ಬೆಳ್ಳಿ, ಚಿನ್ನ, ಹಾಗೂ ತಾಮ್ರದ ಆಭರಣಗಳನ್ನು ಬಣ್ಣದ ಚಿತ್ತಾರಗಳಿಂದ ಅಲಂಕರಿಸುವ ಪುರಾತನ ಭಾರತೀಯ ಕರಕುಶಲ ಕಲೆಗೆ ’ಮೀನಾಕಾರಿ' ಎನ್ನುತಾರೆ. ಈ ಕಲೆಗೆ 'ಮೊಘಲರ ಕಾಲ'ದಲ್ಲಿ ಹೆಚ್ಚು ಪ್ರೋತ್ಸಾಹ ದೊರೆಯಿತು. ಅವರೇ ಇದನ್ನು ಪ್ರಸಿದ್ಧಿಗೆ ತಂದರು ಎಂದು ತಿಳಿದುಬರುತ್ತದೆ. 'ಅಂಬೇರ್' ನ ದೊರೆ, 'ರಾಜಾ ಮಾನ್ ಸಿಂಗ್' ೧೭ ನೆಯ ಶತಮಾನದಲ್ಲಿಈ ಕಲಾ ಪ್ರಕಾರವನ್ನು ರಾಜಾಸ್ಥಾನಕ್ಕೆ ತಂದನು. ಲಾಹೋರ್ ನಿಂದ ನುರಿತ ಮೀನಾಕಾರಿ ಚಿತ್ರಾಕಾರರನ್ನು ಜೈಪುರಕ್ಕೆ ಕರೆಸಿಕೊಂಡು ಈ ಕಲೆಯನ್ನು ವ್ಯಾಪಕವಾಗಿ ಬೆಳೆಸಿ, ಅಭಿವೃದ್ಧಿಪಡೆಸಲಾಯಿತು. ೧೮ ನೆಯ ಸಹ್ತಮಾನದಲ್ಲಿ 'ವಾರಣಾಸಿ' ನಗರದಲ್ಲೂ ವಿಶೇಷ ಮೀನಾಕಾರಿ ಕಲೆ ಬೆಳೆಯಿತು. ಮೀನಾಕಾರಿ ಚಿತ್ರಕಾರರು ಆಭರಣಗಳ ಮೇಲೆ ಕೆಂಪು, ಹಸಿರು, ಬಿಳಿಬಣ್ಣದ ಚಿತ್ತಾರದ ವಿನ್ಯಾಸಗಳನ್ನು ಬೆರೆಯುತ್ತಾರೆ. ಇಂತಹ ರಂಗು-ರಂಗಿನ ಚಿತ್ತಾರಗಳು ಅಮೂಲ್ಯವಾದ ಹರಳುಗಳ ತರಹ 'ಥಳಥಳಿಸುತ್ತವೆ'. ಆಭರಣಗಳಿಗೆ ವಿಶೇಷ ಸೌಂದರ್ಯ, ಹಾಗೂ ಮೆರುಗು ಬರುತ್ತದೆ.[][][][][]

ಚಿತ್ರ:MEENAKARI.jpg
'ಮೀನಾಕಾರಿ ಯ ಒಂದು ಉದಾಹರಣೆ'

ಉಲ್ಲೇಖ

ಬದಲಾಯಿಸಿ