ಮಹಿಮ ರಂಗನಾಥ ಸ್ವಾಮಿ ಬೆಟ್ಟ

ಮಹಿಮಾಪುರ[೧] ಒಂದು ಸಣ್ಣ ಗ್ರಾಮವಾಗಿದ್ದು ಒಂದು ಕಡೆ ಕಲ್ಲು ಬೆಟ್ಟಗಳು ಹಾಗು ಮತ್ತೊಂದು ಕಡೆ ಹಸಿರು ಹೊಲಗಳಿಂದ ಸುತ್ತುವರೆದಿದೆ. ಈ ಗ್ರಾಮದ ವೈಶಿಷ್ಟ್ಯವೆಂದರೆ ಇಲ್ಲಿ ನಾರಾಯಣನ ವಾಹನವಾದ ಗರುಡನನ್ನು ಪೂಜಿಸುಲಾಗುತ್ತದೆ. ಇಲ್ಲಿನ ಮುಖ್ಯ ದೇವರು ಮಹಿಮಾರಂಗನಾಥ ಸ್ವಾಮಿ.[೨] ಮಹಿಮಾರಂಗನಾಥ ಸ್ವಾಮಿ ದೇವಾಲಯವು ಒಂದು ಸುಂದರವಾದ ಬೆಟ್ಟದ ಮೇಲೆ ಇದೆ.

ಮಹಿಮಾಪುರ ಗ್ರಾಮವು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-೪೮ ರಿಂದ ಕೇವಲ ೧.೫ ಕಿ.ಮೀ ದೂರದಲ್ಲಿದೆ.

ಸುಮಾರು ೩೫೦ ಮೆಟ್ಟಿಲುಗಳನ್ನು ಹತ್ತಿದರೆ ಬೆಟ್ಟದ ಮೇಲೆ ತಲುಪಬಹುದು. ಇಲ್ಲಿ ಚೋಳ ಶೈಲಿಯ ಸುಂದರವಾದ ರಂಗನಾಥ ಸ್ವಾಮಿ ದೇವಾಲಯವಿದೆ. ಈ ದೇವಾಲಯವು ಗರುಡ, ರಂಗನಾಥ ಮತ್ತು ಹನುಮಂತನ ವಿಗ್ರಹಗಳನ್ನು ಹೊಂದಿದೆ. ಸಂಪೂರ್ಣ ದೇವಾಲಯವು ಕಲ್ಲಿನಿಂದ ಕಟ್ಟಲ್ಪಟ್ಟಿದೆ.

ಬೆಟ್ಟದ ಮೇಲಿನಿಂದ ಶಿವಗಂಗೆ ಬೆಟ್ಟ, ಆಲದ ಹಳ್ಳೀ ರಂಗನಾಥ ಸ್ವಾಮಿ ಬೆಟ್ಟ ಹಾಗು ಹಸಿರು ಹೊಲ ಗದ್ದೆಗಳನ್ನು ನೋಡಬಹುದು. ದೇವಾಲಯದ ಪಕ್ಕದಲ್ಲಿ ಒಂದು ಎಲಚಿ ಮರವಿದೆ. ಎಲಚಿ ಹಣ್ಣುಗಳು ಗರುಡನಿಗೆ ಪ್ರಿಯವಾದವು. ಇಲ್ಲಿ ಪ್ರತಿದಿನ ಬೆಳಗಿನ ಸಮಯದಲ್ಲಿ ಮಾತ್ರ ಪೂಜೆ ಮಾಡಲಾಗುತ್ತದೆ. ಶನಿವಾರದಂದು ಮಾತ್ರ ಬೆಳಗ್ಗೆ ಮತ್ತು ಸಂಜೆ ಪೂಜೆ ಮಾಡಲಾಗುತ್ತದೆ.

ಒಟ್ಟಿನಲ್ಲಿ ಇದು ಒಂದು ಸುಂದರವಾದ ಪ್ರವಾಸಿ ತಾಣವಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. "ಮಹಿಮಾಪುರ". Retrieved 7 June 2020.
  2. "ಮಹಿಮಾ ರಂಗನಾಥಸ್ವಾಮಿ ಬೆಟ್ಟ". Retrieved 7 June 2020.