ಮೆತ್ತೆಯು ಚಾಚಿಕೊಂಡ ಶರೀರಕ್ಕೆ ಆಧಾರ ಒದಗಿಸುವ ದೊಡ್ಡ, ಆಯತಾಕಾರದ ತುಂಬು. ಇದನ್ನು ಹಾಸಿಗೆಯಾಗಿ ಅಥವಾ ಹಾಸಿಗೆಯ ಭಾಗವಾಗಿ ಮಂಚದ ಮೇಲೆ ಬಳಸಲ್ಪಡಲು ವಿನ್ಯಾಸಗೊಳಿಸಲಾಗಿರುತ್ತದೆ. ಮೆತ್ತೆಗಳು ಸಾಮಾನ್ಯವಾಗಿ ಸೇರಿಸಿ ಹೊಲಿದ ಅಥವಾ ಅದೇ ರೀತಿಯಿಂದ ಭದ್ರಪಡಿಸಿದ ದಪ್ಪನಾದ ಬಟ್ಟೆಯ ಒರೆಯನ್ನು ಹೊಂದಿರಬಹುದು. ಒಳಗೆ ಕೂದಲು, ಒಣಹುಲ್ಲು, ಹತ್ತಿ, ನೊರೆ ರಬ್ಬರು, ಅಥವಾ ಲೋಹದ ಲಂಘಕದ ಚೌಕಟ್ಟಿನಂತಹ ವಸ್ತುಗಳಿರುತ್ತವೆ.[೧] ಮೆತ್ತೆಗಳ ಒಳಗೆ ಗಾಳಿ ಅಥವಾ ನೀರನ್ನು ಕೂಡ ತುಂಬಿಸಿರಬಹುದು.

ಮೆತ್ತೆಗಳನ್ನು ಸಾಮಾನ್ಯವಾಗಿ ಹಾಸಿಗೆ ಆಧಾರದ ಮೇಲೆ ಇರಿಸಲಾಗುತ್ತದೆ. ಇದು ಪ್ಲ್ಯಾಟ್‌ಫ಼ಾರ್ಮ್ ಹಾಸಿಗೆಯಿರುವಂತೆ ಗಟ್ಟಿಯಾಗಿರಬಹುದು ಅಥವಾ ಗವಸು ಹಾಕಿದ ಕಟ್ಟಿಗೆ ಮತ್ತು ತಂತಿಯ ಬಾಕ್ಸ್ ಸ್ಪ್ರಿಂಗ್ ಅಥವಾ ಪಟ್ಟಿಗಳುಳ್ಳ ಆಧಾರವಿರುವಂತೆ ಸ್ಥಿತಿಸ್ಥಾಪಕವಾಗಿರಬಹುದು. ಯೂರೋಪ್‍ನಲ್ಲಿ ಜನಪ್ರಿಯವಾಗಿರುವ, ದೀವಾನ್[೨] ಮೆತ್ತೆ ಹಾಗೂ ಆಧಾರ ಎರಡನ್ನೂ ಒಂದೇ ಗವಸು ಹಾಕಿದ, ಕಾಲುಳ್ಳ ಘಟಕದಲ್ಲಿ ಒಟ್ಟುಗೂಡಿಸುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. "Mattress". Dictionary.com. Retrieved 2012-05-26.
  2. "Divan". Dictionary.com. Retrieved 2012-05-26.
"https://kn.wikipedia.org/w/index.php?title=ಮೆತ್ತೆ&oldid=958678" ಇಂದ ಪಡೆಯಲ್ಪಟ್ಟಿದೆ