ಮಾಳೇನಹಳ್ಳಿ ಲಕ್ಷ್ಮೀರಂಗನಾಥ

ಮಾಳೇನಹಳ್ಳಿ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಒಂದು ಸಣ್ಣ ಗ್ರಾಮ ಆಗಿದೆ. ಮಾಳೇನಹಳ್ಳಿಯು ಹೊಳಲ್ಕೆರೆ ತಾಲ್ಲೂಕಿಗೆ ನಾಲ್ಕು ಮೈಲಿ ದೂರದಲ್ಲಿ ಇರುವ ಒಂದು ಗ್ರಾಮ. ಅಲ್ಲಿ ಕ್ರಿ.ಶ.ಆರನೇಯ ಶತಮಾನಕ್ಕೂ ಹಿಂದಿನಿಂದ ಇರುವ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ದೇವಾಲಯವಿದೆ. ಮೊದಲು ಸ್ವಾಮಿಯನ್ನು ತಿರುಮಲ ದೇವರೆಂದು ಕರೆಯುತ್ತಿದರು. ತಿರುಪತಿಯ ವೆಂಕಟೇಶನೇ ಇಲ್ಲಿ ನೆಲೆಸಿರುವನು ಎಂದು ಬಹಳ ಕಾಲದಿಂದಲೂ ಪ್ರತೀತಿ ಇದೆ. ಈ ಕ್ಷೇತ್ರವು ಜಾಗ್ರತ ಸ್ಥಾನ. ಅಲ್ಲಿಯ ಜನರು ದೇವರನ್ನು ಹಳ್ಳಿಯ ರಂಗನೆಂದೇ ಕರೆಯುತ್ತಾರೆ. ಅಲ್ಲಿ ಶ್ರೀ ಲಕ್ಷ್ಮೀದೇವಿ, ಶ್ರೀ ರಂಗನಾಥಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಗಣಪತಿ ಇವರ ಸನ್ನಿಧಿ ಇದೆ.

ಚಿತ್ರ:HPIM7148.JPG
'ಮಾಳೇನಹಳ್ಳಿ ರಂಗನಾಥಸ್ವಾಮಿ ದೇವಾಲಯದ ಪ್ರಮುಖ ಗೋಪುರ'

ಇದು ಬೆಂಗಳೂರು ವಿಭಾಗಕ್ಕೆ ಸೇರಿದೆ. ಇದು ಜಿಲ್ಲೆಯ ಪ್ರಧಾನ ಚಿತ್ರದುರ್ಗಕ್ಕೆ ೩೩ ಕಿ.ಮೀ.ಗಳಷ್ಟು ದೂರದಲ್ಲಿ ನೆಲೆಗೊಂಡಿದೆ. ಬೆಂಗಳೂರಿನಿಂದ ೨೧೧ ಕಿ.ಮೀ. ಇದೆ.