ಚಿಂತಾಮಣಿಯಿಂದ ೬ ಕಿ. ಮೀ ದೂರದಲ್ಲಿರುವ ಒಂದು ಗುಹಾಂತರ ದೇವಾಲಯಗಳಲ್ಲೊಂದು. ’ಅಂಬಾಜಿದುರ್ಗ’ ಪರ್ವತ ಶ್ರೇಣಿಯ ಒಂದು ಬೆಟ್ಟವನ್ನು ಕೊರೆದು, ’ಕೈಲಾಸಗಿರಿ ಗುಹಾಲಯ ದೇವಸ್ಥಾನ’ ವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ’ಚತುರ್ಮುಖ ಶಿವ’, ’ಪಾರ್ವತಿ’ ಮತ್ತು ’ಗಣೇಶ’ ನ ದೇವಸ್ಥಾನಗಳಿವೆ. ಬೆಟ್ಟದಲ್ಲಿಯೇ ಬೃಹತ್ ಗಾತ್ರದ ’ಜಟಾಧಾರಿ ಶಿವನ ವಿಗ್ರಹ’ ಕೆತ್ತುವ ಕಾರ್ಯ, ಮಾಜಿ ಸಚಿವ, ’ಚೌಡರೆಡ್ಡಿ’ ಕುಟುಂಬದವರ ಮೇಲ್ವಿಚಾರಣೆಯಲ್ಲಿ, ಭರದಿಂದ ಸಾಗಿದೆ. ಧಾರ್ಮಿಕ ಹಾಗೂ ಸಾಹಸ ಪ್ರವೃತ್ತಿಯ ಜನರಿಗೆ ಕೈಲಾಸಗಿರಿ ಒಂದು ಹೇಳಿಮಾಡಿಸಿದ ತಾಣ. ಇದು ಬೆಂಗಳೂರಿನಿಂದ ಸುಮಾರು ೭೫ ಕಿ.ಮೀ ದೂರದಲ್ಲಿದೆ.