳು.ಇವರನ್ನೂ ಮೀರಿಸಿ ಬೆಳೆದ ಮಹಿಳೆಯರ ಪಟ್ಟಿ ದೊಡ್ಡದಾಗಿಯೇ ಇದೆ,ಸುಂದರಮ್ಮ,ಸ್ವರ್ಣಮ್ಮ,ಮೋಹನ್ ಕುಮಾರಿ,ಸೋಹನ್ ಕುಮಾರಿ,ಲಕ್ಷ್ಮಿ ಬಾಯಿ,ಬಿ.ಜಯಮ್ಮ,ಆದವಾನಿ ಲಕ್ಷ್ಮಿದೇವಿ,ಏಣಗಿ ಲಕ್ಷ್ಮಿ ಬಾಯಿ ಮುಂತಾದವರು. ಅಮೀರ್ ಜಾನ್,ಗೋಹರಜಾನ್ ಕರ್ನಾಟಕಿಯವರಂತೂ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿದವರು,ಇವರು ನಟಿ ಅಷ್ಟೇ ಅಲ್ಲದೆ ಸಂಘಟಕಿಯರು(ಮಾಲೀಕರು),ನೇಪಥ್ಯ ಕರ್ಮಿಗಳು,ನಿರ್ದೇಶಕರೂ ಆಗಿದ್ದರು. ಇವರೆಲ್ಲರೂ ಜಾತಿ ಮತಬೇದಗಳಿಲ್ಲದೆ ನಾಟಕ ರಂಗಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ,ಇವರೆಲ್ಲರಿಗೂ ನಮನ! ಸುಮಾರು 150 ವರ್ಷಗಳ ಇತಿಹಾಸವಿರುವ ಕನ್ನಡ ರಂಗಭೂಮಿಯಲ್ಲಿ ಮೊದಲನೆಯ ರಾಜ್ಯ ಮಟ್ಟದ ಮೊದಲ "ಮಹಿಳಾ ರಂಗಸಮಾವೇಶ"ವು 19 ನವೆಂಬರ್ 2010 ರಂದು ಬೆಂಗಳೂರಿನ ನಯನ ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ, ಹಾಗು ಕರ್ನಾಟಕ ಲೇಖಕಿಯ ಸಂಘ , ಬೆಂಗಳೂರು ಇವರುಗಳ ಸಮ್ಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಿತು.ಈ ಮೊದಲ ಸಮ್ಮೇಳನದ ಅದ್ಯಕ್ಷರಾಗಿದ್ದವರು ಹಿರಿಯ ಪತ್ರಕರ್ತೆ ಹಾಗೂ ನಾಟಕಕಾರರಾದ ಡಾ.ವಿಜಯಾ.