ಯಳಗೋಡು
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಯಳಗೋಡು ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಗೆ ಸೇರಿದ ಒಂದು ಗ್ರಾಮವಾಗಿದೆ. ಚಿತ್ರದುರ್ಗದಿಂದ ಜಗಳೂರಿಗೆ ಬಿದರಕೆರೆಯ ಮೇಲಿನಿಂದ ಹಾದು ಹೋಗುವ ಮಾರ್ಗದಲ್ಲಿ ಮುದ್ದಾಪುರದ ಸಮೀಪ ಈ ಗ್ರಾಮ ಬರುತ್ತದೆ. ಈ ಊರು ತನ್ನದೇ ಆದ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಕೃಷಿ ಪ್ರಧಾನವಾದ ಈ ಊರಿನಲ್ಲಿ ಎಲ್ಲಾ ಜನಾಂಗದ ಜನರೂ ಶಾಂತಿ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಈ ಊರಿನಲ್ಲಿ ಅನೇಕ ದೆವಾಲಯಗಳಿವೆ . ಪ್ರಾಚೀನವಾದ ಒಂದು ಕೆರೆಯೂ ಇದೆ. ಇಲ್ಲಿ ಪ್ರಸಿದ್ಧ ಭೋಗೇಶ್ವರನ ದೇವಾಲಯವಿದೆ. ದೇವಾಲಯದ ಬಳಿ ವೀರಗಲ್ಲೊಂದಿದೆ. ಒಂದು ಶಾಸನದ ಪ್ರಕಾರ ಕ್ರಿ ಶ 1090 ನೇ ವ್ಯಯ ಸಂವತ್ಸರದಲ್ಲಿ ಚೈತ್ರ ಶುದ್ಧ ಪಾಡ್ಯದ ಸೋಮವಾರದಂದು ಉತ್ತರಾಯಣ ಸಂಕ್ರಮಣದ ನಿಮಿತ್ತ ಮಲ್ಲಿಕಾರ್ಜುನ ಪಂಡಿತ ದೇವರಿಗೆ(ಭೋಗೇಶ್ವರ ದೇವರಿಗೆ) ದೇವರ ನೈವೇದ್ಯಕ್ಕೆ ದಾನ ಮಾಡಿದ ಬಗ್ಗೆ ಉಲ್ಲೇಖವಿದೆ.
ಇಲ್ಲಿರುವ ವೀರಗಲ್ಲಿನಲ್ಲಿ ಕ್ರಿ ಶ 1307 ರಲ್ಲಿ ಯಳಗೋಡು ಗ್ರಾಮದ ಡಮಂಡಳಿ ನಾಯಕರ ಮಗ ಬೊಮ್ಮನಾಯ್ಕ ಬೀರ ಎಂದು ಉಲ್ಲೇಖವಿದೆ. ಭರಮಣ್ಣ ನಾಯಕರ ಕಾಲದಲ್ಲಿ ದುರ್ಗದ ಪ್ರಧಾನಿಗಳಲ್ಲಿ ಒಬ್ಬರಾಗಿದ್ದ ಅಪ್ಪರಸಯ್ಯನು ಯಳಗೋಡಿನಲ್ಲಿ ಹನುಮಂತ ದೇವರ ಗುಡಿಯನ್ನು ಕಟ್ಟಿಸಿದ್ದಾನೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಗ್ರಾಮ ದೇವತೆಯಾದ ಮಾರಮ್ಮನ ಜಾತ್ರೆಯು ತುಂಬಾ ವಿಜೃಂಭಣೆಯಿಂದ ನಡೆಯುತ್ತದೆ.
ಆಧಾರ: ಚಿತ್ರದುರ್ಗ ಜಿಲ್ಲಾ ದರ್ಶಿನಿ- ಟಿ ಗಿರಿಜ.