ಮುಂಬೈನ ಜಿ.ಎಸ್.ಬಿ.ಗಣಪತಿ

ಮುಂಬೈನ ಗಣಪತಿ ಭಕ್ತರು, ಶ್ರದ್ಧಾಳುಗಳಿಂದ ’ನವಸಾಲಾ ಪಾವ್ ಣಾರಾ ಗಣಪತಿ,’ 'ನಾರ್ಳಾಚ್ಯಾ ಗಣಪತಿ', 'ಶ್ರೀಮಂತಾಂಚಾ ಗಣಪತಿ', ಎಂದು ಕರೆಸಿಕೊಳ್ಳುವ ಗಣೇಶ ಮೂರ್ತಿ, ವರ್ಷವರ್ಷವೂ ಮುಂಬೈನ 'ಸುಕೃತೀಂದ್ರ ನಗರ'ದ ಮೈದಾನದಲ್ಲಿ ನಡೆಸುವ ೫ ದಿನಗಳ ಗಣೇಶೋತ್ಸವದ ಉತ್ಸವಮೂರ್ತಿಯಾಗಿ, ಬಡಬಗ್ಗರ ಶಾಲೆಯ ಶುಲ್ಕ,, ಆಸ್ಪತ್ರೆ ಖರ್ಚು, ಮತ್ತು ಬಡವರ ಆಶ್ರಯದಾತನಾಗಿರುವ ಗಣಪನ ಮಹಿಮೆ ಅಪಾರ.

ಚಿತ್ರ:GSBGanesh.027.JPG
'ಮುಂಬೈನ ಮಾಟುಂಗಾದ ಜಿ.ಎಸ್.ಬಿ.ಮಂಡಲಿ ಆಯೋಜಿತ ಗಣಪತಿ-೨೦೧೨'

ಮಹಾರಾಷ್ಟ್ರದಲ್ಲಿ ಗಣಪತಿ ಉತ್ಸವ ಬದಲಾಯಿಸಿ

'ಸರ್ದಾರ್ ವಿಠಲ್ ವಿಂಚುರ್ಕರ್' ಮಾಲೀಕ ವಿಂಚುರ್ಕರ್ ವಾಡಾ ನಿವಾಸಿ, '೧ ನೆಯ ಬಾಜೀರಾಯ ಪೇಶ್ವೆ'ಯ ನಿಕಟದಲ್ಲಿದ್ದವರು. ಕಟ್ಟಿಸಿದರು. ಕುಮ್ತೇಕರ್ ರಸ್ತೆಯಲ್ಲಿ ತಿಳಕರು, ೧೮೯೨ ರಲ್ಲಿ ಮೊದಲ ಗಣಪತಿ ಆರಾಧನೆಯ ಶ್ರೀಗಣೇಶ್ ಮಾಡಿದರು. ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ಇನ್ನಿತರ ನಾಗರೀಕರು, ,ರಾನಡೆ,, ,ಶಿವರಾಮ್ ಪರಂಜಪೆ,, ಪತ್ರಿಕೋದ್ಯಮಿ, ಸಂಪಾದಕ, ,ಎನ್.ಸಿ.ಕೇಲ್ಕರ್,, ಪಟ್ಕಥಾ ಲೇಖಕ, ,ಕೆ.ಪಿ. ಖಾಡಿಲ್ಕರ್, ಗಣೇಶನ ಬಗ್ಗೆ ಉಪನ್ಯಾಸಕೊಡುತ್ತಿದ್ದರು. ,ಡಾ.ದೀಪಕ್ ತಿಲಕ್,, ತಿಳಕರ ಮರಿಮೊಮ್ಮಗ, ಟ್ರಸ್ಟ್ ನ ಅಧ್ಯಕ್ಷ, 'ಗಜಾನನ್ ಘೈಸಾಸ್', 'ಜಯವಂತ್ ಮಟ್ಕರ್', 'ರವಿಂದ್ರ ಪಥಾರೆ', 'ಶೀಲ ಘೈಸಾಸ್', 'ರೋಹಿತ್ ಟಿಲ'ಕ್ 'ಮುಕ್ತಾ ಟಿಲಕ್' ಸದಸ್ಯರು.

೧೮೯೩ ರಲ್ಲೇ ಶುಭಾರಂಭ ಬದಲಾಯಿಸಿ

೧೮೯೩ ರಲ್ಲಿ ಟಿಲಕರು, 'ಗಣೇಶ್ ಚತುರ್ಥಿಯ ಉತ್ಸವ'ದ ಬಗ್ಗೆ ಒಂದು ಹೊಸ ಪದ್ಧತಿಯನ್ನು ಜಾರಿಗೆ ತಂದರು. ಆ ವರ್ಷ ಲೋಕಮಾನ್ಯ ಟಿಲಕ್, ವಾರ್ಷಿಕ ಗಣಪತಿ ಹಬ್ಬವನ್ನು ಸಾರ್ವಜನಿಕ ಮಹೋತ್ಸವವೆಂದು ಸಾರಿಹೇಳಿದರು. ೧೮೯೩,ರ ವರೆಗೆ ಮನೆಪೂರ್ತಿ ಪಾರಂಪಾರಿಕ ಪದ್ಧತಿಯಲ್ಲಿ ಆಚರಿಸುತ್ತಿದ್ದರು. ಪ್ರಾಮುಖ್ಯತೆಯನ್ನು ಗಮನಿಸಿ ಎಲ್ಲಾವರ್ಗದ ಜನರೂ ಆಸಕ್ತಿವಹಿಸಿ ಉತ್ಸವದಲ್ಲಿ ಭಾಗಗೊಳ್ಳುವುದು ಇಲ್ಲಿನ ವಿಶಿಷ್ಠತೆ. 'ಪಟ್ವರ್ಧನ್ ಮುಜುಮ್ದಾರ್' 'ಖಾಸ್ಗಿವಾಲೆ', ಮೊದಲಾದವರು,೧೮೯೩ ಯ ಬಳಿಕ 'ಸರ್ದಾರ್ ನಾನಾಸಾಹೇಬ್ ಖಾಸ್ಗಿವಾಲೆ' ಮೊಟ್ಟಮೊದಲಬಾರಿಗೆ ವನ್ನು ಸಾರ್ವಜನಿಕವಾಗಿಸಿದರು. 'ಘೋಟವಡೆಕರ್', 'ಕಾಸ್ಗಿವಲೆ' ಮತ್ತು 'ಭಾವು ರಂಗಾರಿ' 'ಸಾರ್ವಜನಿಕ ಗಣೇಶೋತ್ಸವ್ ’ಆಚರಿಸಿ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ೧೮೯೪ ರ ಸಮಯದಲ್ಲಿ 'ವಿಂಚುರವಾಡ'ದಲ್ಲಿ ೧೦ ದಿನಗಳ ಉತ್ಸವ ನಡೆಯುತ್ತಿತ್ತು. ೪ ನೆಯ ದಿನ ಪ್ರಾರಂಭ ಪೂರ್ಣಿಮಾ ಭಾದ್ರಪದ ೧೪ ರ ವರೆಗೆ.

ಇತಿಹಾಸ ಬದಲಾಯಿಸಿ

'ಜಿ.ಎಸ್.ಬಿ.ಗಣೇಶೋತ್ಸವ', ಆರಂಭವಾದದ್ದು ಸನ್. ೧೯೫೫ ರಲ್ಲಿ. ಬೊಂಬಾಯಿನ 'ವಡಾಲಾ' ಉಪನಗರದಲ್ಲಿ ಆರಂಭವಾಗಿದ್ದ ’ದ್ವಾರಕಾನಾಥ್ ಭವನ’ ರಾಮಮಮ್ಂದಿರದಲ್ಲಿ ಗಣೇಶೋತ್ಸವ. ಕರ್ನಾಟಕದಿಂದ ಮುಂಬೈಗೆ ನೌಕರಿಗೋಸ್ಕರವಾಗಿ ಬಂದು ಬೊಂಬಾಯಿನ ಉಪನಗರವೊಂದಾದ ವಡಾಲದಲ್ಲಿ ನೆಲೆಯಾದ ಕೆಲವು ಉತ್ಸಾಹಿ 'ಗೌಡಸಾರಸ್ವತ ಯುವಕ'ರಿಂದ. ಇದರ ಹಿಂದಿನ ಚೈತನ್ಯ, 'ಕಾರ್ಕಳದ ಮಾಧವ ಕೃಷ್ಣ ಪುರಾಣಿಕ್', ಅವರು ಸುಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಭಕ್ತರಿಂದ ನಾಲ್ಕಾಣೆ, ಎಂಟಾಣೆ ವರ್ಗಣಿಯನ್ನು ಸಂಗ್ರಹಿಸಿ ೧,೨೦೦ ರೂಪಾಯಿ ನಲ್ಲಿ ಭರ್ಜರಿ ಗಣೇಶೋತ್ಸವನ್ನು ಆಚರಿಸಿದ್ದರು. ಆಗ ತಂದ ೧೪ ಅಂಗುಲ ಎತ್ತರದ ಗಣಪತಿ, 'ನಾರಾಯಣ ನಾಯಕ್' ಕೊಟ್ಟವಂತಿಕೆಯಿಂದ, ಇಂದು ಪ್ರಭಾವಳಿ ಸಹಿತ ೧೭ ಅಡಿ ಎತ್ತರದ ೫ ದಿನಗಳ ನಡೆಯುವ ಪೂಜೆಗಳ ಕನಿಷ್ಟ ಪೂಜೆಯ ದರ ೩೫೫ ರೂ. ೪,೫೫,೪೫೫ ರೂಪಾಯಿಮೊತ್ತದ 'ಮಹಾಪೂಜೆ'ಯೂ ಇದೆ.

ರಾಮಮಂದಿರದ ನೆಲೆ ಚಿಕ್ಕದಾದಾಗ ಬದಲಾಯಿಸಿ

ಕಾಶೀಮಠದ ’ಶ್ರೀಮದ್ ಸುಧೀಂದ್ರ ತೀರ್ಥ ಪದಂಗಳವರ’ ಮಾರ್ಗದರ್ಶನದಲ್ಲಿ ಮುಂಬೈನ ಪ್ರಖ್ಯಾತ ಹೋಟೆಲ್ ಉದ್ಯಮಿ ’ಎಕ್ಕಾರು ರಾಮನಾಯಕ್’ ಮತ್ತು ಅವರ ಗೆಳೆಯ ’ಎಮ್.ಡಿ.ಲೋಟ್ಲಿಕರ್’ ಜೊತೆಗೂಡಿ ಮಾಟುಂಗಾದ ಮಹೇಶ್ವರಿ ಉದ್ಯಾನ್ ನಲ್ಲಿ ’ಕಾಸ್ಮೊಪಾಲಿಟನ್ ಸ್ಪೋರ್ಟ್ಸ್ ಕ್ಲಬ್ ಮೈದಾನ’ದಲ್ಲಿ ’ಜೆ.ಎಸ್.ಬಿ.ಗಣೇಶೋತ್ಸವ’ ಶುರುವಾಯಿತು. ಗುರುಪುರ ಗಣಪತಿ ಪ್ರಭುಗಳ ನೇತೃತ್ವದಲ್ಲಿ ಮಾಟುಂಗಾದ ಗಣೇಶೋತ್ಸವ ವರ್ಷವರ್ಷವೂ ದೊಡ್ಡದಾಗಿ ಬೆಳೆದಿದೆ.

ಪರಿಸರಪ್ರೇಮಿ ಗಣೇಶ ಬದಲಾಯಿಸಿ

ಶಾಡುಮಾಟಿ(ಆವೆಮಣ್ಣಿನಲ್ಲಿ) ಬಳಸುವ ಬಣ್ಣಗಳೂ 'ಪರಿಸರ ಸ್ನೇಹಿ' ಆಗಿವೆ. ೧೪.೫ ಅಡಿ ಎತ್ತರದ ಮೂರ್ತಿ೨೨ ಕ್ಯಾರೆಟ್ ಚಿನ್ನ ಬೆಳ್ಳಿ,ಕಿರೀಟವೇ ೩೩ ಅಂಗುಲ ಎತ್ತರದ ೨೨ ಕಿಲೋಗಿಂದ ಹೆಚ್ಚಿನ ಭರ್ಜರಿ ಕಿರೀಟ ಪ್ರಮುಖ ಆಕರ್ಷಣೆ. (ಇಂದಿನ ಮಾರುಕಟ್ಟೆಯ ಬೆಲೆ ೭ಕೋಟಿ ರೂಪಾಯಿಗಳಿಗಿಂತ ಅಧಿಕ) ಕಿರೀಟದ ಮಧ್ಯೆ ೭ ಹೆಡೆಗಳ ಶೇಷನಾಗನ ಸುಂದರ ಅಲಂಕಾರ.ಇಕ್ಕೆಲೆಗಳಲ್ಲಿ ೨ನವಿಲುಗಳು. ೨ ಮೊಸಳೆಗಳು. ಕಿರೀಟದಕೆಳಗೆ ಮೂರ್ತಿಯ ಹಣೆಯಮೇಲೆ ತೂಗಾಡುವ ೨ ಕೆ.ಜಿ.ತೂಕದ ಬಂಗಾರದ ಜಾಲರಿ. ವಜ್ರಖಚಿತ ಬಂಗಾರದ 'ತ್ರಿಶೂಲಾಕೃತಿಯ ತಿಲಕ'ದ ತುದ್ದ, ೧೦ ಅಂಗುಲ. ತಿಲಕದ ಕೆಳಗೆ 'ಓಂ ವಿನ್ಯಾಸ'ದ ಸ್ವರ್ಣಕಟ್ಟು. ಅದರ ಕೆಳಗೆ ಮತ್ತೊಂದು ಸ್ವರ್ಣಕಟ್ಟು ಸೊಂಡಿಲಿನಮೇಲೆ 'ಸ್ವರ್ಣಪುಷ್ಪಗಳ ವಿನ್ಯಾಸ'. ಬಂಗಾರದ ೩ ಅಡಿ ಎತ್ತರದ ಕಿವಿಗಳ ತೂಕ ತಲಾ ೫ ಕಿಗಳು. ೨೨ ಅಂಗುಲ ಉದ್ದದ ಮುತ್ತಿನ ಜಾಲರಿಗಳು. ಅಭಯ ಹಸ್ತ, ಮತ್ತು ಮೋದಕಗಳನ್ನು ಹಿಡಿದ ೨ ಕೈಗಳ ತೂಕ ತಲಾ ೬ ಕಿಲೋಗಳು. ೨ ಅಡಿ ಉದ್ದದ ಸ್ವರ್ಣ ಮೋದಕ. ಹಿಂಭಾಗದ ಪಾಶ ಹಾಗೂ ಅಂಕುಶಗಳನ್ನು ಧರಿಸಿದ ಎರಡು ಕೈಗಳು ಬಂಗಾರದವು. ೨೦೧೨ ರಲ್ಲಿ ೨ ಅಸ್ತ್ರಧಾರಿ ಎರಡೂವರೆ ಕಿಲೋತೂಕದ 'ಬಂಗಾರದ ಹೊಸಕೈ'ಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಗಣಪತಿಯ ಎರಡು ದಂತಗಳು, ಹೊಟ್ಟೆಯ ಸುತ್ತ ಬಿಗಿದಿರುವ ಸರ್ಪ, ಎದೆಯಮೇಲಿನ ಜನಿವಾರ, ಕೈನ ಕಡಗಗಳು, ತೋಳುಗಳ ಬಾಹುಬಂಧ, ಎಲ್ಲವೂ ಬಂಗಾರದ್ದು. ಮೈಮೇಲಿನ 'ಚಂದನದ ತ್ರಿಪುಂಡ್ರ,' ನಾಮ, ಕೆನ್ನೆ ಮತ್ತು ಹುಬ್ಬುಗಳ ಕೊನೆಯಲ್ಲಿರುವ 'ಪಂಚಮುದ್ರೆ', 'ಶಂಖ' ಮತ್ತು 'ಚಕ್ರ'ಗಳು, ಕುತ್ತಿಗೆಯಲ್ಲಿ ತೂಗುತ್ತಿರುವ 'ಓಂ ಪದಕದ ಸ್ವರ್ಣಹಾರ', ೨ ಕಿಲೋ ಭಾರವಾಗಿದೆ.

ಸ್ವರ್ಣ ಸಿಂಹಾಸನ ಬದಲಾಯಿಸಿ

'ಸ್ವರ್ಣ ಸಿಂಹಾಸನ'ದ ಭಾರ ೧೫ ಕಿಲೋ. ಎರಡೂಭಾಗಗಳಲ್ಲಿ ಕಾವಲು ನಿಂತಿರುವ ಬಂಗಾರದ ಸಿಂಹಗಳ ತೂಕ ತಲಾ ೩ ಕಿಲೋ. ಗಣಪನ ಮುಂದಿರುವ ಬಂಗಾರದ 'ಆರತಿಯ ತಟ್ಟೆಯ ಭಾರ' ೧ ಕಿಲೋ. 'ಪ್ರಭಾವಳಿ' ತೂಕ ೬ಕಿಲೋ. ಅದರ ಹಿಂದೆ ೧೫.೫ ಅಡಿ ಎತ್ತರದ 'ಬೆಳ್ಳಿಯ ಪ್ರಭಾವಳಿ'ಯ ಭಾರ ೧೨೦ ಕಿಲೋ. ಗಣಪತಿಯ ಮುಂದೆ ಸುಮಾರು ೩ ಅಡಿ ಎತ್ತರದ 'ಬೆಳ್ಳಿಯ ಇಲಿ', ಸೇವೆಗೆ ಸಿದ್ಧವಾಗಿ ನಿಂತಿದೆ. ಸನ್. ೨೦೧೧ ರಲ್ಲಿ, ೬ ಕಿಲೋ ಬಂಗಾರದ ಕಾಣಿಕೆ ಬಂದಿತ್ತು. ಸನ್ ೨೦೧೪ ರಲ್ಲಿ 'ಗಣಪತಿಯ ವಜ್ರಮಹೋತ್ಸವ' ಜರುಗುತ್ತದೆ. ಆಗ 'ರಜತ ಪ್ರಭಾವಳಿ'ಯನ್ನೂ ಬಂಗಾರದಲ್ಲಿ ಮಾಡುವ ಯೋಜನೆಯಿದೆ. ಇದಕ್ಕಾಗಿ ೫ ಕಿಲೋ ಬಂಗಾರದ ಸಂಗ್ರಹಣೆ ನಡೆಯುತ್ತಿದೆ. ಆಸಮಯದಲ್ಲಿ ಗಣಪತಿಯ ಮೇಲಿರುವ ಒಟ್ಟು 'ಸ್ವರ್ಣಾಭರಣ'ಗಳ ತೂಕ೧೨೦ ಕಿಲೋ ದಾಟಲಿದೆ.

ಶಿಸ್ತುಬದ್ಧ ಹಾಗೂ ಶಾಸ್ತ್ರೋಕ್ತ ಬದಲಾಯಿಸಿ

೩ ವರ್ಷಗಳಿಂದ ಸತತವಾಗಿ 'ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆಯವರು ಆಯೋಜಿಸಿದ 'ಅತ್ಯುತ್ತಮ ಉತ್ಸವಮೂರ್ತಿ ಸನ್ಮಾನ' ದೊರೆತಿದೆ. ಉತ್ಸವದ ಸಂಚಾಲಕರುಗಳ ಹೆಸರುಗಳು ಹೀಗಿವೆ :

  • ಸೆವೆನ್ ಹಿಲ್ಸ್ ಆಸ್ಪತ್ರೆಯ, ಡಾ. ಭುಜಂಗ್ ಪೈ
  • ಎವರ್ ಗ್ರೀನ್ ಸಂಸ್ಥೆಯ ಗುರುಪುರ ದಾಮೋದರ್ ರಾವ್
  • ನ್ಯಾಚುರಲ್ ಐಸ್ಕ್ರೀಂ ನ ರಘುನಂದನ್ ಕಾಮತ್,

ಉಪಸಮಿತಿಗಳು ಬದಲಾಯಿಸಿ

೪೦ ಉಪಸಮಿತಿಗಳಿವೆ. ಉತ್ಸವದ ಪ್ರತಿಕಾರ್ಯವನ್ನೂ ನಿರ್ವಹಿಸುವ ಹೊಣೆಗಾರಿಕೆಯನ್ನು ಒಪ್ಪಿಸಲಾಗುತ್ತದೆ. ೧,೨೦೦ ಸ್ವಯಂಸೇವಕರು ದಿನರಾತ್ರಿಯೆನ್ನದೆ ದುಡಿಯುತಾರೆ. ಆರತಿ, ಧನಸಂಗ್ರಹ, ಆಭರಣ, ದೀಪಾರಾಧನೆ, ಅಪಾಯ ನಿರ್ವಹಣೆ,ಐ.ಡಿ.ಪಿ.ಹೂವಿನ ಹರಹಿಲಾಲಿ, ಹುಂಡಿ ವಿಗ್ರಹ, ವಿಸರ್ಜನೆಯ ಟ್ರಾಲಿಯ ನಿರ್ಮಾಣಕಾರ್ಯ, ರಜತ ಪ್ರಭಾವಳಿ ಅಲ್ಂಕಾಅ, ಮೋದಕ, ಪಂಚಕಜ್ಜಾಯ, ಮೂಡಗಣಪತಿ, ಮಹಾಮೂಡಗಣಪತಿಗಳ ವ್ಯವಶಾಪನೆ ರಕ್ಷಣೆ, ಪೋಲಿಸ್ ಹಾಗೂ ಮುನಿಸಿಪಾಲಿಟಿ ಪರವಾನಗಿ, ಕಚೇರಿ ನಿರ್ವಹಣೆ,ಫಲಾಹಾರ, ಪಾನಕ ತಯಾರಿ,ಪೆಂಡಾಲ್, ಖಾಸಗಿ ವಸ್ತುಗಳ ರಕ್ಷಣೆ,ಸಾರ್ವಜನಿಕ ಪ್ರಸಾದ, ಸಾರ್ವಜನಿಕ ದರ್ಶನ, ಸ್ಕೈವಕ್, ಪಬ್ಲಿಕ್ ರಿಲೇಶನ್,ಸುಕೃತೀಂದ್ರ ನಗರ,ರಾಮಾನಾಯಕ್ಸ್ ಹಾಲ್ ಗ್ರೌಂಡ್ ಮತ್ತು ಜಿ.ಎಸ್.ಬಿ, ಸ್ಪೋರ್ಟ್ಸ್ ಕ್ಲಬ್ ಗ್ರೌಂಡ್ ನಲ್ಲಿ ಗಣೇಶನ ಮೂರ್ತಿಯನ್ನು ೬ ಭಾರಿ ರಬ್ಬರ್ ಟೈರ್ ಗಳಿಂದ ಸಜಾಯಿಸಿದ ಟ್ರಾಲಿಯ ಮೇಲೆಯೇ ನಿರ್ಮಿಸುತ್ತಾರೆ. ಪೆಂಡಾಲ್ ನಡುವೆ ಇರಿಸಿದ ಜ್ಯಾಕ್ ಗಳಿಂದ ಮೇಲೆತ್ತಿ ಅದರ ಸುತ್ತಲೂ ಅಟ್ಟಳಿಕೆ ಕಟ್ಟಲಾಗುತ್ತದೆ. ಇಡೇ ಟ್ರಾಲಿಯಮೇಲೆ ಗಣೇಶಮೂರ್ತಿಯ ನಿರ್ಮಾಣವಾಗುತ್ತದೆ. ನಾಗಪಂಚಮಿಯ ತಿಥಿಯದಿನ 'ವಾಲ್ಕೇಶ್ವರ ಕಾಶಿಮಠದ ಶ್ರೀಮದ್ ಮಾಧವೇಂದ್ರ ಸ್ವಾಮಿ'ಗಳ ವೃಂದಾವನದ ಮುಂದೆ ಪ್ರಾರ್ಥನೆ ಸಲ್ಲಿಸಿದ ನಂತರವೇ 'ನಿರ್ಮಾಣಕಾರ್ಯ ಆರಂಭ'. ಗಿರ್ಗಾಂ ಕಲಾಕಾರ ’ಅವಿನಾಶ್ ಪಾಟ್ಕರ್’ ಮತ್ತು ತಂಡದ ನುರಿತ ಶಾಸ್ತ್ರಬದ್ಧವಾಗಿ ನಿರ್ಮಿಸಲಾಗುತ್ತದೆ. ವೇದಿಕೆ ತಯಾರು, ದೀಪಾಲಂಕಾರ, ಚತುರ್ಥಿಯ ೨ ದಿನಗಳ ಹಿಂದೆ ವಿರಾಟ್ ದರ್ಶನ್ ಎಂಬ ಸಂಭ್ರಮದಲ್ಲಿ ಗಣೇಶನಿಗೆ ವಸ್ತ್ರಾಭರಣಗಳನ್ನು ತೊಡಿಸಿ ಸ್ವೀಕೃತಿ ದೊರೆಯುತ್ತದೆ.

ನೀರಿನ ವ್ಯವಸ್ಥೆ ಬದಲಾಯಿಸಿ

ಗಣೇಶೋತ್ಸವ ಮೈದಾನದಲ್ಲಿ ೪ ಅಡಿ ಅಗಲ, ೮ ಅಡಿ ಆಳದ ಒಂದು ಭಾವಿಯಿದೆ. ತಳಭಾಗದಲ್ಲಿ ಒಂದೂವರೆ ಅಡಿಗೂ ಕಡಿಮೆ ಮಟ್ಟದಲ್ಲಿ ನೀರು ನಿಂತಿದ್ದು ತಳ ಕಾಣಿಸುತ್ತದೆ. ಇಲ್ಲಿಂದಲೇ ಶೌಚಾಲಯಕ್ಕೆ, ಅಡುಗೆಮನೆಗೆ, ೨೪ ಗಂಟೆಯೂ ನೀರು ಬರುತ್ತಲೇ ಇರುತ್ತದೆ. ೨ ಅಂಗುಲದ ೩ ಪೈಪ್ ಬಳಕೆ ಉತ್ಸವದ ಸಮಯದಲ್ಲಿ ರಿವರ್ಸ್ 'ಒಸ್ಮಾಸಿಸ್ ವಾಟರ್ ಪ್ಯೂರಿಫೈಯರ್' ಎಂಬ ಜಲ ಶುದ್ಧೀಕರಣ ಯಂತ್ರದ ಬಳಕೆಯಿಂದ ೨,೫೦೦ ಲೀಟರ್ ನಷ್ಟು ಮಿನರಲ್ ವಾಟರ್ ನ ಗುಣಮಟ್ಟದ ಪರಿಶುದ್ಧ ನೀರನ್ನು ಒದಗಿಸುತ್ತದೆ.

ವಿಮೆ ಇಳಿಸುವ ಅಗತ್ಯ ಬದಲಾಯಿಸಿ

ಜಿ.ಎಸ್.ಬಿ.ಮಂಡಳಿ ಸ್ವಯಂಸೇವಕರಿಗೆ ವಿಮೆ ಇಳಿಸುವ ವ್ಯವಸ್ಥೆಯನ್ನು ಮುಂಬೈನಲ್ಲಿ ಮೊಟ್ಟಮೊದಲು ಆರಂಭಿಸಿತು. ಗಣೇಶೋತ್ಸವದ ವಿಮೆಯ ಮೊತ್ತ ೨೨೪ ಕೋಟಿರುಪಾಯಿಗಳು. ಸನ್ ೨೦೦೭ ರಲ್ಲಿ ಗಣೇಶನನ್ನು ೭ ಕೋಟಿ ರುಪಾಯಿಗೆ ವಿಮೆ ಮಾಡಿಸಲಾಗಿತ್ತು. ಸಮಸ್ತ ರಿಸ್ಕ್ ಕವರ್ ಗೆ ೨೨.೧೧ ಕೋಟಿ, ಬೆಂಕಿ ಅಫಘಾತಕ್ಕೆ ೧ ಕೋಟಿ,ಸಾರ್ವಜನಿಕರ ವಿಮೆ ೨೦ ಕೋಟಿ, ಮಂಟಪಕ್ಕೆ ೧ ತಿಂಗಳ ವಿಮೆ. ಸೇವಾಮಂಡಲದ ಭಕ್ತವೃಂದಕ್ಕೆ, ಕರ್ಮಚಾರಿಗಳ ಸಹಿತ ಸುಮಾರು ೧೮೧೯ ಜನ ವೈಯಕ್ತಿಕ ವಿಮೆ, ತಲಾ ೧೦ ಲಕ್ಷ ರೂಪಾಯಿನಂತೆ ಒಟ್ಟು ೧೮೨ ಕೋಟಿ ಆಗುತ್ತದೆ.ಕಳೆದ ವರ್ಷ ೨೨೦ ಕೋಟಿ ರೂಪಾಯಿಗಳಿಗೆ ವಿಮೆ ಇಳಿಸಲಾಗಿತ್ತು.ಉತ್ಸವ ಮೂರ್ತಿಕಿರೀಟವೇ ೩೩ ಅಂಗುಲ, ೨೨ ಕಿಗಿಂತ ಅಧಿಕ.(ಇಂದಿನ ಬೆಲೆ ೭ಕೋಟಿರೂಪಾಯಿಗಿಂತ ಹೆಚ್ಚು) ಇದರ ನಡುವೆ ಏಳು ಹೆಡೆಗಳ 'ಶೇಷನಾಗ', ಇಕ್ಕೆಲೆಗಳಲ್ಲಿ ನವಿಲುಗಳು, ೨ ಮೊಸಳೆಗಳು,

ಚಪ್ಪಲಿ ರಕ್ಷಣೆ ಹಾಗೂ ವಿತರಣೆ ಬದಲಾಯಿಸಿ

ದಾರಿಯಲ್ಲಿ ಹತ್ತಾರು 'ಸ್ಟಾಲ್' ಗಳ ಕ್ರಮಬದ್ಧ ವ್ಯವಸ್ಥೆ,ಕಾಯುತ್ತದೆ. ೧೯೭೯ ರಲ್ಲಿ ಎಲ್.ಡಿ.ಶೆಣೈ ಸ್ಥಾಪಿಸಿದ ೨೪ ಜನ ಯುವಕರ ಜಿ.ಎಸ್.ಬಿ.ಯುವ ತಂಡವು ಮೈದಾನದ ಹೊರಗೆ ೨ ಮೇಜುಗಳನ್ನಿರಿಸಿ ಈ ಚಪ್ಪಲಿ ವಿತರಣ ಸೇವೆ ನೀಡಿತ್ತು.ಬ್ಯಾಗು ಚೀಲ,ಕಾಯಲು, ಕ್ಲೋಕ್ ರೂಂ ವ್ಯವಸ್ಥೆ,ಮುಂಜಾನೆ ೭ ರಿಂದ ರಾತ್ರಿ ೨ ರತನಕ ಉಚಿತರಾತ್ರಿ ಸ್ಕೈವಾಕ್ ನಲ್ಲಿ ಬರುವವರ ಸಂಖ್ಯೆ ಹೆಚ್ಚುತ್ತದೆ.ರಾತ್ರಿಪಾಳಿಯ ಸ್ವಯಂಸೇವಕರು ನಿರ್ವಹಿಸುತ್ತಾರೆ. ಫೈಬರ್ ಚೀಲದಲ್ಲಿ ಕಟ್ಟಿಡುತ್ತಾರೆ.ರಾಷ್ಟ್ರೀಯ ಅಂತಾರಾಷ್ಟ್ರೀಯಸಂಸ್ಥೆಗಳ ಡೈರೆಕ್ಟರ್ ಗಳು,ಎಮ್.ಡಿ.ಸಿ.ಇ.ಒ ಗಳುಹೆಣ್ಣುಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಚೌತಿಯಿಂದ ೫ ದಿನಗಳ ಕಾಲ ಜರುಗುವ ಜೆ.ಎಸ್.ಬಿ.ಗಣೇಶನ ಒಡ್ಡೋಲಗದಲ್ಲಿ ಶಾಸ್ತ್ರೋಕ್ತ ಪೂಜೆಗಳಿಗೆ ಮಾತ್ರ ಅನುಮತಿ. ಸಿನೆಮಾಹಾಡುಗಳು, ಅಶ್ಲೀಲ ಚಿತ್ರಗೀತೆಗಳಿಗೆ ಪರವಾನಗಿಇಲ್ಲ. ವಿಧಿವತ್ತಾದ ಹವನ ಹೋಮ,ಪೂಜೆಗಳು, ದಿನವಿಡಿ ಗಣೇಶನ ಆರಾಧನೆ,ಪೂಜೆ, ಸೇವೆಗಳು ಪೂಜೆಗಳೇಲ್ಲಾ ಕಾಶಿಮಠಾಧಿಪತಿಗಳ ಮಾರ್ಗದರ್ಶನದಲ್ಲಿ ನಡೆಯುತ್ತವೆ. ವೇದಮೂರ್ತಿ ಬಂಟ್ವಾಳ ಕೃಷ್ಣಭಟ್ಟರ.

ಸಮಾರಾಧನೆ ಪಂಚಕಜ್ಜಾಯ ಬದಲಾಯಿಸಿ

ಪ್ರತಿಪಂಕ್ತಿಗೆ ಸುಮಾರು ೨ ಸಾವಿರದಂತೆ, ೧೨ ಸಾವಿರಭಕ್ತರುಭಗಂತನ ಪ್ರಸಾದ ಉಂಡು, ಕೃತಾರ್ಥರಾಗುತ್ತಾರೆ. ಕೊನೆಯದಿನದ ಪೂಜೆ ಸಲ್ಲುವುದು ರಾತ್ರಿ ೧೧ ಗಂಟೆಗೆ ಗಣಪತಿಗೆ ಪೂಜೆಯಾದನಂತರ ನೈವೇಧ್ಯ ಸಮರ್ಪಿಸಿದ ಬಳಿಕವೇ ಪೂಜಾಕಾರ್ಯಕ್ರಮಗಳಿಗೆ ತೆರೆಯೆಳೆಯಲಾಗುತ್ತದೆ.

ತುಲಾಭಾರಸೇವೆ ಬದಲಾಯಿಸಿ

ಹರಕೆಯ ಸಲುವಾಗಿ ಸಹಸ್ರಾರು ಜನ ಕಾದುನಿಂತಿರುತ್ತಾರೆ. ತೆಂಗಿನ ಕಾಯಿ, ಪಂಚಕಜ್ಜಾಯ, ಸಕ್ಕರೆ, ಅಕ್ಕಿ, ಬಾಳೆಹಣ್ಣು, ಬೆಲ್ಲ, ಲಾಹಿ, ಲಡ್ಡು, ದೂಧ್ ಪಾಕ್, ಮೋದಕ ಇತ್ಯಾದಿಗಳ ತುಲಾಭಾರ ಇದನ್ನು ಗಂಡ-ಹೆಂಡತಿ,ಅಥವಾ ಒಬ್ಬರೇ ತಾಯಿ,ಮಗು, ಒಪ್ಪಿಸಬಹುದು. ಎಲ್ಲಾ ಸಾಮಗ್ರಿಗಳೂ ಗೇರುಬೀಜ, ಬಾದಾಮಿ,ಒಣದ್ರಾಕ್ಷಿ, ಮೊದಲಾದವಿಶೇಷ ತುಲಾಬಾರ ಅರ್ಪಿಸಲು ಸಿದ್ಧರಾದ ತಮ್ಮ ಜೊತೆಗೆ ತರಬಹುದು. ತಕ್ಕಡಿಯ ಒಂದು ತಟ್ಟೆಯಲ್ಲಿ ಹರಕೆ ಸಲ್ಲಿಸುವ ಭಕ್ತರು, ಮತ್ತೊಂದು ತಟ್ಟೆಯಲ್ಲಿ ತೆಂಗಿನಕಾಯಿ,ಅಥವಾ ನಿರ್ದಿಷ್ಟ ಸಾಮಗ್ರಿಗಳ ಚೀಲ ಇರಿಸಿದ ಬಳಿಕ ಅರ್ಚಕರು ಸೇವೆ ಮಾಡಿಸುವ ಹೆಸರು ಹೇಳಿ ಭಗವಂತನನ್ನು ಕೇಳುತ್ತಾರೆ.

ಮಾಮ್ ಚೆ ಅಗೆಲೆ

ನಾರ್ಲಾ ತುಲಾಭಾರ್

ದೇವಾಕ್ ಉಪ್ಸೂನ್ ದಿಲೇಲೆ ಅಸ್ಸಾ

ಹೈಂ ದೇವಾನ್ ಸ್ವೀಕಾರ್ ಕೊರ್ಕಾ.

ತುಲಾಭಾರ್ ಸೇವಾ ದೇವಾಕ್ ಪೌಲಿವೆ ?

ದೇವಾಕ್ ಪೌಲಿವೆ ? ದೇವಾಕ್ ಪೌಲಿವೆ ?

(..ಇವರ ತೆಂಗಿನ ಕಾಯಿ ತುಲಾಭಾರ ದೇವರಿಗೆ ಒಪ್ಪಿಸಿದ್ದೇವೆ. ಇದನ್ನು ದೇವರು ಸ್ವೀಕರಿಸಬೇಕು. ತುಲಾಭಾರ ಸೇವೆ ದೇವರಿಗೆ ತಲುಪಿತೆ. ಮೂರು ಬಾರಿ ಕೇಳಿ ಕೃಶ್ಣಾರ್ಪಣೆ ಮಾಡಿದರೆ ತುಲಾಭಾರದ ದಂತೆ. ೫ ದಿನಗಳಲ್ಲಿ ಸುಮಾರು ೪,೦೦೦ ತುಲಾಭಾರ ಸೇವೆ ಜರುಗುತ್ತದೆ. ಸನ್. ೨೦೧೧ ರಲ್ಲಿ ಮೊದಲನೆಯ ದಿನವೇ ಸುಮಾರು ೧,೪೦೦ ತುಲಾಭಾರ ಸೇವೆ ನಡೆದಿತ್ತು.

ಸ್ಕೈವಾಕ್ ಬದಲಾಯಿಸಿ

ಗಣೇಶ ದರ್ಶನಕ್ಕೆ ಬರುವ ಅಪಾರ ಜನಸಂಖ್ಯೆಗೆ ೫ ವರ್ಷಗಳಹಿಂದೆ ಈ ಯೋಜನೆ. ನೆಲದಿಂದ ೧೦ ಅಡಿ ಎತ್ತರದಲ್ಲಿ ಸಾಗುವ ವಿಶೇಷ ದಾರಿ,ನೇರವಾಗಿ ಗಣೇಶ ಮೂರ್ತಿಯ ಸನ್ನಿಧಿಗೆ ಕರೆದೊಯ್ಯುತ್ತದೆ. ಈ ದಾರಿಯಲ್ಲಿ ಹೋದ ಜನ, ಅತಿ ಹತ್ತಿರದಲ್ಲಿ 'ಗಣೇಶ' ನ ದರ್ಶನ ಮಾಡಿ ಪ್ರಸಾದ ಪದೆದು, ನೇರವಾಗಿ ಹೊರಗೆ ಹೋಗಬಹುದು. ಯಾವುದೇ ಒಂದು ಸಮಯದಲ್ಲಿ ಸುಮಾರು ೩ ಸಾವಿರ ಜನರ ಸರತಿಯ ಸಾಲು ಇಲ್ಲಿ ಹರಿದಿರುವುದನ್ನು ಕಾಣಬಹುದು. ಈ ಪದ್ಧತಿಯ ಉಪಯೋಗವನ್ನು ಮನಗಂಡ ಇನ್ನಿತರ ಗಣೇಶ ಮಂಡಲಿಗಳೂ 'ಸ್ಕೈವಾಕ್, ನಿರ್ಮಿಸುವುದರಲ್ಲಿ ಆಸಕ್ತಿಹೊಂದಿದರು.

ನಾರಾಳ್ಚ್ಯಾ ಗಣಪತಿ ಬದಲಾಯಿಸಿ

ಸಾಲುಗಟ್ಟಿ ನಿಂತು ಬರುವ ಭಕ್ತರು, ತಲಾ ಅರ್ಧ ತೆಂಗಿನಕಾಯಿಯ ಒಳಗೆ, ಪಂಚಕಜ್ಜಾಯ ತುಂಬಿಸಿ ಪ್ರಸಾದದರೂಪದಲ್ಲಿ ವಿತರಿಸಲಾಗುತ್ತಿದೆ. ಮಧ್ಯರಾತ್ರಿಯಲ್ಲಿ ಬರುವ ಭಕ್ತರೂ ಈ ಪ್ರಸಾದಕ್ಕೆ ಅರ್ಹರು. ತಮ್ಮದೇ ಹಣ್ಣು-ಕಾಯಿತರುವಂತಿಲ್ಲ. ಉತ್ಸವ್ಕ್ಕಾಗಿ ಕರಾವಳಿ ಕರ್ನಾಟಕದಿಂದ ಇದಕ್ಕಾಗಿಯೇ ೧ ಕಕ್ಷ ೭೫ ಸಾವಿರ ತೆಂಗಿನಕಾಯಿಗಳನ್ನು ತರಿಸಲಾಗುತ್ತದೆ. ಮೂಡಗಣಪತಿ, ಮಹಾಮೂಡಗಣಪತಿಪೂಜೆಗಳಲ್ಲಿ ಪ್ರತಿದಿನವೂ ಒಡೆದು ನೈವೇದ್ಯಮಾಡುವ ತೆಂಗಿನಕಾಯಿಗಳನ್ನು ಪ್ರಸಾದ ತಯಾರಿಸಲೆಂದೇ ಇಟ್ಟಿರುತ್ತಾರೆ. ಮಕ್ಕಳಿಗೆ ಭಗವಂತನ ಸೇವೆಯಲ್ಲಿ ಆಸಕ್ತಿ ಮೂಡಿಸಲು ಜೆ.ಎಸ್.ಬಿ.ಸೇವಾ ಮಂಡಳಿ ಹಲವಾರು ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಭಜನೆ, ಭಗವದ್ಗೀತಾಪಾರಾಯಣ ಫ್ಯಾನ್ಸಿ ಡ್ರೆಸ್, ಪೌರಾಣಿಕ ನಾಟಕಗಳ ಮೂಲಕ ಅವರಲ್ಲಿ ಸಂಸ್ಕ್ರುತಿ, ಕಲೆ, ಮತ್ತು ಸಂಪ್ರದಾಯಗಳನ್ನು ಬಿಂಬಿಸಲಾಗುತ್ತದೆ. ಎಸ್.ಎಸ್.ಎಲ್.ಸಿ.ಯಿಂಅದ ಪ್ರಾರಂಭವಾಗಿ ಉನ್ನ್ತ ಶಿಕ್ಷಣ ವಲಯದಲ್ಲಿ ಸಾಧನೆಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತದೆ.

ರಕ್ತದಾನ ಶಿಬಿರ ಬದಲಾಯಿಸಿ

ಸೇವಾಮಂಡಳಿ ಆಯೋಜಿಸುವ ಶಿಬಿರಗಳು ಸಯನ್ ಆಸ್ಪತ್ರೆಗೆ ನೂರಾರು 'ಬಾಟ್ಲಿ ರಕ್ತ'ವನ್ನು ಒದಗಿಸುತ್ತವೆ. 'ಅಪಾರಹಣ ಸಂಗ್ರಹಣೆ'ಯ ಮಿಕ್ಕುಳಿದ ಭಾಗ 'ಸುಧೀಂದರ್ ಅಕ್ಯಾಡಮಿ ಆಫ್ ಗ್ಲೋಬಲ್ ಎಜ್ಯುಕೇಶನ್'(SAOGE) ಎಂಬ ಶಿಕ್ಷಣ ಸಂಸ್ಥೆಗೆ ಸೇರುತ್ತದೆ. 'ಮೀರ ಭೈಂದರ್-ಮುನಿಸಿಪಾಲಿಟಿ'ಯ 'ವರ್ಸೋವ' ಎಂಬ ಹಳ್ಳಿಯಲ್ಲಿ ೧೦ ಎಕರೆ ಜಮೀನಿನಲ್ಲಿ ನಿರ್ಮಿಸಲಿರುವ ಶೈಕ್ಷಣಿಕ ಸಂಕುಲದಲ್ಲಿ ಬಡಜನರಿಗೆ ಉನ್ನತ ವಿದ್ಯಾಭ್ಯಾಸ ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ೨೯ ಹುಂಡಿಗಳಲ್ಲಿ ಶೇಖರವಾಗುವ ಹಣದ ಮೊತ್ತ ಲಕ್ಷಗಟ್ಟಲೆ ಇರುತ್ತದೆ. ಇದನ್ನು 'ಸುಕೃತೀಂದ್ರ ಫ್ರೀಶಿಪ್ ಸಮಿತಿ'ಯ ಮೂಲಕ ಮುಂಬೈನ ಬಡ ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜು ಶುಲ್ಕ ತೆರಲು, ಸಹಾಯ ರೂಪದಲ್ಲಿ ಹಣವನ್ನು ವಿತರಿಸಲಾಗುವುದು. ಸನ್. ೨೦೧೧ ರ ಹುಂಡಿ ಹಣದ ಮೊತ್ತ, ೪೯.೯೪ ಲಕ್ಷರೂಪಾಯಿಗಳು. ೪೫೦ ಜನ ವಿದ್ಯಾರ್ಥಿಗಳಿಗೆ ನೆರವು ಒದಗಿಸಲಾಗಿತ್ತು.

ಗಣಪತಿ ವಿಸರ್ಜನೆ ಬದಲಾಯಿಸಿ

೫ ನೆಯ ದಿನದ ಸಾಯಂಕಾಲ ವಿಸರ್ಜನೆಗೆ ಮೊದಲು ಆರತಿ ೭ ಗಂಟೆಗೇ ಮೆರವಣಿಗೆ ಹೊರಡುವ ಪೂರ್ವ ತಯಾರಿ ಇರುತ್ತದೆ. ಪೂಜೆಗಳು, ಪುನಃಪೂಜೆ ಇತ್ಯಾದಿಗಳು ೯ ಗಂಟೆಯ ವರೆಗೆ ನಡೆಯುತ್ತಲೇ ಇರುತ್ತವೆ. ಹಾಗಾಗಿ ನಂತರ ವೇದಿಕೆ ಅಟ್ಟಳಿಗೆ ಬಿಚ್ಚಿದ ನಂತರ,ರಥವನ್ನು ಜ್ಯಾಕ್ ಗಳ ನೆರವಿನಿಂದ ನೆಲಕ್ಕೆ ಇಳಿಸಿ ಟ್ರಕ್ ಗೆ ಜೋಡಿಸಲಾಗುತ್ತದೆ. ಇದಾದ ಬಳಿಕ ವೇದಮಂತ್ರ ಘೋಷಣೆಗಳ ಉದ್ಘೋಷಗಳೊಂದಿಗೆ ಗಣಪನ ಯಾತ್ರೆ ಹೊರಡುತ್ತದೆ . ೩ ಬಸ್ ಗಳೂ ಜೊತೆಯಲ್ಲಿ ನಿಧಾನವಾಗಿ ಸಾಗುತ್ತವೆ. ಇದರಲ್ಲಿ ವಯೋವೃದ್ಧರು, ಮಕ್ಕಳು, ಸೆಕ್ಯೂರಿಟಿ, ವ್ಯವಸ್ಥೆ, ಖಾಸಗಿ ಕಾರುಗಳು, ಹತ್ತು ಸಾವಿರಕ್ಕೂ ಹೆಚ್ಚು ಭಕ್ತರ ಮೆರವಣಿಗೆ ಶಿಸ್ತುಬದ್ಧವಾಗಿ 'ಗಿರ್ಗಾಂ ಚೌಪಾಟಿ'ಯತ್ತ ಸಾಗುತ್ತದೆ.

  • ಆಭಾರ ಮನ್ನಣೆ : 'ಭಾರತದ ಏಕಮೇವಾದ್ವಿತೀಯ, ಮುಂಬಯಿಯ ಶ್ರೀಮಂತಾಂಚಾ ಗಣಪತಿ'-'ಕರಾವಳಿ ಕರ್ನಾಟಕದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಕೊಡುಗೆ'. * ತುಕಾರಾಮ, ಸಹಕಾರ : ಅನಂತರಾಯ ನಾಯಕ್. 'ತರಂಗ', ೨೦, ಸೆಪ್ಟೆಂಬರ್, ೨೦೧೨, ಪುಟ.೧೨.