ಮಾನ್ವೆಲ್ ಟಾಮಾಯೊ ಇ ಬೊಯಸ್

ಮಾನ್ವೆಲ್ ಟಾಮಾಯೊ ಇ ಬೊಯಸ್ (1829-1898). 19ನೆಯ ಶತಮಾನದ ಸ್ಪೇನಿನ ಪ್ರಸಿದ್ಧ ನಾಟಕಕಾರರಲ್ಲಿ ಒಬ್ಬ.

ತಾಯಿ ಜಾಕ್ವಿನಾ ಬೊಯಸ್ ಸುಪ್ರಸಿದ್ಧ ನಟಿಯಾಗಿದ್ದುದರಿಂದ ಈತನಿಗೂ ಮತ್ತು ರಂಗಭೂಮಿಗೂ ನಿಕಟಸಂಬಂಧವಿತ್ತು.

ನಾಟಕಗಳು ಬದಲಾಯಿಸಿ

ಈತನ ಅಚ್ಚಾದ ಮೊದಲ ನಾಟಕಗಳೆಂದರೆ ಷಿಲರ್‍ನನ್ನು ಆದರಿಸಿ ಬರೆದ ಜ್ವಾನ ಡಿ ಆರ್ಕೊ (1847) ಮತ್ತು ಏಂಜಲ (1852). ವರ್ಜೀನಿಯ (1853) ಎಂಬ ಕೃತಿ ಆಲ್‍ಫಿಯರಿಯ ಶೈಲಿಯಲ್ಲಿ ರಚಿಸಿದ ನಾಟಕೀಯ ಪ್ರಬಂಧ. ಈತನ ಲ ಲೋಕುರ ಡಿ ಅಮೊರ್ (1855) ನಾಟಕ ಈತನನ್ನು ಸ್ಪೇನಿನ ಹಿರಿಯ ಮಟ್ಟದ ನಾಟಕಕಾರನನ್ನಾಗಿ ಮಾಡಿತು. ಹಿಜ ಇ ಮೇದ್ರೆ (1855) ಎಂಬ ಈತನ ಮತ್ತೊಂದು ನಾಟಕ ಯಶಸ್ವಿಯಾಗಲಿಲ್ಲ. ಲ ಬೋಲ ಡಿ ನಯೀವ್ (1856) ಎಂಬ ರೂಪಕ ಈತನ ಶ್ರೇಷ್ಠ ಕೃತಿ ಎನಿಸಿದೆ. ಅನಂತರ ಕೆಲವು ವರ್ಷಗಳು ಹಣಕಾಸಿನ ಬಿಗಿಯಿಂದಾಗಿ ಟಾಮಾಯೊ ಸ್ವತಂತ್ರ ಕೃತಿಗಳ ರಚನೆಯನ್ನು ಬದಿಗೊತ್ತಿ ಲಿಯಾನ್ ಲಾಯ, ಜೂಲ್ಸ್ ಸ್ಯಾಂಡೊ ಮತ್ತು ಎಮಿಲಿ ಓಜ್ಯಾಯೆರನ್ನು ಆಧರಿಸಿ ಕೃತಿಗಳನ್ನು ರಚಿಸಬೇಕಾಯಿತು. ಈ ಸಮಯದಲ್ಲಿ ಈತ ರಚಿಸಿದ ಏಕೈಕ ಸ್ವತಂತ್ರ ಕೃತಿ ಲಾನ್ಸೆಸ್ ಡಿ ಆನರ್ (1863), ಇದು ಬಹುವಾಗಿ ಸಾರ್ವಜನಿಕರ ವಿವಾದಕ್ಕೊಳಗಾದ ಕೃತಿ.