ಮನೋಹರ್ ಐಚ್

ಅವರು ಭಾರತೀಯ ಬಾಡಿಬಿಲ್ಡರ್ ಆಗಿದೆ

ಪಾಕೆಟ್ ಹರ್ಕ್ಯುಲಸ್

ಬದಲಾಯಿಸಿ
ಮನೋಹರ್ ಐಚ್
মনোহর আইচ
 
ವೈಯುಕ್ತಿಕ ಮಾಹಿತಿ
ಅಡ್ಡ ಹೆಸರು(ಗಳು)ಪಾಕೆಟ್ ಹರ್ಕ್ಯಲಸ್ (Pocket Hercules)
ರಾಷ್ರೀಯತೆಭಾರತ
ಜನಾಂಗಿಯತೆಬಂಗಾಳಿ ಹಿಂದು
ಜನನ17-3-1912
ಕೋಮಿಲ್ಲಾ ಬಂಗಾಳ, ಬ್ರಿಟಿಷ್ ಇಂಡಿಯಾ
ಮರಣ5
ಕಲ್ಕತ್ತ, ಪಶ್ಚಿಮ ಬಂಗಾಳ, ಭಾರತ
ಉದ್ಯೋಗದೇಹಧಾರ್ಡ್ಯ ಪಟು
ಎತ್ತರ1.50 ಮೀ.(4 ಅಡಿ 11 ಇಂಚು)
ಪತ್ನಿ(ಯರು)ಜ್ಯೋತಿಕಾ ಐಚಿ (1924–2002)
  • ಮನೋಹರ್ ಐಕ್(ಐಚ್) (17 ಮಾರ್ಚ್ 1912 - 5 ಜೂನ್ 2016) ಭಾರತೀಯ ಬಾಡಿಬಿಲ್ಡರ್ ಆಗಿದ್ದರು. ಅವರು ಬಂಗಾಳದ ತಿಪ್ಪೇರ್ನಾ ಜಿಲ್ಲೆಗಳ (ಈಗ ಬಾಂಗ್ಲಾದೇಶದಲ್ಲಿ ಕೊಮಿಲ್ಲಾ ಜಿಲ್ಲೆ) ಕೊಮಿಲ್ಲಾ ಗ್ರಾಮದಲ್ಲಿ ಜನಿಸಿದರು. ಅವರು (1951 ರಲ್ಲಿ ಮನತೋಷ್ ರಾಯ್ ನಂತರ) ಶ್ರೀ ಯೂನಿವರ್ಸ್ ಗೆಲಉವು ಪಡೆದ ಎರಡನೇ ಭಾರತೀಯ ಮತ್ತು ಸ್ವಾತಂತ್ರ್ಯ ನಂತರದ ಗೆದ್ದ ಮೊದಲ ಭಾರತೀಯ.. ಹಾಗೆ.ಅವರು 1952 ನಬ್ಬಾ ಯೂನಿವರ್ಸ್ ಚಾಂಪಿಯನ್ಶಿಪ್ನಲ್ಲಿ ಈ ಪ್ರಶಸ್ತಿ ಪಡೆದರು. 4 ಅಡಿ 11 ಇಂಚು (1.50 ಮೀ) ಎತ್ತರದ, ಅವರ ಪುಟ್ಟ ನಿಲುವು ನೋಡಿ ಅವರಿಗೆ "ಪಾಕೆಟ್ ಹರ್ಕ್ಯುಲಸ್" ಬಿರುದು /ಹೆಸರು ನೀಡಲಾಯಿತು.(NABBA Universe Championships. the National Amateur Bodybuilders Association -NABBA)
  • ಮನೋಹರ್ ಐಕ್ ವಿಭಜನಾಪೂರ್ವ ಬಾಂಗ್ಲಾದೇಶದ ಕುಗ್ರಾಮ ಕೊಮಿಲ್ಲಾದಲ್ಲಿ ಜನಿಸಿದ್ದರು. (ಜನ್ಮದಿನ: 17-03-1912(13?) ಐಚ್ ಕಷ್ಟಗಳ ಹಾದಿಸವೆಸಿ ಬೆಳೆದವರು. ಅವರು ಕೇವಲ 4.11 ಅಡಿ ಎತ್ತರವಿದ್ದರೂ ವಿಶ್ವಮಟ್ಟದ ದೇಹ ದಾರ್ಢ್ಯಪಟುವಾಗಿ ಬೆಳೆದದ್ದು ದೊಡ್ಡ ಸಾಧನೆ. ದೈಹಿಕವಾಗಿ ಬಲಶಾಲಿಯಾಗಬೇಕು, ಎತ್ತರವಾಗಿ ಬೆಳೆಯಬೇಕು ಎಂದು ಹಂಬಲಿಸುತ್ತಿದ್ದ ಯುವಕನಿಗೆ ಬ್ರಿಟಿಷ್ ಅಧಿಕಾರಿ ರಿಯಾಬ್ ಮಾರ್ಟಿನ್ ಅವರು ದೇಹದಾರ್ಢ್ಯ ಪಟುವಾಗಲು ಸಲಹೆ ನೀಡಿದರು. ರಾಯಲ್ ಏರ್‌ಫೋರ್ಸ್‌ ನಲ್ಲಿ ಅವರು ತಮ್ಮ ಅಭ್ಯಾಸ ಆರಂಭಿಸಿದರು. ಆದರೆ ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು ಜೈಲು ಕೂಡ ಸೇರಿದ್ದರು. ಆದರೆ ದೇಹದಾರ್ಢ್ಯ ಕ್ರೀಡೆಯ ಅಭ್ಯಾಸದಿಂದ ಹಿಂದೆ ಸರಿಯಲಿಲ್ಲ.
  • ಜೈಲಿನಲ್ಲಿ ಇದ್ದಾಗ ಅವರು ಪ್ರತಿದಿನ 12 ತಾಸು ವ್ಯಾಯಾಮ ಮಾಡುತ್ತಿದ್ದರಂತೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಜೈಲಿನಿಂದ ಬಿಡುಗಡೆ ಗೊಂಡ ಅವರು ತಮ್ಮ ಹವ್ಯಾಸವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾಗಿ ಅವರು ಹೇಳುತ್ತಿದ್ದರು (ಪುತ್ರ ಕೊಕನ್ ಐಚ್ ಸ್ಮರಿಸುತ್ತಾರೆ).
  • ಮನೋಹರ್ ಐಕ್, 1950ರಲ್ಲಿ ಮಿಸ್ಟರ್ ಹರ್ಕ್ಯುಲಸ್ ಚಾಂಪಿಯನ್‌ಷಿಪ್ ಗೆದ್ದು `ಪಾಕೆಟ್ ಹರ್ಕ್ಯುಲಸ್’ ಎಂದು ಜನಪ್ರಿಯ ರಾದರು. 1952ರಲ್ಲಿ ಲಂಡನ್‌ನಲ್ಲಿ `ಮಿಸ್ಟರ್ ಯುನಿವರ್ಸ್’ ಆದಾಗ ಅವ ರಿಗೆ 39 ವರ್ಷ ವಯಸ್ಸಾಗಿತ್ತು. ಅದೇ ವರ್ಷ ಸ್ಕಾಟ್ಲೆಂಡ್‌ನಲ್ಲಿ ವಿಶ್ವ ಸ್ಪ್ರಿಂಗ್ ಪುಲ್ಲಿಂಗ್ (ಸ್ಪ್ರಿಂಗ್‌ನಿಂದ ಮಾಡಿದ ವ್ಯಾಯಾಮ ಸಲಕರಣೆ) ಚಾಂಪಿಯನ್‌ ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಯುರೋಪ್‌ ದೇಶಗಳ ಕ್ರೀಡಾಪಟು ಗಳದ್ದೇ ಪ್ರಾಬಲ್ಯವಿದ್ದ ಕ್ರೀಡೆಯಲ್ಲಿ ಭಾರತದ ಹೆಜ್ಜೆಗುರುತು ಮೂಡಿಸಿದ್ದರು.
  • ಐಕ್ ಒಟ್ಟು ನಾಲ್ಕು ಬಾರಿ ಮಿಸ್ಟರ್ ಯುನಿವರ್ಸ್ ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿದ್ದರು. ಏಷ್ಯನ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. 1960ರಲ್ಲಿ ಇಂಡಿಯನ್ ಕ್ಲಾಸ್‌ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಜೀವನದುದ್ದುಕ್ಕೂ ಹಲವು ಯುವಕರಿಗೆ ತರಬೇತಿ ನೀಡಿದರು. ದೊಡ್ಡ ಮಗ ಬಿಷ್ಣು ಕೂಡ ಅಪ್ಪನಂತೆ ದೇಹದಾರ್ಢ್ಯ ಪಟು ಆದರೆ, ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ. ಎಲ್ಎಂಡ್‌ಟಿ ಸಂಸ್ಥೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದಾರೆ.
  • ಅವರು ಶ್ರೀ ಯೂನಿವರ್ಸ್ ಗೆದ್ದಾಗ ಪ್ರಶಸ್ತಿಯನ್ನು ಅವರ ಎದೆಯ ಅಳತೆ 54 ಇಂಚು ಸೊಂಟ 23 ಇಂಚುಗಳ ಅಳೆತೆ ಇತ್ತು. ಅವರ ಕೊನೆಯ ದೇಹಧಾರ್ಡ್ಯ ಪ್ರದರ್ಶನ (ಶೋ) 2003 ರಲ್ಲಿ (91ವ) ನಡೆಯಿತು.[]

ದೈವಾಧೀನ

ಬದಲಾಯಿಸಿ

‘ಕಳೆದ 15 ದಿನಗಳಿಂದ ಅವರು ಕೇವಲ ದ್ರವಾಹಾರ ಮಾತ್ರ ಸೇವಿಸುತ್ತಿದ್ದರು. ಮಾತನಾಡುವುದನ್ನೂ ನಿಲ್ಲಿಸಿದ್ದರು. ಭಾನುವಾರ ಮಧ್ಯಾಹ್ನ 3.50ಕ್ಕೆ ಅವರು ನಿಧನರಾದರು’ ಎಂದು ಅವರ ಮಗ ಕೊಕನ್ ಐಚ್ ತಿಳಿಸಿದ್ದಾರೆ. ಮನೋಹರ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳು ಇದ್ದಾರೆ.[] [] [] []

ಉಲ್ಲೇಖ

ಬದಲಾಯಿಸಿ