ಮುನಿಸುವ್ರತ
ಮುನಿಸುವ್ರತ ಸ್ವಾಮಿಯು ಜೈನ ವಿಶ್ವಶಾಸ್ತ್ರದಲ್ಲಿನ ಈಗಿನ ಅವಸರ್ಪಿಣಿಯ ಇಪ್ಪತ್ತನೇ ತೀರ್ಥಂಕರನಾಗಿದ್ದನು. ಇವನು ಸಿದ್ಧನಾದನು, ತನ್ನ ಎಲ್ಲ ಕರ್ಮವನ್ನು ನಾಶಪಡಿಸಿಕೊಂಡ ಮುಕ್ತ ಆತ್ಮ. ರಾಮಾಯಣದ ಜೈನ ರೂಪದ ಘಟನೆಗಳನ್ನು ಮುನಿಸುವ್ರತನಾಥನ ಸಮಯದಲ್ಲಿ ಇರಿಸಲಾಗಿದೆ. ಋಷಿ ಮಲ್ಲಿ ಸ್ವಾಮಿಯು ಇವನ ಗಣಧರನಾಗಿದ್ದನು.
ಜನ್ಮ ವೃತ್ತಾಂತ
ಬದಲಾಯಿಸಿಹಿಂದೂ ಪಂಚಾಂಗದ ಪ್ರಕಾರ, ಶ್ರಾವಣ ಮಾಸದ ಕೃಷ್ಣಪಕ್ಷದ ಮೂರನೇ ದಿನದಂದು, ರಾಜಗೀರ್‌ನ ರಾಣಿ ಪದ್ಮಾವತಿಯನ್ನು ಹದಿನಾರು ಶುಭವಾದ ಕನಸುಗಳನ್ನು ಕಂಡಳು. ತನ್ನ ಪತಿಯೊಂದಿಗೆ ತನ್ನ ಕನಸುಗಳನ್ನು ಹಂಚಿಕೊಂಡಾಗ, ಹರಿವಂಶದ ರಾಜ ಸುಮಿತ್ರನು ತಮಗೆ ಬೇಗನೇ ಒಬ್ಬ ತೀರ್ಥಂಕರನು ಹುಟ್ಟುವನು ಎಂದು ವಿವರಿಸಿದನು. ನಂತರ, ಮುನಿಸುವ್ರತನು ಅವರಿಗೆ ಶ್ರಾವಣ ಶುಕ್ಲದ ಹದಿನೈದನೇ ದಿನ ಕ್ರಿ.ಪೂ. 1,184,980ರಲ್ಲಿ ಜನಿಸಿದನು.
ಜೈನ ಪಠ್ಯಗಳ ಪ್ರಕಾರ, ಕುಮಾರಕಾಲದಲ್ಲಿ ೭,೫೦೦ ವರ್ಷಗಳನ್ನು ಕಳೆದ ನಂತರ, ಮುನಿಸುವ್ರತನು ತನ್ನ ರಾಜ್ಯವನ್ನು ೧೫,೦೦೦ ವರ್ಷಗಳ ಕಾಲ ಆಳಿದನು. ನಂತರ ಅವನು ಎಲ್ಲ ಪ್ರಾಪಂಚಿಕ ಉದ್ದೇಶಗಳನ್ನು ತ್ಯಜಿಸಿ ಸಂನ್ಯಾಸಿಯಾದನು. ಜೈನ ನಂಬಿಕೆಗಳ ಪ್ರಕಾರ, ಮುನಿಸುವ್ರತನಾಥನು ೧೧ ತಿಂಗಳು ಕರ್ಮ ನಾಶಕ ತಪಸ್ಸಿನಲ್ಲಿ ಕಳೆದು ನಂತರ ಕೇವಲ ಜ್ಞಾನವನ್ನು ಪಡೆದನು.
ಉಲ್ಲೇಖಗಳು
ಬದಲಾಯಿಸಿ- Johnson, Helen M. (1931), Munisuvratanathacaritra (Book 6.7 of the Trishashti Shalaka Purusha Caritra), Baroda Oriental Institute
- Jain, Vijay K. (2015), Acarya Samantabhadra's Svayambhustotra: Adoration of The Twenty-four Tirthankara, Vikalp Printers, ISBN 978-81-903639-7-6, archived from the original on 16 September 2015, This article incorporates text from this source, which is in the public domain.
- Sarasvati, Swami Dayananda (1970), An English translation of the Satyarth Prakash, Swami Dayananda Sarasvati
- Tukol, T. K. (1980), Compendium of Jainism, Dharwad: University of Karnataka
- Zvelebil, Kamil (1992), Companion Studies to the History of Tamil Literature, Netherlands, ISBN 90-04-09365-6
- Tandon, Om Prakash (2002) [1968], Jaina Shrines in India (1 ed.), New Delhi: Publications Division, Ministry of Information and Broadcasting, Government of India, ISBN 81-230-1013-3
- Shah, Umakant Premanand (1987), Jaina-rūpa-maṇḍana: Jaina iconography, Abhinav Publications, ISBN 978-81-7017-208-6
- Zimmer, Heinrich (1953) [April 1952], Campbell, Joseph (ed.), Philosophies Of India, London, E.C. 4: Routledge & Kegan Paul Ltd, ISBN 978-81-208-0739-6