ಯೋನಿಮುಖದ ಸೋಂಕುಗಳು

ಉರಿಯೂತದಿಂದಾಗಿ ಯೋನಿಮುಖದ ಪ್ರದೇಶವೆಲ್ಲ ಬಾತು, ಕೆಂಪಾಗಿ ಒಸರುವಿಕೆ ಕಾಣಿಸಿಕೊಳ್ಳುತ್ತದೆ. ಉರಿತ ಮತ್ತು ತುರಿಕೆಯಿದ್ದು, ಆ ಭಾಗವನ್ನು ಮುಟ್ಟಿದರೆ ನೋವಾಗುತ್ತಿರುತ್ತದೆ.

ಸೋಂಕಿನ ಲಕ್ಷಣಗಳು

ಬದಲಾಯಿಸಿ
  • ಯೋನಿಮುಖದ ಉರಿತವು ಗುಂಜೆಲುದಿಮ್ಮು ಹಾಗೂ ಹಿರಿಯ ಯೋನಿದುಟಿಗಳ ರೋಮಕೋಶಿಕೆಯುರಿತ, ಕೀವು ಗುಳ್ಳೆಪಡೆ, ತೀಡು ಗಳಲೆಗಳಿಂದಾಗಿ ಕಾಣಿಸಿಕೊಳ್ಳಬಹುದು.
  • ಯೋನಿಯ ಮೈಜಿಡ್ಡಿನ ಜಿಟ್ಟಿಯ ಅಥವಾ ಗಾಯಗಳ ಸೋಂಕಿನಿಂದಾಗಿ ಅಥವಾ ವಿವಿಧ ರತಿರೋಗಗಳ ಲಕ್ಷಣಗಳಲ್ಲೊಂದಾಗಿ ಕಾಣಿಸಿಕೊಳ್ಳಬಹುದು.
  • ಚಿಕ್ಕ ಮಕ್ಕಳಲ್ಲಿ ಅಥವಾ ಮುಪ್ಪಿನಲ್ಲಿ ಕಂಡುಬರುವ ಯೋನಿಮುಖದುರಿತ ಸಂಕೀರ್ಣದ ಭಾಗವೆನಿಸಿ ಕಾಣಿಸಬಹುದು.
  • ಯೋನಿಮುಖದಲ್ಲಿನ ಮೂತ್ರನಾಳ ಬದಿಯ ಅಥವಾ ಮೂತ್ರನಾಳದಡಿಯ ಬಾರ್ಥೊಲಿನ್ ಗ್ರಂಥಿಗಳ ಸೋಂಕು ಕಾರಣವಾಗಿರಬಹುದು.
  • ಮಣಿಮಾಲಣಬೆ ಬೇನೆ, ಲೋಮಕುಂಟಿ ಬೇನೆಗಳೂ ಯೋನಿಮುಖದುರಿತದ ಸಹಭಾಗಿಗಳು.
  • ಯೋನಿಮುಖದ ಚರ್ಮವು ಉರಿಗೆಂಜ, ಸಿಬ್ಬು ಮೊದಲಾದ ಸೋಂಕುಗಳಿಂದಲೂ ಬಾಧಿತವಾಗಬಹುದು.[]

ಸೋಂಕು ನಿವಾರಿಸುವ ಬಗ್ಗೆ

ಬದಲಾಯಿಸಿ
  • ಮರ್ಮಭಾಗವನ್ನು ಸ್ವಚ್ಛವಾಗಿತ್ತುಕೊಳ್ಳುಬೇಕು.
  • ಸ್ವಚ್ಛವಾದ ಒಳ ಉಡುಪುಗಳನ್ನು ಧರಿಸುವುದು.
  • ಮುಟ್ಟಿನ ಸಮಯದಲ್ಲಿ ಹಾಗೂ ಬಿಳಿಸೆರಗು, ಅಥವಾ ಬೇರಾವುಕದೇ ಯೋನಿಯುರಿತವಿದ್ದಲ್ಲಿ ಈ ಒಳಸ್ವಚ್ಛತೆಯನ್ನು ಕಾದಿಟ್ಟುಕೊಳ್ಳುವುದು ರೂಢಿಯಾಗಬೇಕು.
  • ಸೋಂಕು ತಗುಲಿದಾಗ ನಂಜುರೋಧಕ ದ್ರಾವಣಗಳಿಂದ ತೊಳೆದು, ಮೆತ್ತನೆಯ ಬಟ್ಟೆಯಿಂದ ಒಣಗಿಸಬೇಕು.
  • ಸಮಂಜಸವಾದ ಜೀವಿರೋಧಕ ಹಾಗೂ ಬೂಷ್ಟು ರೋಧಕಗಳನ್ನು ಸೋಂದು ತಗುಲಿದ ಭಾಗಕ್ಕೆ ಅಥವಾ ದೇಹದೊಳಬಳಕೆಯಿಂದ ಯೋನಿಮುಖದ ಸೋಂಕುನ್ನು ನಿವಾರಿಸಬಹುದು.
  • ಬೆದೆಜನಕದ ಕೊರತೆಯಿಂದಾಗೆ ಮಕ್ಕಳಲ್ಲಿ ಮತ್ತು ಮುಪ್ಪಿನವರಲ್ಲಿ ಈ ಉರಿ ಕಂಡು ಬಂದರೆ ಬೆದೆಜನಕದಿಂದ ಕೂಡಿದ ಮುಲಾಮು, ಮಾತ್ರೆಗಳನ್ನು ಕೆಲವು ವಾರೆ ಉಪಯೋಗಿಸಬಹುದು.

ಉಲ್ಲೇಖ

ಬದಲಾಯಿಸಿ
  1. https://www.webmd.com/women/guide/sexual-health-vaginal-infections#1