ಮಿಸಳ್ ಪಾವ್
ಮಿಸಳ್ ಪಾವ್ ಮಹಾರಾಷ್ಟ್ರದ ಒಂದು ಜನಪ್ರಿಯ ಖಾದ್ಯ.[೧] ಇದು ಮಿಸಳ್ (ಸಾಮಾನ್ಯವಾಗಿ ಮೊಳಕೆ ಎಬ್ಬಿಸಿದ ಮಡಿಕೆ ಕಾಳಿನಿಂದ ತಯಾರಿಸಲಾದ ಖಾರದ ಕರಿ) ಮತ್ತು ಪಾವ್ ಅನ್ನು (ಒಂದು ಬಗೆಯ ಭಾರತೀಯ ಬ್ರೆಡ್) ಹೊಂದಿರುತ್ತದೆ.[೨][೩] ಅಂತಿಮ ಭಕ್ಷ್ಯದ ಮೇಲೆ ಆಲೂಗಡ್ಡೆ-ಚಿವ್ಡಾ ಮಿಶ್ರಣ, ಫ಼ರ್ಸಾಣ್ ಅಥವಾ ಸೇವ್, ಈರುಳ್ಳಿ, ನಿಂಬೆ ಮತ್ತು ಕೊತ್ತಂಬರಿಯನ್ನು ಉದುರಿಸಲಾಗುತ್ತದೆ.[೪] ಇದನ್ನು ಸಾಮಾನ್ಯವಾಗಿ ಬ್ರೆಡ್ ಅಥವಾ ರೋಲ್ಸ್,[೫] ಜೊತೆಗೆ ಬೆಣ್ಣೆ ಹಾಗೂ ಮಜ್ಜಿಗೆ ಅಥವಾ ಮೊಸರು ಹಾಗೂ ಹಪ್ಪಳವನ್ನು ಹಾಕಿ ಬಡಿಸಲಾಗುತ್ತದೆ. ಇದನ್ನು ಬೆಳಿಗ್ಗೆ ತಿಂಡಿಯಾಗಿ, ಲಘು ಆಹಾರವಾಗಿ ಮತ್ತು ಪೂರ್ಣ ಊಟವಾಗಿಯೂ ಬಡಿಸಲಾಗುತ್ತದೆ.[೫]
ಮೂಲ | |
---|---|
ಪರ್ಯಾಯ ಹೆಸರು(ಗಳು) | ಮಿಸಳ್ |
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಮಹಾರಾಷ್ಟ್ರ, ಗೋವಾ |
ವಿವರಗಳು | |
ನಮೂನೆ | ಕರಿ ಮತ್ತು ಬ್ರೆಡ್ |
ಬಡಿಸುವಾಗ ಬೇಕಾದ ಉಷ್ಣತೆ | ಮುಖ್ಯ ಭಕ್ಷ್ಯ, ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ |
ಮುಖ್ಯ ಘಟಕಾಂಶ(ಗಳು) | ಮೊಳಕೆ ಕಾಳುಗಳು, ಬಟಾಣಿ, ಕಡಲೆ ಮತ್ತು ಖಾರದ ಪುಡಿಯ ರಸ |
ಪ್ರಭೇದಗಳು | ಮಿಸಳ್ ವಡಾ |
ಪೋಷಕಾಂಶಗಳು | 550 ಕ್ಯಾಲೊರಿ |
ತಯಾರಿಕೆ
ಬದಲಾಯಿಸಿಮಿಸಳ್ ಅನ್ನು ಭಾಗಶಃ ಮೊಳಕೆ ಎಬ್ಬಿಸಿದ ಕಾಳುಗಳಿಂದ ತಯಾರಿಸಲಾಗುತ್ತದೆ,[೬] ಇದು ಕಡಿಮೆ ಪ್ರಮಾಣದ ನೀರಿನಾಂಶವನ್ನು ಹೊಂದಿರುತ್ತದೆ, ಜೊತೆಗೆ ನೀರುನೀರಾಗಿರುವ, ಖಾರದ ಕಟ್ ಅಥವಾ ರಸ್ಸಾದಿಂದ ತಯಾರಿಸಲಾಗುತ್ತದೆ. ಇದು ಎರಡು ಭಾಗಗಳನ್ನು ಹೊಂದಿರುತ್ತದೆ, ಉಸಳಿ ಎಂದು ಕರೆಯಲಾಗುವ ಮಡಿಕೆ ಕಾಳಿನ ಗಟ್ಟಿ ಕರಿ. ನೀರುನೀರಾಗಿರುವ ರಸವನ್ನು[೪] ರಸ್ಸಾ ಎಂದೂ ಕರೆಯಲಾಗುತ್ತದೆ.[೭] ಸಾಮಾನ್ಯವಾಗಿ ಜನರು ತಮ್ಮ ರುಚಿ ಹಾಗೂ ಅಗತ್ಯದ ಪ್ರಕಾರ ಇವೆರಡನ್ನೂ ಮಿಶ್ರಣ ಮಾಡುತ್ತಾರೆ. ಮಡಿಕೆ ಕಾಳು ಲಭ್ಯವಿಲ್ಲದಿದ್ದರೆ, ಕೆಲವೊಮ್ಮೆ ಇದನ್ನು ಹೆಸರು ಕಾಳು ಬಳಸಿ ತಯಾರಿಸಲಾಗುತ್ತದೆ.[೫] ಇದನ್ನು ಭಾರತೀಯ ದೊಡ್ಡ ಸೇವ್‍ನಿಂದ ಅಲಂಕರಿಸಬಹುದು.[೫] ಉಸಳಿಯನ್ನು ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ಇತರ ಸಂಬಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ.[೪][೮]
ಉಲ್ಲೇಖಗಳು
ಬದಲಾಯಿಸಿ- ↑ "Top 6 Misal Pav joints in Mumbai". Free Press Journal. August 14, 2015. Retrieved May 24, 2016.
- ↑ "Mumbai's Misal Pav Beats Dishes From Across The World. Crowned World's Tastiest Veg Snack!". indiatimes.com. June 5, 2015. Retrieved May 24, 2016.
- ↑ Doctor, Vikram (June 17, 2015). "The healthy snack that needs more attention: misal pav". Times Of India Blogs. Retrieved May 24, 2016.
- ↑ ೪.೦ ೪.೧ ೪.೨ "Misal Pav". NDTV Food. November 30, 2011. Retrieved May 24, 2016.
- ↑ ೫.೦ ೫.೧ ೫.೨ ೫.೩ Hingle, R. (2015). Vegan Richa's Indian Kitchen: Traditional and Creative Recipes for the Home Cook. Vegan Heritage Press, LLC. p. pt237. ISBN 978-1-941252-10-9. Retrieved May 25, 2016.
- ↑ Goela, S. (2015). India on my Platter:. OM Books International. p. 107. ISBN 978-93-83202-04-1. Retrieved May 25, 2016.
- ↑ Gowardhan, M. (2015). Indian Kitchen: Secrets of Indian home cooking: Secrets of Indian home cooking. Hodder & Stoughton. p. pt91. ISBN 978-1-4447-9456-4. Retrieved May 25, 2016.
- ↑ "A preparation method for Misal Pav". TV Show. 2010-01-11. Retrieved 1 May 2015.
ಚಿತ್ರಗಳು
ಬದಲಾಯಿಸಿ-
ಮಿಸಳ್ ಪಾವ್
-
ಮಿಸಳ್ ಪಾವ್ನ ಸಮೀಪದ ನೋಟ
-
ಮೇಲೆ ಭಾರತೀಯ ಸೇವ್ನ್ನು ಉದುರಿಸಲಾದ ಮಿಸಳ್ ಪಾವ್
-
ಮಿಸಳ್ ಪಾವ್