೫೭ ವರ್ಷ ಪ್ರಾಯದ ಹೆಸರಾಂತ ಇಂಗ್ಲೀಷ್ ಹಾಸ್ಯ ನಟ, 'ರೋವನ್ ಅಟ್ಕಿನ್ಸನ್' ರವರು, ವಿಶ್ವದಾದ್ಯಂತ 'ಮಿ. ಬೀನ್' ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಜನಪ್ರಿಯತೆಯ ಶಿಖರದಲ್ಲಿದ್ದಾರೆ. ಈಗ ಅದೇ ತರಹದ ಪಾತ್ರಗಳನ್ನು ಮತ್ತೆ ಮತ್ತೆ ಮಾಡಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ಅವರ ಹಿಂದಿನ ನಗೆಯ ಪಾತ್ರಗಳನ್ನು ನೋಡಲು ಆಸಕ್ತಿಯಿದ್ದರೆ, 'ಹಳೆಯ ಡಿ.ವಿ.ಡಿ' ಗಳನ್ನು ನೋಡಿಯೇ ಖುಷಿಪಡಬೇಕಾಗುತ್ತದೆ. ಇದರಿಂದ ಇದುವರೆಗೆ ನಿರಂತರವಾಗಿ ನಡೆದುಕೊಂಡು ಬಂದ 'ಮಿ.ಬೀನ್ ಶ್ರೇಣಿ' ಮುರಿದಂತಾಗಿದೆ. '೨೦೧೨ ರ ಲಂಡನ್ ಒಲಂಪಿಕ್ಸ್ ಉದ್ಘಾಟನಾ ಸಮಾರಂಭ'ದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಅವರಿಗೆ ಈಗ ಗಂಭೀರ ಪಾತ್ರಗಳಲ್ಲಿ ಅಭಿನಯಿಸುವ ಆಶೆಯಾಗುತ್ತಿದೆ ಎಂಬುದಾಗಿ, 'ಡೈಲಿ ಸ್ಟಾರ್ ಆನ್ ಲೈನ್ ಪತ್ರಿಕೆ'ಯಲ್ಲಿ ಅವರು ಹೇಳಿ ತಮ್ಮ ಸ್ಪಷ್ಟ ನಿಲವು ಹಾಗೂ, ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮಿ. ಬೀನ್ ಮತ್ತು ಟೆಡ್ಡಿ

ಸನ್. ೧೯೯೦ ರಲ್ಲಿ

ಬದಲಾಯಿಸಿ

ಸನ್. ೧೯೯೦ ರಲ್ಲಿ ಅವರು 'ಮಿ.ಬೀನ್' ಎಂಬ ಹಾಸ್ಯ ಪ್ರಕೃತಿಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡು ಸುಮಾರು ಅದೇ ತರಹದ ನಟನೆಗಳ ಮೂಲಕ ೫ ವರ್ಷಗಳ ಕಾಲ ಟೆಲೆವಿಶನ್ ಸರಣಿಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದರು. ಇದೇ ಪಾತ್ರದ ರೂಪದಲ್ಲಿ ೨ ಚಲನ ಚಿತ್ರಗಳಲ್ಲೂ ಅಭಿನಯಿಸಿ ಪರದೆಯಮೇಲೆ ಕಾಣಿಸಿಕೊಂಡು ಅತ್ಯಂತ ಯಶಸ್ವಿಯಾದರು. ಮಿ. ಬೀನ್ ಪಾತ್ರ, ಇದುವರೆವಿಗೂ ಮಕ್ಕಳ ಹಾಗೂ ಅಬಾಲವೃದ್ಧರೆಂಬ ಭೇದವಿಲ್ಲದೆ ಇಲ್ಲರ ಮನರಂಜನೆ ಮಾಡುತ್ತಿತ್ತು. 'ಬೀನ್ ನಗೆ ಚಿತ್ರ'ದ ಇಲ್ಲವೇ ಧಾರಾವಾಹಿಗಳ ನಿರ್ಮಾಪಕರಿಗೆ ಹಣದ ಮಳೆ ಸುರಿಯುತ್ತಿತ್ತು. ಬಹಳ ವರ್ಷಗಳ ಬಳಿಕ ಅದೆ ತರಹದ ಹಾವಭಾವವಿರುವ ನಟನೆ ಅವರಿಗೆ ಮತ್ತು ಹಲವು ವೀಕ್ಷಕರಿಗೂ ಬೇಸರತಂದಿದೆ. ೫೭ ವರ್ಷದ ಬಳಿಕ ಒಳ್ಳೆಯ ವಯಸ್ಸಿಗೆ ತಕ್ಕಂತಹ ಪಾತ್ರಗಳನ್ನು ತೆಗೆದುಕೊಳ್ಳುವುದರ ಆವಶ್ಯಕತೆ 'ಆಟ್ಕಿನ್ಸನ್' ರವರ ತಲೆಗೆ ಬಂದಿದೆ. 'ಹಾಸ್ಯ ಹೋಗಿ ತಾವೊಬ್ಬ ಹಾಸ್ಯಾಸ್ಪದ ವ್ಯಕ್ತಿಯಾಗುವುದು ಅವರಿಗೆ ಸರಿಬರುತ್ತಿಲ್ಲ'. 'ಪ್ರೇಕ್ಷಕರನ್ನು ನಗಿಸುವ ಪ್ರಕ್ರಿಯೆಯಲ್ಲಿ ತಾವು ನಗೆಪಾಟಲಾಗಬಾರದು', ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ ಅವರು. ಕಾಲದ ಇತಿಮಿತಿಗಳನ್ನು ಎಲ್ಲರೂ ಕಂಡುಕೊಳ್ಳಬೇಕು. ವಯಸ್ಸಿಗೆ ತಕ್ಕ ಮರ್ಯಾದೆ ಇದೆ. ಅದನ್ನು ಒಪ್ಪಬೇಕು. ಇದು ಇತ್ತೀಚಿನ ದಿನಗಳಲ್ಲಿ 'ಆಟ್ಕಿನ್ಸನ್' ರವರ ಮಾತಿನ ಧಾಟಿಯಾಗಿದೆ.

ಟೆಡ್ಡಿ ಎನ್ನುವ ಪ್ರಿಯ, ಪುಟಾಣಿ ಬೊಂಬೆ

ಬದಲಾಯಿಸಿ

'ಟೆಡ್ಡಿ ಬಿಯರ್', ಬೀನ್ ರವರ ಪ್ರೀತಿಯ 'ಟೆಡ್ಡಿ ಕರಡಿ'. ಅವರ ಆಪ್ತ ಸ್ನೇಹಿತರಲ್ಲೊಂದು. ಈ ಪುಟಾಣಿ ಟೆಡ್ಡಿ ಕರಡಿ ಮರಿ, ಕಣ್ಣುಗಳು ಶರ್ಟಿನ ಗುಂಡಿಯಂತೆ ಇವೆ. ತುಟಿಗಳು ಬೇರೆಯ ತರಹ, ಪೂರ್ತಿ ಶರೀರ, ಹರುಕು-ಮುರುಕುಗಳ ಸಂಗಮ. ಬೊಂಬೆಯ ರೂಪದ ಟೆಡ್ಡಿಯನ್ನು ನೋಡಿದಾಗ 'ಮಿ.ಬೀನ್' ಅದೊಂದು ಜೀವಂತ ಪ್ರಾಣಿಯೇನೋ ಅನ್ನುವ ತರಹ ಅದರ ಜೊತೆ ಮಾತುಕತೆಯಾಡುತ್ತಿರುತ್ತಾರೆ. ಕೆಲವುವೇಳೆ ಅವರ ಟೆಡ್ಡಿಯನ್ನು 'ಹಿಪ್ನೊಟೈಸ್' ಮಾಡಿ ತಮ್ಮ ಬೆರಳುಗಳನ್ನು ತೋರಿಸಿದಾಗ' ದರ ತಲೆ' ಹಿಂದಕ್ಕೆ ವಾಲುತ್ತದೆ. ಅದು ನಿದ್ರೆಗೆ ಒಳಗಾದಂತೆ ಅವರಿಗನ್ನಿಸಿ ಪ್ರೇಕ್ಷಕರನ್ನೂ ಅದೇ ತರಹದ ವ್ಯವಸ್ಥೆಗೆ ಕೊಂಡೊಯ್ಯುತ್ತಾರೆ. ಮತ್ತೆ ಅದೇ ಬೆರಳುಗಳನ್ನು ತೋರಿಸಿ' ತಮ್ಮ ಪುಟಾಣಿ ಕರಡಿಗೆ ಆದೇಶ ನೀಡುತ್ತಾರೆ. ಅದಕ್ಕೆ 'ಕ್ರಿಸ್ಮಸ್ ಗ್ರೀಟಿಂಗ್ಸ್ 'ಕೊಳ್ಳುತ್ತಾರೆ. ಇಲ್ಲವೇ ಬೆಳಗಿನ ಜಾವದಲ್ಲಿ ಅದರ ನಿದ್ರೆಗೆ ಭಂಗಬರದಂತೆ ನಿಗಾ ವಹಿಸುತ್ತಾರೆ. ತಮ್ಮ ಯಾವುದೇ ಯೋಜನೆಗಳಿಗೆ ಅದರ ನೆರವು, ಸಹಕಾರ ಬಳಸುತ್ತಾರೆ. ಆದರೆ ಆಪತ್ಕಾಲದಲ್ಲಿ ತಮ್ಮ ಪ್ರಿಯ ಟೆಡ್ಡಿಯನ್ನು 'ಡಿಶ್ ಕ್ಲಾತ್' ಇಲ್ಲವೇ 'ಪೇಂಟ್ ಬ್ರಶ್' ನ ತರಹ ಬಳಸುತ್ತಾರೆ.

"https://kn.wikipedia.org/w/index.php?title=ಮಿ._ಬೀನ್&oldid=684130" ಇಂದ ಪಡೆಯಲ್ಪಟ್ಟಿದೆ