ಮಿಸ್ಸೂರಿ ರಾಜ್ಯದ ಜಫರ್ಸನ್ ಸಿಟಿ

ಅಮೆರಿಕದ ಹಿಂದಿನ ಚರಿತ್ರೆ ಅತಿಗಹನವೂ ಸ್ಫೂರ್ತಿದಾಯಕವೂ ಆಗಿದೆ. ಯೂರೋಪಿನಲ್ಲಿನ ಚರ್ಚಿನದಬ್ಬಾಳಿಕೆ ದರ್ಪಯುತವಾದಆಡಳಿತ, ಹಲವರನ್ನು [ಪಿಲ್ಗ್ರಿಮ್ ಫಾದರ್ಸ್] ದೇಶಬಿಟ್ಟು ಹೊಸಪ್ರದೇಶವನ್ನು ಅರಸಿಕೊಂಡು ಹೋಗಲು ಪ್ರೇರಣೆನೀಡಿತು. ಬಹುಶಃ ಹಾಗೆ ವಲಸೆಹೋದಾಗ ಸಿಕ್ಕ ವಿಶಾಲ, ಸಂಪದ್ಭರಿತ ಸ್ಥಾನಗಳಲ್ಲಿ ಅದ್ವಿತೀಯವಾದದ್ದು, ಆಗಾಗಲೇ ಹೆಸರುಮಾಡಿದ್ದ ಹೊಸಖಂಡ, ಅಮೆರಿಕ. ಈ ವಿಶಾಲಭೂಭಾಗದ ಒಡೆತನವನ್ನು ನಿರ್ವಹಿಸಲುಮಾಡಿದ ಒಪ್ಪಂದಗಳು, ಸಮಝಾಯಿಶಿಗಳು, ಯುದ್ಧಗಳು, ಹೊಸ-ಹೊಸ ನಿರ್ಮಾಣಕಾರ್ಯಗಳನ್ನು ಓದುವುದು ಒಂದು ಅನೀರ್ವಚನೀಯ ಸಂತೋಷವನ್ನು ತರುತ್ತದೆ. ಇಂತಹ ಕಾರ್ಯಗಳಲ್ಲಿ ಮುಂದಾಳತ್ವವನ್ನು ವಹಿಸಿಕೊಂಡು ಗಮನಾರ್ಹವಾದ ಸಾಧನೆಮಾಡಿದವರಲ್ಲಿ ದೇಶಭಕ್ತ, ದೇಶನಿರ್ಮಾಪಕ, ’ಥಾಮಸ್ ಜೆಫರ್ಸನ್,' ಒಬ್ಬರು. ಮಿಸ್ಸೂರಿ ರಾಜ್ಯದ ರಾಜಧಾನಿಗೆ ಇಟ್ಟಿರುವುದು ಅವರಹೆಸರನ್ನೇ. ಲಾಯರ್ ಆಗಿದ್ದ ಆತ, ಕಟ್ಟಡವಿನ್ಯಾಸಕರ, ಪ್ರತಿಭಾನ್ವಿತಲೇಖಕ, ಅಮೆರಿಕದ ಪ್ರೆಸಿಡೆಂಟ್ ಆದದ್ದು, ಆ ದೇಷದ ಸೌಭಾಗ್ಯವೇಸರಿ. ಲ್ಯೂಸಿಯಾನ ರಾಜ್ಯವನ್ನು ಪ್ರೆಂಚರಿಂದ ಖರೀದಿಸಿ, ಅಮೆರಿಕದೇಶವನ್ನು ವಿಸ್ತರಿಸಿದ ಖ್ಯಾತಿ ಈತನದು. ಅಮೆರಿಕದ ಸ್ವಾತಂತ್ರ್ಯದ, ಹಾಗೂ ಸಂವಿಧಾನದ ಕರಡುಪ್ರತಿಗಳನ್ನು ತಯಾರಿಸುವವರಲ್ಲಿ ಇವರೊಬ್ಬ ಪ್ರಮುಖವ್ಯಕ್ತಿ.

ಚಿತ್ರ:Thomas Jeffersons's Statue.jpg
ಥಾಮಸ್ ಜೆಫರ್ಸನ್ ರ ಮೂರ್ತಿ,ಕ್ಯಾಪಿಟಲ್ ಭವನದ ಮುಂದೆ ಸ್ಥಾಪಿಸಿದ್ದಾರೆ
ಚಿತ್ರ:Capitol Hall.jpg
'ಕ್ಯಾಪಿಟಲ್ ಭವನ'

'ಜಫರ್ಸನ್ ಸಿಟಿ'ಯಲ್ಲಿ ನಿರ್ಮಿತ, 'ಭವ್ಯ ಕ್ಯಾಪಿಟಲ್ ಭವನ'

ಬದಲಾಯಿಸಿ

ಭವನದ ಸೌಂದರ್ಯ, ಹಾಗೂ ಅದರೊಳಗೆ ನಿರ್ಮಿಸಿರುವ 'ವಸ್ತುಸಂಗ್ರಹಾಲಯ' ಅಧ್ಭುತವಾಗಿದೆ. ಇವರ ಗೌರವಾರ್ಥವಾಗಿ, ಮಿಸ್ಸೂರಿರಾಜ್ಯದ ರಾಜಧಾನಿ ಜೆಫರ್ಸನ್ ಸಿಟಿಯಲ್ಲಿ, ಒಂದು ಭವ್ಯ ವಿಶಾಲ ಸ್ಮಾರಕಸೌಧವನ್ನು ಕಟ್ಟಿದ್ದಾರೆ. ಅಲ್ಲಿಯೇ ಕಟ್ಟಡದ ಬದಿಯಲ್ಲಿ [ಹಿಂಭಾಗದಲ್ಲಿ] ಲ್ಯೂಸಿಯಾನ ರಾಜ್ಯವನ್ನು ಕೊಂಡಾಗ ಆದ ಒಪ್ಪಂದಕ್ಕೆ ರುಜುಹಾಕಿದ ದೊಡ್ಡ ಶಿಲ್ಪವಿದೆ.

ಚಿತ್ರ:Missori.jpg
'ಮಿಸ್ಸೂರಿ ತಾಯಿನದಿ'

ಇದೊಂದು ಚಾರಿತ್ರ್ಯಿಕ ಘಟನೆ. ಇದರಿಂದಾಗಿ, ಅಮೆರಿಕ ದೇಶ ವಿಶಾಲವಾಗಿ ಪಶ್ಚಿಮಕ್ಕೆಬೆಳೆಯುತ್ತಾಹೋಯಿತು. ಮಿಸಿಸಿಪ್ಪಿನದಿಯ ಪಶ್ಚಿಮದ ವಿಸ್ತರಣೆ, ಅಮೆರಿಕಕ್ಕೆ ಪ್ರಚಂಡ ಸಂಪನ್ಮೂಲಗಳನ್ನು ಒದಗಿಸುವುದರಮೂಲಕ, ಅದೊಂದು ಅತ್ಯಂತ ಸ್ವಶಕ್ತಿಶಾಲಿಯಾಗಲು ಸಹಾಯಕವಾಯಿತು. ಕಟ್ಟಡ ಎಡ-ಬಲ ಪಾರ್ಶ್ವಗಳಲ್ಲಿ ಮಿಸಿಸಿಪ್ಪಿ ಮಿಸ್ಸೂರಿನದಿಗಳನ್ನು ಪ್ರತಿಬಿಂಬಿಸುವ ಅದ್ಭುತ ಭಾರಿ-ಭಾರಿ ಕಂಚಿನವಿಗ್ರಹಗಳಿವೆ

ಚಿತ್ರ:Missisippi River Statue.jpg
'ಮಿಸಿಸಿಪ್ಪಿ ಜಲದೇವ'
 
ಒಪ್ಪಂದದ ಕಾರ್ಯ

ಅಮೆರಿಕದೇಶದ ಚರಿತ್ರೆ ಅದ್ಭುತವಾದದ್ದು. ಅನೇಕ ಶ್ರೇಷ್ಟರಾಜಕಾರಣಿಗಳು, ವೀರರು, ಇಲ್ಲಿಜನಿಸಿ ಅಮೆರಿಕವನ್ನು ವಿಶಾಲಗೊಳಿಸಿ ಅದರ ಪ್ರಾಕೃತಿಕ ಸಂಪತ್ತನ್ನು ದೇಶವಾಸಿಗಳಿಗೆ ಲಭಿಸಲು ಶ್ರಮಪಟ್ಟಿದ್ದಾರೆ. ಮಿಸ್ಸೂರಿರಾಜ್ಯದ ರಾಜಧಾನಿ,'ಜೆಫರ್ಸನ್ ನಗರ'ದಲ್ಲಿ, ಈಗಕಾಣುವ "ಸ್ಟೇಟ್ ಕ್ಯಾಪಿಟಲ್ ಕಟ್ಟಡ, "ನಾಲ್ಕನೆಯದು. ಸ್ಟೇಟ್ ಕ್ಯಾಪಿಟಲ್ ಕಟ್ಟಡವನ್ನು, "ಸೇಂಟ್ ಚಾರ್ಲ್ಸ್" ನಲ್ಲಿ ಮೊಟ್ಟಮೊದಲು ನಿರ್ಮಿಸಲಾಯಿತು. [೧೮೨೧-೧೮೨೬] ಅದುಅತಿ-ಚಿಕ್ಕದು. ಎರಡನೆಯ ಕಟ್ಟಡ, ಈಗಿನ ಗವರ್ನರ್ ರವರ ಬಂಗಲೆಬಳಿ ನಿರ್ಮಿಸಿದ್ದರು. ೧೮೩೭ ನಲ್ಲಿ ಬೆಂಕಿಯ ಅಪಘಾತದಲ್ಲಿ ನಾಶವಾಯಿತು. ೩ ನೆಯದು ೧೮೪೦ ಯಲ್ಲಿ ಕಟ್ಟಿದ್ದು, ಅದೂ ಸಿಡಿಲಿನ ಅಪಘಾತದಲ್ಲಿ, ಫೆಬ್ರವರಿ ೫, ೧೯೧೧ ರಲ್ಲಿ ಹೇಳಹೆಸರಿಲ್ಲದಂತೆ ನಿರ್ಣಾಮವಾಯಿತು. ೧೯೧೩-೧೯೧೮ ರ ಅವಧಿಯಲ್ಲಿ ಮಿಸ್ಸೂರಿರಾಜ್ಯದ ಸಹೃದಯ ಜನಸ್ತೋಮದ ಸಹಕಾರದಿಂದ ಭವ್ಯವೂ, ವಿಶಾಲವೂಆದ ಕ್ಯಾಪಿಟಲ್ ಭವನ ತಲೆಯೆತ್ತಿತು. ಉದ್ದ ೪೩೭ ಅಡಿ, ಅಗಲ, ೩೦೦ ಅಡಿ,ಹಾಗೂ ನೆಲದಿಂದ ಗೋಪುರದ ಶಿಖರದವರೆಗಿನ ಎತ್ತರ, ೨೬೨ ಅಡಿ. ೩.೫ ಮಿಲಿಯನ್ ಡಾಲರ್ ಹಣವನ್ನು ಸಾರ್ವಜನಿಕರು ಸಂಗ್ರಹಿಸಿ ತಮ್ಮಸಹಕಾರವನ್ನು ಅಭಿವ್ಯಕ್ತಗೊಳಿಸಿದ್ದಾರೆ.

'ಕ್ಯಾಪಿಟಲ್ ಭವನ', ದ ಸುತ್ತಮುತ್ತಲಿರುವ ಪ್ರತಿಮೆಗಳು

ಬದಲಾಯಿಸಿ

"ಕ್ಯಾಪಿಟಲ್ ಭವನ," ದ ಎಡ, ಬಲ ಪಕ್ಕಗಳಲ್ಲಿ, ಅಮೆರಿಕಾದೇಶದ ಮಹಾಜೀವನದಿಗಳಾದ ಮಿಸ್ಸೂರಿ-ಮಿಸಿಸಿಪ್ಪಿನದಿಗಳನ್ನು ಪ್ರತಿಬಿಂಬಿಸುವ, ಕಂಚಿನ ಭಾರಿ-ಭಾರಿ ಪ್ರತಿಮೆಗಳಿವೆ. ಇವಲ್ಲದೆ ಇನ್ನೂ ಹಲವು ವಿಶಿಷ್ಠ ಶಿಲ್ಪಗಳನ್ನು ಭವನದ ಸುತ್ತಲೂ ನಿರ್ಮಿಸಿದ್ದಾರೆ. ಇವೆರಡು ಕಂಚಿನಮೂರ್ತಿಗಳನ್ನೂ, ಮತ್ತು ಸುತ್ತಮುತ್ತಲಿರುವ ಸೊಗಸಾದ ಶಿಲ್ಪಗಳನ್ನು "ರಾಬರ್ಟ್ ಅಟ್ಕಿನ್ " ನಿರ್ಮಿಸಿದ್ದು.

ಮಿಸ್ಸೂರಿನದಿ, ಸ್ತ್ರೀದೇವತೆಯ ಪ್ರತೀಕ

ಬದಲಾಯಿಸಿ

'ಕ್ಯಾಪಿಟಲ್ ಬೃಹತ್ ಭವನ'ದ ಮುಂದಿನ ಮೆಟ್ಟಲಿನಮೇಲೆ ನಿಂತು ನೋಡಿದಾಗ, ಬಲಗಡೆ ಭಾಗದಲ್ಲಿ, 'ಮಿಸ್ಸೂರಿಯಮ್ಮನ ಪುತಳಿ' ಕಾಣಿಸುತ್ತದೆ. ಎಡ ಪಾರ್ಷ್ವದಲ್ಲಿ ಮಿಸಿಸಿಪ್ಪಿ ಜಲದೇವನ ವಿಗ್ರಹ. ಮಧ್ಯಭಾಗದಲ್ಲಿ 'ಥಾಮಸ್ ಜೆಫರ್ಸನ್' ರ ಅತಿ ಎತ್ತರದ ಪ್ರತಿಮೆಯಿದೆ. ಅಮೆರಿಕದಲ್ಲಿರುವ ಜೆಫರ್ಸನ್ ರ ಪ್ರತಿಮೆಗಳಿಗಿಂತ ಹೆಚ್ಚು ಎತ್ತರವಾದದ್ದು.

  • ಎಡ ಭಾಗದಲ್ಲಿ 'ಫೌಂಟೆನ್ ಆಫ್ ಸೈನ್ಸ್'
  • ಮತ್ತು ಬಲಭಾಗದಲ್ಲಿ 'ಫೌಂಟೆನ್ ಆಫ್ ಆರ್ಟ್ಸ್' ಇವೆ.
  • 'ಟೆನ್ ಕಮ್ಯಾಂಡ್ ಮೆಂಟ್ಸ್',
  • 'ಫೌಂಟನ್ ಆಫ್ ದ ಸೆಂಟಾರ್',
  • 'ಲೋಹ್ಮನ್ ಕಟ್ಟಡ',
  • 'ಯೂನಿಯನ್ ಹೋಟೆಲ್',
  • 'ಜೆಫರ್ಸನ್ ರ ಲ್ಯಾಂಡಿಂಗ್ ಸ್ಟೇಟ್ ಹಿಸ್ಟಾರಿಕ್ ಸೈಟ್',
  • 'ಗವರ್ನರ್ ರ ಮ್ಯಾನ್ಶನ್' ಇತ್ಯಾದಿ.
  • ಕಟ್ಟಡಕ್ಕೆ ತಾಗಿದಂತೆ ಮಿಸ್ಸೂರಿನದಿಯ ಪಾತ್ರವಿದೆ. ಸದಾಕಾಲವೂ ನದಿ ತುಂಬಿಹರಿಯುತ್ತಿರುತ್ತದೆ.

ಮಿಸಿಸಿಪ್ಪೀನದಿ, ಅಲ್ಲಿನ ಜನರಿಗೆ ಪುರುಷನಂತೆ

ಬದಲಾಯಿಸಿ

"ಜಲದೇವ", ನೆಂಬಹೆಗ್ಗಳಿಕೆಯಿಂದ ಜನಗಳ ಮನಸ್ಸಿನಲ್ಲಿ ಅಮರವಾಗಿ ನೆಲಸಿದ್ದಾನೆ. ಗೌರವಿಸಲ್ಪಟ್ಟಿದ್ದಾನೆ ; ಎಡಗೈನಲ್ಲಿ ವಾಣಿಜ್ಯ ನಿಯಂತ್ರಣ ಆಯುಧ, ದೋಣಿಯನ್ನು ಓಡಿಸುವ ಚುಕ್ಕಾಣಿ, ಹಾಗೂ ಕಡಲ-ವ್ಯಾಪಾರದಲ್ಲಿ ರಾಜ್ಯದ ಪ್ರಮುಖಪಾತ್ರಗಳನ್ನು ಪ್ರತಿಬಿಂಬಿಸುವ ಈ ಶಿಲ್ಪಗಳು ಅತಿ ಸುಂದರವಗಿ ನಿರ್ಮಿಸಲ್ಪಟ್ಟಿವೆ. ಜಲದೇವನ ಬಲಗೈನಲ್ಲಿ, "ಸರ್ಪಾಯುಧ," ವಿದೆ. ಈ ಪ್ರಗತಿಯದೇವತೆ, ಧಾನ್ಯಗಳ ತೆನೆಗಳಮೇಲೆ ವಿಶ್ರಮಿಸುತ್ತಾನೆ. ಅಲ್ಲಿನ ಭಿತ್ತಿಯಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಸಾಂಕೇತಿಕವಾಗಿ ಚಿತ್ರಿಸಿದ್ದಾರೆ. ವಿಜ್ಞಾನದ ಪರಿಮಳ ಇನ್ನೂ ಜನರಿಗೆ ಲಭ್ಯವಾಗಿರಲಿಲ್ಲ. ಒಟ್ಟಾರೆ, ಈ ಶಿಲ್ಪಗಳ ಮಹತ್ವವೆಂದರೆ, ಅವು ಪರ್ಯಟನೆ, ವಾಣಿಜ್ಯೋದ್ಯಮ, ಪ್ರಗತಿಪರ-ಕೃಷಿಯನ್ನು ಪ್ರತಿನಿಧಿಸುತ್ತದೆ. "ಜಲದೇವ," ನ ಮೊಣಕಾಲಿನ ಬಳಿ ಮೊಸಳೆ, ಇದೆ. ಇದು ಕಡಲಯಾನದಲ್ಲಿ ಸಹಿಸಬೇಕಾದ ಕಷ್ಟ ಕೋಟಲೆಗಳನ್ನು ಮನಸ್ಸಿಗೆ ತರುತ್ತದೆ. ಶಿಲ್ಪದ ಹಿಂಭಾಗದಲ್ಲಿ ಡಾಲ್ಫಿನ್, ಹಾಗೂ ೩ ಪುಟ್ಟಮೀನುಗಳು, ವಿಪುಲವಾದ ಮೀನುಗಾರಿಕೆಉದ್ಯಮದ ಸುವ್ಯವಸ್ಥೆಯ ಪ್ರತೀಕವಂತೆ ! ಶಿಲ್ಪದ ಕೆಳಭಾಗದಲ್ಲಿ, ೪ ಫಲಕಗಳಿವೆ. ಮುಂದಿನ ಉದ್ದವಾದ ಫಲಕ, ಸೂರ್ಯದೇವತೆ ಹಾವನ್ನು ನಡುವಿಗೆ ಕಟ್ಟಿಕೊಂಡಿರುವ ಕೆತ್ತನೆ ಇದೆ. ಸೂರ್ಯಕಿರಣಗಳು ಬೀಳುತ್ತಿವೆ. ಕರಗುತ್ತಿರುವ ಹಿಮ, ಹಿಂದಿನ ಫಲಕದಲ್ಲೂ ಸೂರ್ಯದೇವತೆ. ಎದುರಿಗೆ ಆವಿ, ಕಾವಳ, ಎಡಭಾಗದಲ್ಲಿ, ಸುಂಟರಗಾಳಿ, ಮಿಂಚು, ಮಳೆ, ನೀರಿನ ಮಹತ್ವ, "ನೀರೇ ಶಕ್ತಿ", "ನೀರೇ ಜೀವವಾಹಿನಿ," ಎಂಬ ಹೇಳಿಕೆಗಳು ಇತ್ಯಾದಿಗಳಿವೆ. ಒಟ್ಟಿನಲ್ಲಿ ಕೃಷಿಯಬೀಡಾದ ಈ ಭೂಭಾಗದ ಶ್ರೀಮಂತಿಕೆಯನ್ನೂ, ವ್ಯಾಪಾರ, ವಾಣಿಜ್ಯಗಳ ಸಂಗಮಗಳನ್ನು ಕಂಚಿನ ಶಿಲ್ಪಗಳು, ವಿಶ್ವದ ಜನರಿಗೆ ಎತ್ತಿಸಾರುತ್ತಿವೆ. 'ಮಿಸಿಸಿಪ್ಪಿ-'ಮಿಸ್ಸೂರಿನದಿ', ಉತ್ತರ ಅಮೆರಿಕದಲ್ಲೇ ಅತಿ ಉದ್ದವಾದ ನದಿ. ವಿಶ್ವದ ಅತಿದೊಡ್ಡ ನದಿಗಳ ಜೊತೆಯಲ್ಲಿವೆ. ಉದ್ದದಲ್ಲಿ *(೩,೯೦೦ ಮೈಲಿಗಳು (೬,೩೦೦ ಕಿಮೀಟರ್ ಗಳು), ವಿಶ್ವದ ೪ ನೆಯ ಅತಿ ದೊಡ್ಡನದಿ. ಹೊರಬೀಳುವ ನೀರಿನ ಗಾತ್ರ, ೫೭೨,೦೦೦ ಘನ ಅಡಿಗಳು (೧೬,೨೦೦ ಚದರ ಮೀಟರ್ ಗಳು).

ಲ್ಯೂಸಿಯಾನ ರಾಜ್ಯವನ್ನು ಫ್ರೆಂಚರಿಂದ ಖರೀದಿಸಿದ ಕರಾರು ಪತ್ರಕ್ಕೆ ಸಹಿಹಾಕುತ್ತಿರುವ ಚಾರಿತ್ರ್ಯಿಕ ಪುಥಳಿ

ಬದಲಾಯಿಸಿ

ಮಿಸಿಸಿಪ್ಪಿ ನದಿಯೊಂದನ್ನೇ ಗಣನೆಗೆ ತೆಗೆದುಕೊಂಡರೆ, ಜಗತ್ತಿನ ಅತಿದೊಡ್ಡನದಿಗಳ ಶ್ರೇಣಿಯಲ್ಲಿ ಹತ್ತನೆಯ ಭಾರಿ ನದಿಯೆಂದು ದಾಖಲೆಯ ಮೂಲಗಳು ತಿಳಿಸುತ್ತವೆ. ಅಮೆರಿಕದ ಅತಿ ಉದ್ದವಾದ ನದಿ-'ಮಿಸ್ಸೂರಿ ನದಿ'. ೨,೫೪೦ ಮೈಲಿಗಳು (೪,೦೯೦ ಕಿಮೀಟರ್ ಗಳು)ಮಿಸಿಸಿಪ್ಪಿ ನದಿ, 'ಜೆಫೆರ್ಸನ್ ಮಿಸ್ಸೂರಿ ಮಿಸಿಸಿಪ್ಪಿ ನದಿ ಪ್ರಾಧಿಕಾರ,' ದ ಒಂದು ಭಾಗವಾಗಿದೆ. ಅಮೆರಿಕದಲ್ಲಿ ಎರಡನೆಯ ಅತಿ ಉದ್ದವಾದ ನದಿ, 'ಮಿಸಿಸಿಪ್ಪಿ ನದಿ'. ೨,೩೪೦ ಮೈಲಿಗಳು (೩,೭೭೦ ಕಿ. ಮೀಟರ್) 'ಮಿನ್ನೆಸೋಟರಾಜ್ಯ' ದ 'ಲೇಕ್ ಇಟಾರ್ಸ್ಕ,' ದಿಂದ, 'ಗಲ್ಫ್ ಆಫ್ ಮೆಕ್ಸಿಕೊ' ವರೆಗೆ. ಇದು ಮಿಸಿಸಿಪ್ಪಿಯನ್ನು 'ಸೇಂಟ್ ಲೂಯಿಸ್ ನ ಸಂಗಮ,' ದಲ್ಲಿ ಸೇರಿಕೊಂಡು ಭಾರಿನದಿಗಳಾಗಿ ಒಂದಾಗಿ ಪ್ರವಹಿಸುತ್ತವೆ. ಅಲ್ಲಿ ವಾಸಿಸುತ್ತಿದ್ದ 'ಒಝಿಬ್ವೆ ಜನರ'ಆಡುಭಾಷೆಯಲ್ಲಿ 'ಮಿಸಿ ಝಿಬಿ' ಎಂದರೆ ದೊಡ್ಡ ನದಿ. ಅಥವಾ 'ಗಿಚಿ ಝಿಬಿ' ಎಂದರೆ, ಭಾರಿನದಿ ಎಂದರ್ಥ. ಕಟ್ಟಡದ ಹಿಂಭಾಗದಲ್ಲಿ,ಮಿಸ್ಸೂರಿ ಲಾ ಎನ್ ಫೋರ್ಸ್ಮೆಂಟ್ ಸ್ಮರಣ-ಭವನ, ಲಿಬರ್ಟಿ ಬೆಲ್, ಟ್ರೀಟಿಯ ಕರಾರು-ಪತ್ರದಮೇಲೆ ಸಹಿ ಹಾಕುತ್ತಿರುವ ಪ್ರತಿಮೆಯಿದೆ.