ಮ್ಯಾಟಲ್ಯಾಬ ಒಂದು ಗಣಕ ತಂತ್ರಾಶ. ಇದನ್ನು ಮ್ಯಾಥವರ್ಕ್ಸ್ ಎಂಬ ಸಂಸ್ಥೆ ಅಭಿವೃದ್ದಿಪಡಿಸಿದೆ. ಇದರಲ್ಲಿ ಮ್ಯಾಟ್ರಿಕ್ಸಗಳ ಬದಲಾವಣೆಗಳನ್ನು, ಸಮೀಕರಣಗಳನ್ನು ಪರಿಹರಿಸುವುದು. ರೇಖಾಚಿತ್ರಗಳನ್ನು ಬಿಡಿಸುವುದು, ಕ್ರಮಾವಳಿಗಳನ್ನು ಅನುಷ್ಠಾನ ತರುವುದು ಹಾಗೂ ಇತರೇ ಗಣಿತಮಯ ವೈಜ್ಞಾನಿಕ ಲೆಕ್ಕಾಚಾರಗಳನ್ನು ಮಾಡಬಹುದು. ಇತರೆ ಗಣಕ ಭಾಷೆಗಳಾದ C, C++, Java, Fortran ಮತ್ತು Python ಗಳಲ್ಲಿ ಬರೆದ ತಂತ್ರಾಂಶಗಳನ್ನು ಮ್ಯಾಟಲ್ಯಾಬಗೆ ಜೋಡಿಸಬಹುದು.

MATLAB
L-shaped membrane logo[]
ಚಿತ್ರ:MATLAB R2013a Win8 screenshot.png
MATLAB R2013a running on Windows 8
ಅಭಿವೃದ್ಧಿಪಡಿಸಿದವರುಮ್ಯಾಥವರ್ಕ್ಸ್
ಮೊದಲು ಬಿಡುಗಡೆ೧೯೮೪
Stable release
R2014b / ೨೦೧೪
Preview release
R2015a / ೨೦೧೪
ಕ್ರಮವಿಧಿಯ ಭಾಷೆC, C++, Java, MATLAB
ಕಾರ್ಯಾಚರಣಾ ವ್ಯವಸ್ಥೆCross-platform: Microsoft Windows, Linux, and Mac OS X[]
ಗಣಕಯಂತ್ರದಲ್ಲಿIA-32, x86-64
ವಿಧತಾಂತ್ರಿಕ ಲೆಕ್ಕಾಚಾರ
ಪರವಾನಗಿProprietary ವಾಣಿಜ್ಯ ತಂತ್ರಾಂಶ
ಅಧೀಕೃತ ಜಾಲತಾಣMATLAB product page
MATLAB
ಪ್ರೋಗ್ರಾಮಿಂಗ್ ಮಾದರಿ (ಪ್ಯಾರಾಡಿಗಮ್)multi-paradigm: imperative, procedural, object-oriented, array
ಬಿಡುಗಡೆ೧೯೭೦ರ ಕೊನೆಗೆ
ವಿನ್ಯಾಸಗೊಳಿಸಿದCleve Moler
ಡೆವಲಪರ್MathWorks
ಸಾಫ್ಟ್ವೇರ್ ರಿಲೀಸ್ ಲೈಫ್ ಸೈಕಲ್೮.೪ (R2014b) (೨೦೧೪)
ಮುನ್ನೋಟ ಬಿಡುಗಡೆ೮.೫ (R2015a) (2014)
ಟೈಪಿಂಗ್dynamic, weak
ಓಎಸ್Cross-platform
ಸಾಮಾನ್ಯ ಫೈಲ್ ವಿಸ್ತರಣೆಗಳು.m

ಪ್ರಾಥಮಿಕವಾಗಿ ಮ್ಯಾಟಲ್ಯಾಬನ್ನು ಸಂಖ್ಯಾತ್ಮಕ ಲೆಕ್ಕಾಚಾರಗಳಿಗಾಗಿ ಉದ್ದೇಶಿಸಿ ಹೊರತರಲಾಯಿತಾತದರೋ, ಇಂದು ಸಾಂಕೇತಿಕ ಲೆಕ್ಕಾಚಾರದ ಸಾಮರ್ಥ್ಯಗಳನ್ನು ಹೊಂದಿದೆ. ೨೦೦೪ರಲ್ಲಿ ಸುಮಾರು ಹತ್ತು ಲಕ್ಷ ಬಳಕೆದಾರರನ್ನು ಮ್ಯಾಟಲ್ಯಾಬ ಹೊಂದಿತ್ತು []. ವಿಜ್ಞಾನ, ತಂತ್ರಜ್ಞಾನ ಮತ್ತು ಅರ್ಥಶಾಸ್ತ್ರ ವಿಷಯದಿಂದ ಹೆಚ್ಚಿನ ಬಳಕೆದಾರರು ಇದ್ದಾರೆ. ಮ್ಯಾಟಲ್ಯಾಬನ್ನು ವ್ಯಾಪಕವಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಕಾರ್ಖಾನೆಗಳ ಉದ್ಯಮಗಳು ಬಳಸಲಾಗುತ್ತದೆ.

ಇತಿಹಾಸ

ಬದಲಾಯಿಸಿ

೧೯೭೦ ರಲ್ಲಿ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಕ್ಷರಾದ ಕ್ಲೀವ ಮೊಲರ ಎಂಬುವರು ಮ್ಯಾಟಲ್ಯಾಬನ್ನು ಅಭಿವೃದ್ಧಿಪಡಿಸತೊಡಗಿದರು. ಅವರು ತನ್ನ ವಿದ್ಯಾರ್ಥಿಗಳಿಗೆ ಫೊರ್ಟ್ರಾನ ತಿಳಿಯದೇ LINPACK ಮತ್ತು EISPACK ಗಳನ್ನು ಪ್ರವೇಶಿಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿದರು. ಬೇಗನೇ, ಇದರ ಕುರಿತು ಬೇರೆಬೇರೆ ವಿಶ್ವವಿದ್ಯಾಲಗಳಿಗೆ ಈ ಸುದ್ದಿ ಹರಡಿತು. ೧೯೮೩ರಲ್ಲಿ ಇದರ ವಾಣಿಜ್ಯ ಸಾಮರ್ಥ್ಯವನ್ನು ಗುರುತಿಸಿದ ಜ್ಯಾಕ್ ಲಿಟಲ್ ಎಂಬ ಅಭಿಯಂತರ ಮ್ಯಾಟಲ್ಯಾಬನ ತಂತ್ರಾಂಶವನ್ನು C ಭಾಷೆಯಲ್ಲಿ ಬರೆದು ಮ್ಯಾಥವರ್ಕ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಪದಗಳ ಜೋಡಣೆ (Syntax)

ಬದಲಾಯಿಸಿ

ಮ್ಯಾಟಲ್ಯಾಬನ್ನು ಮ್ಯಾಟಲ್ಯಾಬ ಭಾಷೆ ಸುತ್ತಲೂ ನಿರ್ಮಿಸಲಾಗಿದೆ. ಮ್ಯಾಟಲ್ಯಾಬಗೆ ಅದರದೇ ಆದ ಬರಹ (ಸ್ಕ್ರಿಪ್ಟ) ಹಾಗು ಕಾರ್ಯಗಳಿವೆ (ಫಂಕ್ಷನ).

ಅಸ್ಥಿರ (Variable)

ಬದಲಾಯಿಸಿ

ಅಸ್ಥಿರಗಳಿಗೆ = ಸಂಕೇತವನ್ನು ಬಳಸಿ ವ್ಯಾಖ್ಯಾನಿಸಬಹುದು. ಅಸ್ಥಿರಗಳ ರೀತಿಯನ್ನು ಗೊತ್ತಿರದೇ ಅವುಗಳನ್ನು ಘೋಷಿಸಬಹುದು[]. ಆಗ ಅವುಗಳು ಕೇವಲ ಸಾಂಕೇತಿಕ ವಸ್ತುಗಳಾಗಿ ಪರಿಗಣಿಸಲ್ಪಡುತ್ತವೆ. ಬರಹದಲ್ಲಿ ಅಸ್ಥಿರಗಳಿಗೆ ಬೇರೆಬೇರೆ ರೀತಿಯ ಬೆಲೆಯನ್ನು ನೀಡಬಹುದು[]. ಈ ಬೆಲೆಯು ಸಂಖ್ಯೆಯಾಗಿರಬಹುದು ಅಥವಾ ಪದಗಳಾಗಿರಬಹುದು ಅಥವಾ ಯಾವುದೊ ಕಾರ್ಯವಾಗಿರಬಹುದು.

ಉಲ್ಲೇಖಗಳು

ಬದಲಾಯಿಸಿ
  1. "The L-Shaped Membrane". MathWorks. 2003. Retrieved 7 February 2014.
  2. "System Requirements and Platform Availability". MathWorks. Retrieved 2013-08-14.
  3. http://www.eetimes.com/document.asp?doc_id=1151422
  4. http://de.mathworks.com/help/matlab/matlab_oop/matlab-vs-other-oo-languages.html
  5. http://de.mathworks.com/help/symbolic/creating-symbolic-variables-and-expressions.html