ಮಲೇಷ್ಯಾ ಏರ್ಲೈನ್ಸ್ ವಿಮಾನ 370 ಅನಧಿಕೃತ ಕಣ್ಮರೆ
ಎಂಎಚ್ 370 ಬೋಯಿಂಗ್ ವಿಮಾನ ಕಣ್ಮರೆ
ಬದಲಾಯಿಸಿ- ಮಲೇಷ್ಯಾ ಮೂಲದ ಏರ್‌ಏಷ್ಯಾ ಕಂಪೆನಿಯು ದಕ್ಷಿಣ ಏಷ್ಯಾ ವಲಯದಲ್ಲಿ ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಸೇವೆ ಒದಗಿಸುತ್ತಿರುವ ಸಂಸ್ಥೆಯಾಗಿದೆ. ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಸಂಜಾತ ಟೋನಿ ಫರ್ನಾಂಡಿಸ್ ಇದರ ಮಾಲೀಕತ್ವ ಹೊಂದಿದ್ದಾರೆ. ಇತ್ತೀಚೆಗೆ ಭಾರತಕ್ಕೂ ತನ್ನ ಸೇವೆ ವಿಸ್ತರಿಸಿರುವ ಈ ಕಂಪೆನಿಯ ಸೇವೆ ಸುರಕ್ಷತೆಗೆ ಹೆಸರಾಗಿತ್ತು. ಈ ಮುನ್ನ ಈ ಕಂಪೆನಿಯ ಯಾವುದೇ ವಿಮಾನ ಈ ರೀತಿ ಅಪಘಾತಕ್ಕೆ ಒಳಗಾಗಿರಲಿಲ್ಲ ಎನ್ನಲಾಗಿದೆ
- ಕ್ವಾಲಾಂಲಂಪುರದಿಂದ ಬೀಜಿಂಗ್‌ಗೆ ಹೊರಟಿದ್ದ ಮಲೇಷ್ಯಾ ಏರ್‌ಲೈನ್‌್ಸನ ಎಂಎಚ್ 370 ಬೋಯಿಂಗ್ ವಿಮಾನ ಇದೇ ಮಾರ್ಚ್ 8ರಂದು ಹಠಾತ್ತಾಗಿ ನಾಪತ್ತೆಯಾಗಿತ್ತು. ಹಲವು ದೇಶಗಳು ಸೇರಿ ಆಧುನಿಕ ಸಲಕರಣೆಗಳ ನೆರವಿನಿಂದ ಹಿಂದೂ ಮಹಾಸಾಗರದ ವಿಶಾಲ ಪ್ರದೇಶವನ್ನು ಜಾಲಾಡಿದ ನಂತರವೂ ವಿಮಾನದ ಒಂದೇ ಒಂದು ತುಣುಕು ಅವಶೇಷ ಕೂಡ ಪತ್ತೆಯಾಗಿಲ್ಲ.
ಏರ್‌ಲೈನ್ಸ್ ಎಂಎಚ್ 17 ಬೋಯಿಂಗ್ ಅವಘಡ
ಬದಲಾಯಿಸಿ- ಆಮ್‌ಸ್ಟರ್‌ಡ್ಯಾಮ್‌ನಿಂದ ಕ್ವಾಲಾಲಂಪುರಕ್ಕೆ ಹೋಗುತ್ತಿದ್ದ ಮಲೇಷ್ಯಾ ಏರ್‌ಲೈನ್ಸ್ ಎಂಎಚ್ 17 ಬೋಯಿಂಗ್ ವಿಮಾನವು ಇದೇ ಜುಲೈ 17ರಂದು ಪೂರ್ವ ಉಕ್ರೇನ್‌ನ ಬಂಡುಕೋರರ ವಶದಲ್ಲಿರುವ ಪ್ರದೇಶದ ಮೇಲೆ ಹಾರುತ್ತಿದ್ದಾಗ ಗುಂಡು ಹಾರಿಸಿ ಹೊಡೆದುರುಳಿಸಲಾಯಿತು. ಅದರಲ್ಲಿದ್ದ 298 ಜನ ಸಾವಿಗೀಡಾಗಿದ್ದರು.
ಕ್ಯುಜಡ್ 8501 ವಿಮಾನ ಕಣ್ಮರೆ
ಬದಲಾಯಿಸಿಇಂಡೊನೇಷ್ಯಾ ದಿಂದ 162 ಜನರನ್ನು ಕರೆದೊಯ್ಯುತ್ತಿದ್ದ ಮಲೇಷ್ಯಾದ ಮತ್ತೊಂದು ವಿಮಾನ ದಿ.28-12-2014 ಭಾನುವಾರ ಬೆಳಿಗ್ಗೆ ನಿಗೂಢವಾಗಿ ಕಣ್ಮರೆಯಾಗಿದೆ. ಇಂಡೊನೇಷ್ಯಾದ ಸುರಬಯಾ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಬೆಳಗಿನ ಜಾವ 5.20ಕ್ಕೆ ಹೊರಟ ಏರ್‌ಏಷ್ಯಾ ಖಾಸಗಿ ವಿಮಾನ ಯಾನ ಸಂಸ್ಥೆಗೆ ಸೇರಿದ ವಿಮಾನ (ಕ್ಯುಜಡ್ 8501) ಬೆಳಿಗ್ಗೆ 8.30ಕ್ಕೆ ಸಿಂಗಪುರದ ಚಾಂಗಿ ನಿಲ್ದಾಣ ತಲುಪಬೇಕಿತ್ತು.
ವಿಮಾನ ಇಂಡೊನೇಷ್ಯಾದಿಂದ ಹೊರಟ 42 ನಿಮಿಷಗಳಲ್ಲಿ ವಿಮಾನ ಸಂಚಾರ ನಿಯಂತ್ರಣ ಕೇಂದ್ರದ (ಏರ್ ಟ್ರಾಫಿಕ್ ಕಂಟ್ರೋಲ್–ಎಟಿಸಿ) ಸಂಪರ್ಕ ಕಳೆದುಕೊಂಡಿತು. ವಿಮಾನ ಎಲ್ಲಿದೆ ಎಂಬ ಬಗ್ಗೆ ಸುಳಿವು ಇದುವರೆಗೂ ಸಿಕ್ಕಿಲ್ಲ. ಇದೇ ವರ್ಷಾರಂಭದಲ್ಲಿ ಮಲೇಷ್ಯಾದ ಎಂಎಚ್ 370 ವಿಮಾನ ಹಠಾತ್ತಾಗಿ ಕಣ್ಮರೆಯಾಗಿತ್ತು. ಇದು ಕಣ್ಮರೆಯಾಗಿದ್ದು ಹೇಗೆ ಎಂಬುದು ಇವತ್ತಿಗೂ ನಿಗೂಢವಾಗಿಯೇ ಉಳಿದಿದೆ.
ಈ ದುರ್ದೈವಿ ವಿಮಾನದಲ್ಲಿ ಏಳು ಸಿಬ್ಬಂದಿ ಹಾಗೂ 155 ಪ್ರಯಾಣಿಕರು ಸೇರಿದಂತೆ ಒಟ್ಟು 162 ಜನ ಇದ್ದರು. ಇವರಲ್ಲಿ 11 ಮಕ್ಕಳು ಹಾಗೂ ಒಂದು ಹಸುಗೂಸು ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನದಲ್ಲಿ ಭಾರತದವರು ಯಾರೂ ಇರಲಿಲ್ಲ ಎನ್ನಲಾಗಿದೆ. ವಿಮಾನದ ಪ್ರಯಾಣಿಕರು ಹಾಗೂ ಸಿಬ್ಬಂದಿ ಪೈಕಿ ಬಹುತೇಕ ಜನರು ಇಂಡೊನೇಷ್ಯಾದವರು.
155 ಪ್ರಯಾಣಿಕರಲ್ಲಿ ಇಂಡೊನೇಷ್ಯಾದ 149, ಕೊರಿಯಾದ ಮೂವರು, ಬ್ರಿಟನ್, ಸಿಂಗಪುರ, ಮಲೇಷ್ಯಾದ ತಲಾ ಒಬ್ಬರು ಇದ್ದರು. ಏಳು ಸಿಬ್ಬಂದಿ ಪೈಕಿ ಪ್ರಾನ್ಸ್‌ನ ಸಹ ಪೈಲಟ್ ಹೊರತುಪಡಿಸಿದರೆ ಉಳಿದ 6 ಜನ ಇಂಡೊನೇಷ್ಯಾದವರು. ದಟ್ಟ ಮಂಜು ಹಾಗೂ ಮೋಡ ಕವಿದ ಪ್ರತಿಕೂಲ ಹವಾಮಾನದಿಂದಾಗಿ ಸುಮಾತ್ರಾ ಪೂರ್ವ ಸಾಗರದ ಮಧ್ಯೆ ವಿಮಾನ ಪತನವಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಉಗ್ರರು ವಿಮಾನವನ್ನು ಅಪಹರಿಸಿರಬಹುದು ಎಂಬ ಶಂಕೆಯನ್ನು ತಳ್ಳಿ ಹಾಕಿದ್ದಾರೆ.
ವಿಮಾನ ಕಣ್ಮರೆಯಾದ ಸುಮಾತ್ರ ಪೂರ್ವ ಕರಾವಳಿ ಪ್ರದೇಶದಲ್ಲಿ ಮಂದ ಬೆಳಕು ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಶೋಧ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದೆ. ತೀವ್ರ ಪ್ರತಿಕೂಲ ವಾತಾವರಣದ ಆತಂಕದಲ್ಲಿದ್ದ ಪೈಲಟ್ ಕೊನೆಯ ಗಳಿಗೆಯಲ್ಲಿ ವಿಮಾನ ಪ್ರಯಾಣದ ವೇಳೆಯನ್ನು ಬದಲಿಸುವಂತೆ ಮನವಿ ಮಾಡಿಕೊಂಡಿದ್ದ ಎನ್ನಲಾಗಿದೆ.
ನಾಪತ್ತೆಯಾಗಿರುವ ಏರ್‌ಏಷ್ಯಾ ವಿಮಾನ ಪತ್ತೆಹಚ್ಚಲು ಇಂಡೊನೇಷ್ಯಾದ ಎರಡು ಸೇನಾ ವಿಮಾನಗಳು ಸಾಗರದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಒಂದು ದಿನದ ಮಟ್ಟಿಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಸೋಮವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣ್ಮರೆಗೆ ಕಾರಣ-ಊಹಾಪೋಹಗಳು
ಬದಲಾಯಿಸಿ- ಸುಮಾತ್ರಾ ಬಳಿ ಪತನ ಶಂಕೆ
ಸುಮಾತ್ರಾ ಪೂರ್ವ ಭಾಗಕ್ಕಿರುವ ಬೆಲಿನ್‌ಟುಂಗ್ ಸಾಗರದಲ್ಲಿ ವಿಮಾನ ಪತನಗೊಂಡ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಪತನಗೊಂಡ ನಿರ್ದಿಷ್ಟ ಸ್ಥಳ ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಿವೆ. ಆದರೆ, ಇಂಡೊನೇಷ್ಯಾ ಸಾರಿಗೆ ಸಚಿವ ಲಿವೊ ಟಿಯಾಂಗ್ ಲೈ ಅವರು ವ್ಯತಿರಿಕ್ತ ಹೇಳಿಕೆ ನೀಡಿ, ‘ಬೆಲಿನ್‌ಟುಂಗ್ ಸಾಗರದಲ್ಲಿ ವಿಮಾನದ ಯಾವೊಂದು ಅವಶೇಷದ ತುಣುಕೂ ಪತ್ತೆಯಾಗಿಲ್ಲ. ಮಾಧ್ಯಮ ವರದಿಗಳು ಸಂಪೂರ್ಣ ಸುಳ್ಳು’ ಎಂದಿದ್ದಾರೆ. ಈ ನಡುವೆ ‘ವಿಮಾನದಲ್ಲಿ ಇಂಧನ ಖಾಲಿಯಾಗಿ ಈ ಅವಘಡ ಸಂಭವಿಸಿರುವ ಸಾಧ್ಯತೆ ಇಲ್ಲ. ಅದರಲ್ಲಿ ಸಾಕಷ್ಟು ಇಂಧನ ತುಂಬಲಾಗಿತ್ತು’ ಎಂದು ಇಂಡೊನೇಷ್ಯಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
- ದೃಢಪಡಿಸಿದ ಏರ್‌ಏಷ್ಯಾ
‘ಇಂಡೊನೇಷ್ಯಾದ ಸುರಬಯಾ ವಿಮಾನ ನಿಲ್ದಾಣದಿಂದ ಸಿಂಗಪುರಕ್ಕೆ ಹೊರಟ ಕ್ಯುಜಡ್ 8501 ವಿಮಾನ ಸ್ಥಳೀಯ ಕಾಲಮಾನ 7.24ಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕ ಕಳೆದುಕೊಂಡಿದೆ ಎಂದು ತಿಳಿಸಲು ವಿಷಾದಿಸುತ್ತೇವೆ’ ಎಂದು ಏರ್ಏಷ್ಯಾ ಫೇಸ್‌ಬುಕ್‌ನಲ್ಲಿ ಹೇಳಿದೆ.
‘ವಿಮಾನ ಸಂಪರ್ಕ ಕಳೆದುಕೊಳ್ಳುವ ಮೊದಲು ಪೈಲಟ್ ಪರ್ಯಾಯ ಮಾರ್ಗಕ್ಕಾಗಿ ಇಂಡೊನೇಷ್ಯಾದ ವಿಮಾನ ಸಂಚಾರ ನಿಯಂತ್ರಣ ಕೇಂದ್ರಕ್ಕೆ (ಎಟಿಸಿ) ಮನವಿ ಮಾಡಿದ್ದ’ ಎಂದೂ ಅದು ಹೇಳಿದೆ. ‘ಎಟಿಸಿ ಸಂಪರ್ಕ ಕಳೆದುಕೊಳ್ಳುವ ಮೊದಲು ಪೈಲಟ್ ಬೇರೊಂದು ಮಾರ್ಗ ತೋರಿಸುವಂತೆ ಮನವಿ ಮಾಡಿಕೊಂಡಿದ್ದ’ ಎಂದು ಇಂಡೊನೇಷ್ಯಾ ಸಾರಿಗೆ ಸಚಿವಾಲಯದ ಅಧಿಕಾರಿ ಹಾಡಿ ಮುಸ್ತಾಫಾ ಬಹಿರಂಗಪಡಿಸಿದ್ದಾರೆ.
- ಹವಾಮಾನ ಕಾರಣವೇ?
ದಟ್ಟವಾದ ಮೋಡಗಳನ್ನು ತಪ್ಪಿಸಿಕೊಳ್ಳಲು ವಿಮಾನ ಹಾರುತ್ತಿದ್ದ ಎತ್ತರವನ್ನು 32 ಸಾವಿರ ಅಡಿಯಿಂದ 38 ಸಾವಿರ ಅಡಿಗೆ ಎತ್ತರಿಸಲು ಅವಕಾಶ ನೀಡಲು ಪೈಲಟ್ ಎಟಿಸಿಗೆ ಮನವಿ ಮಾಡಿದ್ದ. ‘ವಿಮಾನ ಕಾಣೆಯಾದ ಸುಮಾತ್ರಾ ಪ್ರದೇಶದ 50 ಸಾವಿರ ಅಡಿ ಎತ್ತರದಲ್ಲಿ ಭಾರಿ ಗುಡುಗು, ಸಿಡಿಲುಗಳಿಂದ ಕೂಡಿದ ಮಳೆ ಮತ್ತು ಬಿರುಗಾಳಿ ಬೀಸುತ್ತಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಕಣ್ಮರೆ ಸುದ್ದಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಸಜ್ಜಾಗಿದ್ದ ಜನರನ್ನು ಬೆಚ್ಚಿ ಬೀಳಿಸಿದೆ.
ಏರ್‌ಏಷ್ಯಾ ವಿಮಾನ ಅವಶೇಷ ಪತ್ತೆ
ಬದಲಾಯಿಸಿ- ಕ್ಯುಜಡ್ 8501 ವಿಮಾನ ಪತ್ತೆ-28-12-2014ಭಾನುವಾರ ಮುಂಜಾನೆ;
- ಇಂಡೋನೇಷ್ಯಾದ 'ಹರ್ಕ್ಯುಲೆಸ್' ವಿಮಾನ ಮೊದಲ ಬಾರಿಗೆ ಏರ್‌ಏಷ್ಯಾ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿತು. ಅಷ್ಟೇ ಅಲ್ಲ, ಕಡಲಿನ ಆಳದಲ್ಲಿ ವಿಮಾನ ಹೋಲುವ ನೆರಳನ್ನು ಗುರುತಿಸಿತ್ತು. ಈ ವಿಮಾನ ಈ ನಿರ್ದಿಷ್ಟ ಸ್ಥಳದತ್ತ ಸುಳಿಯಲು ಸುಳಿವು ನೀಡಿದ್ದು ಸ್ಥಳೀಯ ಮೀನುಗಾರರು. ಬೋರ್ನಿಯೊ ದ್ವೀಪದ ಈ ನಿರ್ದಿಷ್ಟ ಸ್ಥಳದಲ್ಲಿ ಭಾನುವಾರ ಮುಂಜಾನೆ ಮೇಲಿನಿಂದ ಏನೋ ದೈತ್ಯ ವಸ್ತು ನೀರಿಗೆ ದೊಪ್ಪನೆ ಬಿತ್ತು. ಸ್ವಲ್ಪ ಹೊತ್ತಿಗೆಲ್ಲ ಸ್ಫೋಟವಾಯಿತು. ಭಯದಿಂದ ನಾವು ಅಂದು ಅತ್ತ ಹೋಗಲೇ ಇಲ್ಲ ಎಂದು ಇಬ್ಬರು ಸ್ಥಳೀಯ ಮೀನುಗಾರರು ನಮಗೆ ತಿಳಿಸಿದರು. ಈ ಸುಳಿವನ್ನು ಆಧಾರವಾಗಿಟ್ಟುಕೊಂಡು ಹರ್ಕ್ಯುಲೆಸ್ ವಿಮಾನ ಮಂಗಳವಾರ ಮುಂಜಾನೆಯಿಂದಲೇ ಶೋಧ ಈ ಪ್ರದೇಶದಲ್ಲಿ ನಡೆದಿತ್ತು. ಸುಮಾರು 10.15ರ ಹೊತ್ತಿಗೆ ವಿಮಾನದ ಅವಶೇಷಗಳು ಪತ್ತೆಯಾದವು, ಎಂದು ಇಂಡೋನೇಷ್ಯಾ ಶೋಧ ಮತ್ತು ರಕ್ಷಣಾ ಸಂಸ್ಥೆಯ ವಕ್ತಾರ ಎಂ ಯೂಸಫ್ ಲತೀಫ್ ಹೇಳಿರುವುದನ್ನು 'ಜಕಾರ್ತ ಪೋಸ್ಟ್' ವರದಿ ಮಾಡಿದೆ. ನತದೃಷ್ಟ ವಿಮಾನದ ಶೋಧಕ್ಕಾಗಿ ಇಂಡೋನೇಷ್ಯಾ, ಮಲೇಷ್ಯಾ, ಆಸ್ಟ್ರೇಲಿಯಾ ಮತ್ತು ಬ್ರಿಟನ್ ದೇಶಗಳ 30 ಹಡಗುಗಳು, 15 ವಿಮಾನಗಳು ಮತ್ತು 7 ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಗೆ ಇಳಿದಿದ್ದವು. ಮೊದಲ ದಿನ 7 ವಲಯ, ಮೂರನೇ ದಿನ 13 ವಲಯ ಮಾಡಿಕೊಂಡು ನೆಲ, ಜಲ, ವಾಯು ಪ್ರದೇಶಗಳಲ್ಲಿ ಹುಡುಕಾಟ ನಡೆಯುತ್ತಿತ್ತು. ವಿಮಾನ ಸಂಪರ್ಕ ಕಡಿದುಕೊಂಡಿದ್ದ ಜಾವಾ ಸಮುದ್ರದಲ್ಲಿರುವ ಬೋರ್ನಿಯೊ ದ್ವೀಪದ ಸುತ್ತಲೂ ಸುಮಾರು 10 ಸಾವಿರ ಚದರ ನಾಟಿಕಲ್ ಮೈಲುಗಳ ಅಂತರದಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು.
- 162 ಪ್ರಯಾಣಿಕರನ್ನು ಹೊತ್ತಿದ್ದ ಏರ್ ಏಷ್ಯಾ ವಿಮಾನ ಜಾವಾ ಸಮುದ್ರದಲ್ಲಿ ಪತನಗೊಂಡಿದೆ. ಏರ್ ಏಷ್ಯಾ ವಿಮಾನ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಮಂಗಳವಾರ ಪಂಗಕಾಲನ್‌ಬನ್ ಸಮೀಪದ ಕರಿಮಟಾ ಜಲಸಂಧಿಯಲ್ಲಿ ಅದರ ಅವಶೇಷಗಳು ಪತ್ತೆಯಾಗಿದ್ದವು.
- ಯಾರೂ ಬದುಕಿ ಉಳಿದಿಲ್ಲ.
- 1.ಕಳೆದ ಮಾರ್ಚ್‌ನಲ್ಲಿ ಕೌಲಾಲಂಪುರದಿಂದ ಚೀನಾದ ಬೀಜಿಂಗ್‌ಗೆ ಸಿಬ್ಬಂದಿ ಸೇರಿ 239 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಎಂಎಚ್370 ವಿಮಾನ ಕಾಣೆ.
- 2.ಜುಲೈನಲ್ಲಿ ಸಂಘರ್ಷಪೀಡಿತ ಪೂರ್ವ ಉಕ್ರೇನ್‌ನ ಬಂಡುಕೋರರು 298 ಜನರನ್ನು ಹೊತ್ತಿದ್ದ ಮಲೇಷ್ಯಾ ವಿಮಾನವನ್ನು ಕ್ಷಿಪಣಿ ಉಡಾಯಿಸಿ ಚಿಂದಿ ಮಾಡಿದ್ದರು.
- 3. ಡಿಸೆಂಬರ್‌ನಲ್ಲಿ ಏರ್‌ಏಷ್ಯಾ ವಿಮಾನ ಪತನ.
- (ವಿಜಯ ಕರ್ನಾಟಕ:31 Dec 2014:ವರದಿ)
ಏರ್ ಏಷ್ಯಾ ವಿಮಾನ ಪತ್ತೆ
ಬದಲಾಯಿಸಿ- ಕ್ಯುಜಡ್ 8501 ವಿಮಾನ ಕಣ್ಮರೆ-ಜಾವಾ ಸಮುದ್ರದಲ್ಲಿ ಪತ್ತೆ- ದಿ.12/13/14-1-2015.
- ಜಕಾರ್ತದಿಂದ ಬಂದ ಸುದಿದಿ ಪ್ರಕಾರ(15-1-2015.ಪಿಟಿಐ), ಎರಡು ವಾರಗಳ ಹಿಂದೆ ಪತನಗೊಂಡ ಏರ್ ಏಷ್ಯಾ ವಿಮಾನದ ಮುಖ್ಯ ಭಾಗವನ್ನು ಜಾವಾ ಸಮುದ್ರದಲ್ಲಿ ಪತ್ತೆ ಮಾಡಲಾಗಿದೆ. ಕಳೆದೆರಡು ದಿನಗಳಲ್ಲಿ ವಿಮಾನದ ದತ್ತಾಂಶ ಸಂಗ್ರಹ ಘಟಕ ಮತ್ತು ಕಾಕ್‌ಪಿಟ್ ಧ್ವನಿ ಸಂಗ್ರಹ ಘಟಕಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿತ್ತು. ಈಗ ವಿಮಾನದ ಮುಖ್ಯ ಭಾಗವೂ ಪತ್ತೆಯಾಗಿರುವುದರಿಂದ ವಿಮಾನದಲ್ಲಿದ್ದವರ ಮೃತ ದೇಹಗಳು ಪತ್ತೆಯಾಗಬಹುದು ಎಂದು ಹೇಳಲಾಗಿದೆ.
- ಸಿಂಗಪುರ ನೌಕಾಪಡೆಯ ನೌಕೆಯೊಂದು ಜಾವಾ ಸಮುದ್ರದಲ್ಲಿ ವಿಮಾನವನ್ನು ಗುರುತಿಸಿದ್ದು, ಅದರ ಪೋಟೊಗಳನ್ನು ತೆಗೆದಿದೆ ಎಂದು ಸಿಂಗಪುರ ರಕ್ಷಣಾ ಸಚಿವ ನಗ್ ಎಂಗ್ ಹೆನ್ ಹೇಳಿದ್ದಾರೆ. ‘ನೌಕಾಪಡೆಯ ಎಂ.ವಿ. ಸ್ವಿಫ್ಟ್ ರೆಸ್ಕ್ಯೂ ಎಂಬ ನೌಕೆಯು ವಿಮಾನವನ್ನು ಪತ್ತೆ ಮಾಡಿರುವುದನ್ನು ನೌಕಾಪಡೆ ಮುಖ್ಯಸ್ಥರು ತಿಳಿಸಿದ್ದಾರೆ’ ಎಂದು ಹೆನ್ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.
- ‘ನೌ ಎವೆರಿಒನ್ ಕ್ಯಾನ್ ಫ್ಲೈ’ ಎಂಬುದುಏರ್ ಏಷ್ಯಾ ವಿಮಾನದ ಹೊರ ಭಾಗದಲ್ಲಿ ಇರುವ ಘೋಷ ವಾಕ್ಯ. ನೌಕೆಯು ಸೆರೆ ಹಿಡಿದಿರುವ ಫೋಟೊದಲ್ಲಿ ‘ನೌ ಎವೆರಿಒನ್’ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ವಿಮಾನದ ರೆಕ್ಕೆಯ ಭಾಗ ಮತ್ತು ಘೋಷ ವಾಕ್ಯ ಇರುವ ವಿಮಾನದ ಮುಖ್ಯ ಭಾಗ ಚಿತ್ರದಲ್ಲಿ ಗೋಚರಿಸುತ್ತಿದೆ.
- ಇಂಡೊನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಸಂಸ್ಥೆಯು ವಿಮಾನವನ್ನು ನೀರಿನಿಂದ ಮೇಲೆತ್ತುವ ಕಾರ್ಯಾಚರಣೆ ನಡೆಸಲಿದೆ.
- ವಿಮಾನದಲ್ಲಿ 162 ಪ್ರಯಾಣಿಕರಿದ್ದರೂ ಈ ವರೆಗೆ 48 ಮೃತದೇಹಗಳು ಮಾತ್ರ ನೀರಿನಲ್ಲಿ ದೊರೆತಿವೆ. ಹಾಗಾಗಿ ಉಳಿದ ಮೃತದೇಹಗಳು ವಿಮಾನದ ಒಳಗೇ ಇರಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ವಿಮಾನದ ಭಾಗವನ್ನು ನೀರಿನಿಂದ ಮೇಲೆತ್ತುವುದರೊಂದಿಗೆ ಎಲ್ಲ ಮೃತದೇಹಗಳೂ ದೊರೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಸಮುದ್ರದಿಂದ ಮೇಲೆತ್ತಲಾಗಿರುವ 48 ಮೃತದೇಹಗಳ ಪೈಕಿ 36 ದೇಹಗಳ ಗುರುತು ಮಾತ್ರ ಪತ್ತೆಯಾಗಿದೆ.
- ವಿಶ್ಲೇಷಣೆ ಆರಂಭ
- ವಿಮಾನ ದತ್ತಾಂಶ ಸಂಗ್ರಹ ಘಟಕ ಮತ್ತು ಕಾಕ್‌ಪಿಟ್ ಧ್ವನಿ ಸಂಗ್ರಹ ಘಟಕಗಳ ವಿಶ್ಲೇಷಣೆ ಆರಂಭವಾಗಿದೆ. ಎರಡೂ ಉಪಕರಣಗಳಲ್ಲಿ ಇರುವ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಈ ಮಾಹಿತಿಯನ್ನು ವ್ಯಾಖ್ಯಾನಿಸಲು ಇನ್ನೂ ಹೆಚ್ಚಿನ ಸಮಯ ಬೇಕಾದೀತು ಎಂದು ಅವರು ತಿಳಿಸಿದ್ದಾರೆ.(ಪ್ರಜಾವಾಣಿ:15-1-2015)
ಎಂಎಚ್ 370 ಶೋಧ ಕಾರ್ಯ ಸ್ಥಗಿತ
ಬದಲಾಯಿಸಿ- ಎಎಫ್‌ಪಿ;18 Jan, 2017
- 2014ರಲ್ಲಿ ನಾಪತ್ತೆಯಾಗಿದ್ದ ಎಂಎಚ್ 370 ವಿಮಾನದ ಶೋಧ ಕಾರ್ಯವನ್ನು ಮಂಗಳವಾರ ಸ್ಥಗಿತಗೊಳಿಸಿರುವುದಾಗಿ ಮೂರು ವರ್ಷಗಳಿಂದ ಶೋಧ ನಡೆಸುತ್ತಿರುವ ಚೀನಾ, ಮಲೇಷ್ಯಾ ಹಾಗೂ ಆಸ್ಟ್ರೇಲಿಯಾ ದೇಶಗಳು ಹೇಳಿವೆ. ಮೂರು ವರ್ಷಗಳ ಸುದೀರ್ಘ ಶೋಧ ನಡೆಸಿದ್ದರೂ ವಿಮಾನದ ಕುರಿತು ಯಾವುದೇ ಸುಳಿವು ದೊರಕಿಲ್ಲ ಎಂದು ಮೂರೂ ರಾಷ್ಟ್ರಗಳ ಸರ್ಕಾರಗಳು ತಿಳಿಸಿವೆ. 2014ರ ಮಾರ್ಚ್ 8ರಂದು 239 ಪ್ರಯಾಣಿಕರನ್ನು ಹೊತ್ತು ಕೌಲಾಲಂಪುರದಿಂದ ಬೀಜಿಂಗ್‌ಗೆ ಹೊರಟಿದ್ದ ಮಲೇಷ್ಯಾದ ಎಂಎಚ್ 370 ವಿಮಾನ ಮಾರ್ಗಮಧ್ಯದಲ್ಲಿ ನಾಪತ್ತೆಯಾಗಿತ್ತು.
- ದಕ್ಷಿಣದ ಹಿಂದೂ ಮಹಾಸಾಗರದ 1,20,000 ಚ.ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ನಡೆಸಿರುವುದಾಗಿ ಮೂರು ರಾಷ್ಟ್ರಗಳ ಜಂಟಿ ಹೇಳಿಕೆ ತಿಳಿಸಿದೆ. ‘ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನ ಹಾಗೂ ಶ್ರೇಷ್ಠ ತಜ್ಞರ ಸಹಾಯ ಪಡೆದು ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ವಿಮಾನ ಪತ್ತೆಯಾಗದಿರುವುದು ಬೇಸರ ತಂದಿದೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮಲೇಷ್ಯಾ ಈ ತಿಂಗಳ ಆರಂಭದಲ್ಲಿ ಶೋಧನೆ ಸ್ಥಗಿತಗೊಳಿಸಿದೆ. ಆದರೆ ಶೋಧ ಕಾರ್ಯಾಚರಣೆಯನ್ನು ಹಗುರವಾಗಿ ಪರಿಗಣಿಸಿರಲಿಲ್ಲ. ವಿಮಾನ ಬಿದ್ದಿರುವ ನಿರ್ದಿಷ್ಟ ಸ್ಥಳ ಪತ್ತೆ ಮಾಡಲು ಈ ತನಕ ಸಾಧ್ಯವಾಗಿಲ್ಲ ಎಂದು ತಿಳಿಸಲಾಗಿದೆ.
ಹೊಸ ಅಂಶಗಳು ಪತ್ತೆ
ಬದಲಾಯಿಸಿ- ಸೋನಾರ್‌ಕ್ಯಾನ್‌ಬೆರ್ರಾ :
- ಮೂರು ವರ್ಷಗಳ ಶೋಧದಲ್ಲಿ ನಾಪತ್ತೆಯಾದ ವಿಮಾನದ ಮಾಹಿತಿ ದೊರಕದೆ ಇದ್ದರೂ, ಲಕ್ಷಾಂತರ ವರ್ಷಗಳಲ್ಲಿ ಸಾಗರದಾಳದಲ್ಲಿ ಏನೇನು ಬದಲಾವಣೆಗಳಾಗಿವೆ, ಎಲ್ಲೆಲ್ಲಿ ತೈಲ ನಿಕ್ಷೇಪಗಳು ಇರಬಹುದು ಎಂಬ ಅನೇಕ ಅನೇಕ ಆಸಕ್ತಿದಾಯಕ ಅಂಶಗಳು ಪತ್ತೆಯಾಗಿವೆ ಎಂದು ತಜ್ಞರು ಹೇಳಿದ್ದಾರೆ. ಶೋಧ ಕಾರ್ಯಕ್ಕೆ ಸಂಬಂಧಿಸಿದಂತೆ ಸೋನಾರ್‌್ ನಕ್ಷೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಆಸ್ಟ್ರೇಲಿಯದ ರಾಷ್ಟ್ರೀಯ ಭೂವಿಜ್ಞಾನ ಶೀಘ್ರದಲ್ಲಿಯೆ ಬಿಡುಗಡೆ ಮಾಡಲಿರುವ ನಕ್ಷೆಯಿಂದ ಶೋಧನೆ ನಡೆಸಿದ ರೀತಿ ಕುರಿತು ಮತ್ತಷ್ಟು ಮಾಹಿತಿ ದೊರಕಲಿದೆ.[೧]
ನೋಡಿ
ಬದಲಾಯಿಸಿ- ೧.Conspiracy theory:[[೧]]
ಉಲ್ಲೇಖ
ಬದಲಾಯಿಸಿ- ↑ "ಎಂಎಚ್ 370 ಶೋಧ ಕಾರ್ಯ ಸ್ಥಗಿತ;ಎಎಫ್‌ಪಿ;18 Jan, 2017". Archived from the original on 2017-01-21. Retrieved 2017-01-25.