ಮಹೇಂದ್ರ ಚಿಟ್ಟಿಬಾಬು

ಮಹೇಂದ್ರ ಚಿಟ್ಟಿಬಾಬು, ಕನ್ನಡ ಸಿನಿಮಾರಂಗದ ಹೆಸರಾಂತ ಛಾಯಾಗ್ರಾಹಕ, ಹಲವು ವರ್ಷಗಳಿಂದ ಜನಪ್ರಿಯ ಧಾರಾವಾಹಿಯೆಂಬ ಹೆಗ್ಗಳಿಗೆ ಪಾತ್ರವಾಗಿ ಓಡುತ್ತಿರುವ, ಪಾಂಡುರಂಗ ವಿಠಲ ನಗೆ ಧಾರಾವಾಹಿಯ ಚಿತ್ರೀಕರಣವನ್ನು ಮಾಡುತ್ತಾ ಬಂದಿದ್ದಾರೆ. ಇತರ ಕನ್ನಡ ಸೀರಿಯಲ್ ಗಳಲ್ಲೂ ಚಿತ್ರೀಕರಣ ಮಾಡಿದ್ದಾರೆ.

ಬಾಲ್ಯ, ಪರಿವಾರ

ಬದಲಾಯಿಸಿ

'ಮಹೇಂದ್ರ ಚಿಟ್ಟಿಬಾಬು', ಹಿಂದಿನ ಕನ್ನಡ ಚಿತ್ರರಂಗದ ಹೆಸರಾಂತ ಚಿಟ್ಟಿಬಾಬುರವರ ಮಕ್ಕಳಲ್ಲಿ ಒಬ್ಬರು. ದಿವಂಗತ, ಚಿಟ್ಟಿಬಾಬುರವರರಿಗೆ ೭ ಮಕ್ಕಳು. ಅವರಲ್ಲಿ ೪ ಜನ ಕ್ಯಾಮರಾ ಮನ್‍ಗಳಾಗಿ ಕೆಲಸಮಾಡುತ್ತಿದ್ದಾರೆ. ಚೆನ್ನೈ ಸ್ಟುಡಿಯೋದಲ್ಲಿ ಗಜೇಂದ್ರ ಇದ್ದಾರೆ. ಕೇರಳ ದೂರದರ್ಶನದಲ್ಲಿ ಕ್ಯಾಮರಾಮನ್ ಆಗಿ ಮತ್ತೊಬ್ಬ ಮಗ, ರಾಜೇಂದ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಉದಯ ವಾಹಿನಿಯಲ್ಲಿ ನೌಕರಿಯಲ್ಲಿದ್ದ ಸಾಯಿಬಾಬು. ಈಗ ಸನ್ ಟಿವಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಂದೆಯವರ ಚಿಟ್ಟಿಬಾಬು ಹೆಸರು ಎಲ್ಲರ ಹೆಸರಿನ ಜೊತೆಗೆ ಸೇರಿಕೊಂಡಿದೆ. ಮಹೇಂದ್ರ ಚಿಟ್ಟಿಬಾಬು ಬಿಎಸ್ಸಿ ಪದವೀಧರ. ಅವರು, ರಾಜ್‍ಕುಮಾರ್ ಚಿತ್ರಗಳಿಗೆ ಚಿತ್ರೀಕರಣ ಮಾಡಿದ್ದರು. ಅವುಗಳ ವಿವರಗಳು ಹೀಗಿವೆ :

  • ನಾ ನಿನ್ನ ಮರೆಯಲಾರೆ,
  • ಎರಡು ಕನಸು,
  • ಗಿರಿಕನ್ಯೆ,
  • ಸಂಪತ್ತಿಗೆ ಸವಾಲು,
  • ಹುಲಿಯ ಹಾಲಿನ ಮೇವು,
  • ಕಸ್ತೂರಿ ನಿವಾಸ ಸೇರಿದಂತೆ, ಪುಟ್ಟಣ್ಣ ಕಣೆಗಾಲ್ ರವರ ನಾಗರ ಹಾವು, ಮೊದಲಾದ ಪ್ರಸಿದ್ಧ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮಕ್ಕಳು ತಂದೆಯವರ ಜೊತೆಯಲ್ಲಿ ಸಹಾಯಕರಾಗಿ ದುಡಿದು ಕೆಲಸವನ್ನು ಕಲಿತುಕೊಂಡರು.

ಪ್ರಶಸ್ತಿ

ಬದಲಾಯಿಸಿ

'ನಾಗರಹಾವು' ಚಿತ್ರಕ್ಕೆ ಅತ್ಯುತ್ತಮ ಛಾಯಾಗ್ರಾಹಕನೆಂಬ ಪ್ರಶಸ್ತಿ ಬಂತು.

ಹಾಸ್ಯ ಧಾರಾವಾಹಿಗಳಲ್ಲಿ

ಬದಲಾಯಿಸಿ

ಇಲ್ಲಿ ಸಾಮಾನ್ಯವಾಗಿ ಕಥೆ ನಿಧಾನವಾಗಿ ಓಡುತ್ತಿರುತ್ತದೆ. ಆದರೆ ದೃಶ್ಯಗಳು ಬಹಳ ವೇಗವಾಗಿರುತ್ತವೆ. ಕೇವಲ ೨-೩ ನಿಮಿಷಗಳಲ್ಲಿ ಕಲಾವಿದರ ನಾಲ್ಕಾರು ಸಂಭಾಷಣೆಗಳ ಹಾಗೂ ಚಿತ್ರ-ವಿಚಿತ್ರ ಹಾವಭಾವಗಳನ್ನು ಸೆರೆಹಿಡಿಯಬೇಕಾಗುತ್ತದೆ. ಪಾಂಡುರಂಗ ಗಂಡುಗಲಿ ಧಾರಾವಾಹಿಯಲ್ಲಿ ಮನೆಯ ವಾತಾವರಣವನ್ನು ಅಚ್ಚುಕಟ್ಟಾಗಿ ಸೆರೆಹಿಡಿದಿದ್ದಾರೆ. ಕ್ಯಾಮರಾದ ಚಿಕ್ಕ ಫ್ರೇಮ್ವರ್ಕ್‍ನಲ್ಲೇ ವರಾಂಡ, ಡೈನಿಂಗ್ ಟೇಬಲ್,ಇಟ್ಟಿರೋ ಜಾಗ ಅಡುಗೆ ಮನೆಗಳನ್ನು ತೋರಿಸುವುದರ ಜೊತೆಗೆ ಎಷ್ಟು ದೊಡ್ಡಮನೆಯೋ ಎನ್ನುವ ಭಾವನೆಯನ್ನೂ ತರಿಸುವ ಪ್ರಯತ್ನವನ್ನು ಕ್ಯಾಮರಾದ ಮೂಲಕ ಮಾಡಿತೋರಿಸುತ್ತಾರೆ.