ವೃತ್ತಿಯಲ್ಲಿ ಪಶುವೈಧ್ಯರಾದ ಡಾ.ಮಿರ್ಜಾ ಬಷೀರ್ ಇವರು ೩೦ ವರ್ಷ ಕರ್ನಾಟಕದ ವಿವಿದೆಡೆ ಕೆಲಸ ನಿರ್ವಹಿಸಿ ಸದ್ಯಕ್ಕೆ ತುಮಕೂರು ಜಿಲ್ಲೆಯ ನೊಣವಿನಕೆರೆ ಪಶು ಆಸ್ಪತ್ರೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ.


ಹೈಸ್ಕೂಲಿನವರೆಗಿನ ವಿಧ್ಯಾಭ್ಯಾಸ ಚಿತ್ರದುರ್ಗ ಜಿಲ್ಲೆಯಲ್ಲಿ,ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿ.ಯು.ಸಿ. ಮುಗಿಸಿದ ನಂತರ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವೀಧರರಾದರು.


"ಪ್ರಜಾವಾಣಿ"'ದೀಪಾವಳಿ ಕಥಾ ಸ್ಪರ್ಧೆ,"ಕನ್ನಡ ಪ್ರಭ","ಸ್ವಪ್ನ ಬುಕ್ ಹೌಸ್"ರವರ ಸಂಕ್ರಾಂತಿ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ .ಇವರ ಕತೆ,ಕವನ ,ಪ್ರಬಂದಗಳು,ಸಂಕಲನ,ಹೊಸತು,ಅಗ್ನಿ,ಸಂಕ್ರಮಣ,ಮಯೂರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

"ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು"' ಪ್ರಾರಂಭಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಪರಿಷತ್ತಿನ ಪತ್ರಿಕೆಯಾದ "ಪಶುವೈದ್ಯ ಸಾಹಿತ್ಯಲೋಕ"ದ ಪ್ರಧಾನ ಸಂಪಾದಕರಾಗಿದ್ದಾರೆ. "ಪಶುವೈದ್ಯಸಾಹಿತ್ಯಲೋಕ" ಪತ್ರಿಕೆಯಲ್ಲಿ "ಸಂಪಾದಕೀಯ" ಬರಹವಾಗಿ ಈ ಪ್ರಬಂಧವು ಪ್ರಕಟವಾಗಿತ್ತು.