‘ಮೋಹನದಾಸ’ ಮಹಾತ್ಮ ಗಾಂಧಿಯವರ ಬಾಲ್ಯವನ್ನು ಆಧರಿಸಿದ ಚಲನಚಿತ್ರ.  ಇದು ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ.  ಇದರ ನಿರ್ದೇಶಕರು ಒಂಬತ್ತು ಭಾರಿ ರಾಷ್ಟ್ರೀಯ ಚಲನಪ್ರಶಸ್ತಿ ಪಡೆದ ಪಿ.ಶೇಷಾದ್ರಿ.

Mohandas
ನಿರ್ದೇಶನP. Sheshadri
ನಿರ್ಮಾಪಕM/S Mitra Chitra
ಚಿತ್ರಕಥೆP. Sheshadri
ಆಧಾರPapu Gandhi, Bapu Gandhi Aada Kathe: The Story of Mahatma Gandhi 
by Bolwar Mahammad Kunhi
&
The Story of My Experiments with Truth 
by Mahatma Gandhi
ಪಾತ್ರವರ್ಗParam Swamy
Samarth R. Hombal
Shruti
Anant Mahadevan
ಸಂಗೀತPravin Godkhindi
ಛಾಯಾಗ್ರಹಣG. S. Bhaskar
ಸಂಕಲನB. S. Kemparaju
ಬಿಡುಗಡೆಯಾಗಿದ್ದು
  • 2 ಅಕ್ಟೋಬರ್ 2019 (2019-10-02)
ದೇಶIndia
ಭಾಷೆKannada, Hindi, English
ಬಂಡವಾಳ 5 crores

ಇದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕ ಬೊಳುವಾರು ಮಹಮದ್ ಕುಂಞ್ ಅವರ "ಪಾಪು ಗಾಂಧಿ, ಬಾಪು ಗಾಂಧಿ ಆದಾ ಕಥೆ" ಮತ್ತು ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ ಸತ್ಯದೊಂದಿಗೆ ನನ್ನ ಪ್ರಯೋಗಗಳು ಕೃತಿಗಳನ್ನು ಆಧರಿಸಿದೆ.

‘ಮೋಹನದಾಸ’ ಚಲನಚಿತ್ರದಲ್ಲಿ ಮೋಹನದಾಸನ ಆರು ವರ್ಷದ ಬಾಲ್ಯದಿಂದ ಹದಿನಾಲ್ಕು ವರ್ಷದ ಬಾಲ್ಯದವರೆಗಿನ ಕತೆ ಇದೆ.  ಆರು ವರ್ಷದ ಬಾಲಕನ ಪಾತ್ರವನ್ನು ಪರಮ್ ಸ್ವಾಮಿ ಮತ್ತು ಹದಿನಾಲ್ಕು ವರ್ಷದ ಬಾಲಕನ ಪಾತ್ರವನ್ನು ಸಮರ್ಥ ಅಭಿನಯಿಸಿದ್ದಾರೆ,  ತಾಯಿಯ ಪ್ರಾತ್ರದಲ್ಲಿ ಕನ್ನಡದ ಖ್ಯಾತ ನಟಿ ಶೃತಿ ಮತ್ತು ಕರಮಚಂದರ ಪಾತ್ರದಲ್ಲಿ ಅನಂತ್ ಮಹದೇವನ್ ಅಭಿನಯಿಸಿದ್ದಾರೆ.

ಕಥಾಸಾರಾಂಶಸಂಪಾದಿಸಿ

ಸ್ವತಂತ್ರ ಭಾರತದ ಆರಂಭದಲ್ಲಿ ಹಿರಿಯರೆಲ್ಲ ಒಮ್ಮತದಿಂದ ದೇಶದ ರಾಜ ರಸ್ತೆಗಳಿಗೆಲ್ಲ ಮಹಾತ್ಮಾಗಾಂಧಿ ಮಾರ್ಗವೆಂದು ಹೆಸರಿಟ್ಟರು. ಕ್ರಮೇಣ ಆ ರಸ್ತೆಗಳಲ್ಲಿ ಕಲ್ಲು ಮುಳ್ಳುಗಳೇ ಹೆಚ್ಚು ಎಂದುಕೊಂಡು, ನಯವಾಗಿ ಜಾರಬಲ್ಲ, ಬೇಗ ಗುರಿ ತಲುಪಬಲ್ಲ ಒಳದಾರಿಗಳನ್ನು ಬಳಸಲಾರಂಭಿಸಿದರು. ಹಾಗಾಗಿ, ಹಿರಿಯರ ಕೈ ಹಿಡಿದು ನಡೆದ ನಿಜವಾದ ಗಾಂಧಿ ಮಾರ್ಗದ ಪರಿಚಯ ಆಗಲೇ ಇಲ್ಲ. ಕಿರಿಯರಿಗೆ ಗೊತ್ತಾದ ಗಾಂಧಿ ಮಾರ್ಗವೆಂದರೆ  ಎಂ.ಜಿ.ರೋಡು ಮಾತ್ರ!

ಇಂದಿನ ಮಕ್ಕಳಿಗೆ ಗಾಂಧಿ ಎಂದರೆ ‘ಗಾಂಧಿ-ಜಯಂತಿ’.  ಅಕ್ಟೋಬರ್ ೨, ಮತ್ತೊಂದು ರಜಾ!

ಗಾಂಧಿ ಹಲವು ನೆಲೆಗಳಲ್ಲಿ ಜೀವನ ಶೋಧನೆಗೆ ಪ್ರೇರೇಪಿಸುತ್ತಲೇ ಇರುವ ಒಂದು ಸಂಕೀರ್ಣ ಶಕ್ತಿ. ಅವರು ಅಸಾಮಾನ್ಯ ಎನಿಸುವುದು ಅವರು ತೀರ ಸಾಮಾನ್ಯರಂತೆ ಬದುಕಿದ್ದ ರೀತಿಯಿಂದ.

ಮಹಾತ್ಮಾ ಗಾಂಧೀಜಿ ಎಂದರೆ, ಯಾರಿಗೂ ನಿಲುಕದ ಅತಿ ಮಾನವನಲ್ಲ.  ಎಲ್ಲರಂತೆಯೇ ಹುಟ್ಟಿ, ಎಲ್ಲರಂತೆಯೇ ಬೆಳೆದ, ಒಬ್ಬ ಸಾಮಾನ್ಯ ಮಗು.  ಅವರ ಬಾಲ್ಯ ಕೂಡ ಎಲ್ಲ ಮಕ್ಕಳ ಬಾಲ್ಯದಂತೆಯೇ ಇತ್ತು.  ಅವರೂ ತಂಟೆ ಮಾಡುತ್ತಿದ್ದರು, ಹಠವಾದಿಯಾಗಿದ್ದರು, ಸುಳ್ಳು ಹೇಳುತ್ತಿದ್ದರು.  ಓದಿನಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು.  ಜೊತೆಗೆ ಒಮ್ಮೆ ಸ್ನೇಹಿತರ ಒತ್ತಾಯದಿಂದ ಕುತೂಹಲಕ್ಕೆ ಮಣಿದು  ಧೂಮಪಾನ ಮಾಡಿದ್ದರು, ಒಮ್ಮೆ ಮಾಂಸ ಸೇವಿಸಿದ್ದರು!  ಇದೆಲ್ಲದರ ಜೊತೆಗೆ ಶ್ರವಣ ಮತ್ತು ಹರಿಶ್ಚಂದ್ರ ಮುಂತಾದ ಕತೆಗಳಿಂದ ಪ್ರಭಾವಿತರಾಗಿ ತಮ್ಮ ಬದುಕನ್ನೇ ಬದಲಿಸಿಕೊಂಡರು.

ಸಾಮಾನ್ಯ ಮಗುವೊಂದು ಪರಿಪೂರ್ಣ ಮನುಷ್ಯನಾಗಿ ಬೆಳೆಯಲು, ಮಹಾತ್ಮನೆಂದು ಕರೆಸಿಕೊಳ್ಳಲು ಹೇಗೆ ಬದುಕಿ ಬಾಳಬೇಕು ಎಂಬುದನ್ನು ಗಾಂಧೀಜಿಯವರ ಬಾಲ್ಯದ ಕೆಲವು ಘಟನೆಗಳಿಂದ ನಿರೂಪಿಸಲ್ಪಟ್ಟ ರೂಪಕ ಈ ‘ಮೋಹನದಾಸ’.  ನಮ್ಮ ಅಷ್ಟೇ ಅಲ್ಲ ಪ್ರಪಂಚದ ಎಲ್ಲ ಮಕ್ಕಳಿಗಾಗಿ.   

ನಿರ್ಮಾಣಸಂಪಾದಿಸಿ

ಚಿತ್ರೀಕರಣಸಂಪಾದಿಸಿ

ಚಿತ್ರದ ಬಹುಪಾಲು ಭಾಗವನ್ನು ಪೋರ್ಬಂದರ್ ಮತ್ತು ರಾಜ್‌ಕೋಟ್‌ನಲ್ಲಿ ಚಿತ್ರೀಕರಿಸಲಾಗಿದೆ.

ಈ ಕಥೆಯನ್ನು ಹೆಚ್ಚು ಪ್ರೇಕ್ಷಕರನ್ನು ತಲುಪಲು ಶೇಷಾದ್ರಿ ಉದ್ದೇಶಿಸಿರುವುದರಿಂದ ಈ ಚಿತ್ರವನ್ನು ಇಂಗ್ಲಿಷ್ ಕನ್ನಡ ಮತ್ತು ಹಿಂದಿ ಎಂಬ ಮೂರು ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. [೧]

ಬಿಡುಗಡೆಸಂಪಾದಿಸಿ

ಈ ಚಿತ್ರವು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯಾದ 2019 ರ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ.

ಉಲ್ಲೇಖಗಳುಸಂಪಾದಿಸಿ

  1. https://www.theweek.in/theweek/cover/2019/06/27/Finding-Mohandas-A-filmmaker-attempt-to-capture-childhood-of-Gandhi.html

ಬಾಹ್ಯ ಲಿಂಕ್‌ಗಳುಸಂಪಾದಿಸಿ