ಮುನಿಶ್ರಿ ತರಣಸಾಗರ
ಜೈನ ಧರ್ಮದ ಕ್ರಾಂತಿಕಾರಿ ಸಂತ ಎಂದೇ ಖ್ಯಾತರಾಗಿರುವ ಮುನಿಶ್ರಿ ತರುಣಸಾಗರ ಇವರದು ಇಂದಿನ ಆಧುನಿಕ ಜನರಿಗೆ ಬೇಕಾದ ಸಲಹೆಗಳನ್ನು, ಬುದ್ಧಿವಾದವನ್ನೂ ಮಾರ್ಗದರ್ಶನವನ್ನು ನೀಡಿಹೊಸ ದಾರಿಯನ್ನು ತೊರಿದವರು.ಇವರು ಸಂತರಾಗುವ ಮೊದಲಿನ ಹೆಸರು ಶ್ರಿ ಪವನಕುಮಾರ ಜೈನ. ಅವರು ಹುಟ್ಟಿದ್ದು ಜೂನ್ ೨೬, ೧೯೬೭ರಂದು. ಅವರ ಊರು-ಗುಹಂಚಿ-ಜಿಲ್ಲೆ-ಜಿ. ದಮೋಹ, ಮಧ್ಯ ಪ್ರದೇಶ. ತಾಯಿಯ ಹೆಸರು ಮಹಿಳಾ ರತ್ನ ಷ್ರಿಮತಿ ಶಾಂತಿಬಾಯಿ ಜೈನ ಹಾಗೂ ಶ್ರೇಷ್ಟ ಶ್ರಾವಕ ಶ್ರಿ ಪ್ರತಾಪಚಂದ್ರ ಜೈನ ಅವರ ತಂದೆ. ಅವರ ಲೌಕಿಕ ಶಿಕ್ಷಣ ಮಾಧ್ಯಮಿಕ ಶಾಲೆಯವರೆಗೆ ಮಾತ್ರ. ಅವರು ಮಾರ್ಚ್, ೮, ೧೯೮೧ಲ್ಲಿ ಗ್ರಹ-ತ್ಯಾಗ ಮಾಡಿದರು. ಅವರು ಜನೆವರಿ ೧೮, ೧೯೮೨ರಲ್ಲಿ ಛತ್ತಿಸಗಡದ ಅಕಲತರಾದಲ್ಲಿ ಕ್ಷುಲ್ಲಕ ದೀಕ್ಷಾವನ್ನು ಪಡೆದರು. ಮತ್ತು ರಾಜಸ್ಥಾನದ ಬಾಗಿದೌರಾದಲ್ಲಿ ಮುನಿ ದೀಕ್ಷಾವನ್ನು ಪಡೆದರು. ಅವರ ದೀಕ್ಷಾ ಗುರು ಯುಗಸಂತ ಆಚಾರ್ಯ ಪುಷ್ಪದಂತಸಾಗರಜೀ ಮುನಿ ಎಂಬ ಹೆಸರಿನವರಾಗಿದ್ದರು. ಮುನಿಶ್ರಿ ತರುಣಸಾಗರ ಇವರು ತಮ್ಮ ಪ್ರವಚನಗಳಿಂದಾಗಿ ಜನಪ್ರಿಯರಾಗಿದ್ದಾರೆ. ಅವರ ಪ್ರವಚನಗಳನ್ನು ಕಡವೆ ಪ್ರವಚನಗಳೆಂದು ಕರೆಯಲಾಗುತ್ತದೆ. ಅವರ ಬಹು ಚರ್ಚಿತ ಕೃತಿ ಕಡವೆ ಪ್ರವಚನವಾಗಿದೆ. ಇವರಿಗೆ ಶ್ರಿ ಪುಷ್ಪದಂತರಿಂದ `ಪ್ರಜ್ನಾ ಶ್ರಮಣ' ಎಂಬ ಮಾನದ ಉಪಾಧಿಯನ್ನ ಪಡೆದುಕೊಂಡವರಾಗಿದ್ದಾರೆ. ಕ್ರಾಂತಿಕಾರಿ ಸಂತ ಎಂದೇ ಪ್ರಖ್ಯಾತರಾಗಿದ್ದಾರೆ.
ಆಚಾರ್ಯ ಕುಂದ ಕುಂದರ ನಂತರ ೨೦೦೦ ವರ್ಷದ ಇತಿಹಾಸದಲ್ಲಿ ೧೩ನೆಯ ವಯಸ್ಸಿಗೆ ಜೈನ ಸನ್ಯಾಸ ಸ್ವೀಕರಿಸಿದ ಮೊದಲ ಯೋಗಿ. ದೆಹಲಿಯ ಕೆಂಪುಕೋಟೆಯಲ್ಲಿ ಸಂದೇಶ ನೀಡಿದ ರಾಷ್ಟ್ರದ ಮೊದಲ ಯೋಗಿ. ಜೀ ಟಿ. ವಿ. ಮಾಧ್ಯಮದ ಮೂಲಕ ಭಾರತದಂತೆಯೇ ಜಗತ್ತಿನ ೧೨೨ ದೇಶಗಳಲ್ಲಿ ಮಹಾವೀರ ವಾಣಿಯನ್ನು ವಿಶ್ವವ್ಯಾಪಿ ಪ್ರಸಾರ ಮಾಡಿದ ಗೌರವಾರ್ಹರು. ಅವರು ಒಂದು ಮಾಸಿಕ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅದರ ಹೆಸರು`ಅಹಿಂಸಾ ಮಹಾಕುಂಭ', ಎಂದಾಗಿದೆ. ಕಸಾಯಿಖಾನೆ ಹಾಗೂ ಮಾಂಸ ನಿರ್ಯಾತದ ವಿರೊಧ ಕುರಿತಾಗಿ ನಿರಂತರ ಆಂದೋಲನ ನಡೆಸುತ್ತಿದ್ದಾರೆ. ಫೆಬ್ರುವರಿ ೬, ಮಧ್ಯಪ್ರದೇಶ ಸರಕಾರದಿಂದ `ರಾಜಕೀಯ ಅತಿಥಿ' ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ಮಾರ್ಚ್ ೨, ೨೦೦೩ರಂದು ಗುಜರಾತ ಸರಕಾರದಿಂದ ರಾಜಕೀಯ ಅತಿಥಿ ಗೌರವಕ್ಕೆ ಪಾತ್ರರಾಗಿದ್ದಾರೆ. ಜೂನ್ ೮, ೨೦೦೪ರಂದು ಮಹಾರಾಷ್ಟ್ರ ಸರಕಾರದಿಂದ `ರಾಜಕೀಯ ಅತಿಥಿ' ಗೌರವಕ್ಕೆ ಪಾತ್ರರಾಗಿದ್ದಾರೆ.
ಅವರು ಮೂರು ಡಜನ್ ಗಳಿಗಿಂತ ಹೆಚ್ಚಿನ ಕ್ರುತಿಗಳನ್ನು ಪ್ರಕಟಿಸಿದ್ದಾರೆ. ಪ್ರತಿ ವರ್ಷ ಅವುಗಳ ಮೂರು ಲಕ್ಷಕ್ಕೂ ಹೆಚ್ಚಿನ ಪ್ರತಿಗಳ ಮಾರಾಟವಾಗಿವೆ. ಜನೆವರಿ ೨೬, ೨೦೦೩ರಂದು ಮಧ್ಯಪ್ರದೇಶ ಸರಕಾರದ ಮೂಲಕ `ರಾಷ್ಟ್ರ ಸಂತ' ಎಂಬ ಬಿರುದನ್ನು ಪ್ರದಾನ ಮಾಡಲಾಯಿತು. ಅವರು ಸಂಘಟನೆಯಲ್ಲಿಯೂ ಎತ್ತಿದ ಕೈ. `ತರುಣ ಕ್ರಾಂತಿ ಮಂಚ', ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅದರ ಕೇಂದ್ರೀಯ ಕಾರ್ಯಾಲಯವು ದೆಹಲಿಯಲ್ಲಿದೆ. ದೇಶದ ನಾನಾ ಕಡೆ ಅದರ ಶಾಖೆಗಳಿವೆ.
ಅವರ ವಿಶೇಷತೆ ಏನೆಂದರೆ ದೇಶಾದ್ಯಂತ ಜನರ ಮನದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ ಪ್ರವಚನ ಪಟು. ತಮ್ಮ ವಿಶಿಷ್ಟ ಪ್ರವಚನ ಶೈಲಿಯಿಂದ ದೇಶಾದ್ಯಂತ ಖ್ಯಾತಿ ಪಡೆದ ಜೈನ ಮುನಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಮಿಶನ್ ಏನೆಂದರೆ ಭಗವಾನ್ ಮಹಾವೀರ ಹಾಗೂ ಆತನ ಸಂದೇಶ- `ಬದುಕು -ಬದುಕಿಸು' ಎಂಬುದರ ವಿಸ್ವವ್ಯಾಪಿ ಪ್ರಸಾರ -ಪ್ರಚಾರ ಹಾಗೂ `ಜೀವನವನ್ನು ಜೀವಿಸುವ ಕಲೆ'ಯ ಪ್ರಶಿಕ್ಷಣವಾಗಿದೆ. ಅವರ ಹೇಳಿಕೆ ಹೀಗಿದೆ:` ಜಗತ್ತಿನ ಒಂದು ನೇರವಾದ ನಿಯಮವಿದೆ, ಇಲ್ಲಿ ``ಏನಾದರೂ ಸಿಗಬಲ್ಲದು. ಪ್ರಯತ್ನ ಮಾಡಿದರೆ ``ಏನೆಲ್ಲಾಸಿಗಬಹುದು. ಅದೃಷ್ಟ ಜೊತೆಗೆ ಇದ್ದರೆ, ``ಬಹಳಷ್ಟುಸಿಗಬಹುದು. ಆದರೆ ``ಎಲ್ಲವೂ ಎಂದಿಗೂ ಯಾರಿಗೂ ಸಿಗಲಾರದು. ಆದ್ದರಿಂದ ಎಲ್ಲವನ್ನೂ ಪಡೆಯಲು ಹಾಗೂ ಎಲ್ಲವನ್ನೂ ತನ್ನದಾಗಿಸಲು ಹುಚ್ಚರಾಗಬೇಡಿ. ಏನು ನಿಮ್ಮಲ್ಲಿದೆ ಅದರ ಆನಂದ ಪಡೆಯಿರಿ. ಏನು ನಿಮ್ಮ ನೆರೆಯವರಲ್ಲಿದೆ ಅದನ್ನು ನೋಡಿ ದುಃಖಿತರಾಗಬೇಡಿ.ದುಃಖಿ ಆಗುವುದರಿಂದ ನೆರೆಯವರು ನಿಮಗೆ ಏನನ್ನಾದರೂ ಕೊಡುವ ಸಂಭವವಿಲ್ಲವಲ್ಲ?