ಮೀಸಲು

ವಿಕಿಪೀಡಿಯ:ದ್ವಂದ್ವ ನಿವಾರಣೆ

ಹಣಕಾಸಿನ ಲೆಕ್ಕಪತ್ರ ನಿರ್ವಹಣೆಯಲ್ಲಿ, ಮೀಸಲು ಮೂಲ ಪಾಲು ಬಂಡವಾಳವನ್ನು ಹೊರತುಪಡಿಸಿ, ಶೇರುದಾರರ ಷೇರುಗಳನ್ನು ಯಾವುದೇ ಭಾಗವಾಗಿದೆ. ಲಾಭೋದ್ದೇಶವಿಲ್ಲದ ಅಕೌಂಟಿಂಗ್ ನಲ್ಲಿ, "ಕಾರ್ಯಾಚರಣಾ ಮೀಸಲು" ಸಂಸ್ಥೆ ಉಳಿಸಿಕೊಳ್ಳಲು ಲಭ್ಯವಿರುವ ಕಡೆ ಅನಿರ್ಬಂಧಿತ ನಗದು, ಮತ್ತು ಲಾಭರಹಿತ ಮಂಡಳಿಗಳು ಸಾಮಾನ್ಯವಾಗಿ ಕಾರ್ಯ ನಗದು ಅಥವಾ ತಮ್ಮ ವಾರ್ಷಿಕ ಆದಾಯವು ಶೇಕಡಾವಾರು ಹಲವಾರು ತಿಂಗಳ ಕಾಯ್ದುಕೊಳ್ಳುವ ಗುರಿ ಸೂಚಿಸಿ, ಒಂದು ಆಪರೇಟಿಂಗ್ ಮೀಸಲು ಅನುಪಾತ ಎಂದು.ಬಂಡವಾಳ ಮೀಸಲು ಆದಾಯ ಮೀಸಲು, ಶಾಸನಬದ್ಧ ಮೀಸಲು, ಅರಿತುಕೊಂಡ ಮೀಸಲು, ಕೈಗೂಡದ ಮೀಸಲು ರೀತಿಯ ಹಣಕಾಸಿನ ಲೆಕ್ಕಪತ್ರ ಬಳಸಲಾಗುತ್ತದೆ ಮೀಸಲು ವಿಧಗಳಿವೆ. ಇಕ್ವಿಟಿ ಮೀಸಲು ಸಾಧ್ಯವಿರುವ ಹಲವಾರು ಮೂಲಗಳಿಂದರಚಿಸಲಾಗಿದೆ:

  • ಷೇರುದಾರರ ಕೊಡುಗೆಗಳನ್ನು ರಚಿಸಲಾದ ಮೀಸಲು,ಅತಿ ಸಾಮಾನ್ಯವಾದ ಉದಾಹರಣೆಗಳೆಂದರೆ ಇದು ಇವೆ: ಕಾನೂನು ಮೀಸಲು ನಿಧಿ - ಇದು ಅನೇಕ ಶಾಸನಗಳಿಂದ ಅಗತ್ಯವಿದೆ ಮತ್ತು ಇದು ಷೇರು ಬಂಡವಾಳ ಶೇಕಡಾವಾರು ಪಾವತಿಸಬೇಕು.

ಪಾಲು ಫ್ರೀಮಿಯಂ- ತಮ್ಮ ಅತ್ಯಲ್ಪ ಮೌಲ್ಯ ಹೆಚ್ಚು ಷೇರುಗಳನ್ನು ಷೇರುದಾರರಿಂದ ಹಣ ಪ್ರಮಾಣವನ್ನು ಸೂಚಿಸುತ್ತದೆ. ಲಾಭ ರಚಿಸಲಾದ ಮೀಸಲು.ವಿಶೇಷವಾಗಿ ಗಳಿಕೆಯನ್ನು ಅಂದರೆ ತನ್ನತ್ತ ಲೆಕ್ಕಪತ್ರ ಲಾಭ ಉಳಿಸಿಕೊಂಡಿತು, ಅಥವಾ ಲಾಭರಹಿತ, ಆಪರೇಟಿಂಗ್ ಹೆಚ್ಚುವರಿಯ ಸಂದರ್ಭದಲ್ಲಿ. ಆದರೆ, ಲಾಭ ಉದಾಹರಣೆಗೆ ಮೀಸಲು ಬೇರೆ ವಿಧಗಳಿಗೆ ಸಹ ವಿತರಣೆ ಮಾಡಬಹುದು:

ಲಾಭ ಕಾನೂನು ಮೀಸಲು ನಿಧಿ - ಅನೇಕ ಶಾಸನಗಳಿಂದ ಲಾಭ ಶೇಕಡಾವಾರು ಫಂಡ್ ಸೃಷ್ಟಿ ಅಗತ್ಯವಿದೆ. ಸಂಭಾವನೆ ಮೀಸಲು - ನೌಕರರು ಅಥವಾ ನಿರ್ವಹಣೆಗೆ ಲಾಭಾಂಶಗಳನ್ನು ಪಾವತಿಸುವ ನಂತರ ಬಳಸಲಾಗುತ್ತದೆ. ಅನುವಾದ ಮೀಸಲು - ವಿವಿಧ ವರದಿ ಕರೆನ್ಸಿಗಳ ಘಟಕಗಳು ಬಲವರ್ಧನೆ ಅವಧಿಯಲ್ಲಿ ಉದ್ಭವಿಸುತ್ತದೆ. ವಿವಿಧ ರೀತಿಯ ಮೀಸಲುಗಳು.....

  1. ಸಾಮಾನ್ಯಾ ಮೀಸಲು
  2. ನಿರ್ದಿಷ್ಟ ಮೀಸಲು
  3. ಇಳಿನಿಧಿ ಅಥವಾ ಕರಗು ನಿಧಿ
  4. ಗುಪ್ತ ಮೀಸಲು
  5. ಬಂಡವಾಳ ಮೀಸಲು
  6. ಮೀಸಲು ನಿಧಿ
  7. ಅಭಿವೃದ್ಧಿ ನಿಧಿ

ಸಾಮಾನ್ಯಾ ಮೀಸಲು[] ಇದನ್ನು ಲಾಭಾಂಶದಿಂದ ರೂಪಿಸಲಾಗುತ್ತದೆ.ಸಂಸ್ಥೆಯ .ಬಂಡವಾಳವನ್ನು ಬಲಗೊಳಿಸಲು ಇದನ್ನು ಸ್ಥಾಪಿಸಲಾಗುತ್ತದೆ.ಅಂದರೆ ಈ .ಮೀಸಲನ್ನು ಸ್ಥಾಪಿಸಿ,ದಿನ ನಿತ್ಯಕ್ಕೆ ಬೇಕಾಗುವ .ಬಂಡವಾಳ ಅಥವಾ ಚರ ಬಂಡವಾಳವನ್ನು ಹೆಚ್ಚಿ

ಇದರ ಉದ್ದೇಶಗಳೆಂದರೆ ೧.ವ್ಯವಹಾರ ದ್ರವ್ಯ ಸಂಪತ್ತನ್ನು ಹೆಚ್ಚಿಸುವುದು ಮತ್ತು ಸಂಸ್ದೆಯು ಮಾರುಕಟ್ಟೆಯಲ್ಲಿ ದಿಟ್ಟತನದಿಂದ ಇರುವಂತೆ ಮಾಡುವುದು.೨.ಚರ ಬಂಡವಾಳವನ್ನು ಪಡೆಯಲು ಹೆಚ್ಚಾಗಿ ಸಾಲವನ್ನು ಮಾಡದೇ ಲಾಭಾಂಶವನ್ನು ಪುನರ್ ಸಂಚಯನ ಮಾಡಿ ಚರ ಬಂಡವಾಳವನ್ನು ಒದಗಿಸುವುದು.೩.ಯಾವುದೇ ಗೊತ್ತಿಲ್ಲದ ಅಥವಾ ಮುಂದೆ ಉಂಟಾಗಬಹುದಾದ ಜವಾಬ್ದಾರಿಯನ್ನು ಪೂರೈಸುವುದು.೪.ಯಾವುದೇ ವರ್ಷದಲ್ಲಿ ಲಾಭ ಬರದಿದ್ದಾಗ ಮೀಸಲನ್ನು ಉಪಯೋಗಿಸಿ ಲಾಭ ಹಂಚುವುದು.೫.ಯಾವುದೇ ವರ್ಷದಲ್ಲಿ ಅತಿ ಹೆಚ್ಚು ಲಾಭ ಬಂದಾಗ ಹೆಚ್ಚು ವರಿ ಲಾಭವನ್ನು ."ಗುಪ್ತ ನಿಧಿ" ಯಾಗಿ ಮೀಸಲು ಲೆಕ್ಕದಲ್ಲಿಡುವುದು ಇತ್ಯಾದಿ.

ನಿರ್ದಿಷ್ಟ ಮೀಸಲು

ಈ ಮೀಸಲನ್ನು ಒಂದು ನಿರ್ದಿಷ್ಟ ಉದ್ದೇಶೆಕ್ಕಾಗಿ ತೆಗೆದಿಡಲಾಗುತ್ತದೆ.ಮುಂದಿನ ದಿನಗಳಲ್ಲಿ ಒಂದು ಜವಾಬ್ದಾರಿ ಇಂತಿಷ್ಟು ಒದಹಬಹುದೆಂದು ಅಂದಾಜು ಮಾಡಲಾಗುತ್ತದೆ,ಈ ಅಂದಾಜನ್ನು ಆಧರಿಸಿಪ್ರತಿವರ್ಷ್ ಒಂದು ನಿರ್ಧರಿಸಿದ ದರದ ಪ್ರಮಾಣದಲ್ಲಿ ಮೀಸಲನ್ನು ಕಾದಿರಿಸಲಾಗುತ್ತದೆ.ಈ ಮೀಸಲನ್ನು ಲಾಭ-ನಷ್ಟ ಖಾತೆಗೆ ಋಣಿಸಲಾಗುತ್ತದೆ.ಆದುದರಿಂದ ಇದು ಸಾಮಾನ್ಯ ಮೀಸಲಿನಂತೆ ಲಾಂಭಾಂಶದ ಭಾಗವಾಗುವುದಿಲ್ಲ.ಲಾಭವನ್ನು ನಿರ್ಧರಿಸುವ ಮೊದಲೇ ತೆಗಿದಿಡ ಬೇಕಾದ ಒಂದು ನಿಧಿ.೧.ಸವಕಳಿ ನಿಧಿ,೨.ನವೀಕರಣ ನಿಧಿ ೩.ಹೊರ ನಿಂತ ಸಂಬಳ,ಆದಾಯ ತೆರಿಗೆ,ಕೂಲಿ ಮೊದಲಾದ ವೆಚ್ಚಗಳನ್ನು ಭರಿಸಲು ತೆಗೆದಿಟ್ಟ ನಿಧಿಗಳು ೪.ಸಂಶಾಯತ್ಮಕ ಸಾಲಕ್ಕೆ ಮಾಡಿದ ಅವಕಾಶಗಳು ೫.ನ್ಯಾಯಾಲಯದ ವ್ಯವಹಾರದಿಂದ ಒದಗಬಹುದಾದ ಜವಾಬ್ದಾರಿಗಳಿಗೆ ಕಾದರಿಸಿದ ನಿಧಿ

ಉನ್ನತ ಶಿಕ್ಷಣದಲ್ಲಿ ಮೀಸಲು ಯಾಕೆ? ರಾಷ್ಟ್ರೀಯ ಹಿತಾಸಕ್ತಿಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ಬಗೆಯ ಮೀಸಲಾತಿಯನ್ನು ತೊಡೆದುಹಾಕುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ. ಸ್ವಾತಂತ್ರ್ಯ ಬಂದ 68 ವರ್ಷಗಳ ಬಳಿಕವೂ ಕೆಲವರು ಅನುಭವಿಸುತ್ತಿರುವ ಸೌಭಾಗ್ಯ ಬದಲಾಗಿಲ್ಲ. ರಾಷ್ಟ್ರದ ಹಿತಾಸಕ್ತಿಯ ರಕ್ಷಣೆಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ಬಗೆಯ ಮೀಸಲು ರದ್ದು ಮಾಡುವುದು ಅಗತ್ಯ. ಈ ಕುರಿತು ಕೇಂದ್ರ ವಸ್ತುನಿಷ್ಠವಾಗಿಯೋಚಿಸಿ ಪರಿಣಾಮಕಾರಿ ಕ್ರಮ ಕೈಗೊಳ್ಳ ಬೇಕು. ಸೂಪರ್ ಸ್ಪೆಶಾಲಿಟಿ ಕೋರ್ಸ್ ಗಳಿಗೆ ಮೆರಿಟ್ ಮಾತ್ರವೇ ಮಾನದಂಡವಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಲವಾರು ಬಾರಿ ಹೇಳಿದ್ದಾಗ್ಯೂ, ಮೀಸಲಾತಿಯು ಪ್ರತಿಭೆಯ ಮೇಲೆ ಹಿಡಿತ ಸಾಧಿಸಿದೆ ಎಂದು ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಪಿ.ಸಿ.ಪಂತ್ ಅವರಿದ್ದ ಪೀಠ ಹೇಳಿದೆ. ಈ ಕುರಿತು ವಿಚಾರಣಾ ಕೋರ್ಟ್ 27 ವರ್ಷಗಳ ಹಿಂದೆ ನೀಡಿದ್ದ ತೀರ್ಪಿನ ಸಂದೇಶವ ನ್ನೇ ಇಂದೂ ತಾನು ಕೊಡಬಯಸುತ್ತೇನೆ ಎಂದು ಕೋರ್ಟ್ ಹೇಳಿದೆ.[]

1988ರಲ್ಲಿ ಈ ಕುರಿತು 2 ತೀರ್ಪುಗಳನ್ನು ಕೋರ್ಟ್ ನೀಡಿತ್ತು. ವೈದ್ಯಕೀಯ ಸಂಸ್ಥೆಗಳಲ್ಲಿ ಸೂಪರ್ ಸ್ಪೆಶಾಲಿಟಿ ಕೋರ್ಸ್‍ಗಳಿಗೆ ಮೀಸಲು ಇರಬಾರದು ಎಂದು ಹೇಳಲಾಗಿತ್ತು. ಆಂಧ್ರ, ತೆಲಂಗಾಣ, ತಮಿಳುನಾಡುಗಳ ಕೆಲ ವೈದ್ಯ ಕೀಯ ಸೂಪರ್ ಸ್ಪೆಶಾಲಿಟಿ ಕೋರ್ಸ್‍ಗಳಿಗೆ ಸೇರ್ಪಡೆಯ ಅರ್ಹತೆಗೆ ಈ ರಾಜ್ಯಗಳ ಕಾಯಂ ನಿವಾಸಿಯಾಗಿರುವುದು ಅಗತ್ಯ ಎಂಬ ನಿಯಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಗಳ ವಿಚಾರಣೆ ವೇಳೆ ಕೋರ್ಟ್ ಈ ಮಾತುಗಳನ್ನು ಹೇಳಿದೆ. ತಮಿಳುನಾಡಿನಲ್ಲಿ ಈ ನಿಯಮ ಸಿಂಧುವೇ ಎಂದು ಪರಿಶೀಲಿಸಲುಕೋರ್ಟ್ ಒಪ್ಪಿದೆ. ಆದರೆ ಆಂಧ್ರ, ತೆಲಂಗಾಣ ಗಳಿಗೆ ವಿನಾಯಿತಿ ನೀಡುವುದಾಗಿ ಹೇಳಿದೆ. ಉನ್ನತ ಶಿಕ್ಷಣದಲ್ಲಿ ಮೀಸಲು ರದ್ದುಗೊಳಿಸಿ

ಮೀಸಲಾತಿ ವ್ಯವಸ್ಥೆಯ ಬಗ್ಗೆ ಪುನರ್‌ಪರಿಶೀಲನೆ ನಡೆಸಬೇಕಾಗಿದೆ ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿ ತಣ್ಣಗಾದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಕೂಡ ಮೀಸಲಾತಿ ಬಗ್ಗೆ ಮಾತನಾಡಿದೆ. ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ರೀತಿಯ ಮೀಸಲಾತಿಯನ್ನು ರದ್ದುಗೊಳಿಸಬೇಕು. ಈ ಸಂಬಂಧ ಕೇಂದ್ರ ಸರಕಾರ ಪರಿಣಾಮಕಾರಿ ಹೆಜ್ಜೆ ಇಡಬೇಕು ಎಂದು ಸಲಹೆ ಮಾಡಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 68 ವರ್ಷಗಳು ಕಳೆದರೂ ಕೆಲವೊಂದು ಸವಲತ್ತುಗಳು ಮಾತ್ರ ಬದಲಾವಣೆಯಾಗಿಲ್ಲ. ಉನ್ನತ ಶಿಕ್ಷಣ ಕೋರ್ಸುಗಳಲ್ಲಿ ಮೆರಿಟ್‌ವೊಂದೇ ಪ್ರಾಥಮಿಕ ಮಾನದಂಡವಾಗಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಹಲವಾರು ಬಾರಿ ಸೂಚನೆ ನೀಡಿದ್ದರೂ ತಳಮಟ್ಟದಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಪ್ರತಿಭೆಯನ್ನು ಮೀಸಲಾತಿಯೇ ಕೆಲವೊಂದು ಪ್ರಕರಣಗಳಲ್ಲಿ ಹಿಂದೆ ನೂಕುತ್ತಿದೆ ಎಂದು ನ್ಯಾ ದೀಪಕ್‌ ಮಿಶ್ರಾ ಹಾಗೂ ನ್ಯಾ| ಪಿ.ಸಿ. ಪಂತ್‌ ಅವರಿದ್ದ ಪೀಠ ಬೇಸರ ವ್ಯಕ್ತಪಡಿಸಿದೆ. ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲು, ತನ್ಮೂಲಕ ದೇಶದಲ್ಲಿ ಜನತೆಗೆ ಲಭ್ಯವಿರುವ ವೈದ್ಯ ವಿಜ್ಞಾನದ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಮೀಸಲಾತಿ ಇರಕೂಡದು ಎಂದು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸೂಪರ್‌ಸ್ಪೆಷಾಲಿಟಿ ಕೋರ್ಸ್‌ ಗಳಲ್ಲಿನ ಮೀಸಲಾತಿಗೆ ಸಂಬಂಧಿಸಿದಂತೆ 1988ರಲ್ಲೇ ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಂಭೀರವಾಗಿ ಪರಿಗಣಿಸಿ, ವಿಳಂಬ ಮಾಡದೇ ಸೂಕ್ತ ಮಾರ್ಗಸೂಚಿಗಳನ್ನು ರಚಿಸಬೇಕು ಎಂದೂ ತಿಳಿಸಿತ್ತು. 27 ವರ್ಷಗಳು ಕಳೆದರೂ ಇದೇ ಸಂದೇಶವನ್ನು ನಾವೂ ಕೂಡ ನೀಡಬೇಕಾಗಿದೆ ಎಂದು ಪೀಠ ಹೇಳಿತು. ಉದಾಹರಣೆಹಗಳು; ಶಾಸಕರ 730 ಕೋಟಿ ಅಭಿವೃದ್ಧಿ ನಿಧಿ ಇನ್ನೂ ಬಳಕೆಯಾಗಿಲ್ಲ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆ ಮಾಡುವಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಆಗುತ್ತಿರುವ ವಿಳಂಬ ಮತ್ತು ಕಾಮಗಾರಿ ಪ್ರಗತಿ ಕುಂಠಿತವಾಗುತ್ತಿರುವ ವಿಚಾರ ಗುರುವಾರ ಎಲ್ಲಾ ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿಗಳು ವಿಳಂಬ ಮಾಡುತ್ತಿರುವುದರಿಂದ 730 ಕೋಟಿ ರೂ. ಬಳಕೆಯಾಗದೆ ಉಳಿದುಕೊಂಡಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡುತ್ತಿದ್ದರೂ ಅಲ್ಲಿಂದ ಬಿಡುಗಡೆಯಾಗುವುದು ವಿಳಂಬವಾಗುತ್ತಿದೆ. ಹೀಗಾಗಿ ಅನುದಾನ ಬಳಕೆಯಾಗದೆ ಉಳಿಯುತ್ತಿದೆ ಎಂದು ಸದಸ್ಯರು ಪಕ್ಷಬೇಧ ಮರೆತು ಆರೋಪಿಸಿದರು.

"ಈ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಶೀಘ್ರ ಅನುದಾನ ಬಿಡುಗಡೆ ಮಾಡಲು ಸೂಚಿಸಲಾಗುವುದು. ಅಲ್ಲದೆ, ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಹಣ ಬಿಡುಗಡೆ ವಿಳಂಬವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಸರ್ಕಾರದ ಪರವಾಗಿ ಸಭಾನಾಯಕ ಎಸ್‌.ಆರ್‌.ಪಾಟೀಲ್‌ ಭರವಸೆ ನೀಡಿದರು.

ವಿಶೇಷ ನಿಯಮದಡಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯೆ ಮೋಟಮ್ಮ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ತಾವು ಮಂಡ್ಯ, ಹಾಸನ ಮತ್ತು ಬೆಂಗಳೂರು ನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಲವು ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಿದ್ದೆ. ಅದರಂತೆ ನೋಡಲ್‌ ಅಧಿಕಾರಿಯಾದ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಈ ಮೂರೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದರು. ಇದಾಗಿ ಒಂದು ವರ್ಷ ಕಳೆದರೂ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದರು. ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಕೆ.ಬಿ.ಶಾಣಪ್ಪ, ತಾವು ರಾಜ್ಯಸಭೆ ಸದಸ್ಯರಾಗಿದ್ದ ವೇಳೆ ಕೋಲಾರ ಜಿಲ್ಲೆಯ ಶಾಲೆಯೊಂದಕ್ಕೆ ಹಣ ಮಂಜೂರು ಮಾಡಿದ್ದೆ. ಆದರೆ, ಕೋಲಾರ ಜಿಲ್ಲಾಧಿಕಾರಿಗಳು ಇನ್ನೂ ಹಣಬಿಡುಗಡೆ ಮಾಡಿಲ್ಲ ಎಂದರು. ಅಷ್ಟರಲ್ಲಿ ಅನೇಕ ಸದಸ್ಯರು ಎದ್ದುನಿಂತು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಹಣ ಬಿಡುಗಡೆಯಾಗುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಡಿಸಿಟ್ಟರು.

730 ಕೋಟಿ ರೂ. ಬಳಕೆಯಾಗಿಲ್ಲ- ಕೆಎಸ್‌ಈ: "ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಪ್ರತಿ ವರ್ಷ ಒಬ್ಬ ಶಾಸಕನಿಗೆ 2 ಕೋಟಿ ರೂ. ಬಿಡುಗಡೆಯಾಗುತ್ತದೆ. ಆದರೆ, ಈ ಎಲ್ಲಾ ಮೊತ್ತಕ್ಕೆ ಒಂದೇ ಬಾರಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ನಮಗೆ ನಿರ್ದೇಶನ ಬರುತ್ತಿದೆ' ಎಂದು ಅನೇಕ ಸದಸ್ಯರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, "ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಅದನ್ನು ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳು ವಿಳಂಬ ಮಾಡುತ್ತಿರುವುದರಿಂದ 730 ಕೋಟಿ ರೂ. ಬಳಕೆಯಾಗದೆ ಉಳಿದುಕೊಂಡಿದೆ. ಆದ್ದರಿಂದ ಇದಕ್ಕೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಬಹುಪಯೋಗಿ ಸಭಾಭವನ ನಿರ್ಮಿಸಲೆಂದು ನಿರ್ಮಿತಿ ಕೇಂದ್ರಕ್ಕೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ಕಮಿಷನ್‌ಗಾಗಿ ಉಪಗುತ್ತಿಗೆ ನೀಡದೆ ನಿರ್ಮಿತಿ ಕೇಂದ್ರದಿಂದಲೇ ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ಚಂದ್ರಶೇಖರ್‌ ಎಂಬುವರಿಗೆ ಸೂಚಿಸಿದ್ದೆ. ಇದಾಗಿ ಎಂಟು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಅಧಿಕಾರಿ ಚಂದ್ರಶೇಖರ್‌ ಕೂಡ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಪರಿಶೀಲನಾ ಸಭೆ ಕರೆಯಲಾಗುವುದು: ಸದಸ್ಯರ ಆರೋಪಿಗಳಿಗೆ ಉತ್ತರಿಸಿದ ಸಭಾನಾಯಕ ಎಸ್‌.ಆರ್‌.ಪಾಟೀಲ್‌,ಸದಸ್ಯರಾದ ಮೋಟಮ್ಮ ಮತ್ತು ಕೆ.ಬಿ.ಶಾಣಪ್ಪ ಅವರು ನೀಡಿರುವ ಮಾಹಿತಿಯಂತೆ ತಕ್ಷಣ ಸಂಬಂಧಿಸಿದ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕೇಳಲಾಗುವುದು ಮತ್ತು ಹಣ ಬಿಡುಗಡೆಗೆ ಆದೇಶಿಸಲಾಗುವುದು. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆ ಕುರಿತಂತೆ ಪರೀಶೀಲನಾ ಸಭೆ ಕರೆಯಲಾಗುವುದು. ಅಲ್ಲದೆ, ಎಲ್ಲಾ ಜಿಲ್ಲಾಧಿಕಾರಿಗಳನ್ನು ಇದಕ್ಕೆ ಜವಾಬ್ದಾರರನ್ನಾಗಿ ಮಾಡಿ ಸುತ್ತೋಲೆ ಹೊರಡಿಸಲಾಗುವುದು. ಹಣ ಬಿಡುಗಡೆ ವಿಳಂಬವಾದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಉಲ್ಲೇಖಗಳು

ಬದಲಾಯಿಸಿ
  1. http://www.udayavani.com/kannada/news/%E0%B2%B0%E0%B2%BE%E0%B2%9C%E0%B3%8D%E0%B2%AF/87007/%E0%B2%B6%E0%B2%BE%E0%B2%B8%E0%B2%95%E0%B2%B0-730-%E0%B2%95%E0%B3%8B%E0%B2%9F%E0%B2%BF-%E0%B2%85%E0%B2%AD%E0%B2%BF%E0%B2%B5%E0%B3%83%E0%B2%A6%E0%B3%8D%E0%B2%A7%E0%B2%BF-%E0%B2%A8%E0%B2%BF%E0%B2%A7%E0%B2%BF-%E0%B2%87%E0%B2%A8%E0%B3%8D%E0%B2%A8%E0%B3%82-%E0%B2%AC%E0%B2%B3%E0%B2%95%E0%B3%86%E0%B2%AF%E0%B2%BE%E0%B2%97%E0%B2%BF%E0%B2%B2%E0%B3%8D%E0%B2%B2
  2. "ಆರ್ಕೈವ್ ನಕಲು". Archived from the original on 2015-05-31. Retrieved 2016-01-21.


"https://kn.wikipedia.org/w/index.php?title=ಮೀಸಲು&oldid=1218232" ಇಂದ ಪಡೆಯಲ್ಪಟ್ಟಿದೆ