ಯಾವುದೇ ಒಂದು ಕಟ್ಟಡವನ್ನು ಕಟ್ಟ ಬೇಕಾದರೆ ಅಂದರೆ ಆ ಕಟ್ಟಡವು ಗಟ್ಟಿಯಾಗಿ ಬಾಳ್ವಿಕೆ ಬರಬೇಕಾದರೆ ಮರಳು ಬೇಕೆ ಬೇಕು.  ಮರಳಿಗೆ ನಮ್ಮ ಕರ್ನಾಟಕದಲ್ಲಿ ಅಲ್ಲದೆ ಇಡೀ ಭಾರತದಲ್ಲಿ ತುಂಬಾ ಬೇಡಿಕೆ ಇದೆ.  ಇತ್ತೀಚಿನ ದಿನಗಳಲ್ಲಿಯಂತೂ ಇದರ ಬೇಡಿಕೆ ಅಪಾರವಾಗಿದೆ.  ಅದಕ್ಕಾಗಿಯೇ ಕೆಲವರು ಅದನ್ನು ಒಂದು ಉದ್ಯಮವಾಗಿಸಿ ಕೊಂಡಿದ್ದಾರೆ.                                                                                                                                                                                                           
ಮರಳು ಎಂಬುದು ನದಿಯಲ್ಲಿ ಸಿಗುವಂತಹ ಒಂದು ಖನಿಜ ಸಂಪತ್ತು.  ಮಳೆ ಬರುವಾಗ ಎಲ್ಲಾ ಪ್ರದೇಶದಲ್ಲಿ ರಭಸವಾಗಿ ಬೀಳುವ ನೀರು ಮಣ್ಣಿನ ಕಣಗಳನ್ನು ನೀರಿನ ಜೊತೆಗೆ ಹರಿದು ಬಂದು ತೋಡುಗಳಲ್ಲಿ ಸೇರುತ್ತದೆ.  ಈ ತೋಡುಗಳಿಗೆ ಎಲ್ಲ ಕಡೆಯಿಂದ ಬಂದ ನೀರು ಸೇರಿದಾಗ ಆ ನೀರು ರಭಸವಾಗಿ ಹರಿದು ನದಿಗೆ ಬರುತ್ತದೆ.  ನದಿಯಲ್ಲಿ ರಭಸವಾಗಿ ಹರಿಯುವ ಈ ನೀರು ಮಣ್ಣಿನ ದೊಡ್ಡ ದೊಡ್ಡ ಕಣಗಳನ್ನು ಅಂದರೆ ಕಲ್ಲುಗಳನ್ನು ಅಲ್ಲಿಯೇ ಮೆಲ್ಲನೆ ಹರಿದು ನಂತರ ಸಣ್ಣ ಸಣ್ಣ ಕಣಗಳನ್ನು ಮುಂದಕ್ಕೆ ನೀರಿನ ಜೊತೆಗೆ ಎಸೆಯಲ್ಪಡಲಾಗುತ್ತದೆ, ನಂತರ ಅದು ನದಿಯಲ್ಲಿ ಮರಳಿನ ದಿನ್ನೆಗಳಾಗಿ ಸಂಗ್ರಹವಾಗುತ್ತದೆ.  ಕೆಲವು ಕಡೆ ಅದು ನೀರಿನ ಮಟ್ಟದಲ್ಲಿಯೇ ಇರುತ್ತದೆ.                                                                                                                                                                       
 ಈ ನದಿಯಲ್ಲಿದ್ದ ಮರಳಿನ ರಾಶಿಯನ್ನು ತೆಗೆದು ಲೋರಿಗಳಲ್ಲಿ ಬೇರೆ ಬೇರೆ ಊರುಗಳಿಗೆ ಸಾಗಟ ಮಾಡುವ ಉದ್ಯಮವನ್ನು ಮರಳಿನ ಉದ್ಯಮ ಎಂದು ಕರೆಯುತ್ತಾರೆ,  ಈ ಉದ್ಯಮವನ್ನು ಮಾಡಬೇಕಾದರೆ ಸರಕಾರದಿಂದ ಅನುಮತಿಯನ್ನು ಪಡೆಯಬೇಕು.  ಅನುಮತಿಯನ್ನು ಪಡೆದು ಅದು ಅನುಮೋದನೆಯಾದ ನಂತರ ಆ ವ್ಯಕ್ತಿಗೆ ನದಿಯಲ್ಲಿರುವ ಇಷ್ಟು ವಿಸ್ತೀರ್ನಾ ಸ್ಥಳಕ್ಕೆ ತಾತ್ಕಲಿಕ ಪರವಾಣಿಗೆಯನ್ನು ನೀಡುತ್ತಾರೆ.  ಪರವಾಣಿಗೆ ಪಡೆದ ವ್ಯಕ್ತಿಗೆ ತಿಂಗಳಿಗೆ ಇಷ್ಟೇ ಎಂದು ಪರವಾಣಿಗೆ ಪತ್ರವನ್ನು ನೀಡುತ್ತಾರೆ.  ಆ ಪರವಾಣಿಗೆ ಪತ್ರಗಳ ಆಧಾರದಲ್ಲಿ ಮಾತ್ರ ಆ ವ್ಯಕ್ತಿ ಮರಳು ಸಾಗಟವನ್ನು ಮಾಡಬಹುದು.  ಇತ್ತೀಚಿನ ದಿನಗಳಲ್ಲಿ ಹೊರ ಜಿಲ್ಲೆಗಳಿಗೂ ಮರಳು ಸಾಗಟ ಮಾಡಲು ತಾತ್ಕಲಿಕ ಪರವಾಣಿಗೆ ಪತ್ರವನ್ನು ನೀಡುತ್ತಾರೆ.  ಆದರೆ ಹೊರ ರಾಜ್ಯಗಳಿಗೆ ಮರಳು ಸಾಗಟ ಮಾಡಲು ಸರಕಾರದ ನಿರ್ಭಂದವಿದೆ.                                                                                        
 ಹೀಗೆ ಒಬ್ಬ ವ್ಯಕ್ತಿ ಮರಳಿನ ಉದ್ಯಮವನ್ನು ಮಾಡಬಹುದು.  ಅಲ್ಲಿ ದೋನಿಗಳನ್ನು ಹಾಕಲು ಆತ ಬಂಡವಾಳವನ್ನು ವಿನಿಯೋಗಿಸಬೇಕಾಗುತ್ತದೆ.  ಅಲ್ಲದೆ ನದಿಯಿಂದ ಮರಳನ್ನು ತೆಗೆಯುವ ನಿಪುಣರನ್ನು ತರಬೇಕಾಗುತ್ತದೆ.  ಹಾಗೂ ಅವರಿಗೂ ಉತ್ತಮ ವೇತನವನ್ನು ನೀಡಬೇಕಾಗುತ್ತದೆ.  ಹೀಗೆ ತಮ್ಮ ಉದ್ಯಮದಲ್ಲಿ ಆತ ಕಷ್ಟಪಟ್ಟು ದುಡಿದು ಲಾಭವಂತನಾಗಬಹುದು.

ಉಲ್ಲೇಖ

ಬದಲಾಯಿಸಿ