ಮೇರಿ ಆನಿಂಗ್
ಮೇರಿ ಆನಿಂಗ್ (1799-1847) ಸ್ವಯಂ ಆಸಕ್ತಿಯಿಂದ ಜೀವ್ಯವಶೇಷಗಳ ಪರಿಶೋಧನೆ ನಡೆಸಿದ ಬ್ರಿಟಿಷ್ ಪ್ರಾಗ್ಜೀವಿ ವಿಜ್ಞಾನಿ.ಪ್ಲಿಸಿಯೋಸಾರಸ್ ಎಂಬ ಡೈನೋಸಾರ್ ಪಳೆಯುಳಿಕೆಯನ್ನು ಮೊದಲು ಪತ್ತೆಹಚ್ಚಿದ ಖ್ಯಾತಿ ಈಕೆಗಿದೆ. ಇಂಗ್ಲೆಂಡಿನ ಡೋರ್ ಸೆಟ್ ನ ಲೈಮ್ ರೆಗ್ಗಿಸ್ ಎಂಬಲ್ಲಿ ತಂದೆ ರಿಚರ್ಡ್, ತಾಯಿ ಮೇರಿ ಆನಿಂಗ್ ಜನಿಸಿದ ಈಕೆ ಹತ್ತು ಮಕ್ಕಳಲ್ಲಿ ಒಬ್ಬಳು. ಕೊನೆಯವರೆಗೂ ಅವಿವಾಹಿತಳಾಗಿಯೇ ಉಳಿದಳು. ಇಂಗ್ಲೆಂಡಿನ ಈ ಪ್ರಾಂತ್ಯಅಮೊನೈಟ್ ಮತ್ತು ಡೈನೋಸಾರ್ ಜೀವ್ಯವಶೇಷಗಳಿಗೆ ಹೆಸರುವಾಸಿ. ತನ್ನ ಸಹೋದರನೊಡನೆ ಈ ಭಾಗದಲ್ಲಿ ಇಕ್ತಿಯೋಸಾರಸ್ ಎಂಬ ಡೈನೋಸಾರ್ ಅವಶೇಷವನ್ನು ಪತ್ತೆಹಚ್ಚಿದ ಮೇಲೆ ಆಕೆಯ ಹೆಸರು ವಿಖ್ಯಾತವಾಯಿತು. ಇದನ್ನು ಪತ್ತೆ ಹಚ್ಚಿದಾಗ ಆಕೆಯ ವಯಸ್ಸು ಕೇವಲ ಹನ್ನೆರಡು ವರ್ಷ. ತಾನು ಪತ್ತೆಹಚ್ಚಿದ ಜೀವ್ಯವಶೇಷಗಳ ಬಗ್ಗೆ ಹೆಚ್ಚಿನ ವಿವರ ಪಡೆಯಲೆಂದು ಆಕೆ ಲಂಡನ್ ಮ್ಯೂಸಿಯಂಗೆ ಕಳಿಸಿಕೊಡುತ್ತಿದ್ದಳು. 1823ರಲ್ಲಿ ಪ್ಲಿಸೀಯೋಸಾರಸ್ ನ ಪರಿಪೂರ್ಣ ಅಸ್ಥಿಪಂಜರವನ್ನು ಪತ್ತೆಹಚ್ಚಿದಳು. ಇದರೊಂದಿಗೆ ಆಕೆಯ ಆಸಕ್ತಿ ಇಮ್ಮಡಿಸಿತು. ಈ ಪೈಕಿ 1929ರಲ್ಲಿ ಪತ್ತೆಮಾಡಿದಸ್ಕ್ವೆಲೋರಜ ಎಂಬ ಪುರಾತನ ಮೀನಿನ ಪಳೆಯುಳಿಕೆ ಆಕೆಯ ಸಂಗ್ರಹದಲ್ಲಿ ಗಮನಾರ್ಹವಾದದ್ದು. ಇದನ್ನು ಶಾರ್ಕ್ ಮೀನಿನ ಪೂರ್ವಜ ಎನ್ನಲಾಗಿದೆ.
ಮೇರಿ ಆನಿಂಗ್ | |
---|---|
ಜನನ | Lyme Regis, ಡೋರ್ಸೆಟ್, ಇಂಗ್ಲೆಂಡ್ | ೨೧ ಮೇ ೧೭೯೯
ಮರಣ | 9 March 1847 ಲೈಮ್ ರೆಜಿಸ್ | (aged 47)
Cause of death | ಸ್ತನದ ಕ್ಯಾನ್ಸರ್ |
Resting place | ಸೇಂಟ್ ಮೈಕಲ್ಸ್ ಚರ್ಚ್, ಲೈಮ್ ರೆಜಿಸ್ 50°43′32″N 2°55′54″W / 50.725471°N 2.931701°W |
ವೃತ್ತಿ(ಗಳು) | Fossil collector · Palaeontologist |
ಪೋಷಕ(ರು) | Richard Anning (c. 1766–1810) Mary Moore (c. 1764–1842) [೧] |
ಸಂಬಂಧಿಕರು | Joseph Anning (brother; 1796–1849) [೧] |
ಬಡ ಕುಟುಂಬದಿಂದ ಬಂದ ಆನಿಂಗ್ ಗೆ ಆಕೆಯ ತಂದೆಯೇ ಗುರು. ಆತ ಬಡಗಿಯಾಗಿದ್ದ. ಇವಳ ಹನ್ನೊಂದನೇ ವಯಸ್ಸಿನಲ್ಲಿ ತಂದೆ ಅಪಘಾತದಿಂದ ಮೃತನಾದ. ಮುಂದಿನ ಮೂವತ್ತೈದು ವರ್ಷಗಳನ್ನು ಆಕೆ ಜೀವ್ಯವಶೇಷ ಸಂಗ್ರಹಕ್ಕಾಗಿಯೇ ಮುಡುಪಾಗಿಟ್ಟಳು. ಅದನ್ನು ತಾಯಿಯ ನೆರವಿನಿಂದ ಉದ್ಯಮವಾಗಿ ಬೆಳೆಸಿದಳು. ಅಮೊನೈಟ್, ಡೈನೋಸಾರ್ ಮತ್ತು ಸಾಗರ ಜೀವಿಗಳ ಅವಶೇಷಗಳ ಬಗ್ಗೆ ಆಕೆ ಗಳಿಸಿದ್ದ ಜ್ಞಾನ ಅನೇಕರ ಮೆಚ್ಚುಗೆ ಗಳಿಸಿತ್ತು. ಆದರೆ ಆರ್ಥಿಕವಾಗಿ ಆಕೆಯ ಬದುಕು ಅಷ್ಟೇನೂ ಸುಧಾರಿಸಲಿಲ್ಲ. 18838ರಲ್ಲಿ ಸರ್ಕಾರ ಸಂಶೋಧನಾ ವೇತನ ನೀಡಿತಾದರೂ ಆ ಕಾಲದಲ್ಲಿ ಮಹಿಳೆಯರು ಲಂಡನ್ನಿನಜಿಯಲಾಜಿಕಲ್ ಸೊಸೈಟಿಯಲ್ಲಿ ತಮ್ಮ ಶೋಧನೆ ಕುರಿತು ಉಪನ್ಯಾಸ ನೀಡುವ ಸಂಪ್ರದಾಯವಿರಲಿಲ್ಲ. ಆನಿಂಗ್ ಕೂಡ ತನ್ನ ಶೋಧವನ್ನು ಪ್ರಕಟಮಾಡುವ ಉತ್ಸಾಹ ತೋರಲಿಲ್ಲ. ಆಕೆ ಸಂಗ್ರಹಿಸಿದ ಅನೇಕ ಜೀವ್ಯವಶೇಷಗಳನ್ನು ಲಂಡನ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಎಷ್ಟೋ ಸಂದರ್ಭಗಳಲ್ಲಿ ಅವಳ ಹೆಸರನ್ನು ನಮೂದಿಸಿಯೂ ಇಲ್ಲ. ಹಿಮಯುಗದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಸ್ವಿಡ್ಜ ರ್ ಲೆಂಡಿನ ವಿಜ್ಞಾನಿಲೂಯಿಸ್ ಅಗಾಸಿಸ್ ಎರಡು ಜೀವ್ಯವಶೇಷಗಳಿಗೆ ಆಕೆಯ ಹೆಸರನ್ನು ಕೊಡುವುದರ ಮೂಲಕ ಗೌರವ ವ್ಯಕ್ತಪಡಿಸಿದ್ದಾನೆ. ಅವಳ ನಿಧನಾನಂತರ ಆಕೆಯ ಹೆಸರು ಹೆಚ್ಚು ಪ್ರಸಿದ್ಧಿಗೆ ಬಂತು.ಜಾರ್ಜ್ ಕುವಿಯರ್ ನ ಸಂಶೋಧನೆಗಳನ್ನು ಅರ್ಥಮಾಡಿಕೊಳ್ಳಲು ಆಕೆ ಫ್ರೆಂಚ್ ಭಾಷೆಯನ್ನೂ ಕಲಿತಿದ್ದಳು. ಡೈನೋಸಾರ್ ಗಳ ಜೀವ್ಯವಶೇಷ, ವಿಶೇಷವಾಗಿ ಅವುಗಳ ಅಂಗರಚನೆಯ ಬಗ್ಗೆ ಆಕೆಗಿದ್ದ ಜ್ಞಾನ ತುಂಬಾ ಆಳವಾದದ್ದು. ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯ ಕೊಡದಿದ್ದ ಲಂಡನ್ನಿನ ಜಿಯಲಾಜಿಕಲ್ ಸೊಸೈಟಿ ನ್ಯೂ ಡೋರ್ ಸೆಟ್ ನ ಕೌಂಟಿ ಮ್ಯೂಸಿಯಂಗೆ ಆಕೆಯನ್ನು ಗೌರವಾನ್ವಿತ ಸದಸ್ಯಳನ್ನಾಗಿ ಆರಿಸಿತು. ಇದಾದ ಒಂದು ವರ್ಷದಲ್ಲಿ ಆಕೆ ಸ್ತನ ಕ್ಯಾನ್ಸರ್ ನಿಂದ ನಿಧನಳಾದಳು. ಆಕೆಯ ಶ್ರದ್ಧಾಂಜಲಿಯನ್ನು ಜಿಯಲಾಜಿಕಲ್ ಸೊಸೈಟಿ ಅದರ ತ್ರೈಮಾಸಿಕದಲ್ಲಿ ಪ್ರಕಟಿಸಿತು.
ಪ್ರಸಿದ್ಧ ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್ ಹೊರತರುತ್ತಿದ್ದ `ಆಲ್ ದಿ ಇಯರ್ ರೌಂಡ್' ಎಂಬ ಪತ್ರಿಕೆಯಲ್ಲಿ `ಬಡಗಿಯೊಬ್ಬಳ ಮಗಳು ಲೋಕಪ್ರಸಿದ್ಧಿಯಾದಳು. ಆಕೆಗೆ ಆ ಪ್ರಸಿದ್ಧಿ ಸಲ್ಲಬೇಕಾದ್ದೇ' ಎಂದು ಬರೆದಿದ್ದ. ನಾಲಗೆ ಹೇಳಲು ತಡಕಾಡುವ ಪ್ರಸಿದ್ಧ ಪದಪುಂಜ `ಷಿ ಸೆಲ್ಸ್ ಸೀ ಷೆಲ್ಸ್ ಬೈದಿ ಸೀ ಷೋರ್' ಎಂಬುದು ಈಕೆಯ ಸೃಷ್ಟಿ ಎಂದು ಹೇಳುವುದಿದೆ.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Sharpe & McCartney 1998, p. 150