ವೈಜ್ಞಾನಿಕ ಹೆಸರು ಕಡಬ ಫ್ರೂಟಿಕೋಸಸ [cadaba fruticosa (L.)Druce] =ಕಡಬ ಇಂಡಿಕ[=c.indica Lamk.]ಇ ಸಸ್ಯದ ಕುಡುಂಬ ಕ್ಯೆಪ್ಪಾರೇಸಿ[capparaceae]

ಕನ್ನಡದ ಕುಡುಂಬ

ಬದಲಾಯಿಸಿ
  • ಕೆಗನಿಗೆ
  • ಚಾಯಗವಚಿ
  • ಚೆಗನಿಗೆ
  • ಚೈಗಡ
  • ಮರಗಚೆ
  • ಮಗರೆ
  • ಷೆಗುರ್ತಿ.

ಇತರ ಭಾಷೆಯ ಹೆಸರುಗಳು

ಬದಲಾಯಿಸಿ
  1. ಹಿಂದಿ-ಕೋಧಮ್
  2. ತಮಿಳು-ವೆಲವಿ,ವಿಲುತ್ತು,ಮಂತಕ್-ಕೋರೂಂತೂ
  3. ತೆಲುಗು-ಇಂಡಿಯನ್ ಕಡಬ

ಮರಗಡೆ ಸಾಮಾನ್ಯವಾಗಿ ಕುಚಲು ಗಿಡಗಳನ್ನೊಳಗೊಂಡ ಹಾಗೂ ಬೇಸಿಗೆಯಲ್ಲಿ ಎಲೆಯುದುರುವ ಮೈದಾನ ಸೀಮೆಯ ಒಣ ಸಸ್ಯಾವರಣಗಳಲ್ಲಿ ಕಂಡುಬರುತ್ತದೆ. ಇದು ಪೊದೆಯಂತೆ ಬೆಳೆಯುತ್ತದೆ. ಸರಳವಾದ ಅಂಡಾಕಾರದ ಎಲೆಗಳು ಪರ್ಯಾವಾಗಿ ಜೋಡಣೆಯಾಗಿರುತ್ತದೆ.ಎಲೆಯಅಂಚು ನಯವಾಗಿರುತ್ತದೆ ಎಲೆಯ ಮೇಲ್ಭಾಗ ಹೊಳಪಾಗಿರುತ್ತದೆ ಮತ್ತು ಕೆಳಭಾಗದಲ್ಲಿ ತುಪ್ಪಳವಿರುತ್ತದೆ. ಹೂಗಳು ಅಂತ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತದೆ.ಕೇಸರಗಳು , ಎತ್ತರವಾದ ಅಂಡಾಶಯದ ತೊಟ್ಟಿನ ಮೇಲಿರುತ್ತದೆ. ನಳಿಕೆಯಲ್ಲಿ ಕಿತ್ತಳೆ ಬಣ್ಣದ ತಿಳಿರುಗಳಿರುತ್ತದೆ ಅದರಲ್ಲಿ ಬೀಜಗಳು ಹುದಗಿರುತ್ತವೆ.[]

ಉಪಯೋಗಗಳು

ಬದಲಾಯಿಸಿ
  1. ಮರಗಡೆ ಸೊಪ್ಪನ್ನು ಅಕ್ಕಿ ತೊಳೆದ ನೀರಿನೊಡನೆ ಅರೆದು ಕಷಾಯ ಶೋಧಿಸಿಕೊಂಡು ದೇಹ ಪ್ರಕೃತಿಯನ್ನಾದರಿಸಿ ಪ್ರಮಾಣ ನಿರ್ಧರಿಸಿಕೊಂಡು ಕುಡಿಯಬೇಕು.ಜೊತೆಗೆ ನೆನೆಸಿಟ್ಟ ಬೆಣತಕ್ಕಿ ಒಂದು ಹಿಡಿಯಷ್ಟನ್ನು ಪ್ರತಿದಿವಸ ದಿವಸಕ್ಕೊಮ್ಮೆಯಂತೆ ಮೂ ದಿವಸ ಸೇವಿಸಲು ಬಿಳಿಸೆರಗು ರೋಗವು ವಾಸಿಯಾಗುತ್ತದೆ.
  2. ಎಲೆಯ ಮತ್ತು ಬೆರಿನ ಚೂರ್ಣ ಅಥವಾ ಕಷಾಯ ಸೇವಿಸುವುದರಿಂದ ಜಂತುಹುಳುಗಳು ನಾಶವಾಗುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. ಕರ್ನಾಟಕದ ಔಷಧೀಯ ಸಸ್ಯಗಳು, ಡಾ. ಮಾಗಡಿ ಆರ್. ಗುರುದೇವ, ದಿವ್ಯಚಂದ್ರ ಪ್ರಕಾಶನ, ಮೂರನೆಯ ಮುದ್ರಣ ೨೦೧೦, ಪುಟ ೩೮೫
"https://kn.wikipedia.org/w/index.php?title=ಮರಗಡೆ&oldid=785289" ಇಂದ ಪಡೆಯಲ್ಪಟ್ಟಿದೆ