ಮೆಸ್ಸೆಂಜರ್ ಗಗನನೌಕೆ (ಆಂಗ್ಲ ಭಾಷೆಯಲ್ಲಿ ಇದು MESSENGER - MErcury Surface, Space, ENvironment, GEochemistry and Ranging ಎಂಬುದರ ಸಂಕ್ಷಿಪ್ತ ರೂಪ) ನಾಸಾ ಸಂಸ್ಥೆಯಿಂದ ಆಗಸ್ಟ್ ೩, ೨೦೦೪ರಲ್ಲಿ ಉಡಾವಣೆ ಮಾಡಲಾದ, ಬುಧ ಗ್ರಹವನ್ನು ಕಕ್ಷೆಯಿಂದ ಸಂಶೋಧನೆ ಮಾಡಲೆಂದು ಕಳುಹಿಸಲಾದ ಒಂದು ಗಗನನೌಕೆ.