ಮಾವಳ್ಳಿ

ಭಾರತ ದೇಶದ ಗ್ರಾಮಗಳು

ಇದು ಪ್ರಮುಖವಾಗಿ ಚಿಕ್ಕಮಾವಳ್ಳಿ, ಮತ್ತು ದೊಡ್ಡಮಾವಳ್ಳಿ ವಲಯವೆಂದು ಹೆಸರಾಗಿದೆ. ಎರಡೂ ಅಕ್ಕಪಕ್ಕಗಳಲ್ಲಿವೆ. ಮಧ್ಯಮವರ್ಗದ ಜನರು ವಾಸಿಸುವ ಬಹಳ ಹಳೆಬೆಂಗಳೂರು ಪ್ರದೇಶಗಳೊಂದಾಗಿರುವ ಚಿಕ್ಕಮಾವಳ್ಳಿ, ಇಲ್ಲಿ ಕೃಂಬಿಗಲ್ ರಸ್ತೆಯ ಪಕ್ಕದಲ್ಲಿ, 'ಲಾಲ್ ಬಾಗ್ ಸಸ್ಯೋದ್ಯಾನ'ವಿದೆ. ೫ ದಶಕಗಳ ಹಿಂದೆ ಉಪ್ಪಾರಳ್ಳಿ ಎಂದು ಕರೆಯಲಾಗುತ್ತಿದ್ದ ಜಾಗದ ಹತ್ತಿರದಲ್ಲೇ,'ಬಸವನಗುಡಿ ಕೋಆಪರೇಟಿವ್ ಸೊಸೈಟಿಯ ಶಾಖೆ,' 'ಮುನಿಸಿಪಲ್ ಮಾರುಕಟ್ಟೆ',ಗಳಿವೆ. ಇಲ್ಲಿನ 'ರಂಗಪ್ಪನ ಗಲ್ಲಿ', 'ಕೃಷ್ಣಪ್ಪನ ಗಲ್ಲಿ',ಗಳು, ಇಂದಿಗೂ ಇದ್ದು ಇಲ್ಲಿನ ಹಳೆಯ ಸುಂದರ ನೆನಪುಗಳ ಅನುಭವಗಳು, ವಾಸಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಕವಿ, ಕೆ.ಎಸ್.ನಿಸಾರ್ ಅಹಮದ್,ತಾವು ಈ ಜಾಗದಲ್ಲಿ ಬಾಲ್ಯದ ದಿನಗಳನ್ನು ಕಳೆದಿದ್ದರಂತೆ. 'ಮಾವಳ್ಳಿ'ಯಿಂದ ನಡೆದೇ ಹೋಗುವಷ್ಟು ಹತ್ತಿರದಲ್ಲಿ 'ಮಿನರ್ವಾ ಸರ್ಕಲ್','ಸಜ್ಜನ್ ರಾವ್ ಸರ್ಕಲ್', ಮತ್ತು'ಕೃಷ್ಣರಾವ್ ಸರ್ಕಲ್', ಗಳಿವೆ. 'ಮಾವಳ್ಳಿ ಟಿಫಿನ್ ರೂಮ್,'(M.T.R, Bengaluru)' ಕೂಡ ತೀರ ಹತ್ತಿರ. ದೇವಾಲಯಗಳು, ಶಾಪಿಂಗ್ ಮಳಿಗೆಗಳು ಎಲ್ಲವೂ ಇದ್ದು, ಇಂದಿಗೂ ಸಾಮಾನ್ಯ ಜನರು ಹೆಚ್ಚು ದುಬಾರಿ ಜೀವನಕ್ಕೆ ಬಲಿಯಾಗದೆ, ಸುಖವಾಗಿರಲು ಸೌಲಭ್ಯಗಳು ಇಲ್ಲಿ ಲಭ್ಯ.

ಪ್ರಖ್ಯಾತ 'ನ್ಯಾಷನಲ್ ಹೈಸ್ಕೂಲ್'ಮತ್ತು 'ನ್ಯಾಷನಲ್ ಕಾಲೇಜ್' ಇಲ್ಲಿಗೆ ಸಮೀಪದಲ್ಲಿವೆ. 'ಸಿಟಿ ಮಾರ್ಕೆಟ್', 'ಕಲಾಸಿಪಾಳ್ಯಂ ಬಸ್ ನಿಲ್ದಾಣ' ಹತ್ತಿರ.

"https://kn.wikipedia.org/w/index.php?title=ಮಾವಳ್ಳಿ&oldid=202022" ಇಂದ ಪಡೆಯಲ್ಪಟ್ಟಿದೆ