ಮನ ಮೆಚ್ಚಿದ ಹುಡುಗಿ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಮನ ಮೆಚ್ಚಿದ ಹುಡುಗಿ - ೧೯೮೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎಂ.ಎಸ್.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಎಸ್.ಎ.ಚಿನ್ನೆಗೌಡ. ಈ ಚಿತ್ರವು ಕುಂ.ವೀರಭದ್ರಪ್ಪ ರವರ 'ಬೇಟೆ' ಕಾದಂಬರಿಯ ಮೇಲೆ ಆಧಾರವಾಗಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಕುಮಾರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಬಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿಯವರು ಹಾಡಿದ್ದಾರೆ.
ಮನ ಮೆಚ್ಚಿದ ಹುಡುಗಿ (ಚಲನಚಿತ್ರ) | |
---|---|
ಮನ ಮೆಚ್ಚಿದ ಹುಡುಗಿ | |
ನಿರ್ದೇಶನ | ಎಂ.ಎಸ್.ರಾಜಶೇಖರ್ |
ನಿರ್ಮಾಪಕ | ಎಸ್.ಎ.ಚಿನ್ನೆಗೌಡ |
ಪಾತ್ರವರ್ಗ | ಶಿವರಾಜಕುಮಾರ್ ಸುಧಾರಾಣಿ ಸುಂದರ ಕೃಷ್ಣ ಅರಸ್, ಶ್ರೀನಿವಾಸ್, ಶುಭ, ಅಶೋಕ್ ಬಾದರದಿನ್ನಿ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
ಬಿಡುಗಡೆಯಾಗಿದ್ದು | ೧೯೮೭ |
ಚಿತ್ರ ನಿರ್ಮಾಣ ಸಂಸ್ಥೆ | ಕಾತ್ಯಾಯಿನಿ ಸಿನಿ ಆರ್ಟ್ ಕಂಬೈನ್ಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಎಸ್.ಬಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
ಪಾತ್ರ
ಬದಲಾಯಿಸಿ- ಡಾ.ಶಿವರಾಜ್ ಕುಮಾರ್
- ಸುಧಾರಾಣಿ
- ಸುಂದರ್ ಕೃಷ್ಣ ಅರಸ್
- ಎನ್.ಎನ್.ಸಿಂಹ
- ಭಟ್ಟಿ ಮಹದೇವಪ್ಪ
- ಶಿವಪ್ರಕಾಶ್
- ಪಾಪಮ್ಮ