ಮರಿಯನ್ ಆಲೆನ್
ಮರಿಯನ್ ಆಲೆನ್ ಇವರ ಪೂರ್ತಿ ಹೆಸರು ಎಲೆನರ್ ಮರಿಯನ್ ಡಂಡಸ್ ಆಲೆನ್. ಇವರು ಕ್ರಿ.ಶ. ೧೮೯೨ ಜನವರಿ ೧೮ರಂದು ಜನಿಸಿದರು. ಇವರು ಪ್ರಸಿದ್ಧರಾದ ಬ್ರಿಟಿಷ್ ಲೇಖಕಿ ಹಾಗೂ ಕವಾಯಿತ್ರಿ. ಇವರ ಕವನವಾದ 'ದ ವಿಂಡ್ ಆನ್ ದ ಡೌನ್ಸ್' ಎಂಬುದು ಪ್ರಸಿದ್ಧವಾಗಿದೆ. ಇದನ್ನು ೬೩ ಪುಟದ ಪುಸ್ತಕದಲ್ಲಿ ಪ್ರಕಟಿಸಲಾಯಿತು. ಈ ಪುಸ್ತಕದ ಹೆಸರೇ 'ದ ವಿಂಡ್ ಆನ್ ದ ಡೌನ್ಸ್'. ಇವರು ಟಾಕ್ಸ್‌ಟೆಥ್ ಪಾರ್ಕ್ (ಈಗ ಸಂತ ಕಾಲೆಸ್ಟಿಕಾ ಶಾಲೆ) ಎಂಬ ಗ್ಲೇಬಿ, ಸಿಡ್ನಿ, ಆಸ್ಟ್ರೇಲಿಯಾ ದೇಶದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಜಾರ್ಜ್ ಬಾಯ್ಸ್ ಆಲೆನ್.ಇವರು ಬಾರಿಸ್ಟರಾಗಿದ್ದರು. ಇವರ ತಾಯಿ ಇಸಾಬೆಲಾ ಡಂಡಸ್ ಆಲೆನ್.
ಜೀವನ ಚರಿತ್ರೆ
ಬದಲಾಯಿಸಿಲೇಖಕಿ ಮರಿಯನ್ ಆಲೆನ್ ಇವರು ಆರು ಮಕ್ಕಳಲ್ಲಿ ಒಬ್ಬರು (ಮೂರು ಗಂಡು ಹಾಗೂ ಮೂರು ಹೆಣ್ಣು). ಇಸವಿ ೧೯೦೮ರಲ್ಲಿ ವುಡ್‌ಸ್ಟಾಕ್ ರೋಡ್,ಆಕ್ಸ್‌ಫರ್ಡ್, ಇಂಗ್ಲೆಂಡಿನಲ್ಲಿ ತನ್ನ ಕುಟುಂಬದ ಜೊತೆ ವಾಸಿಸುತ್ತಿದ್ದರು. ಇಸವಿ ೧೯೧೩-೧೪ರಲ್ಲಿ ತನ್ನ ಗಂಡನಾದ ಆರ್ಥರ್ ಟಿಲ್‌ಸ್ಟನ್ ಗ್ರೇಗ್‌ರನ್ನು ಮೊತ್ತಮೊದಲ ಬಾರಿ ಭೇಟಿಯಾಗಿದ್ದರು. ಲೇಖಕಿಯು ತನ್ನ ಹಲವಾರು ಪುಸ್ತಕಗಳನ್ನು ತನ್ನ ಗಂಡನ ನಾಮದಲ್ಲಿ ಅರ್ಪಿಸಿದರು. ಲೇಖಕಿಯ ಸಹೋದರನಾದ ಜಾರ್ಜ್ ಡಂಡಸ್ ಆಲೆನ್‌ರವರ ಹಾಗೆ ಇವರ ಗಂಡ ಆರ್ಥರ್ ಗ್ರೇಗ್ ಕೂಡ ಲಾಯರ್ ಆಗಿ ನ್ಯೂ ಕಾಲೇಜ್ ಆಕ್ಸ್‌ಫರ್ಡ್‌ನಲ್ಲಿ ಕಲಿಯುತ್ತಿದ್ದರು. ಲೇಖಕಿಯು ತನ್ನ ಗಂಡ ಆರ್ಥರ್ ಗ್ರೇಗ್‌ರನ್ನು ತನ್ನ ಸಹೋದರರಾದ ಜಾರ್ಜ್ ಡಂಡಸ್ ಮುಖಾಂತರ ಪರಿಚಯವಾಯಿತು.ಇಸವಿ ೧೯೧೪ರ ಆಗಸ್ಟ್‌ರಂದು ಮೊತ್ತಮೊದಲ ಭೂಯುದ್ಧ ಪ್ರಾರಂಭಿಸಿತು. ಲೇಖಕಿಯರ ಗಂಡ ಹಾಗೂ ಸಹೋದರ ಇಬ್ಬರು ತನ್ನ ಲಾಯರ್ ವಿದ್ಯಾಭ್ಯಾಸವನ್ನು ಬಿಟ್ಟು ಸೈನ್ಯದಲ್ಲಿ ಪಾಲ್ಗೊಂಡರು. ಲೇಖಕಿಯ ಗಂಡ ಆರ್ಥರ್, ಬೆಲ್ಜಿಯಂನ ಹಿಲ್ ೬೦ ಎಂಬಲ್ಲಿ ಯುದ್ಧಕ್ಕೆ ಹೋದರು. ಇಸವಿ ೧೯೧೫ ಮೇರಂದು ಲೇಖಕಿಯ ಗಂಡನಾದ ಆರ್ಥರ್‌ರವರು ಗಾಯಗೊಂಡರು. ಕ್ರಿ.ಶ. ೧೯೧೬ರಲ್ಲಿ ಲೇಖಕಿಯ ಸಹೋದರ ಡಂಡಸ್ ಆಲೆನ್‌ರವರು 'ರಾಯಲ್ ಫ್ಲಾಯಿಂಗ್ ಕಾರ್ಪ್ಸ್' ಎಂಬಲ್ಲಿ ಭರ್ತಿಯಾಗಿ 'ಮಿಲಿಟರಿ ಕ್ರಾಸ್' ಎಂಬ ಪದವಿ ಪಡೆದರು. ಇದನ್ನು ಕಂಡ ಲೇಖಕಿಯ ಗಂಡ ಆರ್ಥರ್ ಕೂಡ ಅದೇ ಸ್ಥಳದಲ್ಲಿ ಭರ್ತಿಯಾದರು. ಆರ್ಥರ್‌ರವರು ಕ್ಯಾಪ್ಟನ್ ಆಗಿ 'ಡಿ.ಎಚ್.೪ ಬಾಂಬರ್' ಎಂಬ ವಿಮಾನವನ್ನು ಹಾರಿಸಲು ತರಬೇತಿ ಪಡೆದರು.ಲೇಖಕಿ ಮರಿಯನ್ ಆಲೆನ್ ಇಸವಿ ೧೯೧೭ ಏಪ್ರಿಲ್ ೪ರ' ಬುಧವಾರದಂದು ತನ್ನ ಗಂಡನಾದ ಆರ್ಥರ್‌ರನ್ನು ಕೊನೆಯ ಬಾರಿ ವಿದಾಯ ಹೇಳಿದರು. ಆರ್ಥರ್‌ರವರು ಚಾರಿಂಗ್ ಕ್ರಾಸ್‌ನಿಂದ ಬುಲೋನ್ ಎಂಬಲ್ಲಿ ೫೫ ಸ್ಕ್ವಾಡ್ರನ್‌ನಲ್ಲಿ ಭರ್ತಿಯಾದರು. ಸಂತ ಜಾರ್ಜ್‌ನ ದಿನ ಸಂತ ಕ್ವಿಂಟನ್ ಎಂಬ ಸ್ಥಳದಲ್ಲಿ ಗುಂಡಿನ ಪ್ರಭಾವದಿಂದ ಮರಣ ಹೊಂದಿದರು. ಆರ್ಥರ್‌ರವರನ್ನು ಜಸ್ಸಿ ಸ್ಮಶಾನದಲ್ಲಿ ಹೂರಿದರು. ಇವರ ಹೂರಿದ ಹೊಂಡದ ಮೇಲೆ 'ಪ್ರೀತಿಯು ಮರಣಕ್ಕಿಂತ ಮೇಲು' ಎಂಬ ಪದಗಳನ್ನು ಕೆತ್ತಿಸಲಾಯಿತು. ಲೇಖಕಿಗೆ ತನ್ನ ಗಂಡನ ಮರಣದ ಸುದ್ದಿಯನ್ನು ಏಪ್ರಿಲ್ ೩೦ ಅಥವಾ ಮೇ ೧ರಂದು ತಿಳಿಸಲಾಯಿತು. ಲೇಖಕಿ ಮರಿಯನ್ ಆಲೆನ್ ಹಲವಾರು ಕವನಗಳನ್ನು ತನ್ನ ಗಂಡನ ನೆನಪಿಗಾಗಿ ಬರೆದಿದ್ದರು. ಲೇಖಕಿಯು ಕ್ರಿ.ಶ. ೧೯೨೦-೩೦ರ ನಡುವೆ ಮಕ್ಕಳ ಕವನವನ್ನು ಬರೆಯುವುದರಲ್ಲಿ ಪ್ರಸಿದ್ಧರಾದರು. ಇವರು ಹಲವಾರು ಕವನಗಳಲ್ಲಿ 'ದ ವಿಂಡ್ ಇನ್ ದ ಚಿಮಣಿ' ಹಾಗೂ 'ಜಾಯ್ ಸ್ಟ್ರಿಟ್ ವಾಲ್ಯೂಮ್ಸ್' ಎಂಬ ಕವನಗಳು ತುಂಬಾ ಪ್ರಸಿದ್ದಿಯನ್ನು ಪಡೆಯಿತು. ಇವರ ಜೀವನದ ಹಲವಾರು ವರುಷಗಳನ್ನು ೩೫ ಹ್ಯಾರಿಂಗ್ಟನ್ ಗಾರ್ಡೆನ್ಸ್ (ಈಗ ಲಂಡನಿನ ಇತಾಕ ಕಾಲೇಜ್) ಎಂಬಲ್ಲಿ ತನ್ನ ಕುಟುಂಬದ ಜೊತೆ ಜೀವಿಸಿದ್ದರು. ಇವರು ತನ್ನ ಗಂಡನ ನೆನಪಿಗಾಗಿ, ಅವರು ಕೊನೆಯ ಬಾರಿ ಬಳಸಿದ ಚಾರಿಂಗ್ ಕ್ರಾಸ್ ಟಿಕೇಟ್ (ನಂಬರ್ ೭೯೩೫)ಅನ್ನು ಜೋಪಾನವಾಗಿ ಇಟ್ಟುಕೊಂಡಿದ್ದರು. ಲೇಖಕಿಯು ಪುನಃ ಮದುವೆಯಾಗದೆ, ವಿಧವೆಯ ಜೀವನವನ್ನು ವುಡ್‌ಸ್ಟಾಕ್ ರೋಡ್, ಆಕ್ಸ್‌ಫರ್ಡ್‌ಗೆ ಮರಳಿ ಕ್ರಿ.ಶ. ೧೯೫೩ ಸಪ್ಟೆಂಬರ್ ೧೨ರಂದು ಕೊನೆಯುಸಿರೆಳೆದರು.
ಉಲ್ಲೇಖಗಳು
ಬದಲಾಯಿಸಿ