ಮಲತಾಯಿಯು ಒಬ್ಬರ ಸ್ವಾಭಾವಿಕ ತಂದೆಯ ಪ್ರಸಕ್ತ ಹೆಂಡತಿ. ಇವಳು ರಕ್ತಸಂಬಂಧದಿಂದ ತಾಯಿಯಾಗಿರುವುದಿಲ್ಲ. ಮಲ ಅತ್ತೆಯು ಒಬ್ಬರ ಸಂಗಾತಿಯ ಮಲತಾಯಿ ಮತ್ತು ಒಬ್ಬರ ಮಾವ ಅಥವಾ ಅತ್ತೆಯ ಹೆಂಡತಿ. ಮಲ ಅತ್ತೆಯ ಮಕ್ಕಳು ಆ ವ್ಯಕ್ತಿಯ ಮಲ ಸೋದರರು ಮತ್ತು ಮಲ ಸೋದರಿಯರು ಆಗಿರುತ್ತಾರೆ.

ಸಂಸ್ಕೃತಿ

ಬದಲಾಯಿಸಿ

ಮಲ ಪೋಷಕರು (ಮುಖ್ಯವಾಗಿ ಮಲತಾಯಂದಿರು) "ಕೆಟ್ಟ ಮಲತಾಯಿ" ಪಾತ್ರದೊಂದಿಗೆ ಸಂಬಂಧಿಸಲಾಗುವ ಕಳಂಕದ ಕಾರಣದಿಂದ ಕೆಲವು ಸಾಮಾಜಿಕ ಸವಾಲುಗಳನ್ನು ಕೂಡ ಎದುರಿಸಬಹುದು. ಹಿಂದೆ "ಕೆಟ್ಟ ಮಲತಾಯಿ" ಪಾತ್ರದ ಪರಿಚಯವು ಇಂದಿನ ಮಲಪೋಷಕರಿಗೆ ಸಮಸ್ಯಾತ್ಮಕವಾಗಿದೆ, ಏಕೆಂದರೆ ಅದು ಮಲತಾಯಂದಿರ ಬಗ್ಗೆ ಕುಪ್ರಸಿದ್ಧಿಯನ್ನು ಸೃಷ್ಟಿಸಿದೆ ಎಂದು ಮೊರೆಲೊ ಗಮನಿಸುತ್ತಾರೆ.[] ಒಂದು ಕ್ರಿಶ್ಚಿಯನ್ ಅಧ್ಯಯನದ ಪ್ರಕಾರ ಈ ಕುಪ್ರಸಿದ್ಧಿಯ ಉಪಸ್ಥಿತಿಯು ಮಲತಾಯಂದಿರ ಆತ್ಮಸಮ್ಮಾನದ ಮೇಲೆ ಪ್ರಬಲ, ನಕಾರಾತ್ಮಕ ಪ್ರಭಾವವನ್ನು ಹೊಂದಿರಬಹುದು.

ಉಲ್ಲೇಖಗಳು

ಬದಲಾಯಿಸಿ
  1. Morello, C. (January 19, 2011). "Blended families more common, but the 'step' in 'stepmom' still carries a stigma". The Washington Post.



"https://kn.wikipedia.org/w/index.php?title=ಮಲತಾಯಿ&oldid=1251914" ಇಂದ ಪಡೆಯಲ್ಪಟ್ಟಿದೆ