ಮೈಕೆಲ್ ಕೆವಿನ್ ಪೊಲನ್ ಜನನ ಫೆಬ್ರವರಿ 6, 1955) [೧] ಒಬ್ಬ ಅಮೇರಿಕಾದ ಲೇಖಕರು ಹಾಗೂ ಪತ್ರಕರ್ತರು. ಇವರು ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುತ್ತಾರೆ [೨]. ಏಕಕಾಲದಲ್ಲಿ, ಯುಸಿ ಬರ್ಕ್ಲಿ ಪದವಿ ಪತ್ರಿಕೋದ್ಯಮ ಶಾಲೆಯ ವಿಜ್ಞಾನ ಹಾಗು ಪರಿಸರ ಪತ್ರಿಕೋದ್ಯಮದ ಪ್ರಾಧ್ಯಾಪಕ, ಮತ್ತು  ನಿರ್ದೇಶಕರಾಗಿದ್ದಾರೆ. ಅಲ್ಲಿ ಅವರು 2020 ರಲ್ಲಿ ಯುಸಿ ಬರ್ಕ್ಲಿ ಸೈಡಲ್ಲಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದರು. ಈ ವಿಭಾಗದಲ್ಲಿ ಅವರು ಸಾರ್ವಜನಿಕ ಶಿಕ್ಷಣ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. [೩] [೪] [೫] ಪೋಲನ್ ಅವರು ಆಹಾರದ ಸಾಮಾಜಿಕ-ಸಾಂಸ್ಕೃತಿಕ ಪರಿಣಾಮಗಳನ್ನು ಅನ್ವೇಷಿಸುವ ಪುಸ್ತಕಗಳಿಗೆ ಹೆಸರುವಾಸಿಯಾಗಿದ್ದಾರೆ, ಉದಾಹರಣೆಗೆ ದಿ ಬಾಟನಿ ಆಫ್ ಡಿಸೈರ್ ಮತ್ತು ದಿ ಓಮ್ನಿವೋರ್ಸ್ ಡೈಲೆಮಾ .

ಜೀವನ ಬದಲಾಯಿಸಿ

ಪೋಲನ್ ಅವರು ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡ್ನಲ್ಲಿ ಒಂದು ಯಹೂದಿ ಕುಟುಂಬದಲ್ಲಿ ಜನಿಸಿದರು. [೬][೭] ಅವರು ಲೇಖಕ ಮತ್ತು ಹಣಕಾಸು ಸಲಹೆಗಾರರಾದ ಸ್ಟೀಫನ್ ಪೊಲನ್ ಮತ್ತು ಅಂಕಣಕಾರ ಕಾರ್ಕಿ ಪೋಲನ್ ಅವರ ಮಗ

ಆಕ್ಸ್‌ಫರ್ಡ್‌ನ ಮ್ಯಾನ್ಸ್‌ಫೀಲ್ಡ್ ಕಾಲೇಜ್‌ನಲ್ಲಿ 1975 ರ ವರೆಗೆ ಅಧ್ಯಯನ ಮಾಡಿದ ನಂತರ, ಪೊಲನ್ 1977 ರಲ್ಲಿ ಬೆನ್ನಿಂಗ್ಟನ್ ಕಾಲೇಜಿನಿಂದ ಇಂಗ್ಲಿಷ್‌ನಲ್ಲಿ ಬಿಎ ಪದವಿ ಮತ್ತು 1981 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಎಂಎ ಸ್ನಾತಕೋತ್ತರ ಪದವಿ ಪಡೆದರು.

ಉಲ್ಲೇಖಗಳು ಬದಲಾಯಿಸಿ

  1. "About Michael Pollan" michaelpollan.com. May 11, 2010. Retrieved April 10, 2020.
  2. "Michael-pollan" Harvard University, Faculty of Arts & Sciences. Retrieved December 24, 2022.
  3. Graduate School of Journalism (2008) "Faculty: Michael Pollan". UC Berkeley. Retrieved September 21, 2008.
  4. Pollan, Michael. "About Michael Pollan". MichaelPollan.com. Retrieved December 24, 2022.
  5. "Leadership-Staff"". University of California Berkeley, UC Berkeley Center for the Science of Psychedelics. Retrieved December 24, 2022.
  6. STEVE LINDE; A. SPIRO; G. HOFFMAN (May 25, 2012). "50 most influential Jews: Places 31-40". Retrieved May 26, 2013. Michael Pollan, 57
  7. Bloom, Nate (May 21, 2010). "Jewish Stars 5/21". Cleveland Jewish News.