ಮಹಾವೀರ ಸ್ವಾಮಿ ಬಸದಿ, ಬಜಿರೆ
ಸ್ಥಳ
ಬದಲಾಯಿಸಿಮಹಾವೀರ ಸ್ವಾಮಿ ಬಸದಿಯು ದಕ್ಷಣಿ ಕನ್ನಡ ಜಿಲ್ಕೆಯ, ಬೆಳ್ತಂಗಡಿ ತಾಲೂಕಿನ, ಬಜಿರೆಯಲ್ಲಿದೆ.
ಮಾರ್ಗ
ಬದಲಾಯಿಸಿಬೆಳ್ತಂಗಡಿಯಿಂದ ಸುಮಾರು ೨೦ ಕಿಲೋಮೀಟರ್ ದೂರದ ವೇಣೂರು ಮಾರ್ಗವಾಗಿ ಚಲಿಸಿ ಬಂಟ್ವಾಳ ದಾರಿಯಲ್ಲಿ ಸಾಗಿದರೆ ಸಿಗುವ ಪುಟ್ಟ ಗ್ರಾಮವೇ ಬಜಿರೆ ಗ್ರಾಮ.
ಶಿಲಾನ್ಯಾಸ
ಬದಲಾಯಿಸಿಈ ಬಸದಿಯನ್ನು ಶ್ರೀ ನಾಭಿರಾಜ ಇಂದ್ರರು ಸುಮಾರು ಐವತ್ತು ವರ್ಷಗಳ ಹಿಂದೆ ಕಟ್ಟಿಸಿದರು. ಈ ಬಸದಿಯಲ್ಲಿ ಪೂಜೆಗೊಳ್ಳುವ ಮೂಲ ಸ್ವಾಮಿಯ ಮೂರ್ತಿಯನ್ನು ಅಮೃತಶಿಲೆಯಿಂದ ಮಾಡಲಾಗಿದೆ. ಮೂರ್ತಿಯು ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದ್ದು, ಪರ್ಯಂಕಾಸನ ಭಂಗಿಯಲ್ಲಿದೆ. ಅಮೃತಶಿಲೆಯ ಈ ಮೂರ್ತಿಯನ್ನು ಸುವರ್ಣ ಕಮಲ ಪೀಠದ ಮೇಲೆ ಬಹುಸುಂದರವಾಗಿ ವಿರಾಜಮಾನವಾಗಿ ಇರಿಸಲಾಗಿದೆ. ಈ ಮೂರ್ತಿಯ ಕೆಳಗೆ ಸಿಂಹ ಲಾಂಛನವಿದೆ. ಸ್ವಾಮಿಯ ಮೂರ್ತಿ ಅಕ್ಕಪಕ್ಕದಲ್ಲಿ ಯಕ್ಷ ಯಕ್ಷಿಯರು ಇಲ್ಲ. ನಾವು ಬಸದಿಯ ಮೂಲ ನಾಯಕನ ಜೊತೆಯಲ್ಲಿ ಇನ್ನೂ ಅನೇಕ ಮೂರ್ತಿಗಳನ್ನು ಕಾಣಬಹುದು ಅವುಗಳನ್ನು ಹೆಸರಿಸುವುದಾದರೆ ಚಿಕ್ಕ ಪಾರ್ಶ್ವನಾಥ ಸ್ವಾಮಿಯ ಮೂರ್ತಿ, ಅಷ್ಟಮ ನಂದೀಶ್ವರ ಮೂರ್ತಿ, ಚವ್ವೀಸ್ ತೀರ್ಥಂಕರ ಮೂರ್ತಿ. ಮೂಲ ನಾಯಕನ ಬಿಂಬದ ಮೇಲ್ಗಡೆ ಮುಕ್ಕೊಡೆ ಯನ್ನು ತೋರಿಸಲಾಗಿದೆ. ಅಷ್ಟಮಹಾ ಪ್ರಹಾರ್ಯಗಳಾದ ಮುಕ್ಕೊಡೆ, ಪುಷ್ಪವೃಷ್ಟಿ, ದಿವ್ಯಧ್ವನಿಯ ವಿನ್ಯಾಸವನ್ನು ತೋರಿಸಲಾಗಿದೆ. ಇವುಗಳ ಜೊತೆಗೆ ಇನ್ನೊಂದು ಪಂಚಪರಮೇಷ್ಠಿ ಗಳ ಮೂರ್ತಿ ಇದೆ. ವಿಶ್ವನಾಥ ತೀರ್ಥಂಕರರ ಇನ್ನೊಂದು ಮೂರ್ತಿಯೂ ಇದೆ. ಬಸದಿಯ ಸುತ್ತಲೂ ಬಲಿ ಕಲ್ಲುಗಳನ್ನು ಕಾಣಬಹುದು. ನಾವು ಬಸದಿಯ ಗರ್ಭಗುಡಿಯಿಂದ ಬರುತ್ತಿರುವಂತೆ ತೀರ್ಥ ಮಂಟಪ, ಘಂಟಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಪ್ರದಕ್ಷಿಣಾಪಥ ಕಾಣಬಹುದು.ಬಸದಿಯ ಹೊರಗಡೆ ಗೋಡೆಗಳ ಮೇಲೆ ದ್ವಾರಪಾಲಕರ ಸುಂದರವಾದ ಚಿತ್ರವನ್ನು ಕಾಣಬಹುದು.
ಪೂಜಾ ವಿಧಾನ
ಬದಲಾಯಿಸಿಮೂಲ ನಾಯಕನಿಗೆ ದಿನಕ್ಕೆ ಒಂದು ಬಾರಿ ಪೂಜೆ ಮತ್ತು ಅಭಿಷೇಕ ನಡೆಯುತ್ತದೆ. ಪೂಜೆಯ ವೇಳೆ ಸಿಯಾಳ, ಜಲ, ಗಂಧ, ಹಾಲು ಮುಂತಾದವುಗಳ ಅಭಿಷೇಕ ಮಾಡಲಾಗುತ್ತದೆ.ಪದ್ಮಾವತಿ ಅಮ್ಮನವರ ಮೂರ್ತಿಗೆ ಸೀರೆ ಉಡಿಸಿ ಬಳೆ ತೊಡಿಸಿ ಅಲಂಕಾರ ಮಾಡಲಾಗುತ್ತದೆ. ಶುಕ್ರವಾರದ ದಿನ ವಿಶೇಷ ಪೂಜೆ ನಡೆಯುತ್ತದೆ. ಪದ್ಮಾವತಿ ದೇವಿಗೆ ನೈವೇದ್ಯ, ಚರು, ಮುಂತಾದವುಗಳನ್ನು ಅರ್ಪಿಸಲಾಗುತ್ತದೆ.ಶ್ರೀ ಆದಿನಾಥ ಸ್ವಾಮಿಯೊಂದಿಗೆ, ಶ್ರೀ ಪದ್ಮಾವತಿ ದೇವಿ, ಬ್ರಹ್ಮಯಕ್ಷ, ಶ್ರೀ ಪಾರ್ಶ್ವನಾಥ ಸ್ವಾಮಿ, ಭಗವಾನ್ ಬಾಹುಬಲಿ, ನಂಪು ಉದ್ಯಾಪನೆಗೊಂಡ ಶ್ರೀ ಅನಂತನಾಥ ಸ್ವಾಮಿ, ಶ್ರೀ ಚಂದ್ರನಾಥ ಸ್ವಾಮಿಯವರ ದಿನಂಪ್ರತಿ ಒಂದುಹೊತ್ತು ಅಭಿಷೇಕ, ಪೂಜೆ ನಡೆಯುತ್ತಿದೆ. ಬಸದಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮವೆಂದರೆ ವಾರ್ಷಿಕ ಜಾತ್ರೆ, ನವರಾತ್ರಿ, ನೂಲಹುಣ್ಣಿಮೆ, ನಿರ್ಮಾಣ ಪೂಜೆಗಳು ನಡೆಯುತ್ತವೆ.[೧]
ಆವರಣ
ಬದಲಾಯಿಸಿಬಸದಿಯಲ್ಲಿ ಮೂಲ ನಾಯಕ ಮಹಾವೀರರ ಸನ್ನಿಧಿಯಲ್ಲಿ ಪೂಜಿಸಲ್ಪಡುವ ಇನ್ನೊಂದು ಮೂರ್ತಿ ಎಂದರೆ ಶ್ರೀಮಾತೆ ಪದ್ಮಾವತಿ ಅಮ್ಮನವರು. ಇದು ಪಂಚಲೋಹದಿಂದ ಮಾಡಿದ್ದಾಗಿದೆ. ಈ ಮೂರ್ತಿಗೆ ಕೂಡ ದಿನದಲ್ಲಿ ಒಂದು ಬಾರಿ ಪೂಜೆ ನಡೆಸಲಾಗುತ್ತದೆ. ಇದನ್ನು ಅಲಂಕೃತ ಸುಂದರ ದೇವಕೋಷ್ಠದಲ್ಲಿ ಇಡಲಾಗಿದೆ. ಇದು ಬಹುಸುಂದರವಾಗಿ ಕಂಗೊಳಿಸುತ್ತಿದೆ. ಈ ಬಸದಿಯಲ್ಲಿ ನೇಗಿನ ನೆಲೆ ಇಲ್ಲ. ಬಸದಿಯ ಹೊರಗಡೆ ನಾವು ಬೇರೆ ಬೇರೆ ಕ್ಷೇತ್ರಪಾಲಕನಿಗಿಂತ ವಿಭಿನ್ನವಾದ ಭೈರವ ಕ್ಷೇತ್ರ ಪಾಲಕನನ್ನು ಕಾಣುತ್ತೇವೆ. ಇಲ್ಲಿಯ ವಿಶೇಷವೇನೆಂದರೆ ಈ ಸುಂದರವಾದ ಭೈರವ ಕ್ಷೇತ್ರ ಪಾಲಕನ ಸನ್ನಿಧಾನ ಬಳಿಯಲ್ಲೆ ನಾಗಮೂರ್ತಿ ಕೂಡ ಇದೆ. ಇಲ್ಲಿ ತ್ರಿಶೂಲ ಮುಂತಾದ ಆಯುಧಗಳು ಕಾಣಸಿಗುತ್ತವೆ. ಬಸದಿಯ ಕಂಬಗಳಲ್ಲಿ ಯಾವುದೇ ರೀತಿಯ ಕೆತ್ತನೆಗಳು ಇಲ್ಲ. ಮತ್ತು ಇಲ್ಲಿ ಯಾವುದೇ ರೀತಿಯ ಶಿಲಾಶಾಸನಗಳು ಕೂಡ ಇಲ್ಲ.
ಉಲ್ಲೇಖ
ಬದಲಾಯಿಸಿ- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್.