ಯೂಪ್ಲಿಕ್ಟಿಸ್ ಕೇರಳ (ಕಪ್ಪೆ)

ಯೂಪ್ಲಿಕ್ಟಿಸ್ ಕೇರಳ ಅಥವಾ ಕೇರಳ ಚಿಮ್ಮುವ ಕಪ್ಪೆ - ಇದು Dicroglossidae ಕುಟುಂಬಕ್ಕೆ ಸೇರಿದ ಚಿಮ್ಮುವ ಕಪ್ಪೆಯ ಒಂದು ಜಾತಿ[೧]. ಇದು ಯೂಪ್ಲಿಕ್ಟಿಸ್ ಪ್ರಭೇದಕ್ಕೆ ಸೇರಿದೆ. ಮೊದಲಬಾರಿಗೆ ಕೇರಳದ ತಟ್ಟೆಕಾಡು ಪ್ರದೇಶದ ಪಕ್ಶಿಧಾಮದ ಸುತ್ತಲಿನಲ್ಲಿ ಪತ್ತೆಯಾಗಿದ್ದು ಕೇರಳದ ಜೀವವೈವಿಧ್ಯದ ಗೌರವಾರ್ಥವಾಗಿ ಆ ಹೆಸರು ಇಡಲಾಗಿದೆ. ಪಾಲಕ್ಕಾಡ್ ಪ್ರದೇಶದ ಪಶ್ಚಿಮ ಘಟ್ಟಗಳ ತಪ್ಪಲಿನ ಸಿಹಿನೀರಿನ ಸ್ಥಳಗಳಲ್ಲಿ ಇದು ಪತ್ತೆಯಾಯಿತು. ಈ ಕುರಿತ ಅಧ್ಯಯನ ವರದಿಯು ನ್ಯೂಝಿಲ್ಯಾಂಡಿನ ಅಂತಾರಾಷ್ಟ್ರೀಯ ಜರ್ನಲ್ ಝೂಟಾಕ್ಸಾದಲ್ಲಿ ಪ್ರಕಟವಾಗಿದೆ.[೨]

ವಾಸಸ್ಥಳ ಮತ್ತು ಭೌಗೋಳಿಕ ವ್ಯಾಪ್ತಿ ಬದಲಾಯಿಸಿ

ಇವು ಸಿಹಿನೀರಿನ ಮೂಲಗಳ ಬಳಿ ಕಾಣಸಿಗುತ್ತವೆ. ಸಾಮಾನ್ಯವಾಗಿ ಯೂಪ್ಲಿಕ್ಟಿಸ್ ಕುಟುಂಬದ ಕಪ್ಪೆಗಳು ಅರೇಬಿಯಾ ಪರ್ಯಾಯ ದ್ವೀಪಗಳು, ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಮಯನ್ಮಾರ್ ಮತ್ತು ಥ್ಯಲ್ಯಾಂಡಗಳಲ್ಲಿ ವ್ಯಾಪಿಸಿವೆ. ಹೊಸ ಅಧ್ಯಯನದ ಪ್ರಕಾರ ಇವು ಭಾರತೀಯ ಮೂಲದವು ಎಂದು ಸಾಬೀತಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.[೩][೪]

ಸಂಶೋಧನಾ ತಂಡ ಬದಲಾಯಿಸಿ

ಜೂಆಲಜಿಕಲ್ ಸರ್ವೇ ಆಫ್ ಇಂಡಿಯಾ, ಮೌಂಟ್ ಕಾರ್ಮೆಲ್ ಕಾಲೇಜು ಬೆಂಗಳೂರು ಮತ್ತು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಮತ್ತು ರಿಸರ್ಚ್ ಭುವನೇಶ್ವರ ಸಂಸ್ಥೆಗಳ ಒಂಡು ತಂಡವು ಈ ಕಪ್ಪೆಯನ್ನು ಪತ್ತೆ ಮಾಡಿತು. [೫] ದಿನೇಶ್ ಕೆಪಿ, ಚನ್ನಕೇಶವಮೂರ್ತಿ ಬಿ ಎಚ್, ಪಿ. ದೀಪಕ್, ಎ. ಘೋಶ್ ಮತ್ತು ಕೆ ದ್ಯುತಿ ಇವರುಗಳು ಈ ತಂಡದಲ್ಲಿ ಇದ್ದವರು.

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2022-02-28. Retrieved 2022-02-28.
  2. https://mapress.com/zt/article/view/zootaxa.4990.2.7
  3. https://www.prajavani.net/india-news/new-species-of-frog-found-in-kerala-841829.html
  4. https://amphibiansoftheworld.amnh.org/Amphibia/Anura/Dicroglossidae/Dicroglossinae/Phrynoderma/Phrynoderma-kerala
  5. https://www.thehindu.com/news/cities/Kochi/new-species-of-skittering-frog-discovered-from-surroundings-of-thattekkad-bird-sanctuary/article34917143.ece