ಮುರ್ಗ್ ಮುಸಲ್ಲಮ್ ಒಂದು ಮುಘಲಾಯಿ ತಿನಿಸು. ಮುರ್ಗ್ ಮುಸಲ್ಲಮ್ ಅಂದರೆ ಅಕ್ಷರಶಃ ಇಡಿ ಕೋಳಿ. ಈ ತಿನಿಸು ಅವಧ್‍ನ ಮೊಘಲ್ ರಾಜಮನೆತನದ ಕುಟುಂಬಗಳಲ್ಲಿ ಜನಪ್ರಿಯವಾಗಿತ್ತು. ಇಡೀ ಕೋಳಿಯನ್ನು ಗಂಟೆಗಟ್ಟಲೇ ಮ್ಯಾರಿನೇಟ್ ಮಾಡಿ ನಂತರ ಅದರೊಳಗೆ ಕೇಸರಿ, ದಾಲ್ಚಿನ್ನಿ, ಲವಂಗ, ಗಸಗಸೆ, ಏಲಕ್ಕಿ ಮತ್ತು ಮೆಣಸಿನಕಾಯಿಯಂತಹ ಸಂಬಾರ ಪದಾರ್ಥಗಳಿಂದ ತಯಾರಿಸಿದ ಬೇಯಿಸಿದ ಮೊಟ್ಟೆಗಳನ್ನು ತುಂಬಲಾಗುತ್ತದೆ ಮತ್ತು ಬಾದಾಮಿ ಹಾಗೂ ಬೆಳ್ಳಿ ಕಾಗದಗಳಿಂದ ಅಲಂಕರಿಸಲಾಗುತ್ತದೆ.

ಚಿತ್ರ:Murgh Musallam.jpg