ಮೊರಟಗಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ.

ಮೊರಟಗಿ
ಮೊರಟಗಿ
village
Population
 (೨೦೧೨)
 • Total೧೫೦೦

ಭೌಗೋಳಿಕ

ಬದಲಾಯಿಸಿ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಜನಸಂಖ್ಯೆ

ಬದಲಾಯಿಸಿ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 7000 ಇದೆ. ಅದರಲ್ಲಿ 3600 ಪುರುಷರು ಮತ್ತು 3400 ಮಹಿಳೆಯರು ಇದ್ದಾರೆ.

ಹವಾಮಾನ

ಬದಲಾಯಿಸಿ
  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಸಾಂಸ್ಕೃತಿಕ

ಬದಲಾಯಿಸಿ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಬದಲಾಯಿಸಿ
 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮಗಳು

ಬದಲಾಯಿಸಿ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳು

ಬದಲಾಯಿಸಿ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯಗಳು

ಬದಲಾಯಿಸಿ

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಲಯ, ಶ್ರೀ ಮಲ್ಲಿಕಾರ್ಜುನ ದೇವಾಲಯ, ಶ್ರೀ ಬಸವೇಶ್ವರ ದೇವಾಲಯ, ಶ್ರೀ ವೆಂಕಟೇಶ್ವರ ದೇವಾಲಯ, ಶ್ರೀ ಪಾಂಡುರಂಗ ದೇವಾಲಯ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಮಸೀದಿಗಳು

ಬದಲಾಯಿಸಿ

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

ಬದಲಾಯಿಸಿ

ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಉದ್ಯೋಗ

ಬದಲಾಯಿಸಿ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆಗಳು

ಬದಲಾಯಿಸಿ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಹಬ್ಬಗಳು

ಬದಲಾಯಿಸಿ

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

ಬದಲಾಯಿಸಿ
  • ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊರಟಗಿ
  • ಐಡಿಯಲ್ ಕಿರಿಯ ಪ್ರಾಥಮಿಕ ಶಾಲೆ, ಮೊರಟಗಿ
  • ಸದ್ಭಾವನಾ ಕಿರಿಯ ಪ್ರಾಥಮಿಕ ಶಾಲೆ, ಮೊರಟಗಿ
  • ಜ್ಞಾನ ಜ್ಯೋತಿ ಕಿರಿಯ ಪ್ರಾಥಮಿಕ ಶಾಲೆ, ಮೊರಟಗಿ
  • ನೂರುಂದೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಮೊರಟಗಿ
  • ಕಲ್ಪವೃಕ್ಷ ಹಿರಿಯ ಪ್ರಾಥಮಿಕ ಶಾಲೆ, ಮೊರಟಗಿ
  • ಶ್ರೀ ವಿ.ಎಸ್.ಬಿ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ, ಮೊರಟಗಿ
  • ಮೂರಾರ್ಜಿ ದೇಸಾಯಿ ವಸತಿ ಶಾಲೆ, ಮೊರಟಗಿ
  • ಶ್ರೀ ವಿ.ಎಸ್.ಬಿ ಆಂಗ್ಲ ಮಾದ್ಯಮ ಪ್ರೌಢ ಶಾಲೆ, ಮೊರಟಗಿ
  • ಕಲ್ಪವೃಕ್ಷ ಪ್ರೌಢ ಶಾಲೆ, ಮೊರಟಗಿ
  • ಎಸ್.ಎಸ್.ಎಸ್. ಸೇವಾ ಸಮೀತಿ ಪ್ರೌಢ ಶಾಲೆ, ಮೊರಟಗಿ
  • ಕಲ್ಪವೃಕ್ಷ ಪದವಿ ಪೂರ್ವ ಮಹಾವಿದ್ಯಾಲಯ, ಮೊರಟಗಿ
  • ಎಸ್.ಎಸ್.ಎಸ್. ಸೇವಾ ಸಮೀತಿ ಪದವಿ ಪೂರ್ವ ಮಹಾವಿದ್ಯಾಲಯ, ಮೊರಟಗಿ
  • ಸಿಂದಗಿ ಶಾಂತವೀರ ಪಟ್ಟಾಧ್ಯ್ಕಕ್ಷರ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ಮೊರಟಗಿ

ಸಾಕ್ಷರತೆ

ಬದಲಾಯಿಸಿ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಬದಲಾಯಿಸಿ

ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಬ್ಯಾಂಕ್

ಬದಲಾಯಿಸಿ
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಮೊರಟಗಿ
  • ಬ್ಯಾಂಕ್ ಆಫ್ ಮಹಾರಾಷ್ಟ್ರ, ಮೊರಟಗಿ
  • ಡಿ.ಸಿ.ಸಿ.ಬ್ಯಾಂಕ, ಮೊರಟಗಿ

ಗ್ರಾಮ ಪಂಚಾಯತಿ

ಬದಲಾಯಿಸಿ
  • ಗ್ರಾಮ ಪಂಚಾಯತಿ, ಮೊರಟಗಿ

ದೂರವಾಣಿ ವಿನಿಮಯ ಕೇಂದ್ರ

ಬದಲಾಯಿಸಿ
  • ದೂರವಾಣಿ ವಿನಿಮಯ ಕೇಂದ್ರ, ಮೊರಟಗಿ

ಅಂಚೆ ಕಚೇರಿ

ಬದಲಾಯಿಸಿ
  • ಅಂಚೆ ಕಚೇರಿ, ಮೊರಟಗಿ
  • ಮೊರಟಗಿ - 586123 (ನಾಗಾವಿ ಬಿ.ಕೆ., ಯರಗಲ್ಲ ಬಿ.ಕೆ., ಆಹೇರಿ, ಬಾಗಲೂರ, ಬಂಕಲಗಿ, ಬಂಟನೂರ, ಗಬಸಾವಳಗಿ, ಗೊರಗುಂಡಗಿ, ಕಕ್ಕಳಮೇಲಿ).

ನೀರು ಬಳಕೆದಾರರ ಸಹಕಾರ

ಬದಲಾಯಿಸಿ
  • ನೀರು ಬಳಕೆದಾರರ ಸಹಕಾರ, ಮೊರಟಗಿ

ಕೃಷಿ ಮಾರುಕಟ್ಟೆ

ಬದಲಾಯಿಸಿ
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮೊರಟಗಿ

ವಿದ್ಯುತ್ ಪರಿವರ್ತನಾ ಕೇಂದ್ರ

ಬದಲಾಯಿಸಿ
  • 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮೊರಟಗಿ

ಹೊರ ಪೋಲಿಸ್ ಠಾಣೆ

ಬದಲಾಯಿಸಿ
  • ಹೊರ ಪೋಲಿಸ್ ಠಾಣೆ, ಮೊರಟಗಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ಬದಲಾಯಿಸಿ
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಮೊರಟಗಿ

ಹಾಲು ಉತ್ಪಾದಕ ಸಹಕಾರಿ ಸಂಘ

ಬದಲಾಯಿಸಿ
  • ಹಾಲು ಉತ್ಪಾದಕ ಸಹಕಾರಿ ಸಂಘ, ಮೊರಟಗಿ

ಪ್ರಾಥಮಿಕ ಆರೋಗ್ಯ ಕೇಂದ್ರ

ಬದಲಾಯಿಸಿ
  • ಸಮುದಾಯ ಆರೋಗ್ಯ ಕೇಂದ್ರ, ಮೊರಟಗಿ
  • ಪ್ರಾಥಮಿಕ ಆರೋಗ್ಯ ಕೇಂದ್ರ, ಮೊರಟಗಿ

ರೈತ ಸಂಪರ್ಕ ಕೇಂದ್ರ

ಬದಲಾಯಿಸಿ
  • ರೈತ ಸಂಪರ್ಕ ಕೇಂದ್ರ, ಮೊರಟಗಿ

ಕಂದಾಯ ಕಚೇರಿ

ಬದಲಾಯಿಸಿ
  • ಕಂದಾಯ ಕಚೇರಿ, ಮೊರಟಗಿ

ನೆಮ್ಮದಿ (ಹೋಬಳಿ) ಕೇಂದ್ರ

ಬದಲಾಯಿಸಿ
  • ನೆಮ್ಮದಿ ಕೇಂದ್ರ, ಮೊರಟಗಿ

ಪಶು ಚಿಕಿತ್ಸಾಲಯ

ಬದಲಾಯಿಸಿ
  • ಪಶು ಚಿಕಿತ್ಸಾಲಯ, ಮೊರಟಗಿ
"https://kn.wikipedia.org/w/index.php?title=ಮೊರಟಗಿ&oldid=831059" ಇಂದ ಪಡೆಯಲ್ಪಟ್ಟಿದೆ