ಯುದ್ಧ ಮತ್ತು ಶಾಂತಿ
ಯುದ್ಧ ಮತ್ತು ಶಾಂತಿ ಪ್ರಸಿದ್ಧ ರಷ್ಯನ್ ಸಾಹಿತಿ ಲಿಯೋ ಟಾಲ್ಸ್ಟಾಯ್ ರವರು ಬರೆದ ಒಂದು ಕಾದಂಬರಿ. ಇದು "ರಷ್ಯನ್ ಸಂದೇಶವಾಹಕ" ಎಂಬ ಪತ್ರಿಕೆಯಲ್ಲಿ ೧೮೬೫ ರಿಂದ ೧೮೬೯ ರ ವರೆಗೆ ಮೊದಲ ಬಾರಿ ಪ್ರಕಟವಾಯಿತು.
ಲೇಖಕರು | ಲಿಯೋ ಟಾಲ್ಸ್ಟಾಯ್ |
---|---|
ಮೂಲ ಹೆಸರು | Война и миръ |
ಅನುವಾದಕ | ಯುದ್ಧ ಮತ್ತು ಶಾಂತಿ |
ದೇಶ | ರಶಿಯ |
ಭಾಷೆ | ರಶಿಯನ್ ಸ್ವಲ್ಪ ಫ್ರೆಂಚ್ ಭಾಷೆಯೊಂದಿಗೆ |
ಪ್ರಕಾರ | ಚಾರಿತ್ರಿಕ, ಪ್ರಣಯ, ಯುದ್ಧ ಕಾದಂಬರಿ, ತತ್ವಶಾಸ್ತ್ರೀಯ |
ಪ್ರಕಾಶಕರು | The Russian Messenger (serial) |
ಪ್ರಕಟವಾದ ದಿನಾಂಕ | ೧೮೬೯ |
ಮಾಧ್ಯಮ ಪ್ರಕಾರ | Print (Hardback & Paperback) & Audio book |
ಪುಟಗಳು | 1,225 (first published edition) |
"ಯುದ್ಧ ಮತ್ತು ಶಾಂತಿ" ಟಾಲ್ಸ್ಟಾಯ್ ರವರ ಎರಡು ಮಹಾಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ (ಇನ್ನೊಂದು ಅನ್ನಾ ಕರೆನೀನಾ). ಈ ಕಾದಂಬರಿ ನೆಪೋಲಿಯನ್ನನ ಕಾಲದ ರಷ್ಯನ್ ಸಮಾಜವನ್ನು ಕುರಿತದ್ದಾಗಿದೆ. ನೂರಾರು ಪಾತ್ರಗಳನ್ನು ಹೊಂದಿರುವುದು ಈ ಕಾದಂಬರಿಯ ವೈಶಿಷ್ಟ್ಯ. ಯುದ್ಧ, ಶಾಂತಿ, ಯೌವನ, ಮದುವೆ, ಮುದಿತನ, ಸಾವು ಮೊದಲಾದ ವಿಷಯಗಳನ್ನು ಈ ಕಾದಂಬರಿ ಚರ್ಚಿಸುತ್ತದೆ.
ಯುದ್ಧ ಮತ್ತು ಶಾಂತಿ ಕಾದಂಬರಿಯನ್ನು ದೇ. ಜವರೇಗೌಡ ಅವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ಉಲ್ಲೇಖನಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ