ಯೊಜಿಂಬೊ (೧೯೬೧) ಅಕಿರಾ ಕುರೋಸಾವಾ ರವರು ನಿರ್ದೇಶಿಸಿರುವ ಜಪಾನೀಸ್ ಚಿತ್ರ. ಕುರೋಸಾವಾರವರ ಅತ್ಯಂತ ಮೆಚ್ಚುಗೆ ಪಡೆದ ಚಿತ್ರಗಳಲ್ಲಿ ಇದೊಂದು. ಜಪಾನಿನ ಭಾಷೆಯಲ್ಲಿ ಯೊಜಿಂಬೊ ಎಂದರೆ ಅಂಗರಕ್ಷಕ' ಎಂಬರ್ಥ ಮೂಡುತ್ತದೆ.[೧]

ಕಥೆಸಂಪಾದಿಸಿ

ಕೆಲಸ ಹುಡುಕಿ ಹೊರಟ ಸಮುರಾಯ್ ಕ್ಷತ್ರಿಯನಿಗೆ ವಿಧಿ ತಲುಪಿಸಿದ್ದು ಆಂತರಿಕ ಜಗಳಗಳಿಂದ ತತ್ತರಿಸಿರುವ ಒಂದು ಪಟ್ಟಣದೆಡೆಗೆ. ಜೂಜಾಟದಿಂದ ದುಡ್ಡು ಮಾಡುತ್ತಿದ್ದ ದೊರೆಯೊಂದೆಡೆಯಾದರೆ, ಅದೇ ಜೂಜಾಟದಿಂದ, ಸಾರಾಯಿ ಮಾರಾಟಗಾರನ ಸಖ್ಯದಿಂದ ದುಡ್ಡು ಮಾಡುತ್ತಿದ್ದ ಅವನ ಬಲಗೈ ಬಂಟ ಇನ್ನೊಂದೆಡೆ ಅವನ ವಿರುದ್ಧ ತಿರುಗಿ ಲಾಬಿ ಹೂಡಿರುತ್ತಾನೆ. ಎರಡು ಹೋಳಾದ ಪಟ್ಟಣದಲ್ಲಿ ದಿನನಿತ್ಯ ಕಲಹ, ಹತ್ಯೆ ನಡೆದೇ ಇರುತ್ತದೆ. ಈ ನಡುವೆ ಬಂದ ಸಮುರಾಯ್, ಸಾರಾಯಿ ಅಂಗಡಿ ನಡೆಸುವ ವಯೋವೃದ್ಧನೊಬ್ಬನಿಂದ ಊರಿನ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಾನೆ. ವೃದ್ಧನ ಮಾತುಗಳಿಗೆ ಓಗೊಟ್ಟ ಅವನು ಊರಿಗೆ ಶಾಂತಿ ತಂದುಕೊಡುವುದಾಗಿ ಹೇಳುತ್ತಾನೆ. ಊರಿನಲ್ಲಿ ಶಾಂತಿ ಮರುಕಳಿಸುವ ನಿಟ್ಟಿನಲ್ಲಿ ಹಲವಾರು ಚಾಕಚಕ್ಯತೆಗಳಿಂದ ಕೂಡಿದ ಆಟಗಳನ್ನಾಡಿ ಕೊನೆಗೊಮ್ಮೆ ಎರಡೂ ಪಂಗಡಗಳು ಅವಸಾನಕ್ಕೊಳಗಾಗುವಂತೆ ಮಾಡುತ್ತಾನೆ.ಪ್ರತಿಯೊಂದು ಚಿತ್ರಪಟವೂ ಕಲಾಕೃತಿಯಂತಿರುವ ಈ ಚಿತ್ರ ಹಲವು ಸಿನಿಮಾ ವಿಮರ್ಶಕರ ಮನ ಗೆದ್ದಿದೆ.

ಉಲ್ಲೇಖಗಳುಸಂಪಾದಿಸಿ

"https://kn.wikipedia.org/w/index.php?title=ಯೊಜಿಂಬೊ&oldid=756281" ಇಂದ ಪಡೆಯಲ್ಪಟ್ಟಿದೆ