ಹಿರಿಯ ಉದ್ಯಮಿ, 'ಮಂಗಳೂರು ನಗರದ ವೆಸ್ಟ್ ಕೋಸ್ಟ್ ಪೇಪರ್ ಅಂಡ್, ಸ್ಟೇಶನೆರಿ ಸಂಸ್ಥೆ,' ಯಮಾಲಕ, ’ಮೋಹನ್ ಶೆಣೈ’, ರವರು, 'ರಾಷ್ಟ್ರೀಯ ಸ್ವಯಂ ಸೇವಕ ಸಂಘ,' ದ ಹಿರಿಯ ಸ್ವಯಂ ಸೇವಕರು, ಪತ್ನಿ, ಹೆಸರಾಂತ ಕನ್ನಡ ಲೇಖಕಿ, ಕಾದಂಬರಿಕಾರ್ತಿ-'ಶ್ರೀಮತಿ, ಪದ್ಮಾ ಶೆಣೈ'.

'ಭಾರತೀಯ ಜನಸಂಘ,' ದ ಕಾರ್ಯಕರ್ತರಾಗಿದ್ದ ಶೆಣೈರವರು

ಬದಲಾಯಿಸಿ

ಭಾರತೀಯ ಜನಸಂಘದ ಹಿರಿಯ ಮುತ್ಸದ್ಧಿಯಾಗಿರುವ ಯು. ಮೋಹನ್ ಆರ್. ಶೆಣೈ, ರವರು, ೧೯೫೬ ರಲ್ಲಿ, ಮಂಗಳೂರು ನಗರ ಸಭೆಗೆ, ಜನಸಂಘದಿಂದ ಆಯ್ಕೆಯಾದ ಪ್ರಥಮ ಪ್ರಥಮ ಸದಸ್ಯರಾಗಿದ್ದರು. ಮಂಗಳೂರಿನಲ್ಲಿ, 'ಆರೆಸ್ಸೆಸ್,' ನ ಶಾಖೆಯಲ್ಲಿ ಮೊದಲಿನಿಂದಲೂ, ಜಿಲ್ಲಾಮಟ್ಟದ ಕಾರ್ಯವಾಹಕರಾಗಿ, ಸಂಘದ ಶಾಖೆಯನ್ನು ಬೆಳೆಸುವುದರಲ್ಲಿ, ಸಕ್ರಿಯರಾಗಿ ಪಾಲ್ಗೊಂಡಿದ್ದರು. ೧೯೭೫ ರಲ್ಲಿ ತುರ್ತುಪರಿಶ್ತಿತಿಯ ಸಂದರ್ಭದಲ್ಲಿ, 'ಮೀಸಾಭಂಧನ,' ಕ್ಕೊಳಗಾಗಿದ್ದರು. 'ಸಂಘ ನಿಕೇತನ,' ದ ವಾರ್ಷಿಕ ಶ್ರೀ ಗಣೇಶೋತ್ಸವ ಸಮಿತಿಯಲ್ಲಿ ವಿವಿಧಮಟ್ಟದಲ್ಲಿ ಪದಾಧಿಕಾರಿಯಾಗಿ ದುಡಿದಿದ್ದಾರೆ.

ನಿಧನದ ಮುಂಚೆ, ಮೋಹನ್ ಶೆಣೈ ರವರು, 'ಮಂಗಳೂರು ನಗರದ ಮಾರ್ಕೆಟ್ ರೋಡ್ ವ್ಯಾಪಾರಿಗಳಸಂಘ,' ದ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದರು. ಯು. ಮೋಹನ್ ಆರ್. ಶೆಣೈ ತಮ್ಮ 'ಕೊಡಿಯಾಲಗುತ್ತು ವೆಸ್ಟ್,' ಸಮೀಪದ ಸ್ವಂತಗೃಹದಲ್ಲಿ, ೭, ಆಗಸ್ಟ್, ೨೦೦೯ ರಂದು, ನಿಧನರಾದರು. ಮೃತರು, ಪತ್ನಿ, ಪದ್ಮಾ ಶೆಣೈ, ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಡಾ. ಎಮ್. ಆರ್. ಶೆಣೈ,(ಮಂಗಳೂರಿನಲ್ಲಿದ್ದಾರೆ) ಮತ್ತು ಡಾ. ಸುರೇಂದ್ರ ಶೆಣೈ (ಅಮೆರಿಕದಲ್ಲಿದ್ದಾರೆ)