ಮಹಾಭೂತಗಳು ಹಿಂದೂ ಮತ್ತು ಭೌದ್ಧ ಧರ್ಮಗಳ ನಂಬಿಕೆಯಲ್ಲಿ ಬ್ರಹ್ಮಾಂಡವನ್ನು ರಚಿಸುವ ಮೂಲಭೂತ ತತ್ವಗಳು. ಈ ನಂಬಿಕೆಯ ತತ್ವದ ಪ್ರಕಾರ ಇಡೀ ವಿಶ್ವವೇ ಪಂಚಭೂತಗಳೆಂಬ ಐದು ಮೂಲವಸ್ತುಗಳಿಂದ ಮಾಡಲ್ಪಟ್ಟಿದೆ ಅಥವಾ ಪ್ರತಿನಿಧಿಸಲ್ಪಟ್ಟಿದೆ. ಇದಕ್ಕಾಗಿಯೇ ವಿಶ್ವವನ್ನು ಪ್ರಪಂಚ ಎಂದೂ ಕರೆಯುತ್ತಾರೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಹೇಳಿರುವಂತೆ ಆಯುರ್ವೇದ, ವಾಸ್ತು, ಸಿದ್ಧಿ ಬಲ ಮತ್ತು ಉನ್ನತ ಪ್ರಜ್ಞೆಗಳ ತಳಹದಿಯೇ ಈ ಪಂಚಭೂತಗಳು. ಪುರಾತನ ಕಾಲದಿಂದಲೂ ಪವಿತ್ರ ಗ್ರಂಥಗಳಲ್ಲಿ ಇವುಗಳ ಉಲ್ಲೇಖವಿದೆ.


ಪಂಚಭೂತಗಳು ಬದಲಾಯಿಸಿ

ಈ ಐದು ಮೂಲವಸ್ತುಗಳು ವಿಶ್ವದಲ್ಲಿ ಮತ್ತು ಮಾನವ ದೇಹದಲ್ಲಿ ಒಂದು ತರದ ಸಮತೋಲನದಲ್ಲಿ ಇರುತ್ತವೆ. ಈ ಸಮತೋಲನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರಾಕೃತಿಕ ಅನಾಹುತಗಳು ಅಥವಾ ದೇಹದಲ್ಲಿ ರೋಗಗಳಾಗಿ ಕಾಣಿಸಿಕೊಳ್ಳುತ್ತವೆ.


  1. ಭೂಮಿ (ಪೃಥ್ವಿ)
  2. ಜಲ (ನೀರು)
  3. ಅಗ್ನಿ
  4. ವಾಯು
  5. ಆಕಾಶ

ಪ್ರಪಂಚದ ಎಲ್ಲ ವಸ್ತುಗಳೂ ಈ ಐದು ಮೂಲವಸ್ತುಗಳಿಂದ ಮಾಡಲ್ಪಟ್ಟಿವೆ ಎಂದು ನಂಬಿಕೆ. ಇದೇ ಕಾರಣಕ್ಕೆ ಈ ಐದು ವಸ್ತುಗಳನ್ನು ದೇವರೆಂದೂ ಪೂಜಿಸುತ್ತಾರೆ.

  • ಭೂಮಿ --> ಭೂದೇವಿ ಎಂದೂ
  • ಜಲ --> ಗಂಗಾದೇವಿ ಎಂದೂ
  • ವಾಯು --> ವಾಯುದೇವ ಎಂದೂ
  • ಅಗ್ನಿ --> ಅಗ್ನಿದೇವ ಎಂದೂ
  • ಆಕಾಶ --> ಶಬ್ದ ಬ್ರಹ್ಮ ಎಂದೂ ಪೂಜಿಸುತ್ತಾರೆ.


ಭೂಮಿ ಬದಲಾಯಿಸಿ

ಭೂಮಿಯು ಈ ಪಂಚಭೂತಗಳಲ್ಲಿ ಮೊದಲನೆಯ ಮತ್ತು ಅತ್ಯಂತ ಕನಿಷ್ಠ (ಕೆಳಗಿನ) ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ಚೌಕ, ಬಣ್ಣ ಹಳದಿ, ಇಂದ್ರಿಯ ಅಥವಾ ಗ್ರಹಿಕೆ ವಾಸನೆ, ಕಾರ್ಯ ವರ್ಜಿಸುವಿಕೆ (ಗುದ), ಚಕ್ರ ಮೂಲಾಧಾರ, ದೇವರು ಗಣೇಶ, ಬೀಜ "ಲಾಂ"


ಜಲ ಬದಲಾಯಿಸಿ

ಜಲ ಅಥವಾ ನೀರು ಪಂಚಭೂತಗಳಲ್ಲಿ ಎರಡನೆಯ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ಅರ್ಧ ಚಂದ್ರಾಕೃತಿ, ಬಣ್ಣ ಬೆಳ್ಳಿ, ಇಂದ್ರಿಯ ಅಥವಾ ಗ್ರಹಿಕೆ ರುಚಿ, ಕಾರ್ಯ ಸಂತಾನೋತ್ಪತ್ತಿ (ಲೈಂಗಿಕ ಅಂಗ), ಚಕ್ರ ಸ್ವದಿಷ್ಠಾನ, ದೇವರು ವಿಷ್ಣು, ಬೀಜ "ವಾಂ"


ಅಗ್ನಿ ಬದಲಾಯಿಸಿ

ಅಗ್ನಿ ಅಥವಾ ತೇಜಸ್ಸು ಅಥವಾ ಬೆಂಕಿ ಪಂಚಭೂತಗಳಲ್ಲಿ ಮೂರನೆಯ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ತ್ರಿಕೋನ, ಬಣ್ಣ ಕೆಂಪು, ಇಂದ್ರಿಯ ಅಥವಾ ಗ್ರಹಿಕೆ ದೃಷ್ಟಿ, ಕಾರ್ಯ ಚಲನೆ (ಪಾದಗಳು), ಚಕ್ರ ಮಣಿಪುರ, ದೇವರು ಸೂರ್ಯ, ಬೀಜ "ರಾಂ"


ವಾಯು ಬದಲಾಯಿಸಿ

ವಾಯು ಅಥವಾ ಗಾಳಿ ಪಂಚಭೂತಗಳಲ್ಲಿ ನಾಲ್ಕನೆಯ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ವರ್ತುಳ, ಬಣ್ಣ ನೀಲಿ ಅಥವಾ ಕಪ್ಪು, ಇಂದ್ರಿಯ ಅಥವಾ ಗ್ರಹಿಕೆ ಸ್ಪರ್ಶ, ಕಾರ್ಯ ನಿರ್ವಹಣೆ (ಕೈಗಳು), ಚಕ್ರ ಅನಹಿತ, ದೇವರು ಶಿವ, ಬೀಜ "ಯಾಂ"


ಆಕಾಶ ಬದಲಾಯಿಸಿ

ಆಕಾಶ ಅಥವಾ ಅಂತರಿಕ್ಷ ಪಂಚಭೂತಗಳಲ್ಲಿ ಐದನೆಯ ಅಥವಾ ಉನ್ನತ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ಜ್ವಾಲೆ, ಬಣ್ಣ ನೇರಳೆ, ಇಂದ್ರಿಯ ಅಥವಾ ಗ್ರಹಿಕೆ ಶ್ರವಣ (ಕೇಳಿಸಿಕೊಳ್ಳುವದು), ಕಾರ್ಯ ಸಂಪರ್ಕ (ಗಂಟಲು), ಚಕ್ರ ವಿಶುದ್ಧ, ದೇವರು ದೇವಿ, ಬೀಜ "ಹಾಂ"


ಪಂಚಭೂತ ಕ್ಷೇತ್ರಗಳು ಬದಲಾಯಿಸಿ

ಭಾರತದಲ್ಲಿ, ಪಂಚಭೂತಗಳಿಗೆ ಮೀಸಲಾದ ಐದು ದೇವಸ್ಥಾನಗಳಿವೆ. ಇವಕ್ಕೆ ಪಂಚಭೂತ ಕ್ಷೇತ್ರಗಳೆಂದು ಕರೆಯುತ್ತಾರೆ. ಪ್ರತಿಯೊಂದು ದೇವಸ್ಥಾನವೂ ಒಂದೊಂದು ಪಂಚಭೂತಕ್ಕೆ ಮೀಸಲಾಗಿದ್ದು ಶಿವನನ್ನು ಭಿನ್ನ ರೂಪಗಳಲ್ಲಿ ಪ್ರತಿನಿಧಿಸುತ್ತವೆ.

ದೇವಸ್ಥಾನ ಕ್ಷೇತ್ರ ಪಂಚಭೂತ
ಏಕಾಂಬರೇಶ್ವರ ದೇವಸ್ಥಾನ ಕಂಚೀಪುರ, ತಮಿಳುನಾಡು ಪೃಥ್ವಿ
ತಿರುವನೈಕ್ಕ ದೇವಸ್ಥಾನ ತಿರುಚಿರಾಪಳ್ಳಿ, ತಮಿಳುನಾಡು ಜಲ
ಅರುಣಾಚಲೇಶ್ವರ ತಿರುಕೊಯ್ಲ ದೇವಸ್ಥಾನ ತಿರುವಣ್ಣಾಮಲೈ, ತಮಿಳುನಾಡು ತೇಜಸ್ಸು (ಅಗ್ನಿ)
ನಟರಾಜ ದೇವಸ್ಥಾನ ಚಿದಂಬರಂ, ತಮಿಳುನಾಡು ಆಕಾಶ
ಕಾಳಹಸ್ತೀಶ್ವರ ದೇವಸ್ಥಾನ ಕಾಳಹಸ್ತಿ (ತಿರುಪತಿ ಹತ್ತಿರ), ಆಂಧ್ರ ಪ್ರದೇಶ ವಾಯು
"https://kn.wikipedia.org/w/index.php?title=ಮಹಾಭೂತ&oldid=539340" ಇಂದ ಪಡೆಯಲ್ಪಟ್ಟಿದೆ