ಮಹಾದೇವ ಶೆಟ್ಟಿ ಬಸದಿಯಲ್ಲಿ ಪೂಜಿಸಲ್ಪಡುವ ಮೂಲ ನಾಯಕ ಸ್ವಾಮಿ ಆದಿನಾಥ ಸ್ವಾಮಿಯು ಕರ್ನಾಟಕದ ಕರಾವಳಿಯಲ್ಲಿ ಬರುವ ಜೈನ ಬಸದಿ. ಇದು ೧೬ನೆ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ.[]

ಈ ಬಸದಿಯು ಮೂಡುಬಿದಿರೆ ತಾಲೂಕು ಪ್ರಾಂತ, ಗ್ರಾಮದಲ್ಲಿದೆ. ಈ ಬಸದಿಗೆ ಹತ್ತಿರದಲ್ಲಿರುವ ಬಸದಿ ದಕ್ಷಿಣ ದಿಕ್ಕಿನಲ್ಲಿರುವ ಬೈಕಣತಿಕಾರಿ ಬಸದಿ. ಬಸದಿಯು ತಾಲೂಕು ಕೇಂದ್ರದಿಂದ ಒಂದು ಕಿ.ಮೀ ದೂರದಲ್ಲಿದೆ. ಈ ಬಸದಿಯು ಮೂಡುಬಿದಿರೆ ಶ್ರೀ ಜೈನ ಮಠಕ್ಕೆ ಸೇರಿದ್ದು. ಹೀಗಾಗಿ ಬಸದಿಯನ್ನು ಈಗ ಮೂಡುಬಿದಿರೆ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳವರು ನಡೆಸುತ್ತಿದ್ದಾರೆ.

ಇಲ್ಲಿ ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿ ಇದೆ. ಬಸದಿಯ ಎದುರು ಮಾನಸ್ತಂಭವಿಲ್ಲ. ಇದನ್ನು ಪ್ರವೇಶಿಸುವಾಗ ಎಡ - ಬಲ ಬದಿಗಳಲ್ಲಿರುವ ಗೋಪುರವನ್ನು ಹೆಚ್ಚಾಗಿ ಯಾವುದೇ ಕಾರ್ಯಕ್ರಮ ನಡೆಸುವಾಗ ಮುನಿ ಸಂಘದವರಿಗೆ ವಾದ್ಯದವರಿಗೆ ಅಥವಾ ಭಕ್ತಾದಿಗಳಿಗೆ ಕುಳಿತುಕೊಳ್ಳಲು ಉಪಯೋಗಿಸುತ್ತಾರೆ.[]

ಕಲಾಕೃತಿ

ಬದಲಾಯಿಸಿ

ಈ ಬಸದಿಯಲ್ಲಿ ೩ ಅಡಿ ಎತ್ತರದ ಶ್ರೀ ಆದಿನಾಥ ಸ್ವಾಮಿಯ ಶಿಲೆಯ ಮೂರ್ತಿ ಅರ್ಚಿಸಲ್ಪಡುತ್ತದೆ. ಇದು ಖಡ್ಗಾಸನ ಭಂಗಿಯಲ್ಲಿದೆ. ಪಾದ ಪ್ರದೇಶದಲ್ಲಿ ಯಕ್ಷ ಯಕ್ಷಿಯರು ಕುಳಿತ ಭಂಗಿಯಲ್ಲಿದ್ದು, ಅನಂತರ ಮೇಲ್ಗಡೆಯ ಪ್ರಭಾವಳಿಯಲ್ಲಿ ಇತರ ಆಕೃತಿ, ಮಕರ ತೋರಣಗಳಿಲ್ಲದೆ, ಉಳಿದ ೨೩ ತೀರ್ಥಂಕರರ ಪರ್ಯಂಕಾಸನಸ್ಥ ಜಿನಬಿಂಬಗಳನ್ನು ಉಬ್ಬುಶಿಲ್ಪಗಳ ರೂಪದಲ್ಲಿ ತೋರಿಸಲಾಗಿದೆ. ಮೇಲ್ಗಡೆ ಮುಕ್ಕೊಡೆಯಿದೆ. ಬಸದಿಯ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇದೆ. ಇಲ್ಲಿಂದ ಮುಂದುವರಿದು ತೀರ್ಥಂಕರರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥ ಮಂಟಪ ಎಂದು ಕರೆಯುತ್ತಾರೆ.ಅಮ್ಮನವರ ಮೂರ್ತಿ ಉತ್ತರಕ್ಕೆ ಮುಖ ಮಾಡಿಕೊಂಡಿದ್ದು ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪ ಇದೆ.

ಧಾರ್ಮಿಕ ಕಾರ್ಯಗಳು

ಬದಲಾಯಿಸಿ

ಇಲ್ಲಿ ಮಾತೆ ಪದ್ಮಾವತಿ ದೇವಿಯ ಮೂರ್ತಿ ಇದ್ದು ಸದಾ ಪೂಜೆ ನಡೆಯುವಾಗ ದೇವಿಗೆ ಸೀರೆ ಉಡಿಸಿ ಬಳೆಗಳನ್ನು ಹಾಕಿ, ಹೂವಿನ ಅಲಂಕಾರದೊಂದಿಗೆ ಪೂಜೆ ಮಾಡಲಾಗುತ್ತದೆ. ಮುಖ್ಯವಾಗಿ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಇದೆ, ಅಕ್ಷಯ ತೃತೀಯ, ಆದಿನಾಥ ಸ್ವಾಮಿಯ ಮೋಕ್ಷ ಕಲ್ಯಾಣದ ದಿನದಂದು ವಿಶೇಷ ಪೂಜೆಗಳು ನಡೆಯುತ್ತವೆ. ಬೇರೆ ದಿನಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ ಹೀಗೆ ಮೂರು ಬಾರಿ ಪೂಜೆ ನಡೆಯುತ್ತದೆ. ವರ್ಷದಲ್ಲಿ ವಾರ್ಷಿಕೋತ್ಸವವು ಜನವರಿ - ಫೆಬ್ರವರಿ ತಿಂಗಳಲ್ಲಿ ಆಗುತ್ತದೆ.

ಸಧ್ಯದ ಪರಿಸ್ಥಿತಿ

ಬದಲಾಯಿಸಿ

ಬಹಳ ಪುರಾತನವಾದ ಈ ದೇವಾಲಯವನ್ನು ಇತ್ತೀಚೆಗಷ್ಟೇ ಧರ್ಮಸ್ಥಳದ ಧರ್ಮೋತ್ತಾನ ಟ್ರಸ್ಟಿನವರು ಜೀರ್ಣೋದ್ಧಾರಗೊಳಿಸಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. https://www.jainheritagecentres.com/jainism-in-india/karnataka/moodabidri/
  2. ಶೆಣೈ, ವೈ. ಉಮಾನಾಥ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜುಶ್ರೀ ಪ್ರಿಂಟರ್ಸ್.