ಮರ್ದೆ
ಮರ್ದೆ ಎಂದರೆ ಒಂದು ದೈವದ ಕುಣಿತ. ಕರ್ಕಾಟಕ(ಆಟಿ)ತಿಂಗೊಳಿನಲ್ಲಿ ಕೇರಳ ಕಡೆ ಮನೆ ಮನೆಗೆ ಬಂದು ಜನರ ಕಷ್ಟ ಪರಿಹರಿಸುತ್ತದೆ ಎಂಬ ನಂಬಿಕೆ. ಮರ್ದೆ ಅಂದರೆ ಪಾರ್ವತಿ ಎಂಬ ನಂಬಿಕೆ.ಆಷಾಡದಲ್ಲಿ ಮರ್ದೆ ಮನೆಗೆ ಬಂದರೆ ಮಾರಿ ದೂರವಾಗುತ್ತದೆ ಎಂಬ ನಂಬಿಕೆ .ಈ ಮರ್ದೆ ದೈವವನ್ನು ವಣ್ಣನ್ ಎನ್ನುವ ಒಂದು ಜನಾಂಗವರು ಕಟ್ಟಿ ಮನೆ ಮನೆಗೆ ಬರುವ ಪದ್ದತಿ.ವಣ್ಣನ್ ಜನಾಂಗವನ್ನು ತುಳುವಲ್ಲಿ ನೆಕ್ಕರೆರ್ ಎಂದು ಕರೆಯುತ್ತಾರೆ[೧]
ವೇಷ
ಬದಲಾಯಿಸಿಈ ದೈವವನ್ನು ಚಿಕ್ಕ ಪ್ರಾಯದ ಮಕ್ಕಳಲ್ಲಿ ಕಟ್ಟಿಸುತ್ತಾರೆ. ಪಾರ್ವತಿಯ ರೀತಿಯಲ್ಲಿ ಚಿಕ್ಕ ಪ್ರಾಯದ ಹುಡುಗನಿಗೆ ವೇಷ ಹಾಕಿಸುತ್ತಾರೆ .ಕೆಂಪು ಬಣ್ಣದ ರೇಷ್ಮೆ ಬಟ್ಟೆ ಉಡಿಸಿ ತಲೆಗೆ ತಲೆ ಪಟ್ಟಿ ಕಟ್ಟುತ್ತಾರೆ .ಮೋರೆಗೆ ಕೆಂಪು ಮುಖ ವರ್ಣಿಕೆ ಹಾಕಿ ಪಾರ್ವತಿಯ ರೂಪ ಮಾಡುತ್ತಾರೆ.
ಕುಣಿತದಕ್ರಮ
ಬದಲಾಯಿಸಿಈ ದೈವ ದೇವಸ್ಥಾನ ,ದೈವಸ್ಥಾನದಲ್ಲಿ ಕಟ್ಟಿ ಕುಣಿಯುವ ಬದಲು ಪ್ರತಿ ಮನೆ ಮನೆಗೆ ಬಂದು ನಲಿಯುತ್ತದೆ.ಚೆಂಡೆ ವಾದ್ಯದವರು ಹೇಳುವ ಹಾಡಿಗೆ ಈ ದೈವ ಕುಣಿಯುತ್ತದೆ .ಈ ದೈವ ಮನೆಗೆ ಬಂದರೆ ಐಶ್ವರ್ಯ ಮತ್ತು ಸಂಪತ್ತು ಅಧಿದೇವತೆಯಾದ ಲಕ್ಷ್ಮೀದೇವಿ ನೆಲೆ ಆಗುತ್ತಾಳೆ ಎಂಬುದು ಸಾಮಾನ್ಯ ನಂಬಿಕೆ.ಬೇಡನ್ ದೈವ ಮನೆಗೆ ಬರುವಾಗ ದೀಪ ಉರಿಸಿ ಇಡಬೇಕು ಆಮೇಲೆ ಚೆಂಡೆವಾದಕರು ಮನೆಯವರ ಒಪ್ಪಿಗೆ ಪಡೆದು ಸಂಧಿ ಹೇಳುತ್ತ ಚೆಂಡೆ ಭಾರಿಸಲು ಸುರು ಮಾಡುವಾಗ ಮರ್ದೆ ದೈವ ಮನೆಯ ಎದುರು ಅಂಗಳದಲ್ಲಿ ಹಿಂದೆ ಮುಂದೆ ಹೋಗುತ್ತ ಕುಣಿಯುತ್ತದೆ .ಕುಣಿದು ಆದನಂತರ ಕುರ್ದಿ ನೀರು ಮಾಡಿ ಒಂದು ಬತ್ತಿ ಉರಿಸಿಕೊಂಡು ಮನೆಯ ಯಜಮಾನಿಯು ಮನೆಯ ಹೊರಗೆ ಬಂದು ಅಂಗಳದ ಬಡಗು ಭಾಗದಲ್ಲಿ ಬತ್ತಿದೀಪವನಿಟ್ಟು ಸುತ್ತಲು ಕುರ್ದಿ ನೀರು ಚೆಲ್ಲುತ್ತಾರೆ. ಮನೆ ಮತ್ತು ಸುತ್ತು ಪರಿಸರ ಶುದ್ಧ ಆಗಿ ದುಷ್ಟ ಶಕ್ತಿ ದೂರ ಆಗುತ್ತದೆ ಎನ್ನುವ ನಂಬಿಕೆ. ದೈವ ಕುಣಿದು ಮನೆಯಿಂದ ಹೋಗುವಾಗ ಹಣ, ಅಕ್ಕಿ, ಮಳೆಗಾಲಕ್ಕೆ ಇಟ್ಟ ತೆಂಗಿನಕಾಯಿ ತರಕಾರಿ , ಧಾನ್ಯ, ಉಪ್ಪು ಇತ್ಯಾದಿ ವಸ್ತುಗಳನ್ನು ದಾನ ಕೊಡುವ ಕ್ರಮ.
ಉಲ್ಲೇಖ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ