ಮಾಹಿಮ್ ಕೋಟೆಯು ಭಾರತದ ಮಹಾರಾಷ್ಟ್ರ ರಾಜ್ಯದ ಮುಂಬೈನ, ಮಾಹಿಮ್‌ನಲ್ಲಿರುವ ಕೋಟೆಯಾಗಿದೆ. [] ವ್ಯೂಹಾತ್ಮಕವಾಗಿ ಕೊಲ್ಲಿಯಲ್ಲಿ ನೆಲೆಗೊಂಡಿರುವ ಈ ಕೋಟೆಯು ದಕ್ಷಿಣಕ್ಕೆ ವರ್ಲಿ, ಉತ್ತರಕ್ಕೆ ಬಾಂದ್ರಾ ಮತ್ತು ಪೂರ್ವಕ್ಕೆ ಮಾಹಿಮ್ ಅನ್ನು ಹೊಂದಿದೆ. ಕೋಟೆಯ ಮೂಲವು ಅಸ್ಪಷ್ಟವಾಗಿದೆ. ಕೋಟೆಯು ಪ್ರಸ್ತುತ ಶಿಥಿಲಾವಸ್ಥೆಯಲ್ಲಿದೆ. ಆಡಳಿತದ ನಿರ್ಲಕ್ಷ್ಯ, ಕೊಳೆಗೇರಿಗಳ ಅತಿಕ್ರಮಣ ಮತ್ತು ಅಲೆಗಳ ಸವೆತಕ್ಕೆ ಒಡ್ಡಿಕೊಳ್ಳುತ್ತಿದೆ.

ಮಾಹಿಮ್ ಕೋಟೆ
माहीम किल्ला
ಮಾಹಿಮ್ ಕೋಟೆt
ಸಾಮಾನ್ಯ ಮಾಹಿತಿ
ಮಾದರಿಕೋಟೆ
ಸ್ಥಳಮಾಹಿಮ್, ಮುಂಬೈ
ಎತ್ತರ1 m (3 ft 3 in)
ಇಗಿನ ಬಾಡಿಗೆದಾರರುಆಕ್ರಮಣ
ಪೂರ್ಣಗೊಂಡಿದೆ೧೬ನೆ ಶತಮಾನ
ಕಕ್ಷಿಗಾರಪೋರ್ಚುಗೀಸ್
ಮಾಲೀಕಮಹರಾಷ್ರ್ಟ ಸರಕಾರ[]

ಇತಿಹಾಸ

ಬದಲಾಯಿಸಿ

೧೫೧೬ ರಲ್ಲಿ, ಪೋರ್ಚುಗೀಸ್ ಕಮಾಂಡರ್ ಡೊಮ್ ಜೋವೊ ಡಿ ಮೊನೊಯ್ ಮಾಹಿಮ್ ಕ್ರೀಕ್ ಅನ್ನು ಪ್ರ ವೇಶಿಸಿ ಮಾಹಿಮ್ ಕೋಟೆಯ ಕಮಾಂಡರ್ ಅನ್ನು ಸೋಲಿಸಿದರು. [] ೧೫೩೪ ರಲ್ಲಿ ಪೋರ್ಚುಗೀಸರು ಮಾಹಿಮ್ ದ್ವೀಪವನ್ನು ಗುಜರಾತ್‌ನ ಬಹದ್ದೂರ್ ಷಾನಿಂದ ಸ್ವಾಧೀನಪಡಿಸಿಕೊಳ್ಳುವ ಮೊದಲು ಈ ಕೋಟೆಯು ಪೋರ್ಚುಗೀಸರು ಮತ್ತು ಗುಜರಾತಿನ ಆಡಳಿತಗಾರರ ನಡುವೆ ಆಗಾಗ ಘರ್ಷಣೆಗಳ ತಾಣವಾಗಿತ್ತು. ೧೬೬೧ ರಲ್ಲಿ, ಪೋರ್ಚುಗೀಸರು ಮಾಹಿಮ್ ದ್ವೀಪವನ್ನು ಇಂಗ್ಲೆಂಡ್‌ನ ಎರಡನೇ ಚಾರ್ಲ್ಸ್ ಗೆ ವರದಕ್ಷಿಣೆಯಾಗಿ ನೀಡಿದರು. ಆಂಗ್ಲರು ಕೋಟೆಯ ಮೇಲೆ ಹಿಡಿತ ಸಾಧಿಸಿದ ನಂತರ, ಇದನ್ನು ೧೬೮೪ ರಲ್ಲಿ ಸರ್ ಥಾಮಸ್ ಗ್ರಂಥಮ್ ಒಶಪಡಿಸಿಕೊಂಡರು. [] ನಂತರ ಇದು ಪೋರ್ಚುಗೀಸ್ ದಾಳಿಗಳ ವಿರುದ್ಧ ಮರಾಠರಿಂದ ಒಂದು ಕಾರ್ಯತಂತ್ರದ ಕಾವಲುಗೋಪುರವಾಯಿತು. []

೧೭೭೨ ರಲ್ಲಿ, ಪೋರ್ಚುಗೀಸರು ಈ ಕೋಟೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು. ಆದರೆ ಅವರನ್ನು ಬ್ರಿಟಿಷರು ಫಿರಂಗಿಗಳಿಂದ ಹಿಮ್ಮೆಟ್ಟಿಸಿದರು. [] ಈ ಎನ್‌ಕೌಂಟರ್‌ನಲ್ಲಿ ಮೌಂಟ್ ಮೇರಿಸ್ ಬೆಸಿಲಿಕಾ ಹಾನಿಗೊಳಗಾಯಿತು. ಐತಿಹಾಸಿಕ ದಾಖಲೆಗಳ ಪ್ರಕಾರ, ಕೋಟೆಯು ಆ ಸಮಯದಲ್ಲಿ ೧೦೦ ಸೈನಿಕರು ಮತ್ತು ೩೦ ಫಿರಂಗಿಗಳನ್ನು ಹೊಂದಿತ್ತು. []

ಮೊದಲ ಆಂಗ್ಲೋ-ಮರಾಠಾ ಯುದ್ಧದ ಸಮಯದಲ್ಲಿ ಬ್ರಿಟಿಷರು ಕೋಟೆಯನ್ನು ವಶಪಡಿಸಿಕೊಂಡರು. []

ಅತಿಕ್ರಮಣಗಳು

ಬದಲಾಯಿಸಿ

ಕೋಟೆಯು ನಗರಕ್ಕೆ ಉಪನಗರಗಳನ್ನು ಸಂಪರ್ಕಿಸುವ ಮಾಹಿಮ್ ಕಾಸ್ವೇಯಿಂದ ದೂರದಲ್ಲಿದೆ. ಕೋಟೆಯು ಕೊಳೆಗೇರಿಗಳಿಂದ ಹೆಚ್ಚು ಅತಿಕ್ರಮಿಸಲ್ಪಟ್ಟಿದೆ ಮತ್ತು ಉಬ್ಬರವಿಳಿತದ ಸವೆತ ಮತ್ತು ನಿರ್ಲಕ್ಷ್ಯದಿಂದಾಗಿ ಕೋಟೆಯ ಭಾಗಗಳು ಕುಸಿದಿವೆ. ಸೈಟ್ ಅನ್ನು ಗ್ರೇಡ್ I ಪರಂಪರೆಯ ರಚನೆ ಎಂದು ವರ್ಗೀಕರಿಸಲಾಗಿದ್ದರೂ, ಅದನ್ನು ನಿರ್ವಹಿಸಲು ಹೆಚ್ಚಿನದನ್ನು ಮಾಡಲಾಗಿಲ್ಲ. [] ಮರಳಿನ ಮೇಲೆ ದೊಡ್ಡ ಬಂಡೆಗಳು ಹರಡಿಕೊಂಡಿವೆ ಮತ್ತು ಮೂರು ಮೀಟರ್ (ಹದಿನೈದು ಅಡಿ) ಎತ್ತರದ ಬಿರುಕುಗಳು ಗೋಚರಿಸುತ್ತವೆ. ಕೋಟೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಮತ್ತು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಡುವೆ ಬದಲಾಯಿಸಲಾಗಿದೆ. ಆದರೂ ಕೋಟೆಯು ರಾಜ್ಯ ಸರ್ಕಾರದ ಭೂಮಿಯಾಗಿದೆ. [] ೨೦೦೪ರಲ್ಲಿ ಸ್ಥಳೀಯ ಅಧಿಕಾರಿಗಳು ಒತ್ತುವರಿ ತೆರವು ಮಾಡದ ಕಾರಣ ಐದು ಲಕ್ಷ ರೂಪಾಯಿ ಹಿಂತಿರುಗಿಸಬೇಕಾಯಿತು. [] ನಂತರ, ೨೦೦೮ ರಲ್ಲಿ, ಮುನ್ಸಿಪಲ್ ಕಮಿಷನರ್ ಜೈರಾಜ್ ಫಾಟಕ್ ಅವರು ಕೋಟೆಯ ಬದಲಾವಣೆಯನ್ನು ಪ್ರಸ್ತಾಪಿಸಿದರು. []

ಗ್ಯಾಲರಿ

ಬದಲಾಯಿಸಿ


ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ Sharan, Abhishek (2003-03-16). "A fortress falls to monumental neglect". Indian Express. Express Group. Retrieved 2008-09-15.[ಮಡಿದ ಕೊಂಡಿ]
  2. "Mahim Portal". Mahim. Dataflow. Retrieved 2008-09-15.
  3. "Section III - Portuguese". Thana District Gazetteer. Retrieved 2008-09-15.
  4. ೪.೦ ೪.೧ ೪.೨ ೪.೩ "Mahim Portal". Mahim. Dataflow. Retrieved 2008-09-15."Mahim Portal". Mahim. Dataflow. Retrieved 15 September 2008.
  5. Naravane, M.S. (2014). Battles of the Honorourable East India Company. A.P.H. Publishing Corporation. p. 61. ISBN 9788131300343.
  6. Choudhury, Chitrangada; Prarthana Gahitole (2004-04-05). "State is failing the caves: Jagmohan". Indian Express. Express Group. Archived from the original on 29 May 2004. Retrieved 2008-09-15.
  7. "Phatak proposes a beauty therapy". Daily News and Analysis. Diligent Media Corporation Ltd. 2008-02-05. Retrieved 2008-09-15.