ಮರ್ದಲ್ ಜಿಮಾದಿ
ಮರ್ದಲ್ ಜಿಮಾದಿ
ಬದಲಾಯಿಸಿಸಾವಿರಾಳ ಧೂಮಾವತಿ ಮೂಲವಾಗಿ ಧೂಮಾವತಿ ದೈವದಲ್ಲಿ ಅನೇಕ ಪ್ರಭೇದಗಳಿವೆ. ಹೆಚ್ಚಿನಾಂಶ ಇದು ಸ್ಥಳೀಯವಾಗಿ ಧೂಮಾವತಿ ದೈವ ತನ್ನ ಕಾರಣೀಕವನ್ನು ತೋರಿಸಿ ಜನ ಮನ ಗೆದ್ದಿರುವ ಸಂಕೇತವಾಗಿದೆ. ಹಾಗಾಗಿ ಆಯಾ ಪ್ರದೇಶಗಳ ಜನ ಧೂಮಾವತಿ ಬೇರೆ ಬೇರೆ ಸ್ವರೂಪದಿಂದ ನಂಬಿಕೊಂಡು ಬಂದಿರುವುದು ತಿಳಿದುಬರುತ್ತದೆ. ಮಾರ್ದಾಳ ದೂಮವತಿಯು ಇದರಲ್ಲಿ ಒಂದಾಗಿರುವುದು.
ಕಥಾಸಾರ
ಬದಲಾಯಿಸಿಮಾರ್ದಾಳ ಧೂಮಾವತಿ ಮೂಲ ತುಳುನಾಡಿನ ತೆಂಕಣ ಭಾಗದಲ್ಲಿರುವ ಪುತ್ತೂರಿನ ಮಾರ್ದಾಳ ಬೀಡು. ಮಾರ್ದಾಳ ಬೀಡಿನ ನಾಲ್ವರು ಬಲ್ಲಾಳ ಸಹೋದರರು ಆಡೂರು ಎಂಬಲ್ಲಿಗೆ ದೈವದ ಕೋಲ ನೋಡಲು ಹೋಗುವರು ಕೋಲಾ ಆಯನ ಮುಗಿಸಿ ಮರಳಿ ತಮ್ಮ ಬೀಡಿಗೆ ಸಹೋದರರು ಹೊರಟು ನಿಂತರು. ಆ ಹೊತ್ತಿನಲ್ಲಿ ದೈವ ಧೂಮಾವತಿ ಬಲ್ಲಾಳರೋಡನೆ "ನಾನು ನಿಮ್ಮ ಜೊತೆಯಲ್ಲಿ ಬರಬಹುದೇ?" ಎಂದು ಮಾಯಾ ರೂಪದಲ್ಲಿ ವಿಚಾರಿಸತೊಡಗಿತು. ಕಂಡು ಕೇಳರಿಯದ ಸಂಗತಿಯಿಂದ ಸಹೋದರರಿಗೆ ಸೋಜಿಗ, ಭಯ, ಕುತೂಹಲ ಒಮ್ಮೆಲೇ ಉಂಟಾಯಿತು. ಕೊನೆಗೆ ಅವರು ಧೈರ್ಯ ತಂದುಕೊಂಡರು. "ಬರುತ್ತೇನೆ ಎನ್ನುವ ದೈವ ಶಕ್ತಿಯನ್ನು ಬರಬೇಡ ಎನ್ನಲಾರೆವು" ಎಂದು ಸ್ವಲ್ಪ ಹೊತ್ತು ಆಲೋಚಿಸಿದ ಬಳಿಕ ನುಡಿದರು. ಬಲ್ಲಾಳರುಗಳ ಮಾತಿನ ಭರವಸೆಯಂತೆ ದೈವ ಧೂಮಾವತಿ ಅವರನ್ನು ಬೆನ್ನತ್ತಿ ಬಂತು. ನಾಲ್ವರು ಸಹೋದರರು ಒಂದಾಗಿ ದೂರ ದಾರಿಯನ್ನು ನಡೆದು ಮಾರ್ದಾಳ ಬೀಡಿಗೆ ಸಮೀಪಿಸಿದರು. ಬಿಡು ಹತ್ತಿರವಾದೊಡನೆ ಧೂಮಾವತಿ ದೈವವು- ಸಹೋದರರೊಡನೆ "ನನ್ನನ್ನು ನಿಮ್ಮ ಬೀಡಿನಲ್ಲಿ ಹೊಸದಾಗಿ ನಂಬಿಕೊಂಡು ಬರಬೇಕು". ಅದಕ್ಕಾಗಿ ನನ್ನನ್ನು ನಂಬುವ ದಿನ ಹೊಸ ಭತ್ತದ 'ಮೆಚ್ಚಿ' ಸೇವೆ ನಡೆಯಬೇಕು" ಎಂದು ಅಪ್ಪಣೆ ಮಾಡಿತು ಈ ಮಾತಿಗೆ ಸಹೋದರರು ಒಪ್ಪಿಗೆ ನೀಡಿದರು. ಹೊಸ ಬತ್ತವನ್ನು ಹುರಿದು ಅರಳು ತಯಾರಿಸುವವರು ಯಾರು? ಅದು ಕೂಡ ದೈವಕ್ಕೆ ಅರ್ಪಣೆ ಯಾಗಬೇಕು. ಅತ್ಯಂತ ಶುದ್ಧಾಚಾರದಿಂದ ನಡೆಯಬೇಕು, ಎಂದು ಸಹೋದರರು ತಮ್ಮೊಳಗೆ ಚರ್ಚಿಸಿಕೊಂಡರು. ಕೊನೆಗೆ ನಾಲ್ವರು ಬಲ್ಲಾಳರುಗಳು ಒಂದು ತೀರ್ಮಾನಕ್ಕೆ ಬಂದರು. ಬೀಡಿನ ಸಂತತಿಯ ಸುಳಿ ತಮ್ಮ ಓರ್ವಳೆ ಸಹೋದರಿ 'ದಾರಮ್ಮ ಬಲ್ಲಾಲ್ದಿ'ಯನ್ನು ಕರೆದು ನೀಡಲು ಹೊಸ ಭತ್ತದ ಅರಳು ತಯಾರಿಸುವ ತಿಳಿಸಿದರು. ಅಣ್ಣಂದಿರ ಮಾತಿನ ಪ್ರಕಾರ ದಾರಮ್ಮ ಬಲ್ಲಾಲ್ದಿಯು ತಲೆಗೆ ಎಣ್ಣೆ ಹಚ್ಚಿಕೊಂಡು ತಲೆಗೆ ಮೈಗೆ ಮಿಂದು ಜಳಕ ಮಾಡಿ ಶುದ್ಧ ಆದಳು, ಮಡಿ ಉಟ್ಟಳು ಹೊಸ ಭತ್ತದ ಅರಳು ತಯಾರಿಸಲು ಒಲೆಯ ಮೇಲೆ ಮಣ್ಣಿನ 'ಓಡು' ಇರಿಸಿದಳು. ಬೆಂಕಿ ಹಚ್ಚಿದಳು ಭತ್ತಕ್ಕೆ ಬಿಸಿ ಶಾಖ ತಾಗಿ ಭತ್ತ ಸಿಡಿದು ಅರಳು ತಯಾರಾಗತೊಡಗಿತು. ಆಗ ಒಂದು ಭತ್ತ ಸಿಡಿದು ಹೊರಬಂದು ವಲಯ ಕಲ್ಲಿನ ಮೇಲೆ ಅರಳು ಬಂದುಬಿತ್ತು. ಆ ಹೊಸ ಭತ್ತದ ಅರಳಿನ ಅಂದ ಚಂದವನ್ನು ಕಂಡ ದಾರಮ್ಮ ಬಾಲ್ಲಾಲ್ದಿ ಮರುಳಾಗಿ ಹೋದಳು. ಅಷ್ಟೇ ವೇಗದ ಅರಳನ್ನೆತ್ತಿ ಬಾಯಲ್ಲಿರಿಸಿರಿಸಿಕೊಂಡಳು. ಮಾಯಾ ರೂಪದಲ್ಲಿದ್ದು ಈ ಸನ್ನಿವೇಶವನ್ನು ಕಂಡ ದೈವ ಧೂಮಾತಿಗೆ ಸಿಟ್ಟು ಬಂತು. ಹೊಸ ಭತ್ತದ ಅರಳನ್ನು ತಾನು ಸ್ವೀಕಾರ ಮಾಡುವ ಮೊದಲು ನೀನು ಹೇಗೆ ತಿಂದೆ? ಎಂದು ದೈವ ಧೂಮಾವತಿಯು ಆ ಕ್ಷಣದಲ್ಲಿ ಅವಳನ್ನು ಮಾಯೆ ಮಾಡಿದ. ಈ ವಿಚಾರ ನಾಲ್ವರು ಬಲ್ಲಾಳ ಸಹೋದರರಿಗೆ ತಿಳಿಯಿತು. ಅವರು ತಂಗಿಯ ಅಕಾಲಿಕ ಅಳಿವಿನಿಂದ ತುಂಬ ವ್ಯಾಕುಲಗೊಂಡುರು. ಅವಳೇ ನಮ್ಮ ವಂಶದ ಸುಳಿ. ನಮ್ಮ ಬೀಡಿನ ಐಸಿರಿಯನ್ನೇ ಕಸಿದುಕೊಂಡಯಾ? ನಮಗೆ ಮುಂದೆ ಯಾರು ಗತಿ ?"ಎಂದು ಗೋಳಿಟ್ಟರು. ಆಗ ಧೈವ ಧೂಮಾವತಿಯು ನಾಲ್ವರು ಸಹೋದರರನ್ನು ಸಾಂತ್ವಾನಗೊಳಿಸಿದನು. " ನೀವು ಅಕಿಲಾಸ ಪಡಬೇಡಿ. ನಿಮ್ಮ ಪ್ರೀತಿಯ ತಂಗಿಯನ್ನು ನಮ್ಮ ಜೊತೆಯಲ್ಲಿ ದೈವಶಕ್ತಿಯ ಸ್ಥಾನಮಾನ ನೀಡಿ ಕಾಯುತ್ತೇವೆ. ನಮ್ಮ "ಓಮ- ನೇಮ" ಪಡೆಯುವ ಹೊತ್ತಿನಲ್ಲಿ ದಾರಮ್ಮ ಬಲ್ಲಾಲ್ದಿಗೂ 'ಆಯ- ಬೀದಿ' ಕರೆಸುತ್ತೇವೆ . ನಂಬಿದ ಸಂಸಾರದಿಂದ ಕೋಲ ಕೊಡಿಸುತ್ತೇವೆ. ಎಂದು ಸಹೋದರರಿಗೆ ದೈವ ವಾಗ್ದಾನ ನೀಡಿತು. ಆ ಪ್ರಕಾರವಾಗಿ ಮಾರ್ದಳ ಬೀಡಿನಲ್ಲಿ ರೀತಿ ರಿವಾಜು ಪ್ರಕಾರ ದೈವದ ಜೊತೆಗೆ ದಾರಮ್ಮ ಬಲ್ಲಾಲ್ದಿಯನ್ನು ನಂಬಿಕೊಂಡು ಬಂದರು. 'ಆಗಭೋಗ' ನೀಡಿದರು. ಆ ಬಳಿಕ ದೈವ ಧೂಮಾವತಿಯು 'ಮರ್ದಾಳ ಧೂಮಾವತಿ' ಎಂಬ ಪ್ರಖ್ಯಾತಿಯನ್ನು ಪಡೆದ. ಮುಂದೆ ತುಳುನಾಡಿನ ಉದ್ದಗಲಕ್ಕೆ ಈ ದೈವದ ಪ್ರಸರಣವಾಯಿತು. ಎಲ್ಲೆಲ್ಲಿ ಮಾರ್ದಾಲ ಧೂಮವತಿಯನ್ನು ನಂಬಿದರೋ, ಅಲ್ಲಿ ದಾರಮ್ಮ ಬಲ್ಲಾಲ್ದಿಯನ್ನು ನಂಬುವುದು ವಾಡಿಕೆ ಮತ್ತು ಬಹುತೇಕ ಕಡ್ಡಾಯವಾಗಿದೆ. ದೈವಕ್ಕೆ ಕೋಲ ನೀಡುವ ಸಮಯದಲ್ಲಿ ದಾರಮ್ಮ ಬಲ್ಲಾಲ್ದಿಗೆ ಪಟ್ಟೆ ಸೀರೆ ಉಟ್ಟು ದರ್ಶನಾವೇಶ ನಡೆಯುವುದು. ಮಾರ್ದಾಲ ಧೂಮಾವತಿಯ ಜೊತೆಗೆ ಆವೇಶ ಬರುವುದು ಕ್ರಮ. ಅದೇ ರೀತಿ ದಾರಮ್ಮ ಬಲ್ಲಾಲ್ದಿರಿಯು ದರ್ಶನಾವೇಶದಿಂದ ಬಿಡುಗಡೆಯಾಗುವ ಮೊದಲು ಹೆಣ್ಣ ಸಂತತಿಗೆ ಪ್ರಸಾದ ನೀಡುವುದು ಸಂಪ್ರದಾಯ. ದಾರಮ್ಮ ಬಲ್ಲಾಲ್ದಿಗೆ ಸಾಮಾನ್ಯ ರೀತಿಯ ಮಣೆ ಮಂಚ ಇರುವುದು. ಮಾರ್ದಾಳ ಧೂಮಾವತಿ ' ಬಾರ್ನೆ'.. ತೆಗೆದುಕೊಳ್ಳುವಾಗ ಆಕಾಶಕ್ಕೆ ಬೆನ್ನು , ಭೂಮಿಗೆ ಹೊಟ್ಟೆಯ ಭಾಗ ತಾಗಿಸಿ ನಾಲ್ಕು ಕಾಲು ಚಾಚಿ ಆಹಾರ ಸ್ವೀಕರಿಸಬೇಕು. ಅಂದಿನ ಕಾಲದಲ್ಲಿ ಮಾರ್ದಳ ಬೀಡಿನ ಬಲ್ಲಾಳರಿಗೆ ಮಾಡಿದ ತಪ್ಪಿಗೆ ದೊರೆತಂತಹ ಶಾಪ ಇದಾಗಿದೆ. ಹಾಗಾಗಿ ಮೊಣಕಾಲೂರಿ ಬದುವಾರನ್ನೆ ಸ್ವೀಕರಿಸುವುದಾಗಿದೆ. ಕೋಲಾದ ಸಮಯ ದಾರಮ್ಮ ಬಲ್ಲಾಲ್ದಿಗೆ ಹೆಣ್ಣು ವೇಷ ಧರಿಸಿದ ದೈವ ನರ್ತಕರು ಕೋಲ ಕಟ್ಟುವರು. ಹರಿವಾಣದಲ್ಲಿ ಒಂದು ಸೇರು ಅಕ್ಕಿ , ಅದರ ಮೇಲೆ ದೀಪ, ತೆಂಗಿನಕಾಯಿ ಮತ್ತು ಕಾಣಿಕೆ ಇರಿಸಿ ಜೋಗ ಬರಿಸುವುದು. ಜೋಗ ಬರಿಸುವುದು , ಜೋಗಕ್ಕೆ ಬರುವುದು ಮಾರ್ದಾಲಾ ಜಿಮಾದಿಯ ಜೊತೆಗೆ ಪರಿವಾರ ದೈವಗಳ ಕೋಲದ ಬಳಿಕ ಮಾರ್ದಾಲಾ ಜಿಮಾದಿಗೆ ಮತ್ತು ದಾರಮ್ಮ ಬಲ್ಲಾಲ್ದಿಗೆ ಕೋಲ ನಡೆಯುವುದು. ಮಾರ್ದಾಲ ಜಿಮಾದಿಗೆ ಬಂಟನ ಜೊತೆ ಇರುವುದಿಲ್ಲ. ಆದರೆ ಕೆಲವೆಡೆ ಬಂಟನನ್ನು ನಂಬಿಕೊಂಡು ಬರುತ್ತಿರುವರು. ಕಾರಣ ಮೂಲ ಧೂಮಾವತಿ ' ಸಾವಿರಾರು ಧೂಮಾವತಿ' ಗೆ. ಬಂಟನೆಂಬ ಬಾಯಿ ಬಾರದ ಸೇವಕನಿರುವನು. ಅದೇ ರೀತಿ ಹೆಚ್ಚಿನ ಎಲ್ಲ ಧೂಮಾವತಿ ದೈವಗಳ ಪ್ರಭೇದಕ್ಕೆ ಬಂಟನ್ ಇರುವುದರಿಂದ ಮಾರ್ದಾಲ ಧೂಮಾವತಿಯ ಜೊತೆಗೆ ಬಂಟನನ್ನು ಕೆಲವೆಡೆ ಮೂಡಿಸಿಕೊಂಡಿರುವ ಸಾಧ್ಯತೆಗಳಿವೆ...
ಶಬ್ದಾರ್ಥ
ಬದಲಾಯಿಸಿಮೆಚ್ಚಿ - ಹೊಸದಾಗಿ ನಂಬುವ ದೈವಕ್ಕೆ ನೀಡುವ ಪನಿಯಾರ
ಸೇವೆ
ಬದಲಾಯಿಸಿಮಣ್ಣಿನ ಓಡು - ಮಣ್ಣಿನ ದೊಡ್ಡ ಗುಡಾಣ ಗಳು ಒಡೆದು ಉಂಟಾದಾಗ ಉಳಿಯುವ ದೊಡ್ಡ ಭಾಗ. ಅಕ್ಕಿಲಾಸ - ದುಃಖ ಆಯ - ಬೀರ - ದೈವದ ಚರಿತ್ರೆ ( ವೀರ ಪರಾಕ್ರಮ ) ಬಾರ್ಲಿ - ಆಹಾರ ಸ್ವೀಕಾರ ಜೋಗ - ಮಾನವನ ಮೇಲೆ ಆವೇಶ ಬರಿಸುವ ಕ್ರಮ.
ತುಳುನಾಡ ದೈವಗಳು
ಬದಲಾಯಿಸಿಜಾನಪದ ಸಂಕಲನ, ಬನ್ನಂಜೆ ಬಾಬು ಅಮಿನ್