ಮೊಸಂಡಾ
ಮೊಸಂಡಾ
ಬದಲಾಯಿಸಿಅಲಂಕಾರಿಕ ಹೂವುಗಳ ಪಟ್ಟಿಯಲ್ಲಿ ಎದ್ದು ಕಾಣುವ ಹೂವಿನ ಹೆಸರು ಮೊಸಂಡಾ. ಮೊಸಂಡಾದಲ್ಲಿ ಎರಡು ವಿಧ. ಒಂದು ಕಾಡು ಮೊಸಂಡಾ. ಬಿಳಿ ಬಣ್ಣ ಹೊಂದಿರುವ ಕಾಡು ಮೊಸಂಡಾವನ್ನು ‘ಬೆಳ್ಳಿಸೊಪ್ಪು’ ಎಂದೂ ಕರೆಯುತ್ತಾರೆ. ಇನ್ನೊಂದು ಅಲಂಕಾರಿಕ ಮೊಸಂಡಾ. ಮಾಂಸದ ಬಣ್ಣ ಅಥವಾ ತೆಳು ಪಿಂಕ್ ಬಣ್ಣವನ್ನು ಹೊಂದಿದ ಈ ಮೊಸಂಡಾ, ಹಸಿರು ಗಿಡದ ಮೇಲೆ ಕುಂಕುಮ ಚೆಲ್ಲಿದಂತೆ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಮುಸಂಡಾ (MUSANDA)ಎಂದು.
ಗುಣಲಕ್ಷಣ
ಬದಲಾಯಿಸಿಮೊಸಂಡಾದ ಹೂವಿನ ರಚನೆಯು ಇತರ ಹೂವುಗಳಿಗಿಂತ ಸ್ವಲ್ಪ ಭಿನ್ನ. ವಿಶೇಷವಾದ ಪರಿಮಳವನ್ನು ಹೊಂದಿರದ ಮೊಸಂಡಾ ಮುದ್ದೆ ಮುದ್ದೆಯಾಗಿ ಹೂ ಬಿಟ್ಟು ಎಸಳಿನಲ್ಲಿ ಬಿಳಿಯ ರೇಖೆಗಳನ್ನು ಹೊಂದಿರುತ್ತದೆ. ಮುಟ್ಟಿದಾಗ ವೆಲ್ವೆಟ್‍ನಂತಹ ಮೃದವಾದ ರಚನೆಯು ಮೊಸಂಡಾದಲ್ಲಿ ರೂಪುಗೊಂಡಿದೆ. ಇನ್ನು ಗಿಡದಲ್ಲಿ ಹೂ ಬಿಟ್ಟ ಮರುದಿನ, ಹೂವಿನ ಮಧ್ಯಭಾಗದಿಂದ ಹಳದಿ ಬಣ್ಣದ ಪುಟಾಣಿ ಹೂ ಚಿಗುರೊಡೆದು ಮೊಸಂಡಾದ ಅಂದವನ್ನು ವೃದ್ಧಿಸುತ್ತದೆ. ಮೊಸಂಡಾ ಗಿಡವು ತುಂಬಾ ಎತ್ತರಕ್ಕೆ ಬೆಳೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದರ ಕಾಂಡ ಹಾಗೂ ರೆಂಬೆಗಳು ಬಹಳ ಮೃದು.
ಔಷಧೀಯ ಗುಣಗಳು
ಬದಲಾಯಿಸಿಮೊಸಂಡಾದ ಎಲೆಗಳಲ್ಲಿ ಔಷಧೀಯ ಗುಣಗಳಿವೆ. ಪೂರ್ವಜರು ಮೊಸಂಡಾದ ಎಲೆಗಳನ್ನು ನೀರಿನಲ್ಲಿ ನೆನೆಸಿ ಅದು ನೊಂಪಾದ ನಂತರ ಸ್ನಾನಕ್ಕೆ ಬಳಸುತ್ತಿದ್ದರು. ಅಂದಿನ ಕಾಲದಲ್ಲಿ ಅದುವೇ ಶಾಂಪೂ ರೀತಿಯಲ್ಲಿ ಬಳಕೆಯಾಗುತ್ತಿತ್ತು. ಮನೆಯಂಗಳದಲ್ಲಿ ಮೊಸಂಡಾ ಇದ್ದರೆ ಚಿಟ್ಟೆಗಳ ಹಾಗೂ ಪುಟ್ಟ ಹಕ್ಕಿಗಳ ಭೇಟಿಯೂ ಹೆಚ್ಚುತ್ತದೆ.
ಉಲ್ಲೇಖ
ಬದಲಾಯಿಸಿಸುಧಾ ವಾರಪತ್ರಿಕೆ ಸೆಪ್ಟೆಂಬರ್೮,೨೦೧೬