ಮುನಿಸುವ್ರತ ಸ್ವಾಮಿ
ಜನನ ಇತಿಹಾಸ
ಬದಲಾಯಿಸಿಕಾಲಲಬ್ಧಿಯಾದ ಮೇಲೆ ಮೊದಲನೇ ಜನ್ಮದಲ್ಲಿ ಅಂಗದೇಶದ ಚಂಪಾಪುರಾಧೀಶ ಹರಿವರ್ಮನಾಗಿದ್ದ ಈ ಸ್ವಾಮಿಯು ಆ ಜನ್ಮದಲ್ಲಿ ಅನಂತವರ‍್ಯರೆಂಬ ಜನರಿಂದ ಧರ್ಮಶ್ರವಣ ಮಾಡಿ,ತಪಸ್ಸನ್ನು ಕೈಗೊಂಡು,ಮಡಿದ ಮೇಲೆ ಪ್ರಾಣ ಸ್ವರ್ಗದಲ್ಲಿ ದೇವೇಂದ್ರನಾಗಿದ್ದನು.
ಜನನ
ಬದಲಾಯಿಸಿಪುಣ್ಯ ಸಮೆದ ಮೇಲೆ ರಾಜಗ್ರಹ ನಗರದ ಹರಿವಂಶಜ ಸುಮಿತ್ರ ರಾಜನ ಮಡದಿ ಸೋಮಾದೇವಿಯ ಗರ್ಭದಲ್ಲಿ ಜಿನಶಿಶುವಾಗಿ ಜನಿಸಿದನು.
ನಾಮಕರಣ
ಬದಲಾಯಿಸಿದೇವೇಂದ್ರನು ಮೇರು ಪರ್ವತದಲ್ಲಿ ಈತನಿಗೆ ಅಭಿಷೇಕವನ್ನು ಮಾಡಿ ಮುನಿಸುವ್ರತನೆಂದು ಹೆಸರಿಟ್ಟನು.
ಆಯುಷ್ಯ
ಬದಲಾಯಿಸಿಇಪ್ಪತ್ತು ಬಿಲ್ಲೆತ್ತರಕ್ಕೆ ಬೆಳೆದ ಈತನು ಮೂವತ್ತು ಸಹಸ್ರ ವರ್ಷಗಳ ಆಯುಷ್ಯವುಳ್ಳವನಾಗಿದ್ದನು.
ಜ್ಞಾನೋದಯ
ಬದಲಾಯಿಸಿಈತನು ರಾಜನಾದ ಮೇಲೆ ಒಂದು ದಿನ ಬಂದು ಯಾಗ ಹಸ್ತಿಯು ಆಹಾರತ್ಯಾಗ ಮಾಡಿದುದನ್ನು ಕಂಡು ತನ್ನ ಅವಧಿ ಜ್ಞಾನದಿಂದ ಅದರ ಮನಸ್ಸನ್ನು ಅರ್ಥ ಮಾಡಿಕೊಂಡನು. ಪೂರ್ವಜನ್ಮದಲ್ಲಿ ಆ ಆನೆ ತಾಲಿಪುರದ ರಾಜನಾಗಿತ್ತು. ದುರಭಿಮಾನದಿಂದ ಪಾತ್ರಾಪಾತ್ರ ಜ್ಞಾನವಿಲ್ಲದೆ ದಾನಮಾಡಿ ಆನೆಯಾಗಿ ಹುಟ್ಟಿತ್ತು. ಈಗ ಸುವ್ರತನ ವಿವೇಕ ಬೋಧನೆಯಿಂದ ಸಂಯಾಮಾ ಸಂಯಮ ವ್ರತವನ್ನು ಸ್ವೀಕರಿಸಿತು. ಅದನ್ನು ಕಂಡು ಮುನಿಸುವ್ರತನಿಗೂ ಜ್ಞಾನೋದಯವಾಯಿತು. <ref>ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೪೩೯.
ದೀಕ್ಷೆ
ಬದಲಾಯಿಸಿಜ್ಞಾನೋದಯದ ನಂತರ ಪರಿನಿಷ್ಕ್ರಮಣವನ್ನು ಕೈಗೊಂಡು, ಅಪರಾಜಿತವೆಂಬ ಪಲ್ಲಕ್ಕಿಯಲ್ಲಿ ನೀಲವನಕ್ಕೆ ಬಂದು, ವೈಶಾಖ ಕೃಷ್ಣ ದಶಮೀ ಶ್ರವಣ ನಕ್ಷತ್ರದಲ್ಲಿ ದೀಕ್ಷೆ ವಹಿಸಿದನು. ಮನಃಪರ್ಯಾಯಜ್ಞಾನ ಹೊಂದಿದ ಆತನು ರಾಜಗ್ರಹದ ವೃಷಭ ಸೇನನಿಂದ ಆಹಾರದಾನವನ್ನು ಪಡೆದು, ಹನ್ನೊಂದು ತಿಂಗಳು ಛದ್ಯಾವಸ್ಥೆಯಲ್ಲಿ ಕಳೆದ ಮೇಲೆ ನೀಲವನ ಚಂಪಕ ವೃಕ್ಷದ ಮೂಲದಲ್ಲಿ ವೈಶಾಖ ಕೃಷ್ಣ ನವಮಿಯ ಸಂಜೆ ಶ್ರವಣ ನಕ್ಷತ್ರದಲ್ಲಿ ಕೇವಲ ಜ್ಞಾನಿಯಾದನು.
ಮೋಕ್ಷ
ಬದಲಾಯಿಸಿತನ್ನ ಹದಿನೆಂಟು ಗಣಧರರೊಡನೆ ಸಮವಸರಣದಲ್ಲಿ ಕುಳಿತು ಹಲವು ಕಾಲ ಜಗತ್ತಿಗೆ ಉಪದೇಶಿಸಿದ ಮೇಲೆ, ಸಮ್ಮೇದ ರ‍್ವತ ಶಿಖರದಲ್ಲಿ ಫಾಲ್ಗುಣ ಬಹುಳ ದ್ವಾದಶಿಯ ದಿನ ಶ್ರವಣ ನಕತ್ರದಲ್ಲಿ ಮುಕ್ತಿಯನ್ನು ಹೊಂದಿದನು.
ರಾಜ್ಯ ಲಾಂಛನ
ಬದಲಾಯಿಸಿಶಾಮವರ್ಣನಾದ ಈತನ ಲಾಂಛನ ಕರ‍್ಮ;ಯಕ್ಷ - ಯಕ್ಷಿಯರು ವರುಣ ಬಹುರೂಪಿಣೀ.
ಉಲ್ಲೇಖಗಳು
ಬದಲಾಯಿಸಿ