ಮೇಘಸ್ಫೋಟ
ಮೇಘ ಸ್ಫೋಟವೆಂದರೆ ಅತಿ ದೊಡ್ಡ ಗಾತ್ರದ ನೀರಿನ ಮೋಡ ಭೂಮಿಯ ವಾತಾವರಣದಲ್ಲಿ ಶೇಖರಣೆಯಾಗಿ ಅದು ಒಮ್ಮಿಂದೊಮ್ಮೆಲೆ ಭೂಮಿಯ ಮೇಲೆ ಸುರಿಯುವುದು. ಈ ಸುರಿಯುವಿಕೆಗೆ ಕಾರಣವೆಂದರೆ, ಗುಡುಗು, ಸಿಡಿಲುಗಳಿಂದ ಹಾಗೂ ಕೆಲವು ಬಾರಿ ಆಲಿಕಲ್ಲುಗಳಿಂದ ಕೂಡಿದ ಭಾರೀ ಮಳೆ. ಸಾಮಾನ್ಯವಾಗಿ ಈ ರೀತಿಯ ಮಳೆ ಬೀಳುವುದು ಕೆಲವೇ ನಿಮಿಷಗಳು. ಆದರೆ ಇದರ ಪರಿಣಾಮ ಮಾತ್ರ ಭಾರಿ ಭೀಕರ. ಕೆಲವೇ ನಿಮಿಷಗಳ ಸುರಿಯುವಿಕೆಯಿಂದ ಇದು ಭಾರೀ ಪ್ರವಾಹದ ಪರಿಣಾಮ ಉಂಟುಮಾಡಬಲ್ಲುದು. ಸಾಮಾನ್ಯವಾಗಿ ಅನಿರೀಕ್ಷಿತವಾಗಿ ಬರುವ, ಸ್ವಲ್ಪವೇ ಕಾಲ ಇರುವ ಆದರೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೀಳುವ ಮಳೆಗೆ ಮೇಘ ಸ್ಫೋಟ ಎನ್ನಲಾಗುತ್ತದೆ.
ಲಕ್ಷಣಗಳು
ಬದಲಾಯಿಸಿಹವಾಮಾನ ತಜ್ಞರ ಪ್ರಕಾರ ಒಂದು ಘಂಟೆಯಲ್ಲಿ ೧೦೦ ಮಿಮೀ (೩.೯೪ ಇಂಚು)ಗಿಂತ ಹೆಚ್ಚಿನ ಮಳೆ ಬರುತ್ತದೆ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
. ಈ ಮಳೆ ಸುರಿಸುವ ಮೋಡದ ಎತ್ತರ ಭೂಮಿಯಿಂದ ೧೪ ಕಿಮಿ ವರೆಗೂ ಇರುತ್ತದೆ. ಕೆಲವೊಮ್ಮೆ ಕೆಲವೇ ನಿಮಿಷಗಳಲ್ಲಿ ೨೦ಮಿಮೀ ಗಿಂತ ಹೆಚ್ಚಿನ ಮಳೆ ಸುರಿಯುತ್ತದೆ. ಇದರಿಂದಾಗಿ ನಿಮಿಷಗಳಲ್ಲೇ ಭಾರೀ ಪ್ರವಾಹದ ವಾತಾವರಣ ಉಂಟಾಗುವುದು.
ಮೇಘ ಸ್ಫೋಟದ ಪ್ರಕರಣಗಳು
ಬದಲಾಯಿಸಿ- ಒಂದು ಅಂಗುಲ(inch)=೨೫.೪ ಮಿ.ಮೀ.
ಸಮಯ | ಮಳೆಯ ಗಾತ್ರ | ಸ್ಥಳ | ದಿನಾಂಕ |
---|---|---|---|
೧ ನಿಮಿಷ | 1.5 inches (38 mm)(೩೮.೧ಮಿ.ಮೀ) | Basse-Terre, Guadeloupe | ೨೬ November ೧೯೭೦ |
೫.೫ minutes | 2.43 inches (62 mm)(೬೧.೭೨ಮಿ.ಮೀ) | Port Bells, Panama | ೨೯ November ೧೯೧೧ |
೧೫ minutes | 7.8 inches (200 mm)(೧೯೮.೧೨ ಮಿ.ಮೀ) | Plumb Point, ಜಮೈಕ | ೧೨ May ೧೯೧೬ |
೨೦ minutes | 8.1 inches (210 mm)(೨೦೫.೭೪ ಮಿ.ಮೀ) | Curtea-de-Arges, Romania | ೭ July ೧೯೪೭ |
೪೦ minutes | 9.25 inches (235 mm)(೨೩೪.೯೫ ಮಿ.ಮೀ) | Guinea, Virginia, USA | ೨೪ August ೧೯೦೬ |
೧ hour | 9.84 inches (250 mm)( ೨೫೦ ಮಿ.ಮೀ) | Leh, Ladakh, India | August ೫, ೨೦೧೦ [೧] |
೧೦ hours | 57.00 inches (1,448 mm)(೧೪೪೮ ಮಿ.ಮೀ) | Mumbai, India | July ೨೬, ೨೦೦೫ |
೧೩ hours | 45.03 inches (1,144 mm)(೧೧೪೩.೭೬ ಮಿ.ಮೀ) | Foc-Foc, La Réunion | January ೮, ೧೯೬೬[೨] |
೨೦ hours | 91.69 inches (2,329 mm)(೨೩೨೮.೯ ಮಿ.ಮೀ) | Ganges Delta, India | - |
ಉಲ್ಲೇಖ
- ↑ "Cloudburst in Ladakh". articles.economictimes.indiatimes.com. August 9, 2010. Archived from the original on 2012-05-23. Retrieved 2011-09-25.
- ↑ "Records_clim". Meteo.fr. Archived from the original on 2010-06-06. Retrieved 2010-08-20.