ಮೂಠಿಯಾ
ಮೂಠಿಯಾ ಒಂದು ಭಾರತೀಯ ಖಾದ್ಯವಾಗಿದೆ.[೧] ಈ ಹೆಸರು ಇದನ್ನು ಮಾಡುವ ರೀತಿಯಿಂದ ವ್ಯುತ್ಪನ್ನವಾಗಿದೆ, ಕೈಯಿಂದ ಬಿಗಿಯಾಗಿ ಹಿಡಿಯುವ ಕ್ರಿಯೆಯಿಂದ. ಇದು ಸಾಸೇಜ್‍ನ್ನು ಹೋಲುತ್ತದೆ, ಆದರೆ ಇದು ಸಸ್ಯಾಹಾರಿ ಖಾದ್ಯವಾಗಿದೆ. ಇದನ್ನು ಕಡಲೆ ಹಿಟ್ಟು, ಮೆಂತೆ, ಉಪ್ಪು, ಅರಿಸಿನ, ಖಾರದ ಪುಡಿ ಮತ್ತು ಸಕ್ಕರೆ ಹಾಗೂ ಎಣ್ಣೆಯಂತಹ ಕಡ್ಡಾಯವಲ್ಲದ ಬಂಧಕ ಪದಾರ್ಥ/ಸಿಹಿಕಾರಕವನ್ನು ಬಳಸಿ ತಯಾರಿಸಲಾಗುತ್ತದೆ. ಇದು ಗುಜರಾತಿಗಳ ಪ್ರಧಾನ ಆಹಾರಗಳಲ್ಲಿ ಒಂದಾಗಿದೆ. ಇದು ಮೆಂತೆಯನ್ನು ಒಳಗೊಳ್ಳುವುದರಿಂದ ಮಲವಿಸರ್ಜನೆಯನ್ನು ನಿಯಮಿತವಾಗಿಡಲು ಒಳ್ಳೆಯದೆಂದು ಭಾವಿಸಲಾಗಿದೆ.
ಈ ಖಾದ್ಯವನ್ನು ಆವಿಯಲ್ಲಿ ಬೇಯಿಸಿ ಅಥವಾ (ಆವಿಯಲ್ಲಿ ಬೇಯಿಸಿದ ಮೇಲೆ) ಕರಿದು ತಿನ್ನಬಹುದು; ಇದು ಎರಡೂ ರೀತಿಯಲ್ಲೂ ಸಮಾನವಾಗಿ ರುಚಿಕರವಾಗಿರುತ್ತದೆ.
ಒರಟು ಗೋಧಿ ಹಿಟ್ಟು ಮತ್ತು ದಂಟು, ಪಾಲಕ್‍ನಂತಹ ಎಲೆ ತರಕಾರಿಗಳು, ತುರಿದ ಸೋರೆಕಾಯಿ ಅಥವಾ ಹಾಗಲಕಾಯಿಯ ಸಿಪ್ಪೆಯಿಂದ ಈ ಖಾದ್ಯದ್ಯ ಇತರ ಬಗೆಗಳನ್ನು ತಯಾರಿಸಬಹುದು.
ಉಲ್ಲೇಖಗಳು
ಬದಲಾಯಿಸಿ- ↑ "Muthia Recipe – Recipezaar". Retrieved 2007-07-19.