ಮನೋಹರ್ ಶ್ಯಾಮ್ ಜೋಶಿ

(ಹಿಂದಿ :मनोहर जोशी) (೧೯೩೩-೨೦೦೬) ಮನೋಹರ್ ಶ್ಯಾಮ್ ಜೋಶಿ ಹಿಂದಿ ಭಾಷೆಯ ಪತ್ರಿಕಾಕರ್ತ, ಮತ್ತು ’ಪಟ್ಕಥಾ ರಚೇತ’ರೆಂದು ಹೆಸರಾದವರು. ಭಾರತೀಯ ಟೆಲೆವಿಶನ್ ನಲ್ಲಿ ೧೯೮೨ ಮೊಟ್ಟಮೊದಲು ದೂರದರ್ಶನದಲ್ಲಿ ಪ್ರಸಾರವಾದ 'ಸೋಪ್ ಅಪೇರ', ಹಮ್ ಲೊಗ್,ಅತ್ಯಂತ ಜನಪ್ರಿಯತೆಯನ್ನು ಹಾಸಿಲ್ ಮಾಡಿತು. ಅದಕ್ಕೆ ಮೊದಲು ೧೯೮೭ ರಲ್ಲಿ ಪ್ರಸಾರವಾದ, ಟೆಲಿವಿಶನ್ ಧಾರಾವಾಹಿ, ಬುನಿಯಾದ್ ಕೂಡಾ ಅವರೆ ಬರೆದದ್ದು. ನಂತರ ಬರೆದ, ಕಾಕಾಜಿ ಕಹೇಂ, ರಾಜಕೀಯ ವಲಯದಲ್ಲಾಗುವ ಸಂಗತಿಗಳ, ವಿಡಂಬನಾ ಚಿತ್ರ. ಜೋಶಿಯವರು ಬರೆದ ಕ್ಯಾಪ್ ಕಾದಂಬರಿಗೆ, 'ಸಾಹಿತ್ಯ ಅಕಾಡೆಮಿ ಪ್ರಶಸ್ತಿ' ದೊರೆಯಿತು.

'ಮನೋಹರ್ ಶ್ಯಾಮ್ ಜೋಶಿ'
 
'ಜೋಶಿಯವರು ಬರೆದ ಜನಪ್ರಿಯ ಟೆಲಿವಿಶನ್ ಧಾರಾವಾಹಿ, 'ಹಮ್ ಲೋಗ್' ನ ಒಂದು ದೃಷ್ಯ'

ಈಗ ಉತ್ತರಾಖಂಡಕ್ಕೆ ಸೇರಿದ, ರಾಜಾಸ್ಥಾನ್ ರಾಜ್ಯದ ಅಜ್ಮೆರ್ನಲ್ಲಿ ಆಗಸ್ಟ್, ೯, ೧೯೩೩, ರಲ್ಲಿ, ಅಲ್ಮೋರಾ ಕಡೆಯ, ಕುಮಾನಿ 'ಬ್ರಾಹ್ಮಿನ್ ಪರಿವಾರ'ದಲ್ಲಿ ಜನಿಸಿದರು.

ಟೆಲಿವಿಶನ್ ಕ್ಷೇತ್ರದಲ್ಲಿ ಹೆಜ್ಜೆಇಟ್ಟು ಮಾಡಿದ ಹೊಸ ಪ್ರಯೋಗಗಳು

ಬದಲಾಯಿಸಿ

೧೯೮೨ ರಲ್ಲಿ ಪ್ರಸಾರವಾದ 'ಟೆಲಿವಿಶನ್ ಸೋಪ್ ಅಪೇರ' ಗಳಲ್ಲಿ ಮೊಟ್ಟಮೊದಲನೆಯದಾದ ಹಮ್ ಲೋಗ್ಗೆ ಪಟ್ಕಥೆಯನ್ನು ಬರೆದರು. 'ಟೆಲಿವಿಶನ್ ಧಾರಾವಾಹಿಗಳ ಪಿತ್ರು'ವೆಂದು ಜನರು ಇಂದಿಗೂ ಜ್ಞಾಪಿಸಿಕೊಳ್ಳುತ್ತಾರೆ. ಕೇವಲ ಹಣವಂತರಿಗಾಗಿ ಮಾತ್ರ ಮೀಸಲಾಗಿದ್ದ ಟೆಲಿವಿಶನ್ ವೀಕ್ಷಕರು ಅಂದಿನದಿನಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರು. ಈ ಧಾರಾವಾಹಿ ಜನರನ್ನು ಹಿಡಿದಿಡುವಲ್ಲಿ ಸಮರ್ಥವಾಯಿತು.

ಆಗ 'ಟೆಲಿವಿಶನ್ ಸೆಟ್' ಗಳ-ಬೆಲೆ ಬಹಳ ಹೆಚ್ಚಿತ್ತು

ಬದಲಾಯಿಸಿ

'ಟೆಲಿವಿಶನ್ ಆಗ ಹಣವಂತರಿಗೆ ಮಾತ್ರವೆಂದು ಭಾವಿಸಲಾಗಿತ್ತು. ಪ್ರತಿದಿನದ ಕಷ್ಟ-ಕಾರ್ಪಣ್ಯಗಳನ್ನು ಪ್ರತಿಪಾದಿಸುವ ಚಿತ್ರಣ ಸಾಮಾನ್ಯಜನರ ಜೀವನವನ್ನು ಪ್ರತಿಬಿಂಬಿಸುವ ಟೆಲಿವಿಶನ್ ದರ್ಶನವನ್ನು ಜನ ಇಷ್ಟಪಟ್ಟರು.(೧೯೮೭-೧೯೮೮) ರಲ್ಲಿ ’ರಮೇಶ್ ಸಿಪ್ಪಿ’ಯವರು ನಿರ್ದೇಶಿಸಿದ,ದೂರದರ್ಶನ್ ನಿರ್ಮಿಸಿದ ’ಬುನಿಯಾದ್’ ಸಹಿತ ಜನಪ್ರಿಯತೆಯ ಶಿಖರವನ್ನು ಚುಂಬಿಸಿತು. ೧೯೪೭ ರಲ್ಲಿ ಭಾರದ ವಿಭಜನೆಯಾದ ಸಮಯದಲ್ಲಿ ಹಿಂದೂ ಮುಸಲ್ಮಾನ್ ಪರಿವಾರಗಳು ಎದುರಿಸಿದ ಸಮಸ್ಯೆಗಳನ್ನು, ಕಟು ಸತ್ಯಗಳನ್ನು ಈ ದೃಶ್ಯಮಾಧ್ಯಮದಲ್ಲಿ ಬಿತ್ತರಿಸಲಾಯಿತು. ಎಲ್ಲ ವರ್ಗದ ಎಲ್ಲ ವಯೋಮಿತಿಯ ಜನರಿಗೆ ತುಂಬಾ ಹಿಡಿಸಿ, ಕಾಡಿಸಿದ, ಕಥಾನಕ, ಟೆಲೆವಿಶನ್ ಸಾಮ್ರಾಜ್ಯದಲ್ಲಿ ಮಾಡಿದ ಒಂದು ಮಹತ್ವದ ಕ್ರಾಂತಿಯೆಂದು ದಾಖಲಾಗಿದೆ. ಮುಂದಿನ ದಿನಗಳಲ್ಲಿ ಅವರು, ಕೆಲವು ಧಾರಾವಾಹಿಗಳಿಗೆ ಕಥೆ ಬರೆದರು. ಬಹಳ ಬೇಡಿಕೆಯ ಪಟ್ಕಥಾ ಲೇಖಕರಾಗಿದ್ದರು.

ಹೆಸರಾಂತ ಕಾದಂಬರಿಕಾರ

ಬದಲಾಯಿಸಿ

'ಪ್ರೀತಿ',ಅಥವಾ 'ಕಸಪ್', ಹಿಂದಿ ಭಾಷೆಯಲ್ಲಿ ಬರೆದ ಅತ್ಯುತ್ತಮ ಕಾದಂಬರಿಗಳಲ್ಲೊಂದು, ನೇತಾಜಿ ಕಹಿ, ಮತ್ತೊಂದು. ಜೋಶಿಯವರು, ಹಿಂದಿ ಭಾಷೆಯ ಆಧುನಿಕ ಬರಹಗಾರರಲ್ಲಿ ಪ್ರಮುಖರಲ್ಲೊಬ್ಬರು. ನಂತರ ಬಂದ ಲೇಖನಗಳು, ಕುರುಕುರು ಸ್ವಾಹಾ, ಹರಿಯ ಹರ್ಕ್ಯುಲೆಸ್ ಕಿ ಕಹಾನಿ ಮುಂತಾದವುಗಳು. ಸನ್, ೨೦೦೫ ರಲ್ಲಿ 'ಹಿಂದಿ ಭಾಷೆಸಾಹಿತ್ಯ ಅಕಾಡೆಮಿ ಪ್ರಶಸ್ತಿಕ್ಯಾಪ್’ ಗೆ, ದೊರೆಯಿತು. ಅವರು ಜನ್ಮವೆತ್ತಿದ ಉತ್ತರಾಖಂಡ್ ರಾಜ್ಯದ, ಕುಮಾನಿ ಸಂಸ್ಕೃತಿಯ ಆಧುನಿಕ-ಭಾರತದ ಹೊಸಮುಖವೆನ್ನುವ ಬಗ್ಗೆ, ಒಂದು ಕಾಲ್ಪನಿಕ ಕನಸು ಅದಾಗಿತ್ತು.

ಚಲನಚಿತ್ರರಂಗದಲ್ಲಿ

ಬದಲಾಯಿಸಿ

ವಿಡಂಬನಾತ್ಮಕ ಹಾಸ್ಯ, ಪ್ರಿಯತೆ, ಹಾಸ್ಯ ಚಿತ್ರಗಳು ಮತ್ತು ಹಲವಾರು ವಿಷಯಗಳಮೇಲೆ, ಬರೆದ ಪ್ರಹಸನಗಳು ಅತ್ಯಂತ ಹೆಸರುವಾಸಿಯಾಗಿವೆ.

  • 'ಹೇರಾಮ್',
  • 'ಅಪ್ಪು ರಾಜ'
  • 'ಪಾಪ ಕೆಹ್ತೆ ಹೈ'
  • 'ಬ್ರಷ್ಠಾಚಾರ್',
  • ಡಬ್ಬಿಂಗ್ ಮಾಡಿದ ಕೆಲವು ಚಿತ್ರಗಳು ಚೆನ್ನಾಗಿ ಓಡಿದವು. ಅವುಗಳಲ್ಲಿ, ’ಆಪ್ಪುರಾಜ', ಮತ್ತು, 'ಹೇ ರಾಮ್',ಮುಖ್ಯವಾದವುಗಳು.

ಪತ್ರಿಕೋದ್ಯಮ

ಬದಲಾಯಿಸಿ

ಜೀವನದ ಬಹುಭಾಗ ಪತ್ರಿಕೋದ್ಯಮದಲ್ಲಿ, ಆಕಾಶವಾಣಿ ಪ್ರಸಾರ, ಹಾಗೂ ಬರವಣಿಗೆ ಪತ್ರಿಕೆಗಳಿಗೆ, ಮೀಸಲಾಗಿತ್ತು. ಅವರಿಗೆ, 'ದೆಹಲಿಯ ಆಕಾಶವಾಣಿ'ಯ 'ಹಿಂದಿ ಭಾಷೆಯ ವಾರ್ತಾ ವಿಭಾಗ'ದಲ್ಲಿ ಕೆಲಸ. 'ಮುಂಬೈನ ಫಿಲ್ಮ್ ಡಿವಿಶನ್ ಆಫ್ ಇಂಡಿಯ', ದಲ್ಲಿದ್ದಾಗ, ಹಲವಾರು ಚಿತ್ರಗಳಿಗೆ ಬರೆದರು. ಸಾಮಾನ್ಯ ಜನರ ಜೊತೆಗೆ ಮಾಡಿದ ಸಂವಾದದ ಸಮಯದಲ್ಲಿ ’ಸರಿಕ ಮ್ಯಾಗಝೈನ್’ ನಲ್ಲಿ ಧಾರಾವಾಹಿ ಬರಹರೂಪದಲ್ಲಿ ಹೊರತಂದರು. ’ದಿನ್ ಮಾನ್’ ಎಂಬ ಹೊಸ ವಾರ್ತಾಪತ್ರಿಕೆ, ಸಂಪಾದಕ, ’ಸಚ್ಚಿದಾನಂದ ಆಯೇಯ’ ’ಟೈಮ್ಸ್ ಆಫ್ ಇಂಡಿಯ ಪತ್ರಿಕೆ’ ಯ ಒಂದು ಭಾಗವಾದ, ಜೋಶಿಯವರನ್ನು ಸಹಾಯಕ, ಸಂಪಾದಕರಾಗಿ ನೇಮಿಸಿದರು. ೧೯೭೦ ರಲ್ಲಿ ಅವರು, ಸಂಪಾದಕರಾದರು. ’ಹಿಂದೂಸ್ಥಾನ್ ಟೈಮ್ಸ್’ ಹೊರತಂದ ’ಮಾರ್ನಿಂಗ್ ಎಕೊ’ ಎಂಬ ವಾರಪತ್ರಿಕೆಗೆ, ಹೆಸರಾಂತ ದೈನಿಕ, ಸಾಪ್ತಾಹಿಕ್ ಹಿಂದೂಸ್ಥಾನ್ ಗೆ ಸಂಪಾದಕ, ಇಂಗ್ಲೀಷ್ ವೀಕೆಂಡ್ ರೆವ್ಯೂ ವಿಜ್ಞಾನ, ರಾಜಕೀಯ, ಮತ್ತು ಎಲ್ಲ ಬಗ್ಗೆ, ತಾವು ಮರಣಿಸುವ ವರೆಗೆ, ಔಟ್ಲುಕ್ ಸಾಪ್ತಾಹಿಕ್, ಹಿಂದಿ ಪತ್ರಿಕೆ, ಔಟ್ಲುಕ್ ಇಂಡಿಯ ಬಿಟ್ಟಮೇಲೆ, ಅನಿಸಿಕೆಗಳನ್ನು ಒಂದು ಅಂಕಣದಲ್ಲಿ ಬರೆಯಲಾರಂಭಿಸಿದರು.

ಮಾರ್ಚ್, ೩೦, ೨೦೦೬ ರಲ್ಲಿ ತಮ್ಮ ೭೩ ನೆಯ ವಯಸ್ಸಿನಲ್ಲಿ ದೆಹಲಿಯಲ್ಲಿ ಮರಣಿಸಿದರು. ಹೆಂಡತಿ ಮತ್ತು, ೩ ಜನ ಮಕ್ಕಳು. ಪ್ರಧಾನ ಮಂತ್ರಿ, ಮನಮೋಹನ್ ಸಿಂಗ್, ಜೋಶಿಯವರನ್ನು 'ಅತ್ಯಂತ ಸಮರ್ಥ ಹಿಂದಿ ಭಾಷಾ, ಪರಿಣಾಮಕಾರಿ ಬರಹಗಾರ, ಮತ್ತು ಮಾತುಗಾರ' ನೆಂದು ಬಣ್ಣಿಸಿದರು.

ಸಾಹಿತ್ಯಕ ಕೃಷಿ

ಬದಲಾಯಿಸಿ
  • Kasap
  • Netaji Kahin Political satire made into a memorable TV series "Kakkaji Kahin", by * Basu Chatterji.
  • Kuru Kuru Swaahaa
  • Hariya Hercules Ki Hairani, Rajkamal & Sons, 1999. ISBN 81-7178-775-4.[1]
  • English translation "The Perplexity of Haria Hercules" by Robert Hueckstedt[2]
  • Prabhu Tum Kaise Kissago (Short Stories)
  • Mandir Ghaat ki Pauriyaan (Short Stories)
  • Uss Desh Ka Yaron Kya Kahna
  • Baton Baton Mein (Interviews)
  • Kaise Kissago
  • Ek Durlabh Vyaktitva (Short Stories)
  • Lucknow Mera Lucknow (Memoirs of Student Days)
  • Gatha Kurukshetra Ki (Play) [3]
  • Seemaant Diary - Kashmir Se Kachh Tak (Travelogue) [4]
  • 21st Century (Essays and Opinions)
  • T'ta Professor Also an award winning English translation by Ira Pande [5]
  • Kyaap Winner of Sahitya Academy Award 2005
  • Hamzad, Rajkamal & Sons, 1999. ISBN 81-7178-776-2. [6]
  • Main Kaun Hoon? An exploration on Identity loosely based on the real life Bhawal Sanyasi case, of the prince who came back from the dead to reclaim his life, love and kingdom.
  • Vadhasthal (National Book Trust, India, 2009): A novel set in the killing fields of Cambodia
  • Kapeeshji (NBT, India, 2009): Novel about the evolution of an unselfmade godman.

ಟೆಲಿವಿಶನ್ ನ ಕ್ಶೇತ್ರದಲ್ಲಿ

ಬದಲಾಯಿಸಿ
  • Hum Log (1982)
  • Buniyaad (1987)
  • Kakaji Kahin
  • Mungeri Lal ke Haseen Sapne
  • Hamrahi
  • Zameen Aasman (1995)
  • Gatha (1997) [13].

ಚಲನಚಿತ್ರ ಕ್ಷೇತ್ರದಲ್ಲಿ

ಬದಲಾಯಿಸಿ
  • Bhrashtachar (1989) - Screenplay
  • Papa Kahte Hain
  • Appu Raja
  • Hey Ram (2000)-Dialogue

ಭಾಷಾಂತರ-ವಲಯದಲ್ಲಿ

ಬದಲಾಯಿಸಿ

T'Ta Professor (2008), translated by Ira Pande ISBN 978-0-670-08209-4, winner of Vodafone Crossword Book Award for best translated work.

ಪ್ರಶಸ್ತಿ ಹಾಗೂ ಪುರಸ್ಕಾರಗಳು

ಬದಲಾಯಿಸಿ
  • MP Sahitya Parishad Samman
  • Sharad Joshi Samman
  • Shikhar Samman
  • Delhi Hindi Academy Award
  • Onida and Uptron Award for TV writing
  • 2005 Sahitya Akademi Award

ವಿಶಿಷ್ಠ ಪುಸ್ತಕ

ಬದಲಾಯಿಸಿ