ಮುಂಬೈನ ಇರಾನಿ ಹೋಟೆಲ್ ಗಳು
'ಬೊಂಬಾಯಿ'ನ (ಇಂದಿನ ಮುಂಬಯಿ) ಜನರಿಗೆ ಸೋವಿದರದಲ್ಲಿ ಊಟ ತಿಂಡಿ ದೊರೆಯುವ ಹೋಟೆಲ್ ಗಳಲ್ಲಿ ಇರಾನಿ ಹೋಟೆಲ್ [೧] ಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಅವು 'ಉಡಿಪಿ ಹೋಟೆಲ್' ಬರುವ ಮೊದಲೇ ಈ ಶತಮಾನದ ಪ್ರಾರಂಭದಲ್ಲಿ ಇದ್ದವು.[೨] ಬೊಂಬಾಯಿನ ಅತ್ಯಂತ ಪ್ರಮುಖ ಸರ್ಕಲ್ ಗಳಲ್ಲಿ ಅವು ಇದ್ದದ್ದು, ಹೆಚ್ಚು ವ್ಯಾಪಾರ ಮತ್ತು ಲಾಭವಲ್ಲದೆ, ಗ್ರಾಹಕರಿಗೆ ಹೆಚ್ಚು ಸವಲತ್ತು ದೊರೆಯುವ ಉದ್ದೇಶ್ಯದಿಂದ. ಪ್ರತಿ ರಸ್ತೆಯ ಕೊನೆಯಲ್ಲಿ ಒಂದು 'ಇರಾನಿ ಹೋಟೆಲ್' ಇರುತ್ತಿದ್ದವು. ಆಗಿನ ಸಮಯದಲ್ಲಿ ಬೊಂಬಾಯಿನಲ್ಲಿ ಸುಮಾರು ೭೫ ಬಟ್ಟೆ ಕಾರ್ಖಾನೆಗಳಿದ್ದವು. ಮಿಲ್ ಕೆಲಸಗಾರರಿಗೆ ಮತ್ತು ಬದಲಿ ಕಾರ್ಮಿಕರಿಗೆ ಅನುಕೂಲವಾಗುತ್ತಿತ್ತು. ಇಂದು ಅವುಗಳ ಸಂಖ್ಯೆ ಬೆರಳೆಣಿಸುವಷ್ಟು ತಗ್ಗಿದೆ. ಅಲ್ಲದೆ ಹಲವಾರು 'ಇರಾನಿ ರೆಸ್ಟಾರೆಂಟ್' ಗಳು ಆಧುನಿಕತೆಯ ಮೊರೆಹೋಗಿ, ಅವುಗಳ ಸ್ಥಾನವನ್ನು,ಪೀಜ್ಜ ಹಟ್, ಮೆಕ್ದೊನಾಲ್ದ್ಸ್ ಕೆಫೆ ಕಾಫಿ ಡೇ ಬಾರಿಸ್ಟ, ಮುಂತಾದವು ಆಕ್ರಮಿಸಿವೆ. 'ಇರಾನಿ ರೆಸ್ಟಾರೆಂಟ್ ಗಳು', ಸಾಮಾನ್ಯವಾಗಿ ಹಳೇ ಕಾಲದ ಗಟ್ಟಿಮುಟ್ಟಾದ ಕಟ್ಟಡಗಳಲ್ಲಿ ಇರುತ್ತಿದ್ದವು.[೩] ಅಲ್ಲಿ ಸುಲಭವಾಗಿ ಗುರುತಿಸಬಹುದಾದ, 'ಕಪ್ಪು ಕಮರದ ಮರದ ಕುರ್ಚಿಗಳು', 'ಟೇಬಲ್' ಗಳೂ, 'ಲಾಂಗ್ ಟೇಬಲ್ ಕ್ಲಾತ್' ಹಾಕಿದ ದಪ್ಪಗುಂಡು ಗ್ಲಾಸ್ ಕೆಳಗೆ 'ಮೆನು' ಹುದುಗಿರುತ್ತಿತ್ತು. ಲಾಯರ್ ಗಳೂ, ಧನವಂತರು, ವ್ಯಾಪಾರಸ್ತರು, ಯಾವುದೇ ಮತ, ಜಾತಿಗಳ ಭೇದಭಾವಗಳಿಲ್ಲದೆ, ಇಲ್ಲಿ ಮುದ ದೊರೆಯುತ್ತಿತ್ತು. ಆಪ್ತ ಸ್ನೇಹಿತರನ್ನು ಭೆಟ್ಟಿಯಾಗಲು, ಮತ್ತು ಅದು ಇದು ವಿಷಯಗಳಬಗ್ಗೆ ಹೆಚ್ಚು ಹೊತ್ತು ಕುಳಿತು ಲೋಕಾಭಿರಾಮವಾಗಿ ಗಪ್ಪ ಹೊಡೆಯಲು, ಮದುವೆಯಾಗುವವರು, ಆದವರು, ಆಗದವರು, ಬಂದು ಇಲ್ಲಿ ಭೇಟಿಯಾಗುವ ತಾಣವನ್ನು ಹುಡುಕಿಕೊಂಡಿದ್ದರು. ಇಲ್ಲಿ ಭಾರಿ ಭಾರಿ ನಾಯಕರುಗಳು, ಬರಹಗಾರರು, ಚಿತ್ರಕಾರರು,'ಇರಾನಿ ಪಾನಿ ಕಂ ಚಾಯ್' ಕುಡಿದು, 'ಸಂಡೆ ಟೈಮ್ಸ್' ಓದಲು ಸಂಭ್ರಮಿಸುತ್ತಿದ್ದರು. 'ಬ್ರಾನ್ ಮಸ್ಕ ತಿನ್ನುವ ಹುಡುಗರು', ಪತ್ರಿಕಾಕರ್ತರು ದಿನದ ನ್ಯೂಸ್ ಗಳ ಕಥೆಗಳನ್ನೂ ಹೆಣೆದು ಪ್ರೆಸ್ ಗೆ ಕೊಡವ ಮುನ್ನ ಇಲ್ಲಿ ಬಂದು ತಿಂಡಿ ತಿನ್ನುವ ದೃಷ್ಯಗಳು ಸಾಮಾನ್ಯವಾಗಿದ್ದವು. ಹಾಗಾಗಿ, ಇರಾನಿ ಹೋಟೆಲ್ ಗಳಿಗೆ, ಸುಮಾರು ಒಂದು ನೂರು ವರ್ಷಗಳ ಇತಿಹಾಸವಿದೆ. ಈಗ, ಆ ತರಹದ ಕೆಫೆಗಳು ನಿಧಾನವಾಗಿ ಮರೆಯಾಗುತ್ತಿದೆ.
ಇರಾನಿ ಹೋಟೆಲ್ ನ ಖಾದ್ಯಗಳು
ಬದಲಾಯಿಸಿಆಗ ತಾನೇ ಸೊಗಸಾಗಿ ಘಮಿಘಮಿಸುತ್ತಿರುವ 'ಇರಾನಿ ಬೇಕ್ರಿ'ಯಲ್ಲಿ ತಯಾರಿಸಿ ತಂದ 'ಬ್ರೆಡ್','ಮಾವ ಕೇಕ್', ಇದಲ್ಲದೆ ಅತಿ ಮುಖ್ಯವೆಂದರೆ, 'ಟೀ', 'ಕಾಫಿ'-ಬ್ರೆಡ್-ಬಟರ್, 'ಬನ್-ಮಸ್ಕಾ',[೪] 'ಮೊಟ್ಟೆಗಳು', 'ಮಿನ್ಸ್ ಮಿಟ್', 'ಬೆರ್ರಿ', 'ಪುಲಾವ್', 'ಪಾರ್ಸಿಗಳ ಬಹು ಇಷ್ಟದ ತಿನಸು, ಧನ್ಸಾಕ್', 'ಮಟ್ಟನ್ ಬಿರ್ಯಾನಿ', ಮತ್ತು 'ಕರಮೆಲ್ ಕಸ್ಟರ್ಡ್', ಇಲ್ಲಿನ ಜನರ ಮನ್ ಪಸಂದ್ ಎಂದರೆ, 'ಬನ್ ಮಸ್ಕ', ಮತ್ತು 'ಇರಾನಿ ಚಾ'. 'ಇರಾನಿ ರೆಸ್ಟಾರೆಂಟ್' ನಲ್ಲಿ ಹೆಚ್ಚಿನ ಬದಲಾವಣೆ ಇಂದಿಗೂ ಕೆಲವು ಕಡೆ ಆಗಿಲ್ಲ. ಅದೇ 'ಚಚ್ಚೌಕದ ವಿನ್ಯಾಸದ ಟೇಬಲ್ ಕ್ಲಾತ್', 'ಹಳೆಕಾಲದ ೪ ರೆಕ್ಕೆಯ ಸೀಲಿಂಗ್ ಫ್ಯಾನ್' ಗಳೂ, ಮರದ ಛೇರ್ ಗಳು, ಟೇಬಲ್, 'ರಾಬಿನ್ ಮತ್ತು ರೋಸ್ಟರ್ ಚಿತ್ರ', 'ರಾಸ್ಪ್ ಬೆರ್ರಿ', 'ರೆಫ್ರಿಜರೇಟರ್ ನಲ್ಲಿ ಹುದುಗಿಸಿಟ್ಟ ಡ್ಯೂಕ್ ಬಾಟಲ್ ಗಳು', ಇಂದಿನ 'ಥಳಕ್ ಪಳಕ್ ನವೀನ ಯುಗ'ದಲ್ಲೂ ಹಳೆಯ ಮಾಡೆಲ್ಲನ್ನು ಮೆಚ್ಚುವವರು ಇದ್ದಾರೆ.
ಮುಂಬಯಿನ ಮಾಟುಂಗಾದ ಮಹೇಶ್ವರಿ ಉದ್ಯಾನ ಬಳಿಯ 'ಕೂಲರ್ ರೆಸ್ಟಾರೆಂಟ್'
ಬದಲಾಯಿಸಿಮಟುಂಗಾ(ಪೂ)ದ, 'ಕಿಂಗ್ ಸರ್ಕಲ್' ನ ಬಳಿ,(ಈಗ ಅದನ್ನು ಮಹೇಶ್ವರಿ ಉದ್ಯಾನ್ ಎನ್ನುತ್ತಾರೆ) 'ಡಾ.ಅಂಬೇಡ್ಕರ್ ರಸ್ತೆ'ಯ ತಿರುವಿನಲ್ಲಿರುವ 'ನೂರ್ ಮಹಲ್', ನಲ್ಲಿನ 'ಕೂಲರ್ ಅಂಡ್ ಕಂ',ಯಲ್ಲಿ 'ಕಾಂಟಿನೆಂಟಲ್ ಚೈನೀಸ್ ಫುಡ್',ದೊರೆಯುತ್ತದೆ. ಮನೆಯ ತರಹದ ವಾತಾವರಣವನ್ನು ನಾವು ಕಾಣಬಹುದು. ಇಲ್ಲಿ, 'ಗ್ರೀನ್ ಮತ್ತು ರೆಡ್ ಫಿಶ್ ಕರಿ', 'ಚಿಕನ್ ಸ್ಟಿವ್', 'ಗ್ರಿಲ್ದ್ ಮತ್ತು ಫಿಂಗರ್ ಫಿಶ್', ಸುಂದರವಾಗಿ, ನಗುಮುಖದಿಂದ ಸೊಗಸಾಗಿ ಸರ್ವ ಮಾಡುವ ವಿಧಾನ ಅನನ್ಯ. ಬಾಯಿನಲ್ಲಿ ನಿರೂರುವ 'ಚಿಕನ್ ಟಿಕ್ಕ' ಮತ್ತು 'ಪನೀರ್ ಟಿಕ್ಕ' ಗಳಿಗೆ ಅತ್ಯಂತ ಬೇಡಿಕೆ, 'ಅತ್ಹೆಮ್ತಿಕ್ ಚೈನಿಸ್ ಕ್ಯುಸಿನ್', 'ಚೌಮೆನ್', 'ಚುಪ್ಸೆ,ನುದಲ್ಸ್', ಮೊದಲಾದ, ವ್ಯಂಜನಗಳೊಂದಿಗೆ, ಸುಮಾರು ೪೦ ಜನರಿಗೆ ಆರಾಮಾಗಿ 'ಡ್ರಿಂಕ್ಸ್' ನೊಂದಿಗೆ ಕೂಡ್ರಲು ವ್ಯವಸ್ಥೆ ಮಾಡಬಹುದಾದ ಜಾಗವಿದೆ. 'ರೆಸ್ಟಾರೆಂಟ್' ಬೆಳಿಗ್ಯೆ, ೬ ರಿಂದ ಶುರುವಾಗಿ ರಾತ್ರಿ, ೧೧ ರವರೆಗೆ, ಸದಾ ವಾರದ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ. ಇಲ್ಲಿ ಯಾವಾಗಲು 'ವೈಟರ್' ಗಳೂ ಇರುತ್ತಾರೆ. 'ಸೀಟ್ ಕಾದಿರಿಸುವ ತೊಂದರೆ ಇಲ್ಲವೇ ಇಲ್ಲ'.
'ಕಿಂಗ್ ಸರ್ಕಲ್' ನ, ನಾಲ್ಕೂ ಮೂಲೆಗಳಲ್ಲಿ 'ಇರಾನಿ ರೆಸ್ಟಾರೆಂಟ್' ಗಳಿದ್ದವು
ಬದಲಾಯಿಸಿ'ಮಾಟುಂಗಾ ಪೋಸ್ಟ್ ಆಫೀಸ್' ಎದುರಿಗೆ, ಈಗಿರುವ 'ಗಿರಿ ಸ್ಟೋರ್ಸ್' ಮೊದಲು ಒಂದು 'ಇರಾನಿ ರೆಸ್ಟೋರೆಂಟ್', ಆಗಿತ್ತು. 'ರುಯಾ ಕಾಲೇಜ್,' ದಾರಿಯಲ್ಲಿ ಎರಡು ಮೂರು, 'ಇರಾನಿ ಹೋಟೆಲ್' ಗಳಿದ್ದವು. ಈಗ 'ಅಂಬಾ ಭವನ್ ಉಡಿಪಿ ಹೋಟೆಲ್' ನ ಬದಿಯಲ್ಲಿದ್ದ 'ಇರಾನಿ ರೆಸ್ಟಾರೆಂಟ್',' ಮಾರಲ್ಪಟ್ಟು,ಅಂಗಡಿಯಾಗಿದೆ.[೫] 'ಕೆನರಾ ಬ್ಯಾಂಕ್',' ಬದಿಯ 'ಇರಾನಿ ರೆಸ್ಟಾರೆಂಟ್ ಬಹಳ ಹಿಂದೆಯೇ ಮಾರಲ್ಪಟ್ಟಿತ್ತು. ಈಗ 'ಮೈಸೂರ್ ಕೆಫೆ'ಯ ಬದಿಯ ತಿರುವಿನಲ್ಲಿರುವ 'ಜಸ್ಟ್ ಚಿಲ್-೭ ಇರಾನಿ ರೆಸ್ಟಾರೆಂಟ್, 'ಐಸ್ ಕ್ರೀಂ', ಹಾಗೂ ತರಹಾವರಿಯ 'ಕೂಲ್ ಡ್ರಿಂಕ್ಸ್ ಗಳಿಗೆ ಪ್ರಸಿದ್ಧಿಯಾಗಿದೆ.
ಮುಂಬಯಿನಗರದ ಇತರ ಇರಾನಿ ಹೋಟೆಲ್ ಗಳು
ಬದಲಾಯಿಸಿ- ಕಯಾನಿ ಅಂಡ್ ಕಂ.
ದಾದರ್ ಟಿ.ಟಿ ವೃತ್ತದಲ್ಲಿ
ಬದಲಾಯಿಸಿ'ದಾದರ್ ಟಿ.ಟಿ.'ಯ 'ಖೊಡಾಡ್ ಸರ್ಕಲ್' ನ ನಾಲ್ಕೂ ಮೂಲೆಗಳಲ್ಲಿ 'ಇರಾನಿ ರೆಸ್ಟೋರೆಂಟ್' ಗಳಿದ್ದವು. ಈಗ ಆ ವೃತ್ತಿದ ಹೆಸರನ್ನು 'ಜಗನ್ನಾಥ ಶಂಕರ ಸೇಟ್ ವೃತ್ತ'ವೆಂದು ಹೆಸರು ಬದಲಾಯಿಸಿದ್ದಾರೆ. 'ಫಾರ್ಮರ್ ಬ್ರದರ್ಸ್' ಎಂಬ ಪಾನೀಯ ಹಾಗೂ ತಿಂಡಿಗಳ ಶಾಪ್ ಬಿಟ್ಟರೆ 'ಇರಾನಿ ಹೋಟೆಲ್' ಗಳ ಜಾಗದಲ್ಲಿ ಬೇರೆ ಬೇರೆ ಅಂಗಡಿಗಳು ಬಂದಿವೆ.
ಉಲ್ಲೇಖಗಳು
ಬದಲಾಯಿಸಿ- ↑ "Remembering the Irani cafes of Bomby/Mumbai". Archived from the original on 2014-07-24. Retrieved 2014-07-16.
- ↑ Great Britannia – the Irani cafes of Mumbai
- ↑ 'Irani Cafes, Restaurants Bakeries of India, Zoroastrian Heritage'-K.E.Eduljee
- ↑ "bun-maska-and-chai-at-irani-cafes of Irani hotels in Mumbai". Archived from the original on 2014-02-06. Retrieved 2014-02-10.
- ↑ Mumbai is running out of Irani 'chai'